Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Health Horoscope 31 Jul To 6 Aug 2023: ಈ ವಾರ ನಿಮ್ಮ ಆರೋಗ್ಯ ಭವಿಷ್ಯ ಹೇಗಿರಲಿದೆ?
ಗ್ರಹಗಳು ತಮ್ಮ ಪಥವನ್ನು ಬದಲಾಯಿಸಿದರೆ ಅದರ ಪರಿಣಾಮ ನೇರವಾಗಿ ದ್ವಾದಶ ರಾಶಿಗಳ ಮೇಲೆ ಬೀಳುತ್ತದೆ. ಅದೇ ರೀತಿ ನಿಮ್ಮ ಆರೋಗ್ಯದಲ್ಲಿಯೂ ಕೂಡ ಕೆಲವೊಂದು ಬದಲಾವಣೆಗಳನ್ನು ನಾವು ಕಾಣಬಹುದು.
ಗ್ರಹಗತಿಗಳ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಒಳ್ಳೆಯದಾದರೆ, ಇನ್ನೂ ಕೆಲವು ರಾಶಿಯವರಿಗೆ ಇದರಿಂದ ಕೆಟ್ಟದಾಗಲಿದೆ. ಅಷ್ಟಕ್ಕೂ ದ್ವಾದಶ ರಾಶಿಗಳ ಆರೋಗ್ಯದ ಮೇಲೆ ಈ ವಾರ ಯಾವ ರೀತಿ ಪರಿಣಾಮ ಬೀಳುತ್ತೆ ಅನ್ನೋದನ್ನು ನೋಡೋಣ.

ಮೇಷ ರಾಶಿ
ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಒಳ್ಳೆಯದಾಗಲಿದೆ. ನೀವು ದೀರ್ಘಕಾಲದವರೆಗೆ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ ಈ ವಾರ ನೀವು ಉತ್ತಮ ಪರಿಹಾರವನ್ನು ಕಂಡುಕೊಳ್ಳುತ್ತೀರಿ. ನೀವು ತಿನ್ನುವ ಆಹಾರದ ಮೇಲೆ ನಿಯಂತ್ರಣವಿರಲಿ. ಹವಾಮಾನಕ್ಕೆ ಅನುಗುಣವಾಗಿ ಎಚ್ಚರಿಕೆಯಿಂದ ನಡೆಯಿರಿ. ಈ ವಾರ ಹೆಂಡತಿಯ ಆರೋಗ್ಯದಲ್ಲಿ ಕೆಲವು ಏರಿಳಿತಗಳು ಕಂಡುಬರುತ್ತವೆ.
ವೃಷಭ ರಾಶಿ
ಕುಟುಂಬಸ್ಥರ ಆರೋಗ್ಯವು ಮತ್ತಷ್ಟು ಹದಗೆಡಬಹುದು. ನಿಮ್ಮ ಹೆಂಡತಿಯ ಆರೋಗ್ಯದ ಬಗ್ಗೆಯೂ ನೀವು ಚಿಂತೆ ಮಾಡುತ್ತೀರಿ. ನೀವು ಮತ್ತು ನಿಮ್ಮ ಕುಟುಂಬ ಈ ವಾರ ಕಾಲೋಚಿತ ರೋಗಗಳ ಹಿಡಿತಕ್ಕೆ ಒಳಗಾಗಬಹುದು. ನಿಮ್ಮ ಆಹಾರ ಮತ್ತು ಪಾನೀಯವನ್ನು ನಿಯಂತ್ರಿಸಿ. ನೀವು ಹೊರಗೆ ಪ್ರವಾಸಕ್ಕೆ ಹೋದರೆ ಜಾಗರೂಕರಾಗಿರಿ.
ಮಿಥುನ ರಾಶಿ
ಈ ವಾರ ನೀವು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಅತಿಯಾದ ಕೆಲಸದ ಕಾರಣದಿಂದಾಗಿ ನೀವು ಆಯಾಸ ಪಟ್ಟುಕೊಳ್ಳಬೇಕಾಗುತ್ತದೆ. ಇದರಿಂದಾಗಿ ದೈಹಿಕ ಬಳಲಿಕೆ ಮತ್ತು ಮಾನಸಿಕ ಒತ್ತಡ ಉಂಟಾಗಬಹುದು. ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಆಹಾರವನ್ನು ನಿಯಂತ್ರಿಸಿ. ಕೆಟ್ಟ ವಾತಾವರಣದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ಪತ್ನಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಅಗತ್ಯವಿದ್ದರೆ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ಮಿಶ್ರವಾಗಿರುತ್ತದೆ.
ಕರ್ಕಾಟಕ ರಾಶಿ
ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಒಳ್ಳೆಯದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಆದರೆ ನಿಮ್ಮ ಕುಟುಂಬದಲ್ಲಿ ಋತುಮಾನದ ಕಾಯಿಲೆಗಳಿಂದಾಗಿ ಕೆಲವು ತೊಂದರೆಗಳು ಉಂಟಾಗುತ್ತವೆ. ಆದರೆ ಆತಂಕ ಪಡುವ ಅಗತ್ಯವಿಲ್ಲ. ವಾರದ ಉಳಿದ ದಿನಗಳು ಆರೋಗ್ಯದ ದೃಷ್ಟಿಯಿಂದ ನಿಮಗೆ ಉತ್ತಮವಾಗಿರುತ್ತದೆ.
