Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಮನುಷ್ಯ ಸತ್ತಾಗ ಮೆದುಳಿನಲ್ಲಿ ಏನಾಗಲಿದೆ..? ಆ 2 ನಿಮಿಷದ ಗುಟ್ಟೇನು?
ಮನುಷ್ಯ ಸತ್ತ ಬಳಿಕ ಏನಾಗುತ್ತಾನೆ ಎನ್ನುವುದಕ್ಕೆ ಹಲವಾರು ಸಿದ್ದಾಂತಗಳಿವೆ. ವೈದ್ಯಕೀಯವಾಗಿ ಒಂದಿಷ್ಟು ಸಿದ್ದಾಂತಗಳಿದ್ದರೆ ಧರ್ಮಗಳ ಸಾರದಲ್ಲಿ ಮತ್ತಷ್ಟು ಸಿದ್ಧಾಂತಗಳು ಅಡಗಿವೆ. ಅಲ್ಲದೆ ಕೆಲವೊಂದು ವಿಚಾರಗಳು ಈಗಲೂ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತವೆ. ಹಿಂದೂ ಧರ್ಮದ ಪ್ರಕಾರ ಒಬ್ಬ ವ್ಯಕ್ತಿ ಸತ್ತ ಬಳಿಕ ಆತನ ಆತ್ಮ ಪರಮಾತ್ಮನಲ್ಲಿ ಲೀನವಾಗುತ್ತದೆ ಎಂದು ನಂಬಲಾಗಿದೆ.
ಜೊತೆಗೆ ಪುನರ್ಜನ್ಮದಂತಹ ಸಿದ್ಧಾಂತಗಳು ಕೇಳುತ್ತಲೇ ಇರುತ್ತೇವೆ. ಆದರೆ ನಾವು ಸತ್ತ ಬಳಿಕ ನಮ್ಮ ಮೆದುಳಿನಲ್ಲಿ ಏನಾಗುತ್ತದೆ. ನಮ್ಮ ಜೊತೆಗೆ ನಮ್ಮ ಮೆದುಳು ಸಹ ಕೊನೆಯಾಗುತ್ತದೆಯೇ? ಉಸಿರು ನಿಂತರೆ ಸಂತಂತಾಗುತ್ತದೆಯೇ? ಎಂಬುದನ್ನು ನ್ಯೂರೋಬಯಾಲಜಿಸ್ಟ್ ಒಬ್ಬರು ವಿವರಿಸಿದ್ದಾರೆ.

ಸಾವು ಎಂದರೆ ಸಾಮಾನ್ಯ ಅರ್ಥದಲ್ಲಿ ಹೃದಯ ಬಡಿತ ಸಂಪೂರ್ಣವಾಗಿ ಸ್ತಬ್ಧವಾಗುವುದು. ಆದರೆ ಸಾವಿನ ನಂತರದ ಆರಂಭಿಕ ಕ್ಷಣಗಳಲ್ಲಿ ನಿಮ್ಮ ಮೆದುಳು ವಿದ್ಯುನ್ಮಾನವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತದೆ ಎಂದು ತಿಳಿದುಬಂದಿದೆ. ನರ ರೋಗ ತಜ್ಞ ಮತ್ತು ನ್ಯೂರೋಬಯಾಲಜಿಸ್ಟ್ ಡಾ ರಾಹುಲ್ ಜಂಡಿಯಲ್ ಅವರು ಡಾ ರಂಗನ್ ಚಟರ್ಜಿ ಅವರ ಪಾಡ್‌ಕ್ಯಾಸ್ಟ್ ಫೀಲ್ ಬೆಟರ್, ಲೈವ್ ಮೋರ್ ಸಂಭಾಷಣೆ ವೇಳೆ ಈ ಕುರಿತು ಮಾತನಾಡಿದ್ದಾರೆ.
ಸಾಮಾನ್ಯವಾಗಿ, ECG ಯಲ್ಲಿನ ಗೆರೆಗಳು ಸ್ತಬ್ಧವಾದಾಗ ಹೃದಯಬಡಿತ ನಿಂತಿದೆ ಎಂದು ಹಾಗೂ ಹೃದಯದಿಂದ ಇನ್ನು ಮುಂದೆ ವಿದ್ಯುತ್ ಸಂಕೇತ ಬರುತ್ತಿಲ್ಲ ಎಂದು ಸೂಚಿಸಲಾಗುತ್ತದೆ. ಈ ವೇಳೆ ಸಾವು ಎಂದು ಘೋಷಿಸಲಾಗುತ್ತದೆ. ಆದರೆ ಈ ರೀತಿ ಹೃದಯ ತನ್ನ ಕಾರ್ಯ ಮುಗಿಸಿದ್ದರೂ ಮೆದುಳು ಮಾತ್ರ ಸಾವಿನ ನಂತರದ ಕೆಲವ ಹೊತ್ತಿನವರೆಗೂ ಈ ಪ್ರಕ್ರಿಯೆಗೆ ಒಳಗಾಗುತ್ತದೆ ಎಂದಿದ್ದಾರೆ.
