Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ವಿಷು ದಿನ ವಿಷುಕಣಿ ವಿಶೇಷತೆಯೇನು? ಈ ಹಬ್ಬಕ್ಕ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ಯುಗಾದಿ- ವಿಷು ಜೊತೆ ಜೊತೆಯಲ್ಲಿಯೇ ಬರುತ್ತದೆ. ಕರ್ನಾಟಕದಲ್ಲಿ ಯುಗಾದಿಯನ್ನು ಹೊಸ ವರ್ಷ ಎಂದು ಆಚರಿಸಿದರೆ ದಕ್ಷಿಣ ಕನ್ನಡ, ಕೇರಳದಲ್ಲಿ ವಿಷು ಹಬ್ಬ ಆಚರಿಸಲಾಗುವುದು. ಪಂಜಾಬ್‌ನಲ್ಲಿ ಬೈಸಾಕಿ, ತಮಿಳುನಾಡಿನಲ್ಲಿ ಪುತ್ತಾಂಡ್ ಅಂದರೆ ಹೊಸ ವರ್ಷ ಎಂದು ಆಚರಿಸಲಾಗುವುದು. ಈ ವರ್ಷ ವಿಷು ಹಬ್ಬವನ್ನು ಏಪ್ರಿಲ್ 14ರಂದು ಆಚರಿಸಲಾಗುವುದು.
ವಿಷು ಸಂಕ್ರಾಂತಿಯಂದು ವಿಷು ಹಬ್ಬವನ್ನು ಆಚರಿಸಲಾಗುವುದು, ಇದನ್ನು ಸುಗ್ಗಿಯ ಹಬ್ಬ ಎಂದು ಪರಿಗಣಿಸಲಾಗಿದೆ. ಈ ಹಬ್ಬ ಸಂಪತ್ತು ಪ್ರತಿನಿಧಿಸುತ್ತದೆ, ಈ ದಿನ ಏನನ್ನು ನಾವು ಮೊದಲು ಎದ್ದಾಗ ಕಾಣುತ್ತೇವೆ, ವರ್ಷ ಪೂರ್ತಿ ಹಾಗೆಯೇ ಇರಲಾಗುವುದು ಎಂದು ಹೇಳಲಾಗುವುದು, ಹಾಗಾಗಿಯೇ ಈ ದಿನ ವಿಷು ಕಣಿ ಇಡಲಾಗುವುದು.

ವಿಷುಕಣಿ
ವಿಷು ಕಣಿಯೆಂದರೆ ಒಂದು ತಟ್ಟೆಯಲ್ಲಿ ಹಣ್ಣು, ಹಂಪುಗಳು, ಧಾನ್ಯಗಳು, ಹೂವುಗಳು, ಚಿನ್ನ, ಬೆಳ್ಳಿಯ ಆಭರಣ, ನಾಣ್ಯಗಳು, ಕನ್ನಡಿ ಎಲ್ಲವನ್ನು ವಿಷುಕಣಿಯಾಗಿ ಇಡಲಾಗುವುದು. ಈ ರೀತಿ ವಿಷುಕಣಿಯನ್ನು ರಾತ್ರಿ ಮನೆಯಲ್ಲಿ ಅಮ್ಮಂದಿರು ಸಿದ್ಧ ಮಾಡುತ್ತಾರೆ. ಬೆಳಗ್ಗೆ ಬೇಗನೆ ಎದ್ದು ಖನ್ಣು ಬಿಡಬಶರದು, ಈ ವಿಷುಕಣಿಯನ್ನೇ ಮೊದಲು ನೋಡಬೇಕು. ಮನೆಯಲ್ಲಿ ಹಿರಿಯರು ಮಕ್ಕಳ ಕಣ್ಮುಚ್ಚಿ ಬಂದು ಈ ವಿಷುಕಣಿ ತೋರಿಸುತ್ತಾರೆ. ಈ ದಿನದ ಮಕ್ಕಳಿಗೆ ಹೊಸ ಉಡುಗೆಯನ್ನು ಹಾಕಲಾಗುವುದು, ಹಬ್ಬದ ಅಡುಗೆಯನ್ನು ಮಾಡಲಾಗುವುದು.
ವಿಷು ಕಾಣಿಕೆ
ಈ ದಿನ ಕೈ ನೀಟ ಎಂಬ ಪದ್ಧತಿ ಇದೆ. ಹಿರಿಯರ ಕಾಲಿಗೆ ಬಿದ್ದಾಗ ಅವರ ಮಕ್ಕಳಿಗೆ ಹಣವನ್ನು ನೀಡುತ್ತಾರೆ. ಇದನ್ನು ಕೈನೀಟಮ ಎಂದು ಕರೆಯಲಾಗುವುದು. ಇನ್ನು ಕೆಲಸದಲ್ಲಿರುವ ಮಕ್ಕಳು ತಂದೆ ತಾಯಿಗೆ ಹಣನೀಡಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆಯುತ್ತಾರೆ.
