Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾರ ಭವಿಷ್ಯ (ಮಾ.19-25): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
ಈ ವಾರದಲ್ಲಿ ನಿಮಗೆ ಅತ್ಯುತ್ತಮವಾಗಿರಲಿ ಎಂದು ಹೇಳುತ್ತಾ ಜ್ಯೋತಿಷ್ಯದ ಪ್ರಕಾರ ಮಾರ್ಚ್ 19ರಿಂದ 25ರವರೆಗೆ ಪ್ರತಿಯೊಂದು ರಾಶಿಗಳ ರಾಶಿ ಭವಿಷ್ಯ ಹೇಗಿರಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಈ ವಾರ ನಿಮಗೆ ತುಂಬಾ ದುಬಾರಿಯಾಗಲಿದೆ, ಅದರೆ ನಿಮ್ಮ ದೈನಂದಿನ ಖರ್ಚುಗಳಿಗೆ ಯಾವುದೇ ತೊಂದರೆಯಿಲ್ಲ. ಈ ವಾರ ಹಣವನ್ನು ಮಿತಿಯಲ್ಲಿ ಖರ್ಚು ಮಾಡಿ. ಈ ವಾರ ಕುಟುಂಬದ ಪರಿಸ್ಥಿತಿಗಳು ಅಷ್ಟು ಸರಿಯಿರಲ್ಲ, ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಈ ವಾರ ನಿಮ್ಮ ಕೆಲಸದ ಪ್ಲ್ಯಾನ್ ಮೊದಲೇ ಮಾಡುವುದು ಒಳ್ಳೆಯದು. ಈ ವಾರ ಪ್ರಯಾಣ ಮಾಡಬೇಕಾಗಿ ಬರುವುದು. ಈ ಪ್ರಯಾಣ ತುಂಬಾ ಆಯಾಸ ತರಲಿದೆ, ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 29
ಅದೃಷ್ಟದ ದಿನ: ಶನಿವಾರ

ವೃಷಭ ರಾಶಿ
ಈ ಅವಧಿಯಲ್ಲಿ ಕೆಲಸದಲ್ಲಿ ಸ್ಪರ್ಧೆ ಹೆಚ್ಚಾಗಲಿದೆ. ಇದರಿಂದ ಸಾಕಷ್ಟು ಒತ್ತಡ ಅನುಭವಿಸುವಿರಿ. ವ್ಯಾಪಾರಸ್ಥರಿಗೆ ಈ ವಾರ ತುಂಬಾ ಲಾಭದಾಯಕವಾಗಿರುತ್ತದೆ. ನೀವು ಅನೇಕ ಸಣ್ಣ ಪ್ರಯೋಜನಗಳನ್ನು ಪಡೆಯಬಹುದು. ಈ ವಾರ ಕೆಲಸದ ನಡುವೆ ನಿಮ್ಮ ಕುಟುಂಬಕ್ಕೂ ಗಮನ ನೀಡಿ. ಇನ್ನು ಹಣಕಾಸಿನ ಬಗ್ಗೆ ನೋಡುವುದಾದರೆ ಖರ್ಚು ಮಿತಿಯಲ್ಲಿ ಮಾಡಿ. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿನ: ಬುಧವಾರ

ಮಿಥುನ ರಾಶಿ
ವಿದ್ಯಾರ್ಥಿಗಳಿಗೆ ಈ ವಾರ ಬಹಳ ತುಂಬಾನೇ ಮುಖ್ಯವಾಗಿದೆ. ಅಧ್ಯಯನಕ್ಕಾಗಿ ನೀವು ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನಗಳಿಗೆ ಫಲ ಸಿಗಲಿದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಈ ವಾರ ನಿಮ್ಮ ಕೆಲಸದಲ್ಲಿ ಏರಿಳಿತಗಳು ಕಂಡುಬರಬಹುದು. ಆದರೆ ಚಿಂತಿಸಬೇಕಾಗಿಲ್ಲ, ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ವಾರದ ಕೊನೆಯಲ್ಲಿ ನೀವು ಹಣಕಾಸಿನ ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿರಬಹುದು.
ಅದೃಷ್ಟದದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿನ: ಗುರುವಾರ

