Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ನ್ಯೂನ್ಯತೆಗಳಿದ್ದವನು ಜೀವನದಲ್ಲಿ ಎಂದಿಗೂ ಮುಂದೆ ಬರೋದಿಲ್ಲ : ವಿಧುರ ನೀತಿ
ಮಹಾಭಾರತ ಕಾಲದಲ್ಲಿ ವಿಧುರ ನೀತಿಗೆ ಅಷ್ಟೊಂದು ಪ್ರಾಮುಖ್ಯತೆ ಯಾವ ಕಾರಣಕ್ಕೆ ಕೊಡಲಾಗ್ತಿತ್ತು ಅಂದರೆ ಆತ ರೂಪಿಸಿದ ರಾಜನೀತಿಗಳು ಎಂದಿಗೂ ಸೋತ ಉದಾಹರಣೆಗಳೇ ಇಲ್ಲ. ವಿಧುರ ನೀತಿಯ ಪ್ರಕಾರ ಕೆಲ ವ್ಯಕ್ತಿಗಳು ತಮ್ಮಲ್ಲಿ ಕೆಲವೊಂದು ನ್ಯೂನ್ಯತೆಗಳನ್ನು ಅಳವಡಿಸಿಕೊಂಡಿರುತ್ತಾರೆ ಅವರು ಜೀವನದಲ್ಲಿ ಉದ್ಧಾರವಾಗೋದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.
ಹೌದು, ಅನೇಕರು ಜೀವನದಲ್ಲಿ ಯಶಸ್ವಿಯಾಗೋದಕ್ಕೆ ಬಯಸುತ್ತಾರೆ. ಆದರೆ ಕಷ್ಟ ಪಡೋದಕ್ಕೆ ಸಿದ್ಧ ಇರೋದಿಲ್ಲ. ಕೆಲವೊಂದು ನ್ಯೂನ್ಯತೆಗಳನ್ನು ತಮ್ಮಲ್ಲಿ ಇಟ್ಟುಕೊಂಡು ಜೀವನದಲ್ಲಿ ಯಶಸ್ವಿಯಾಗೋದಕ್ಕೆ ಹೊರಡುತ್ತಾರೆ. ಆದರೆ ವಿಧುರನ ಪ್ರಕಾರ ಆ ಎರಡು ನ್ಯೂನ್ಯತೆಗಳು ಇದ್ದತೆ ಖಂಡಿತ ಜೀವನದಲ್ಲಿ ಯಶಸ್ವಿಯಾಗೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಮಹಾತ್ಮ ವಿಧುರರು ತುಂಬಾ ಬುದ್ಧಿವಂತರಾಗಿದ್ದು ಅವರ ಮಾತುಗಳು ಇಂದಿಗೂ ಪ್ರಚಲಿತದಲ್ಲಿದೆ. ವಿಧುರರ ತಂದೆಯು ಋಷಿಮುನಿಗಳಾದ ವೇದವ್ಯಾಸ. ವಿಧುರರು ಒರ್ವ ದಾಸಿಯ ಗರ್ಭದಲ್ಲಿ ಜನಿಸ್ತಾರೆ. ವಿಧುರರು ಇಷ್ಟೊಂದು ಬುದ್ಧಿವಂತರಾಗಿದ್ದು, ಸಕಲ ಕಲೆಗಳು ಗೊತ್ತಿದ್ದರೂ ಕೂಡ ಅವರು ಯಾಕೆ ಹಸ್ತಿನಾಪುರ ರಾಜ ಆಗಲಿಲ್ಲ ಎಂದರೆ ಅದರ ಹಿಂದಿದ್ದ ಕಾರಣ ಅವರ ಹುಟ್ಟು. ಅಷ್ಟಕ್ಕು ವಿಧುರ ನೀತಿ ಎಂದರೇನು ಗೊತ್ತಾ? ವಿಧುರ ಹಾಗೂ ದೃತರಾಷ್ಟ್ರನ ನಡುವೆ ನಡೆದ ಸಂಭಾಷಣೆಯೇ ವಿಧುರ ನೀತಿ. ಹಾಗಾದ್ರೆ ಯಶಸ್ವಿಯಾಗೋದಕ್ಕೆ ಯಾವ ಗುಣಗಳು ನಮ್ಮಲ್ಲಿ ಇರಬಾರದೆಂದು ಮಹಾತ್ಮ ವಿಧುರರು ಹೇಳಿದ್ದಾರೆ ಅನ್ನೋದನ್ನು ತಿಳಿಯೋಣ.