ಸ್ಪಷ್ಟವಾದ ಹೃದಯ ಸಾವಿನ ನಂತರದ ಆರಂಭಿಕ ಕ್ಷಣಗಳಲ್ಲಿ ನಿಮ್ಮ ಮೆದುಳು ವಿದ್ಯುನ್ಮಾನವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತದೆ. ಮಿದುಳಿನ ಶಕ್ತಿಯಲ್ಲಿ ಚಟುವಟಿಕೆಯ ದೊಡ್ಡ ಸ್ಫೋಟವಿದೆ ಎಂದು ಅವರು ಹೇಳಿದರು, ಕನಸು ಅಥವಾ ವಿಸ್ತಾರವಾದ ಸ್ಮರಣೆಯ ಸಮಯದಲ್ಲಿ ಕಂಡುಬರುವ ಮೆದುಳಿನ ತರಂಗಗಳಿಗೆ ಇದು ಹೋಲಿಕೆಯಾಗುತ್ತದೆ.
ನಮ್ಮ ಹೃದಯವು ಬಡಿಯುವುದನ್ನು ನಿಲ್ಲಿಸುವ ಆರಂಭಿಕ ಕೆಲವು ಕ್ಷಣಗಳಲ್ಲಿ ಮೆದುಳು ತನ್ನ ಕೊನೆಯ ಬಹುಶಃ ಅಗ್ರ ಕ್ಷಣಗಳನ್ನು ಅನುಭವಿಸುತ್ತಿದೆ ಎಂದು ಅವರು ಹೇಳಿದರು. ಈ ವೇಳೆ ನಿಮ್ಮ ಮೆದುಳಿನಲ್ಲಿ ಚಟುವಟಿಕೆಯ ಮಹಾಸ್ಫೋಟ ಸಂಭವಿಸಬಹುದು. ಹೃದಯ ಕೊನೆಯ ಬಾರಿಗೆ ರಕ್ತವನ್ನು ಪಂಪ್ ಮಾಡುವ ಪ್ರಕ್ರಿಯೆ ಮೆದುಳಿಗೆ ತಿಳಿಯುತ್ತದೆ, ಈ ವೇಳೆ ಮೆದುಳಿನ ಕಾರ್ಯದಲ್ಲಿ ಶೀಘ್ರ ಬದಲಾವಣೆ ಕಾಣಬಹುದು. ಅಲ್ಲಿ ಚಟುವಟಿಕೆಗಳ ಮಹಾ ಸ್ಟೋಟ ಸಂಭವಿಸಲಿದೆ.
ರಕ್ತವು ಗ್ಲೂಕೋಸ್ ಅನ್ನು ಹೊತ್ತೊಯ್ಯುವ ಕಾರಣ, ಇದು ತಾತ್ಕಾಲಿಕವಾಗಿ ನ್ಯೂರಾನ್‌ಗಳಿಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಈ ಪ್ರಕ್ರಿಯೆ ಅಂದರೆ ಮೆದುಳು ಹೃದಯ ಬಡಿತ ನಿಲ್ಲಿಸಿದ ಒಂದು ಅಥವಾ ಎರಡು ನಿಮಿಷಗಳ ಕಾಲ ಜೀವಿಸಲಿದೆಯಂತೆ. ಆದರೆ ಮೆದುಳಿಗೆ ಆಮ್ಲಜನಕದ ಪೂರೈಕೆ ಕಡಿತಗೊಂಡಾಗ ಅದು ಸಂಪೂರ್ಣ ಚಿರನಿದ್ರೆಗೆ ಸಾಗಲಿದೆ. ಆದರೆ ರಕ್ತದಲ್ಲಿರುವ ಆಮ್ಲಜನಕದ ಕಾರಣದಿಂದಾಗಿ ಮೆದುಳು ಕೆಲಕಾಲ ಕಾರ್ಯನಿರ್ವಹಿಸಿದಂತೆ ಇರಲಿದೆ. ಆದರೆ ಅಲ್ಲಿ ವಿಪರೀತ ರಾಸಾಯನಿಕ ಕ್ರಿಯೆಗಳು ಸಹ ಉಂಟಾಗಬಹುದು ಎಂದಿದ್ದಾರೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಗಾಢವಾದ ಕನಸು ಕಾಣುವಾಗ ಆತನ ಮೆದುಳಿನಲ್ಲಿ ಉಂಟಾಗುವ ಪ್ರಕ್ರಿಯಯೇ ಹೃದಯ ಬಡಿತ ನಿಂತ ಎರಡು ನಿಮಿಷ ಅವಧಿಯಲ್ಲಿ ನಡೆಯುತ್ತದೆ. ಬದುಕಿರುವ ವ್ಯಕ್ತಿಯ ಮೆದುಳಿನಲ್ಲಿ ಗಾಮ ಅಲೆಗಳು ಕಾಣಿಸುತ್ತವೆ. ಇದೇ ಅಲೆಗಳು ಹೃದಯ ಬಡಿತ ನಿಂತ ಕೆಲ ಸಮಯ ಮೆದುಳಿನಲ್ಲಿ ಕಾಣಿಸಲಿದೆಯಂತೆ. ಈ ವಿಚಾರದ ಕುರಿತು ಎಷ್ಟು ನಿಗೂಢಗಳು ಹೊರಬಂದರು ವ್ಯಕ್ತಿ ಮರಣದ ನಂತರ ಏನಾಗುತ್ತಾನೆ ಎಂಬುದನ್ನು ಕಂಡುಕೊಳ್ಳುವುದು ಕಷ್ಟಸಾಧ್ಯ.



Click it and Unblock the Notifications