ಕರ್ಕ ರಾಶಿ
ಹಣದ ವಿಷಯದಲ್ಲಿ, ಈ ವಾರ ನಿಮಗೆ ತುಂಬಾ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನೀವು ಬೆಲೆ ಬಾಳುವ ವಸ್ತುಗಳನ್ನು ಕೂಡ ಖರೀದಿಸಬಹುದು. ಈ ಅವಧಿ ಉದ್ಯೋಗಿಗಳಿಗೆ ಒಳ್ಳೆಯದಿದೆ. ಈ ಸಮಯದಲ್ಲಿ, ಉದ್ಯಮಿಗಳು ಬಾಕಿ ಇರುವ ಕೆಲಸಗಳ ಮೇಲೆ ಹೆಚ್ಚು ಗಮನಹರಿಸಬೇಕು. ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ, ಮೂರನೇಯವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಈ ವಾರ ಮಿಶ್ರಫಲ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 14
ಅದೃಷ್ಟದ ದಿನ: ಮಂಗಳವಾರ

ಸಿಂಹ ರಾಶಿ
ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಶ್ಲಾಘನೀಯವಾಗಿರುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಈ ಅವಧಿಯಲ್ಲಿ ನೀವು ಬಡ್ತಿ ಪಡೆಯುವ ಸಾಧ್ಯತೆಯಿದೆ. ಏನಾದರೂ ಹೊಸತು ಕಲಿಯಲು ಪ್ರಯತ್ನಿಸುತ್ತಿರುವವರಿಗೆ ಈ ಸಮಯವು ಅನುಕೂಲಕರವಾಗಿದೆ. ಉದ್ಯಮಿಗಳಿಗೆ ಈ ವಾರ ತುಂಬಾ ಆಹ್ಲಾದಕರವಾಗಿರುತ್ತದೆ. ಮಕ್ಕಳ ಕುರಿತು ಇದ್ದ ಚಿಂತೆ ದೂರಾಗಲಿದೆ. ಈ ಸಮಯದಲ್ಲಿ, ನಿಮ್ಮ ಸಣ್ಣ ನಿರ್ಧಾರಗಳನ್ನು ನೀವು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತೀರಿ.ಈ ವಾರ ಖರ್ಚು ಅಧಿಕ ಇರಲಿದೆ. ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಿ. ದೈಹಿಕ ವ್ಯಾಯಾಮ, ಆಹಾರಕ್ರಮದತ್ತ ಗಮನಹರಿಸಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 18
ಅದೃಷ್ಟದ ದಿನ: ಶನಿವಾರ

ಕನ್ಯಾ ರಾಶಿ
ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಸಮಸ್ಯೆಗಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ನಿಮ್ಮ ಆದಾಯ ಹೆಚ್ಚಾಗಬಹುದು. ಆದರೆ, ಹಳೆಯ ಸಾಲ ಮರುಪಾವತಿ ಮಾಡುವ ಒತ್ತಡ ಕೂಡ ಬರಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವಾರದ ಕೊನೆಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿನ: ಸೋಮವಾರ

ತುಲಾ ರಾಶಿ
ಈ ಅವಧಿಯಲ್ಲಿ, ಪ್ರತಿಯೊಂದು ವಿಷಯದಲ್ಲೂ ಬಹಳ ಬುದ್ಧಿವಂತಿಕೆಯಿಂದ ವರ್ತಿಸಲು ಸಲಹೆ ನೀಡಲಾಗಿದೆ. ನಿಮ್ಮ ಕೆಲಸದಲ್ಲಿ ಅಧಿಕ ಗಮನಹರಿಸಿ. ನಿಮಗೆ ನೀಡಿರುವ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. ಉದ್ಯಮಿಗಳು ತರಾತುರಿಯಲ್ಲಿ ಹೂಡಿಕೆ ಮಾಡಲು ಹೋಗಬೇಡಿ, ಇಲ್ಲದಿದ್ದರೆ ಲಾಭದ ಬದಲು ನಷ್ಟವಾಗಬಹುದು. ಈ ಸಮಯದಲ್ಲಿ ನೀವು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅಜಾಗರೂಕತೆಯನ್ನು ತಪ್ಪಿಸಬೇಕು. ವಾರದ ಮಧ್ಯದಲ್ಲಿ ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯವಿರಬಹುದು. ಇದರಿಂದ ಮನಸ್ಸಿಗೆ ನೋವಾಗುವುದು, ಆರೋಗ್ಯ ನಿರ್ಲಕ್ಷ್ಯದಿಂದ ಆರೋಗ್ಯ ಹಾಳಾಗಬಹುದು. ಆರೋಗ್ಯದ ಕಡೆಗೆ ಗಮನ ಹರಿಸಿ.
ಅದೃಷ್ಟದ ಬಣ್ಣ: ಬೂದು
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿನ: ಶುಕ್ರವಾರ