1. ಉದಾಸೀನ
ಮಹಾತ್ಮ ವಿಧುರರ ಪ್ರಕಾರ ಉದಾಸೀನ ಮನುಷ್ಯನ ಅತೀ ದೊಡ್ಡ ಶತ್ರು. ಇಂತಹ ಸಂದರ್ಭದಲ್ಲಿ ಮನುಷ್ಯ ತನ್ನ ಉದಾಸೀನವನ್ನು ಬಿಟ್ಟು ಕೆಲಸ ಮಾಡಬೇಕು. ಆಗ ಮಾತ್ರ ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯ. ಉದಾಸೀನ ನಮ್ಮ ಕೆಲಸಗಳನ್ನು ಮುಂದೂಡುತ್ತದೆ. ಇವತ್ತು ಬೇಡ ನಾಳೆ ಎಂದು ನಾವು ಕೆಲವನ್ನು ಮುಂದೆ ಹಾಕುತ್ತಲೇ ಇರುತ್ತೇವೆ. ಜೀವನದಲ್ಲಿ ಯಶಸ್ವಿಯಾಗಬೇಕು, ಗುರಿ ಮುಟ್ಟಬೇಕು ಅನ್ನುವವರು ಯಾವತ್ತೂ ಈ ರೀತಿ ಮಾಡೋದಿಲ್ಲ. ಹೀಗಾಗಿ ಸಾಧಿಸುವ ಛಲ ಇರೋ ವ್ಯಕ್ತಿಗೆ ಉದಾಸೀನ ಅನ್ನೋದು ಇರಲೇಬಾರದು ಅಂತಾರೆ ಮಹಾತ್ಮ ವಿಧುರ. ಮನುಷ್ಯರೆಲ್ಲರಲ್ಲೂ ಉದಾಸೀನ ಎಂಬ ಕೆಟ್ಟ ಗುಣ ಇರುತ್ತದೆ. ಆದರೆ ಅತಿಯಾದ ಉದಾಸೀನ ಒಳ್ಳೆಯದಲ್ಲ.
2. ನಿದ್ರೆ
ಮಹಾತ್ಮ ವಿಧುರರ ಪ್ರಕಾರ ಯಾರು ನಿದ್ರೆಯನ್ನು ಹೆಚ್ಚು ಇಷ್ಟ ಪಡುತ್ತಾರೋ ಅಂತವರು ಜೀವನದಲ್ಲಿ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಅತಿಯಾಗಿ ನಿದ್ರಿಸುವ ಅಭ್ಯಾಸ ನಿಮಗಿದ್ದರೆ ಅದನ್ನು ಬಿಟ್ಟು ಬಿಡಿ ಎಂದು ಮಹಾತ್ಮ ವಿಧುರರು ಹೇಳಿದ್ದಾರೆ. ಹೀಗಾಗಿ ಅವಶ್ಯಕತೆ ಇರುವಷ್ಟು ಮಾತ್ರ ನಿದ್ದೆ ಮಾಡಿ. ಅದಕ್ಕಿಂತ ಹೆಚ್ಚಿನ ನಿದ್ದೆ ಒಳ್ಳೆಯದಲ್ಲ. ಸಾಧಿಸುವ ಛಲವಿದ್ದ ವ್ಯಕ್ತಿ ಹೀಗೆ ಸುಖಾ ಸುಮ್ಮನೆ ನಿದ್ದೆ ಮಾಡೋದಿಲ್ಲ ಎಂದಿದ್ದಾರೆ.
ಯಾವ ವ್ಯಕ್ತಿ ಸೋಮಾರಿತನವನ್ನು ಮೈಗೂಡಿಸಿಕೊಂಡು ನಿದ್ದೆಯೇ ಪ್ರಪಂಚ ಅಂದುಕೊಳ್ಳುತ್ತಾನೋ ಆತ ಅಭಿವೃದ್ಧಿಯಾಗೋದಿಲ್ಲ. ಅವನ ಸಂಘವು ಕೂಡ ಅವನಂತೆ ಗುಣವಿರುವ ವ್ಯಕ್ತಿಗಳ ಜೊತೆಗೆ ಇರುತ್ತದೆ. ಮನುಷ್ಯರಾದ ನಾವು ಕರ್ಮದ ಬಗ್ಗೆ ಚಿಂತಿಸೋದು ತುಂಬಾನೇ ಮುಖ್ಯವಾಗುತ್ತದೆ. ಯಾಕಂದ್ರೆ ನಾವು ಒಂದಲ್ಲ ಒಂದು ರೂಪದಲ್ಲಿ ಕರ್ಮವನ್ನು ಅನುಭವಿಸಲೇಬೇಕು. ಯಾರು ಅವನಿಗೆ ಅವನು ಸಹಾಯ ಮಾಡಿಕೊಳ್ಳುತ್ತಾನೋ ಅಂತವರಿಗೆ ದೇವರು ಕೂಡ ಸಹಾಯ ಮಾಡುತ್ತಾರಂತೆ. ಅದನ್ನು ಬಿಟ್ಟು ಸುಮ್ಮನೆ ಬೆಳಗ್ಗೆ ಎದ್ದು ದೇವರನ್ನ ಬೇಡಿಕೊಂಡರೆ ಪ್ರಯೋಜನವಿಲ್ಲ. ನಮ್ಮ ಪ್ರಯತ್ನವು ತುಂಬಾನೇ ಮುಖ್ಯವಾಗುತ್ತದೆ. ಆಗ ಯಶಸ್ಸಿನ ಬಾಗಿಲು ತನ್ನಿಂದ ತಾನೇ ತೆರೆದುಕೊಳ್ಳುತ್ತದೆ.
ಹೀಗಾಗಿ ಇಂದೇ ಈ ಅಭ್ಯಾಸಗಳನ್ನು ಬಿಟ್ಟು ಬಿಡಿ. ಯಶಸ್ವಿಯಾಗಬೇಕೆಂಬ ಛಲ ನಿಮ್ಮಲ್ಲಿದ್ದರೆ ಅದಕ್ಕಾಗಿ ಸತತ ಪರಿಶ್ರಮ ಪಟ್ಟು ದುಡಿಯಿರಿ. ಯಶಸ್ಸು ಖಂಡಿತ ನಿಮ್ಮದಾಗುತ್ತದೆ.



Click it and Unblock the Notifications