ವರ್ಷ ಪೂರ್ತಿ ಸೌಭಾಗ್ಯ ನೀಡುತ್ತೆ ಎಂಬ ನಂಬಿಕೆ
ಈ ಹಬ್ಬವನ್ನು ವಿಷುಕಣಿ ನೋಡುವ ಮೂಲಕ ಆಚರಿಸುವುದರಿಂದ ವರ್ಷವಿಡೀ ಸೌಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ. ಈ ಹಬ್ಬದಲ್ಲಿ ಶ್ರೀ ಕೃಷ್ಣನನ್ನು ಆರಾಧಿಸಲಾಗುವುದು. ಶ್ರೀಕೃಷ್ಣನಿಗೆ ಪ್ರಿಯವಾದ ಗೋಲ್ಡನ್ ಶವರ್ ( ಕೊಂದೆ ಹೂವು, ಸ್ವರ್ಣ ಪುಷ್ಪ) ಹೂವುಗಳಿಂದ ವಿಷು ಕಣಿ ಅಲಂಕರಿಸಲಾಗುವುದು. ಈ ಹೂವು ಶ್ರೀಕೃಷ್ಣನಿಗೆ ತುಂಬಾನೇ ಪ್ರಿಯವಾದ ಹೂವು ಆಗಿರುವುದರಿಂದ ಇದನ್ನು ವಿಷುಕಣಿಗೆ ಇಡುತ್ತಾರೆ. ಶ್ರೀಕೃಷ್ಣ ಫೋಟೋದ ಮುಂದೆ ವಿಷುಕಣಿ ಇಡಲಾಗುವುದು. ಇದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಪೌರಾಣಿಕ ಹಿನ್ನೆಲೆ
ವಿಷು ದಿನದಂದು ಶ್ರೀಕೃಷ್ಣ ದೇವರು ನರಕಾಸುರನನ್ನು ವಧಿಸಿದರು ಎಂಬ ಪ್ರತೀತಿ ಇದೆ. ಇನ್ನು ಇನ್ನೊಂದು ಪುರಾಣ ಕಥೆ ಹೇಳುವಂತೆ ಸೂರ್ಯನನ್ನು ಪೂರ್ವದಿಂದ ಉದಯಿಸಲು ರಾವಣ ಬಿಡುತ್ತಿರಲಿಲ್ಲವಂತೆ ಅಂತೆಯೇ ರಾವಣನ ಮರಣದ ದಿನ ಅದುವೇ ವಿಷು ದಿನವಾಗಿದೆ ಈ ದಿನ ಸೂರ್ಯನು ಪೂರ್ವದಿಂದ ಉದಯಿಸಲು ಆರಂಭಿಸಿದ ಎಂಬುದಾಗಿ ಪುರಾಣಗಳು ಹೇಳುತ್ತಿವೆ. ಸೂರ್ಯನು ಪುನರ್ ಉದಯಿಸಲು ಆರಂಭಿಸಿದ ಕಾಲವೆಂದೇ ಈ ದಿನವನ್ನು ಕೊಂಡಾಡಲಾಗುತ್ತದೆ. ಇಂದಿನ ಲೇಖನದಲ್ಲಿ ವಿಷು ದಿನದ ಇನ್ನಷ್ಟು ಮಹತ್ವ ಅಂಶಗಳನ್ನು ನಾವು ತಿಳಿದುಕೊಳ್ಳೋಣ.
ವಿಷು ದಿನದಂದು ಸ್ಪೆಷಲ್ ಖಾದ್ಯಗಳು
ವಿಷು ದಿನದಂದು ವಿಷು ಕಂಙಿ ಅಂದರೆ ಗಂಜಿ ಮಾಡಲಾಗುವುದು, ಇದನ್ನು ಹಾಲು, ಕಾಳು ಮೆಣಸು ಹಾಕಿ ಮಾಡಲಾಗುವುದು. ಜೊತೆಗೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗುವುದು, ಆವಿಲ್, ಉಪ್ಪೇರಿ ಹೀಗೆ ತುಂಬಾ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಹಬ್ಬವನ್ನು ಮಾಡಲಾಗುವುದು.
1. ವಿಷು ಹಬ್ಬದ ಶುಭಾಶಯಗಳು
2. ಈ ವಿಷು ವರ್ಷ ಪೂರ್ತಿ ನಿಮಗೆ ಸಂತೋಷ, ಸಮೃದ್ಧಿ ನೀಡಲಿ, ವಿಷ್ಟು ಹಬ್ಬದ ಶುಭಾಶಯಗಳು
3. ವಿಷು ಕಣಿಯಂತೆ ನಿಮ್ಮ ಬದುಕು ಸುಂದರವಾಗಿರಲಿ, ಸಂಪತ್ತು ಹೆಚ್ಚಲಿ
4. ಈ ವಿಷು ನಿಮ್ಮ ಬದುಕಿನಲ್ಲಿ ಹೊಸತನ ತುಂಬಲಿ, ವಿಷುಕಣಿಯಂತೆ ಸಮೃದ್ಧಿ ಹೆಚ್ಚಾಗುವುದು
5. ತುಳುನಾಡಿನ ಜನತೆಗೆ ಬಿಸು ಹಬ್ಬದ ಶುಭಾಶಯಗಳು



Click it and Unblock the Notifications




