Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
ಇದೆಂಥ ಬೇಸಿಗೆ, ಎಲ್ಲಲ್ಲೂ ನೀರಿಗೆ ಅಭಾವ, ಅದರಲ್ಲೂ ಬೆಂಗಳೂರಿನ ಪರಿಸ್ಥಿತಿ ಅಂತೂ ಹೇಳುವುದೇ ಬೇಡ, ಬೆಂಗಳೂರಿನ ಬಹುತೇಕ ಕಡೆ ನೀರಿಗೆ ಸಮಸ್ಯೆಯಿದೆ. ಈ ಬೇಸಿಗೆಯ ತೀವ್ರತೆ ನೀರಿನ ಅಭಾವ ಇನ್ನೂ ಹೆಚ್ಚಾಗಲಿದೆ, ಏಕೆಂದರೆ ಇನ್ನು ಏಪ್ರಿಲ್, ಮೇ ತಿಂಗಳು ಬಾಕಿಯಿದೆ. ನೀರನ್ನು ಎಷ್ಟು ಮಿತವಾಗಿ ಬಳಕೆ ಮಾಡುತ್ತೇವೋ ಅಷ್ಟು ಒಳ್ಳೆಯದು, ಅಲ್ಲದೆ ಕೆಲವೊಂದು ಮುನ್ನೆಚ್ಚರಿಕೆವಹಿಸಿದರೆ ನೀರಿನ ಬಳಕೆ ಕಡಿಮೆ ಮಾಡಬಹುದು.

ನೀರಿನ ಬಳಿಕ ಕಡಿಮೆ ಮಾಡುವುದು ಹೇಗೆ ಎಂದು ವ್ಯಕ್ತಿಯೊಬ್ಬರು ಮಾಡಿರುವ ವೀಡಿಯೋ ತುಂಬಾ ಅರ್ಥಪೂರ್ಣವಾಗಿದೆ. ಈ ನೀರು ಕಡಿಮೆ ಇರುವಾಗ ಸ್ನಾನಕ್ಕೆ ಶವರ್ ನೀರು ಬಳಸಬೇಡಿ, ಬದಲಿಗೆ ಬಕೆಟ್‌ನಲ್ಲಿ ನೀರು ತುಂಬಿ ಬಳಸಿ, ಇನ್ನು ಕೈ ತೊಳೆಯಲು ಕೂಡ ಟ್ಯಾಪ್ ಹಾಗೆ ತಿರುಗಿಸಿ ನೀರು ಬಿಡದೆ ಮಗ್ ಬಳಸಿ ಎಂದು ಹೇಳಲಾಗಿದೆ ಏಕೆಎಂದು ಉದಾಹರಣೆ ಸಹಿತ ಹೇಳಲಾಗಿದೆ ನೋಡಿ.
What is my outlook for the household water shortage in Bangalore during this summer 2024?
— Anand Sankar (@kalapian_) March 5, 2024
What are the practical ways your household can manage and survive this crisis?
Read on...
Daytime temperatures have started hitting 34C+ in Bangalore. Peak spring-summer is here. Demand…
ಇಲ್ಲಿ ಇವರು ಮೊದಲಿಗೆ ಟ್ಯಾಪ್‌ನಿಂದ ನೀರು ಬಿಟ್ಟು ಮುಖ ತೊಳೆಯುತ್ತಾರೆ, ಹೀಗೆ ತೊಳೆದ ನೀರು ಕೆಳಗಡೆ ಬಕೆಟ್‌ನಲ್ಲಿ ಸಂಗ್ರಹ ಮಾಡಲಾಗುತ್ತದೆ, ಅದರಲ್ಲಿ ಅವರು ಮುಖ ತೊಳೆಯಲು ಅರ್ಧ ಲೀಟರ್ ಬಳಸಿರುತ್ತಾರೆ. ನಂತರ ಮಗ್‌ನಲ್ಲಿ ಅರ್ಧ ಮಗ್ ನೀರು ತಗೆದು ಮುಖ ತೊಳೆಯುತ್ತಾರೆ, ಆಆಗ ಮಗ್‌ನಲ್ಲಿ ಇನ್ನೂ ನೀರು ಮಿಕ್ಕಿರುತ್ತದೆ, ಹೀಗಾಗಿ ನೀರಿನ ಅಭಾವ ಇರುವ ಈ ಸಮಯದಲ್ಲಿ ನೀರನ್ನು ಹೀಗೆ ಬಳಸಿ ಎಂದು ತೋರಿಸಿಕೊಟ್ಟಿದ್ದಾರೆ.
This is going to be Bengaluru’s longest summer yet! The water crisis has already begun. We need to stay prepared. Binay Kumar from @BangaloreAshram shares a simple hack that we can all use to save water at home. #WorldWaterDay #WorldWaterDay2024 pic.twitter.com/mdMMfMNQai
— The Art of Living (@ArtofLiving) March 22, 2024
ಅದರಂತೆ ನಟ ಚಿರಂಜೀವಿ ಕೂಡ ಬೆಂಗಳೂರಿಗೆ ನೀರಿನ ಅಭಾವ ಉಂಟಾಗುವುದನ್ನು ತಡೆಗಟ್ಟಲು ಕೆಲವೊಂದು ಟಿಪ್ಸ್ ನೀಡಿದ್ದಾರೆ, ಈ ಸಲಹೆಯನ್ನು ಕನ್ನಡದಲ್ಲಿ ನೀಡಿ ಟ್ವೀಟ್ ಮಾಡಿರುವುದು ಇನ್ನೂ ವಿಶೇಷ.
