Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಕರುವಿನ ಮೇಲೆ ದಾಳಿ ಮಾಡಿದ ಹುಲಿ, ಪುಣ್ಯಕೋಟಿ ಮಾಡಿದ ಕಾರ್ಯನೋಡಿ ಮೂಕ ವಿಸ್ಮಿತರಾದ ನೆಟ್ಟಿಗರು
ಪುಣ್ಯಕೋಟಿ ಕತೆ ನಿಮಗೆಲ್ಲಾ ಗೊತ್ತಿರಬಹುದು. ದುಷ್ಟ ವ್ಯಾಘ್ರನು ಹಸುವನ್ನು ತಿನ್ನಲು ಮುಂದಾದಾಗ ನನ್ನ ಕಂದನು ನನ್ನನ್ನು ಕಾಯುತ್ತಾ ಹಟ್ಟಿಯಲ್ಲಿದೆ, ಅದಕ್ಕೆ ಹಾಲುಣಿಸಿ ಬಂದ ನಿನಗೆ ಆಹಾರವಾಗುವೆ ಎಂದು ಹೇಳಿ ಆ ಪುಣ್ಯಕೋಟಿ ಕೊನೆಯ ಬಾರಿ ತನ್ನ ಕಂದನಿಗೆ ಹಾಲುಣಿಸಿ ಬರುತ್ತೇನೆ ಎಂದು ತೆರಳುತ್ತದೆ. ಆದರೆ ಈ ರಿಯಲ್ ಕತೆ ಕೂಡ ಪುಣ್ಯಕೋಟಿ ಹಾಗೂ ಹುಲಿಗೆ ಸಂಬಂಧಿಸಿದ್ದೇ ಆದರೆ ಇದರಲ್ಲಿರುವ ಟ್ವಿಸ್ಟ್ ಮಾತ್ರ ರೋಚಕ...
ಹುಲಿಯೊಂದು ಆಹಾರ ಹುಡುಕುತ್ತಾ ನಾಡಿಗೆ ಬಂದಿದೆ, ಅಲ್ಲಿ ಹಸುಗಳ ದಂಡು ಆಹಾರ ಮೇಯುತ್ತಿರುವುದನ್ನು ಕಂಡು ಸೀದಾ ಅವುಗಳತ್ತ ದಾಳಿ ಮಾಡಲು ಹೋಗುತ್ತದೆ. ಹುಲಿಯನ್ನು ನೋಡಿದ ತಕ್ಷಣ ಹಸುಗಳು ಪ್ರಾಣ ರಕ್ಷಣೆಗೆ ಓಡಿ ಹೋಗುತ್ತವೆ, ಆದರೆ ಪಾಪ ಕರುವೊಂದು ಹುಲಿ ಸಿಕ್ಕಾಕಿಕೊಳ್ಳುತ್ತದೆ. ಹುಲಿ ಕರುವನ್ನು ಹಿಡಿದು ಇನ್ನೇನು ಅದನ್ನು ಸಾಯಿಸಬೇಕು, ಅಷ್ಟರಲ್ಲಿ ಅದರ ತಾಯಿ ಕರುವಿನ ರಕ್ಷಣೆ ಓಡಿ ಮಾಡುತ್ತದೆ.

ತನ್ನ ಕರುವನ್ನು ದುಷ್ಟ ವ್ಯಾಘ್ರನ ವಿರುದ್ಧ ಸೆಣಸಿ ರಕ್ಷಣೆ ಮಾಡುತ್ತದೆ. ಹಸುವಿನ ದಾಳಿಯಿಂದ ಕಂಗಲಾದ ಹುಲಿ ಅಲ್ಲಿಂದ ಓಡಿ ಹೋಗುತ್ತದೆ. ಇದೀಗ ಈ ಅದ್ಭುತ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಹೆತ್ತ ಕಂದನ ರಕ್ಷಣೆಗೆ ಪಾಪದ ಹಸು ಕೂಡ ಹುಲಿಯ ಜೊತೆ ಹೋರಾಡುತ್ತದೆ ಎಂದರೆ ಅದಲ್ಲವೇ ತಾಯ್ತನದ ಶಕ್ತಿ. ಎಂಥದ್ದೇ ಪರಿಸ್ಥಿತಿ ಬರಲಿ ಹೆತ್ತ ತಾಯಿ ತನ್ನ ಕಂದನ ಎಂದಿಗೂ ಬಿಟ್ಟುಕೊಡಲ್ಲ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.
ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದಾರೆ. ಕೆಲವರು ಜನರಿರುವ ಪ್ರದೇಶಕ್ಕೆ ಹುಲಿ ಬಾರದಂತೆ ತಡೆಯಬೇಕಾಗಿದೆ. ವಿಶ್ವದ ಶೇ. 75ರಷ್ಟು ಹುಲಿ ಭಾರತದಲ್ಲಿದೆ, ಸದ್ಯಕ್ಕೆ ಹುಲಿಗಳ ಸಂಖ್ಯೆ 3200 ಇದೆ, ಇವುಗಳ ಸಂಖ್ಯೆ ಇನ್ನಷ್ಟು ಅಧಿಕವಾಗಲಿದೆ. ಹುಲಿಗಳನ್ನು ಸಂರಕ್ಷಿತ ಕಾಡಿನಲ್ಲಿ ಬಿಡಬೇಕೆಂದು ಕೆಲವರು ಹೇಳಿದರೆ, ಇನ್ನು ಕೆಲವರು ನಾವು ಮನುಷ್ಯರ ಕಾಡನ್ನು ನಾಶ ಪಡಿಸಿದರ ಪರಿಣಾಮ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ನೆಟ್ಟಿಗರನ್ನು ಪುಣ್ಯಕೋಟಿ ಕತೆ ನೆನಪು ಮಾಡುವಂತೆ ಮಾಡಿದ ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಈ ಕುರಿತು ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ....



Click it and Unblock the Notifications