ವೃಶ್ಚಿಕ ರಾಶಿ
ಮಕ್ಕಳ ಕಡೆಯಿಂದ ಖುಷಿ ಇರಲಿದೆ. ಕೆಲಸದ ವಿಷಯದಲ್ಲಿ ನಿಮ್ಮನ್ನು ಕಾಡುತ್ತಿದ್ದರೆ ಅದು ಈ ವಾರ ದೂರಾಗಲಿದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಈ ವಾರ ನಿಮ್ಮ ಕೆಲಸಗಳು ಸುಗಮವಾಗಿ ನಡೆಯಲಿದೆ. ಉದ್ಯಮಿಗಳು ಈ ಅವಧಿಯಲ್ಲಿ ವಿಶೇಷ ಲಾಭ ಪಡೆಯುವಿರಿ. ಪ್ರೇಮಿಗಳಿಗೆ, ವಿವಾಹಿತರಿಗೆ ಈ ವಾರ ಚೆನ್ನಾಗಿರಲಿದೆ. ಅವಾಹಿತರು ಮದುವೆಯ ನಿರ್ಧಾರ ಕೂಡ ತೆಗೆದುಕೊಳ್ಳಬಹುದು. ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನೀಆರೋಗ್ಯದ ವಿಷಯದಲ್ಲಿ, ಈ ವಾರ ನಿಮಗೆ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿನ: ಗುರುವಾರ

ಧನು ರಾಶಿ
ಕಚೇರಿಯಲ್ಲಿ ನಿಮ್ಮ ಉನ್ನತ ಅಧಿಕಾರಿಗಳ ವಿಶ್ವಾಸವನ್ನು ಗೆಲ್ಲುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಕಠಿಣ ಪರಿಶ್ರಮದಿಂದ ಗುರುತಿಸಿಕೊಳ್ಳುವಿರಿ, ನಿಮ್ಮ ಶ್ರಮಕ್ಕೆ ಒಳ್ಳೆಯ ಫಲ ಸಿಗಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಈ ವಾರ ಚೆನ್ನಾಗಿರಲಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಈ ವಾರ ಸುಧಾರಣೆ ಕಾಣುವಿರಿ. ಪಾಲುದಾರರೊಂದಿಗಿನ ನಿಮ್ಮ ಹೊಂದಾಣಿಕೆಯು ಉತ್ತಮವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಖರ್ಚು ಸ್ವಲ್ಪ ಹೆಚ್ಚಾಗಬಹುದು. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ದೀರ್ಘ ಕಾಲದಿಂದ ಆರೋಗ್ಯ ಸಮಸ್ಯೆಯಿದ್ದರೆ ಆರೋಗ್ಯದ ಕಡೆಗೆ ಗಮನ ಹರಿಸಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 18
ಅದೃಷ್ಟದ ದಿನ: ಶನಿವಾರ

