ನೀವು ಯಾವಾಗ, ಹೇಗೆ ಸಾಯುತ್ತೀರಿ ಅಂತ ಹೇಳುವ ದೇವಾಲಯ! ಎಲ್ಲಿದೆ ಗೊತ್ತಾ?

ನಂಬಲು ಆಗದ ಸತ್ಯ..! ನಿಮ್ಮ ಮರಣದ ದಿನಾಂಕವನ್ನೇ ಹೇಳುವ ದೇವಾಲಯ ಇದು. ನಿಮ್ಮ ಸಾವು ಯಾವಾಗ ಮತ್ತು ಹೇಗೆ ಸಂಭವಿಸುತ್ತದೆ ಅನ್ನೋದನ್ನು ಮುಂಚಿತವಾಗಿ ಹೇಳುವ ಈ ದೇವಾಲಯದ ಬಗ್ಗೆ ನಿಮಗೆ ತಿಳಿದಿದೆಯೇ? ಹೌದು, ಇದು ನಿಮ್ಮ ಜೀವದ ಅಂತ್ಯದ ರಹಸ್ಯ ಬಿಚ್ಚಿಡುವ ದೇವಾಲಯ. ನಮ್ಮ ದೇಶದ ಒಂದು ದೇವಾಲಯದಲ್ಲಿ ನಿಮ್ಮ ಭವಿಷ್ಯದ ಜೊತೆಗೆ ನೀವು ಯಾವಾಗ ಸಾಯುತ್ತೀರಿ ಅನ್ನೋದನ್ನು ಕೂಡ ನಿಖರವಾಗಿ ಹೇಳುತ್ತಾರೆ. ಹಾಗಾದರೆ, ಆ ದೇವಾಲಯ ಎಲ್ಲಿದೆ? ಅದರ ವಿಶೇಷತೆಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ನಾಳೆ ಏನಾಗಲಿದೆ ಅಂತ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತೆ. ಗಿಣಿಶಾಸ್ತ್ರ, ನಾಡಿ ಜ್ಯೋತಿಷ್ಯ, ಜ್ಯೋತಿಷ್ಯಶಾಸ್ತ್ರ ಹೀಗೆ ಹಲವು ವಿಧಾನಗಳು ನಮ್ಮ ಭವಿಷ್ಯವನ್ನು ಅಂದಾಜು ಮಾಡಿ ಹೇಳುತ್ತವೆ. ಕೆಲವರು ಇದನ್ನು ಮೂಢನಂಬಿಕೆ ಅಂತ ತಳ್ಳಿಹಾಕಿದರೆ, ಇನ್ನು ಕೆಲವರು ನಂಬುತ್ತಾರೆ. ನಮ್ಮ ಹಣೆಬರಹ ಹೇಳುವವರು ಮೊದಲು ತಮ್ಮ ಹಣೆಬರಹ ನೋಡಿಕೊಳ್ಳಲಿ, ಅವರ ಹಣೆಬರಹ ಚೆನ್ನಾಗಿದ್ದರೆ ನಮಗೆ ಹಣೆಬರಹ ಹೇಳುವ ಕರ್ಮ ಯಾಕೆ ಬಂದಿರುತ್ತದೆ ಎಂದು ಕೆಲವರು ತಮಾಷೆಯಾಗಿ ಗೇಲಿ ಮಾಡುವುದನ್ನು ನಾವು ಆಗಾಗ್ಗೆ ಗಮನಿಸುತ್ತೇವೆ. ಆದರೆ, ಈ ದೇವಾಲಯ ನಿಮ್ಮ ಮರಣದ ದಿನಾಂಕವನ್ನೇ (Death Prediction Temple) ಹೇಳುತ್ತೆ.

Vaitheeswaran Koil Temple
Photo Credit: ಸಂಗ್ರಹ ಚಿತ್ರ

ಈ ದೇವಾಲಯಕ್ಕೆ ವಿಶ್ವವ್ಯಾಪಿ ಖ್ಯಾತಿ

ತಮಿಳುನಾಡು (Tamilnadu) ರಾಜ್ಯದ ಶಿವಗಂಗೈ ಜಿಲ್ಲೆಯಲ್ಲಿ ವೇತೀಶ್ವರನ್ ಕೋಯಿಲ್ (Vaitheeswaran Koil) ಎಂಬ ದೇವಾಲಯವಿದೆ. ಈ ದೇವಾಲಯದಲ್ಲಿ ಶಿವನನ್ನು ವೈದ್ಯನಾಥ ಸ್ವಾಮಿ (ವೇತೀಶ್ವರನ್) ಎಂದು ಪೂಜಿಸಲಾಗುತ್ತದೆ. ಇವರು ಅನಾರೋಗ್ಯಗಳನ್ನು ಗುಣಪಡಿಸುವ ದೇವರಾಗಿ ಪ್ರಸಿದ್ಧಿ ಪಡೆದಿದ್ದಾರೆ. ವೇತೀಶ್ವರನ್ ದೇವಾಲಯಕ್ಕೆ ವಿಶ್ವವ್ಯಾಪಿ ಖ್ಯಾತಿಯನ್ನು ತಂದುಕೊಟ್ಟಿದ್ದು ಇಲ್ಲಿನ ನಾಡಿ ಜ್ಯೋತಿಷ್ಯ.

