Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕನ್ನಡ ಚಿತ್ರರಂಗದ ಬಗ್ಗೆ ನಿಮಗೆ ಗೊತ್ತಿಲ್ಲದ ಅಚ್ಚರಿ ಹುಟ್ಟಿಸುವ ವಿಚಾರಗಳಿವು...!
ಕನ್ನಡ ಚಿತ್ರರಂಗ ಈಗ ಎಷ್ಟು ದೊಡ್ಡದಾಗಿ ಬೆಳೆದಿದೆ ಅಂದ್ರೆ ನಿತ್ಯ ಹತ್ತಾರು ಚಿತ್ರಗಳು ಸಿನಿಮಾ ಮಂದಿರದ ಬಾಗಿಲು ತಟ್ಟುತ್ತಿವೆ. ಕನ್ನಡ ಸಿನಿಮಾಗಳು ಈಗ ಭಾರತ ಮಾತ್ರ ಅಲ್ಲ ವಿದೇಶದಲ್ಲೂ ಸದ್ದು ಮಾಡುತ್ತಿವೆ. ಕನ್ನಡ ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಕಾಯುವ ಸಮಯ ಸಹ ಬಂದಿದೆ. ಆದ್ರೆ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ನಿಮಗೆಷ್ಟು ಗೊತ್ತಿದೆ.
ಕನ್ನಡ ಚಿತ್ರರಂಗ ಜನ್ಮ ತಳೆದು ಶತಮಾನಗಳು ಕಳೆದಿವೆ. ನೂರಾರು ನಟರು ಬೆಳ್ಳಿ ಪರದೆ ಮೇಲೆ ಮಿಂಚಿದ್ದಾರೆ. ವರನಟ ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಇತ್ತೀಚಿನ ನಾಯಕರು, ನಟರ ವರೆಗೂ ಅಮೂಲ್ಯ ಕೊಡುಗೆ ನೀಡಿದ್ದಾರೆ. ಆದ್ರೆ ಕನ್ನಡ ಚಿತ್ರರಂಗದ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ಅಚ್ಚರಿಯ ವಿಚಾರಗಳು ಇಲ್ಲಿವೆ ನೋಡಿ.

ಎಲ್ಲಾ ಸಿನಿಮಾಗಳಿಗೂ 'ಯು' ಪ್ರಮಾಣಪತ್ರ ಪಡೆದ ಏಕೈಕ ನಟ
ಡಾ. ರಾಜ್‌ಕುಮಾರ್ ನಿಜ ಜೀವನದಲ್ಲಿ ಹೇಗೆ ಜೀವಿಸಿದ್ದರೋ ಅದೇ ಮಾರ್ಗದಲ್ಲಿಯೇ ಸಿನಿಮಾ ಪರದೆ ಮೇಲೂ ಕಾಣಿಸಿಕೊಂಡಿದ್ದರು. ಅವರ ಎಲ್ಲಾ ಸಿನಿಮಾಗಳು 'ಯು' ಪ್ರಮಾಣ ಪತ್ರ ಪಡೆದಿದ್ದವು. ಅವರು ನಟಿಸಿದ್ದ 205 ಸಿನಿಮಾಗಳಲ್ಲಿ ಒಂದೂ ಸಹ 'ಎ' ಪ್ರಮಾಣ ಪತ್ರ ಪಡೆದಿರಲಿಲ್ಲ. ಬಹುಶಃ ತಮ್ಮ ನಟನೆಯ ಎಲ್ಲಾ ಚಿತ್ರಗಳಿಗೂ ಯು ಪ್ರಮಾಣ ಪತ್ರ ಪಡೆದಿರುವ ಏಕೈಕ ನಟರೂ ಅವರೇ ಆಗಿದ್ದರು.
ಬೆಂಗಳೂರಿನ ಮೊದಲ ಚಿತ್ರಮಂದಿರ
ಬೆಂಗಳೂರಿಗೆ ಮೊಟ್ಟ ಮೊದಲು 1920ರಲ್ಲಿ ಚಿತ್ರಮಂದಿರ ಕಾಲಿಟ್ಟಿತ್ತು. ಪ್ಯಾರಾಮೌಂಟ್ ಥಿಯೇಟರ್ ಮುಂದೆ ಪರಿಮಳ ಚಿತ್ರಮಂದಿರವಾಗಿ ಹೆಸರು ಬದಲಾವಣೆಯಾಯಿತು. ಆದರೆ 1934ರಲ್ಲಿ ಮೊದಲ ಕನ್ನಡ ಸಿನಿಮಾ ಈ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು.
ಕನ್ನಡದ ಮೊದಲ ಹೀರೋ
ಕನ್ನಡ ಚಿತ್ರಕ್ಕೆ ಮೊದಲು ನಾಯಕರಾಗಿದ್ದವರು ಸುಬ್ಬಯ್ಯ ನಾಯ್ಡು ಅವರು, ಲೋಕೇಶ್ ಅವರ ತಂದೆ ಹಾಗೂ ಸೃಜನ್ ಲೋಕೇಶ್ ಅವರ ತಾತ ಕನ್ನಡ ಸಿನಿಮಾದ ಮೊದಲ ಹೀರೋ ಎನಿಸಿಕೊಂಡಿದ್ದಾರೆ. ಹಾಗೆ ಕನ್ನಡದ ಮೊದಲ ಸಿನಿಮಾ ಸತಿ ಸುಲೋಚನಾ 1934ರಲ್ಲಿ ತೆರೆಕಂಡಿತ್ತು. ಅಚ್ಚರಿ ಎಂದರೆ ಈ ಸಿನಿಮಾ ಕೇವಲ 40 ಸಾವಿರ ರೂಪಾಯಿಯಲ್ಲಿ ತಯಾರಾಗಿತ್ತು.
ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾಗಳು
ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ. ಆದರೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ ಕನ್ನಡ ಮೊದಲ ಬ್ಲಾಕ್ ಬಸ್ಟರ್ ಸಿನಿಮಾ ಎನ್ನಲಾಗಿದೆ. ಈ ಚಿತ್ರ ಮಲ್ಟಿಫ್ಲೆಕ್ಸ್‌ನಲ್ಲಿಯೇ ಬರೋಬ್ಬರಿ 365 ದಿನ ಪ್ರದರ್ಶನ ಕಂಡಿತ್ತು. ಇದಲ್ಲದೆ ಪುನೀತ್ ರಾಜ್‌ಕುಮಾರ್ ನಟನೆಯ ಮಿಲನ ಸಿನಿಮಾ ಮಲ್ಟಿಫ್ಲೆಕ್ಸ್‌ನಲ್ಲಿ 450 ದಿನ ಪ್ರದರ್ಶನ ಕಂಡು ದಾಖಲೆ ಬರೆದಿದೆ.
ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ
ನಾವು ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಶಬ್ದ ಕೇಳುತ್ತಿದ್ದೇವೆ. ಆದರೆ 1959ರಲ್ಲೇ ಕನ್ನಡದ ಸಿನಿಮಾವೊಂದು 8 ಭಾಷೆಯಲ್ಲಿ ತೆರೆಕಂಡು ಪ್ಯಾನ್ ಇಂಡಿಯಾ ಸಿನಿಮಾ ಎಂಬ ದಾಖಲೆ ಬರೆದಿದೆ. ರಾಜ್‌ಕುಮಾರ್ ನಟನೆಯ 'ಮಹಿಷಾಸುರ ಮರ್ದಿನಿ' 8 ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿತ್ತು.
ಅಪ್ಪುಗೆ ಮುಂಗಾರು ಮಳೆ ಕಥೆ ಹೇಳಿದ್ದ ಭಟ್ಟರು
ನಟ ಗಣೇಶ್ ನಟನೆಯ ಮುಂಗಾರು ಮಳೆ ಚಿತ್ರದ ಕಥೆಯನ್ನು ಮೊದಲು ಪುನೀತ್ ರಾಜ್‌ಕುಮಾರ್‌ಗೆ ಹೇಳಿದ್ದರಂತೆ. ಆದರೆ ಅಪ್ಪು ಈ ಸಿನಿಮಾ ಬೇಡವೆಂದಿದ್ದರು. ಅಲ್ಲದೆ ಅನಿಸುತ್ತಿದೆ ಯಾಕೋ ಇಂದು ಹಾಡಿನ ಟ್ಯೂನ್ ಅನ್ನು ಮನೋಮೂರ್ತಿ ಅಮೆರಿಕ ಅಮೆರಿಕ ಸಿನಿಮಾಗಾಗಿ ಮಾಡಿದ್ದರಂತೆ. ಆದರೆ ಆ ಸಿನಿಮಾದಲ್ಲಿ ಟ್ಯೂನ್ ಬಳಸಲು ಅವಕಾಶ ಸಿಗದಿದ್ದಾಗ ಮುಂಗಾರು ಮಳೆ ಸಿನಿಮಾದಲ್ಲಿ ಬಳಸಿದ್ದರಂತೆ.
ಸಾವಿರ ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಸಿನಿಮಾ
ಕನ್ನಡದಲ್ಲಿ ಮೊದಲ ಬಾರಿಗೆ ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾ ಎಂದರೆ ಅದು ಕೆಜಿಎಫ್ ಚಾಪ್ಟರ್-2. ಒಟ್ಟಾರೆ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
ದಾಖಲೆ ಬರೆಯುತ್ತಾ ಸಲಾರ್?
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಲಾರ್ ಸಿನಿಮಾ ಕುರಿತು ಭಾರೀ ನಿರೀಕ್ಷೆ ಇದೆ. ಈ ಸಿನಿಮಾ ಸಹ ಸಾವಿರ ಕೋಟಿ ಕ್ಲಬ್ ಸೇರಿದರೆ ಕನ್ನಡ ಡೈರೆಕ್ಟರ್ ಒಬ್ಬರ 2 ಸಿನಿಮಾಗಳು ಸಾವಿರ ಕ್ಲಬ್ ಸೇರಿದ ದಾಖಲೆ ಮಾಡಲಿದೆ. ಈವರೆಗೆ ಕನ್ನಡ ಯಾವೊಬ್ಬ ನಿರ್ದೇಶಕರು ಇಂತಹ ಅಪರೂಪದ ಸಾಧನೆ ಮಾಡಿಲ್ಲ. ಅವರ ಜೊತೆ ಕನ್ನಡದ ಹೊಂಬಾಳೆ ಫಿಲ್ಸ್ಮ್ ಸಹ ಸಾವಿರ ಕೋಟಿ ಗಳಿಕೆಯ ಸಿನಿಮಾ ನೀಡಿದ ಮೊದಲ ಕನ್ನಡದ ಸಿನಿಮಾ ತಯಾರಿ ಸಂಸ್ಥೆಯಾಗಿ ಹೊರಹೊಮ್ಮಲಿದೆ.



Click it and Unblock the Notifications