ಸಿಂಹ ರಾಶಿ
ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ತೊಂದರೆಯಾಗಲಿದೆ. ಕೆಲವು ಹಳೆಯ ರೋಗಗಳು ಮತ್ತೆ ಹೊರಹೊಮ್ಮುವ ಸಾಧ್ಯತೆಗಳಿವೆ. ಇದರಿಂದಾಗಿ ನೀವು ದೈಹಿಕ ನೋವನ್ನು ಅನುಭವಿಸಬೇಕಾಗಬಹುದು. ನಿಮ್ಮ ಹೆಂಡತಿಯ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕಾಗುತ್ತದೆ. ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಕಾಳಜಿಯನ್ನು ನೀವು ವಹಿಸಿಕೊಳ್ಳಿ. ಆಹಾರ ಬಗ್ಗೆ ಗಮನಕೊಡಿ.
ಕನ್ಯಾ ರಾಶಿ
ಈ ವಾರ ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು. ನಿಮ್ಮ ಕುಟುಂಬದಲ್ಲಿ ಪ್ರೀತಿಪಾತ್ರರ ಆರೋಗ್ಯ ಹದಗೆಡುವುದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ಮಳೆಗಾಲದಲ್ಲಿ ಓಡಾಡೋದ್ರಿಂದ ನೀವು ಋತುಮಾನದ ಕಾಯಿಲೆಗಳಿಗೆ ಬಲಿಯಾಗಬಹುದು.
ತುಲಾ ರಾಶಿ
ಈ ವಾರ ನೀವು ಕೆಲವು ಕಾಲೋಚಿತ ಕಾಯಿಲೆಯ ಹಿಡಿತಕ್ಕೆ ಒಳಗಾಗಬಹುದು. ಇದರಿಂದಾಗಿ ಖರ್ಚಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಈ ತಿಂಗಳ ನಿಮ್ಮ ಬಜೆಟ್ ಅಸ್ತವ್ಯಸ್ತವಾಗಬಹುದು. ಕುಟುಂಬಸ್ಥರ ಆರೋಗ್ಯದ ಕ್ಷೀಣತೆಯಿಂದ ನಿಮಗೆ ಬಹಳಷ್ಟು ಆರೋಗ್ಯ ತೊಂದರೆಗಳು ಆಗಬಹುದು. ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಿ. ಈ ಹವಾಮಾನದಿಂದಾಗಿ ನಿಮಗೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಗಳಿದೆ.
ವೃಶ್ಚಿಕ ರಾಶಿ
ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ಸಾಮಾನ್ಯವಾಗಿರುತ್ತದೆ. ನೀವು ಕಾಲೋಚಿತ ರೋಗಗಳಿಂದ ಸೋಂಕಿಗೆ ಒಳಗಾಗಬಹುದು. ಈ ವಾರ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ.
ಧನು ರಾಶಿ
ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿಲ್ಲ. ನೀವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪ್ರೀತಿಪಾತ್ರರ ಆರೋಗ್ಯವು ಹದಗೆಡಬಹುದು. ಇದರಿಂದಾಗಿ ಮನಸ್ಸು ಚಿಂತೆಯಿಂದ ತುಂಬಿರುತ್ತದೆ. ಮತ್ತು ಚಂಚಲವಾಗಿರುತ್ತದೆ.
ಮಕರ ರಾಶಿ
ಆರೋಗ್ಯದ ವಿಷಯದಲ್ಲಿ ಈ ವಾರ ಏರಿಳಿತಗಳು ಹೆಚ್ಚಾಗಿರುತ್ತದೆ. ವಾರದ ಆರಂಭದಲ್ಲಿ ನೀವು ಕೆಲವು ಕಾಲೋಚಿತ ಕಾಯಿಲೆಗಳಿಗೆ ಒಳಗಾಗಬಹುದು. ಇದರಿಂದಾಗಿ ನಿಮ್ಮ ಆರೋಗ್ಯವು ಹದಗೆಡಬಹುದು. ಪೋಷಕರ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ವಾರದ ದ್ವಿತೀಯಾರ್ಧದಲ್ಲಿ ನೀವು ಕೆಲವು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರಬಹುದು. ನಿಮ್ಮ ಆಹಾರಕ್ರಮವನ್ನು ನಿಯಂತ್ರಿಸಿ, ಜೊತೆಗೆ ಯೋಗ ಇತ್ಯಾದಿಗಳನ್ನು ಮಾಡುವುದರಿಂದ ನೀವು ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ.
ಕುಂಭ ರಾಶಿ
ಈ ವಾರ ನಿಮ್ಮ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತವೆ. ದೈಹಿಕವಾಗಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಗಾಯ ಇತ್ಯಾದಿಗಳೂ ಆಗಬಹುದು. ವಾಹನಗಳ ಬಳಕೆ ಇತ್ಯಾದಿಗಳಲ್ಲಿ ಜಾಗರೂಕರಾಗಿರಿ. ಹವಾಮಾನದಿಂದಾಗಿ ಮಕ್ಕಳ ಆರೋಗ್ಯ ಹದಗೆಡಬಹುದು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಈ ಮಳೆಗಾಲದಲ್ಲಿ ಉತ್ತಮವಾದ ಆಹಾರಾಭ್ಯಾಸವನ್ನು ರೂಢಿಸಿಕೊಂಡರೆ ಉತ್ತಮ.
ಮೀನ ರಾಶಿ
ಈ ವಾರ ನಿಮ್ಮ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು. ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿಲ್ಲ. ಹವಾಮಾನದ ಕಾರಣದಿಂದಾಗಿ ನೀವು ಮತ್ತು ನಿಮ್ಮ ಕುಟುಂಬಸ್ಥರು ತೊಂದರೆಗೆ ಒಳಗಾಗಬಹುದು. ಇದು ಅತಿಯಾದ ಓಡಾಟಕ್ಕೆ ಕಾರಣವಾಗಬಹುದು.



Click it and Unblock the Notifications