ಅವರು ತಮ್ಮ ಪೋಸ್ಟ್‌ನಲ್ಲಿ ಈ ರೀತಿ ಬರೆದಿದ್ದಾರೆ
ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ... ಬಹಳ ಮುಖ್ಯ.
ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ ಮಾಡುವ ಮನೆಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿಹೇಳಲು ನಾನು ಈ ಅವಕಾಶವನ್ನು ಬಳಸಲು ಬಯಸುತ್ತೇನೆ. ಬೆಂಗಳೂರಿನ ನನ್ನ ಫಾರ್ಮ್ ಹೌಸ್‌ಗಾಗಿ ನಾನು ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
20-36 ಅಡಿ ಆಳದ ರೀಚಾರ್ಜ್ ಬಾವಿಗಳನ್ನು ಸೈಟ್‌ನಾದ್ಯಂತ ಆಯಕಟ್ಟಿನ ಬಿಂದುಗಳಲ್ಲಿ ಸ್ಥಾಪಿಸಲಾಗಿದ್ದು, ರೀಚಾರ್ಜ್ ಬಾವಿಗಳಿಗೆ ಮೇಲ್ಮೈ ನೀರಿನ ಹರಿವನ್ನು ನಿರ್ದೇಶಿಸಲು ಸಾಕಷ್ಟು ಇಳಿಜಾರುಗಳಿವೆ. ಪ್ರತಿಯೊಂದು ಬಾವಿಯು ಫಿಲ್ಟರ್ ವ್ಯವಸ್ಥೆಯನ್ನು ಹೊಂದಿದೆ, ವಿವಿಧ ಸಮುಚ್ಚಯಗಳೊಂದಿಗೆ ಒಂದು ಹೂಳು ಬಲೆ, ಅಂದರೆ ಕಲ್ಲಿನ ಗಾತ್ರಗಳು ಮತ್ತು ಮರಳು, ಪದರಗಳ ಮೂಲಕ ನೀರಿನ ಅಂಗೀಕಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ .
ರೀಚಾರ್ಜ್ ಬಾವಿ - ರೀಚಾರ್ಜ್ ಪಿಟ್‌ಗೆ ಹೋಲಿಸಿದರೆ - ಹೆಚ್ಚು ನೀರನ್ನು ಸಂಗ್ರಹಿಸಬಹುದು ಮತ್ತು ಹೆಚ್ಚು ಆಳವಾದ ಜಲಚರಗಳನ್ನು ತಲುಪಲು ತಲಾಧಾರದಲ್ಲಿನ ಸರಂಧ್ರ ಪದರಗಳ ಮೂಲಕ ನೀರನ್ನು ನಿಧಾನವಾಗಿ ಹರಿಯುವಂತೆ ಮಾಡುತ್ತದೆ.
ನಾನು ಪರ್ಮಾಕಲ್ಚರ್ ತತ್ವಗಳನ್ನು ಸಹ ಜಾರಿಗೆ ತಂದಿದ್ದೇನೆ. ಪರ್ಮಾಕಲ್ಚರ್ ಪರಿಸರವನ್ನು ಪುನರುಜ್ಜೀವನಗೊಳಿಸುವ ವೃತ್ತಾಕಾರದ ತತ್ತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ, ಅದನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಪರ್ಮಾಕಲ್ಚರ್‌ನ ಪ್ರಮುಖ ಫಲಿತಾಂಶವೆಂದರೆ ನೀರಿನ ಬೇಡಿಕೆಯಲ್ಲಿನ ಕಡಿತ. ಮಣ್ಣಿನಿಂದ ಬಾಷ್ಪೀಕರಣದ ನಷ್ಟವನ್ನು ಕಡಿಮೆ ಮಾಡುವ ತೋಟವನ್ನು ಬಳಸಿಕೊಂಡು ಸೂಕ್ತವಾದ ನೆಲದ ಹೊದಿಕೆಯೊಂದಿಗೆ ಸತ್ತ ಎಲೆಗಳು ಮತ್ತು ಮರದ ಚಿಪ್ಸ್ ಬಳಸಿ ಮಲ್ಚಿಂಗ್ ಮಾಡುವ ಮೂಲಕ ಇದನ್ನು ಸಾಧಿಸಲಾಗುತ್ತದೆ.
ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ನೀರನ್ನು ಸಂರಕ್ಷಿಸಬಹುದು ಮತ್ತು ಮಳೆ ನೀರು ಕೊಯ್ಲು ಉತ್ತಮಗೊಳಿಸಬಹುದು ಮತ್ತು ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಬಹುದು. ಆ ದೃಶ್ಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ... ಬಹಳ ಮುಖ್ಯ.
— Chiranjeevi Konidela (@KChiruTweets) March 26, 2024
ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ… pic.twitter.com/HwoWhSiZW5



Click it and Unblock the Notifications