ಮಕರ ರಾಶಿ
ಈ ವಾರ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಕೆಲಸದ ವಿಷಯದಲ್ಲಿ ಈ ವಾರ ಅಧಿಕ ಒತ್ತಡ ಇರಲಿದೆ. ಇದರಿಂದ ಆಯಾಸ ಹೆಚ್ಚಾಗಲಿದೆ. ಅದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ಈ ಅವಧಿಯಲ್ಲಿ ನಿಮ್ಮ ಕೆಲಸವನ್ನು ಜವಾಬ್ದಾರಿಯುತವಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ವಿದ್ಯಾರ್ಥಿಗಳಿಗೆ ಈ ವಾರ ಏರಿಳಿತದಿಂದ ಕೂಡಿರುತ್ತದೆ. ಅನಾರೋಗ್ಯದ ಕಾರಣ ನಿಮ್ಮ ಕಲಿಕೆಗೆ ತೊಂದರೆಯಾಗಬಹುದು. ನೀವು ಆರೋಗ್ಯದ ಕಡೆಗೆ ಸಂಪೂರ್ಣ ಗಮನ ಹರಿಸಿ. ನೀವು ಈ ವಾರ ನಿಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಬಹುದು. ಶೀಘ್ರದಲ್ಲೇ ಹೊಸ ಸದಸ್ಯರು ನಿಮ್ಮ ಮನೆಗೆ ಪ್ರವೇಶಿಸುತ್ತಾರೆ. ಆರೋಗ್ಯದ ವಿಷಯದಲ್ಲಿ ಈ ವಾರ ಸರಾಸರಿ ಇರಲಿದೆ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿನ: ಬುಧವಾರ

ಕುಂಭ ರಾಶಿ
ಹಣದ ವಿಷಯದಲ್ಲಿ, ಈ ವಾರ ನಿಮಗೆ ಏರಿಳಿತಗಳಿಂದ ಕೂಡಿರಲಿದೆ. ಮಾನಸಿಕ ಒತ್ತಡಗಳಿ ಇರಲಿದೆ. ನಿರುದ್ಯೋಗಿಗಳು ಉತ್ತಮ ಉದ್ಯೋಗಾವಕಾಶವನ್ನು ಪಡೆಯಬಹುದು. ನೀವು ಈಗಾಗಲೇ ಉದ್ಯೋಗದಲ್ಲಿದ್ದರೆ ಮತ್ತು ನಿಮ್ಮ ಪ್ರಸ್ತುತ ಕೆಲಸದಿಂದ ತೃಪ್ತರಾಗದಿದ್ದರೆ ಉದ್ಯೋಗವನ್ನು ಬದಲಾಯಿಸಲು ಇಚ್ಚಿಸಿದರೆ ಈ ಅವಧಿಯಲ್ಲಿ ಪ್ರಯತ್ನಿಸಿ. ನೀವು ಯಾವುದೇ ಕಾನೂನುಬಾಹಿರ ಕೆಲಸವನ್ನು ಮಾಡುವುದನ್ನು ತಪ್ಪಿಸಬೇಕು. ಕುಟುಂಬ ಜೀವನದ ಪರಿಸ್ಥಿತಿಗಳು ಸಾಮಾನ್ಯವಾಗಿರಲಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿನ: ಭಾನುವಾರ

ಮೀನ ರಾಶಿ
ಕೆಲಸದ ದೃಷ್ಟಿಯಿಂದ ಈ ವಾರ ತುಂಬಾ ಶುಭಕರವಾಗಿರಲಿದೆ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಇರಲಿದೆ. ಬಟ್ಟೆ ವ್ಯಾಪಾರಿಯಾಗಿದ್ದರೆ ಒಳ್ಳೆಯ ಲಾಭ ಪಡೆಯುವಿರಿ. ಸೌಂದರ್ಯವರ್ಧಕಗಳು, ಸ್ಟೇಷನರಿಗಳು, ಎಲೆಕ್ಟ್ರಾನಿಕ್ಸ್ ಇತ್ಯಾದಿಗಳಲ್ಲಿ ಕೆಲಸ ಮಾಡುವವರು ಉತ್ತಮ ಪ್ರಯೋಜನವನ್ನು ಪಡೆಯುವಿರಿ. ಈ ಸಮಯದಲ್ಲಿ ಮನೆಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ. ಆರ್ಥಿಕ ಸ್ಥಿತ ಬಲಪಡಿಸಲು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸದೃಢರಾಗಿರುತ್ತೀರಿ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ದಿನ: ಸೋಮವಾರ



Click it and Unblock the Notifications