2,000 ವರ್ಷ ಹಳೆಯ ಗ್ರಂಥಗಳು

ಪುರಾಣಗಳ ಪ್ರಕಾರ, ಸಾವಿರಾರು ವರ್ಷಗಳ ಹಿಂದೆ ಅಗಸ್ತ್ಯ ಮಹರ್ಷಿಗಳು ತಮ್ಮ ದಿವ್ಯದೃಷ್ಟಿಯಿಂದ ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ಜೀವಿಯ ಭವಿಷ್ಯ ಮತ್ತು ವರ್ತಮಾನ ಕಾಲದ ವಿವರಗಳನ್ನು ತಾಳೆಗರಿಗಳ ಮೇಲೆ ಬರೆದು ಸುರಕ್ಷಿತವಾಗಿ ಇಟ್ಟಿದ್ದರು ಎನ್ನಲಾಗಿದೆ. ಈ ತಾಳೆಗರಿ ಗ್ರಂಥಗಳನ್ನೇ ನಾಡಿ ಗ್ರಂಥಗಳು ಎನ್ನುತ್ತಾರೆ. ಈ ಗ್ರಂಥಗಳು ಸುಮಾರು 2,000 ವರ್ಷಗಳಷ್ಟು ಹಳೆಯವು ಎಂದು ಮತ್ತು ಅವು ಈಗಲೂ ಈ ದೇವಾಲಯದಲ್ಲಿ ಸುರಕ್ಷಿತವಾಗಿವೆ.

ಮಹಿಳೆಯರಿಗೆ ಎಡಗೈ ಹೆಬ್ಬೆರಳು

ನಾಡಿ ಜ್ಯೋತಿಷ್ಯ ಹೇಳಿಸಿಕೊಳ್ಳಲು ಹೋದವರನ್ನು ಮೊದಲು ಅವರ ಬೆರಳಚ್ಚು ಕೇಳುತ್ತಾರೆ. ಪುರುಷರಿಗೆ ಬಲಗೈ ಹೆಬ್ಬೆರಳಿನ ಮುದ್ರಿಕೆ, ಮಹಿಳೆಯರಿಗೆ ಎಡಗೈ ಹೆಬ್ಬೆರಳಿನ ಮುದ್ರಿಕೆ ತೆಗೆದುಕೊಳ್ಳುತ್ತಾರೆ. ವಿಶ್ವದಲ್ಲಿ ಯಾರ ಬೆರಳಚ್ಚುಗಳು ಒಂದೇ ರೀತಿ ಇರುವುದಿಲ್ಲ. ಈ ವಿಶೇಷತೆಯ ಆಧಾರದ ಮೇಲೆ ಅವರ ಜೀವನಕ್ಕೆ ಸಂಬಂಧಿಸಿದ ತಾಳೆಗರಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ.

108 ತಾಳೆಗರಿಗಳೊಂದಿಗೆ ಹೋಲಿಕೆ

ಹೆಬ್ಬೆರಳಿನ ಮುದ್ರಿಕೆಯನ್ನು ಆಧರಿಸಿ, ಅದನ್ನು 108 ವಿಧಗಳಾಗಿ ವರ್ಗೀಕರಿಸಿ, ಆ ವರ್ಗಕ್ಕೆ ಸೇರಿದ ತಾಳೆಗರಿಗಳ ಕಟ್ಟುಗಳನ್ನು ಹೊರತೆಗೆಯಲಾಗುತ್ತದೆ. ಇಲ್ಲಿಂದಲೇ ನಿಜವಾದ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ನಾಡಿ ಜ್ಯೋತಿಷಿಗಳು ನಿಮ್ಮ ಬೆರಳಚ್ಚನ್ನು 108 ತಾಳೆಗರಿಗಳೊಂದಿಗೆ ಹೋಲಿಸಿ, ನಿಮಗೆ ಸರಿಹೊಂದುವ ತಾಳೆಗರಿ ಸಿಗುವವರೆಗೆ ವಿಭಿನ್ನ ಪ್ರಶ್ನೆಗಳನ್ನು ಕೇಳುತ್ತಾರೆ. ನಿಮ್ಮ ಹೆಸರು, ತಂದೆ-ತಾಯಿಯ ಹೆಸರುಗಳು, ಜನ್ಮಸ್ಥಳ, ನಕ್ಷತ್ರ ಇತ್ಯಾದಿಗಳನ್ನು ಕೇಳುತ್ತಾರೆ.

ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ನಂತರ, ನಾಡಿ ಜ್ಯೋತಿಷಿಗಳು ನಿಮ್ಮ ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಪ್ರಮುಖ ಘಟನೆಗಳನ್ನು ಓದಿ ಹೇಳುತ್ತಾರೆ. ನಿಮ್ಮ ಪೂರ್ವಜನ್ಮದ ವಿವರಗಳಿಂದ ಹಿಡಿದು, ಈ ಜನ್ಮದಲ್ಲಿ ನಿಮ್ಮ ವಿದ್ಯಾಭ್ಯಾಸ, ಉದ್ಯೋಗ, ವಿವಾಹ, ಸಂತಾನ, ಎದುರಿಸಬೇಕಾದ ಕಷ್ಟಸುಖಗಳವರೆಗೆ ಪ್ರತಿಯೊಂದು ವಿಷಯವನ್ನೂ ವಿವರಿಸುತ್ತಾರೆ.

Tamilnadu Vaitheeswaran Koil Temple
Photo Credit: ಸಂಗ್ರಹ ಚಿತ್ರ

ನಿಮ್ಮ ಸಾವು ಯಾವಾಗ, ಹೇಗೆ ಸಂಭವಿಸುತ್ತೆ?

ಎಲ್ಲಕ್ಕಿಂತ ಹೆಚ್ಚು ಆಶ್ಚರ್ಯಕರ ಮತ್ತು ಆತಂಕಕಾರಿ ವಿಷಯವೆಂದರೆ, ಆ ತಾಳೆಗರಿಗಳಲ್ಲಿ ನಿಮ್ಮ ಮರಣ ಯಾವಾಗ ಮತ್ತು ಹೇಗೆ ಸಂಭವಿಸುತ್ತದೆ ಎಂಬುದನ್ನು ಕೂಡ ಸ್ಪಷ್ಟವಾಗಿ ಬರೆದಿರುತ್ತದೆ ಎಂದು ಹೇಳುತ್ತಾರೆ. ಜಾತಕದಲ್ಲಿರುವ ದೋಷಗಳನ್ನು ಮತ್ತು ಭವಿಷ್ಯದ ಅಡೆತಡೆಗಳನ್ನು ತಪ್ಪಿಸಲು ಕೆಲವು ಪರಿಹಾರಗಳು ಮತ್ತು ಪೂಜೆಗಳನ್ನು ಮಾಡಲು ಸೂಚಿಸುತ್ತಾರೆ.

ಈ ದೇವಾಲಯಕ್ಕೆ ಭೇಟಿ ನೀಡಲು 500 ರೂ.ನಿಂದ 30,000 ರೂ. ವರೆಗೆ ವೆಚ್ಚವಾಗುತ್ತದೆ. ಆದರೆ, ಈ ದೇವಾಲಯದ ಬಗ್ಗೆ ಕೆಲವು ವಿವಾದಗಳು ಮತ್ತು ಟೀಕೆಗಳೂ ಇವೆ. ಈ ದೇವಾಲಯದ ವಿರುದ್ಧ ವಂಚನೆ ಪ್ರಕರಣಗಳು ಕೂಡ ದಾಖಲಾಗಿವೆ. ಈ ಜ್ಯೋತಿಷ್ಯದ ಹೆಸರಿನಲ್ಲಿ ಕೆಲವರು ಅಮಾಯಕ ಜನರನ್ನು ಮೋಸ ಮಾಡುತ್ತಿದ್ದಾರೆ ಮತ್ತು ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಗಳಿವೆ.

ಪೂಜೆ ಯಾವಾಗ?

ಬೆಳಗ್ಗೆ ಅಭಿಷೇಕ: 6:00 ಗಂಟೆಯಿಂದ ಮಧ್ಯಾಹ್ನ 12:30 ರವರೆಗೆ
ಮಧ್ಯಾಹ್ನ ಪೂಜೆ: 12:30 ಗಂಟೆಯಿಂದ ಮಧ್ಯಾಹ್ನ 1:00 ರವರೆಗೆ
ಸಂಜೆ ಅಭಿಷೇಕ: ಮಧ್ಯಾಹ್ನ 4:30 ಗಂಟೆಯಿಂದ ರಾತ್ರಿ 8:30 ರವರೆಗೆ
ರಾತ್ರಿ ಪೂಜೆ: ಸಂಜೆ 8:30 ಗಂಟೆಯಿಂದ ರಾತ್ರಿ 9:00 ರವರೆಗೆ

ತಲುಪುವುದು ಹೇಗೆ?

ವೈದ್ಯೇಶ್ವರನ್ ಕೋಯಿಲ್‌ಗೆ (Vaitheeswaran Koil Temple) ಭೇಟಿ ನೀಡಲು ವಿಮಾನ, ರೈಲು ಅಥವಾ ಬಸ್ ಸಾರಿಗೆ ಸೌಲಭ್ಯ ಲಭ್ಯವಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ರೈಲಿನಲ್ಲಿ ಪ್ರಯಾಣಿಸುವವರಿಗೆ, ಮೈಲಾಡುತುರೈ ಜಂಕ್ಷನ್ ಹತ್ತಿರದ ರೈಲು ನಿಲ್ದಾಣವಾಗಿದೆ. ತಮಿಳುನಾಡಿನ ವಿವಿಧ ಪ್ರಮುಖ ನಗರಗಳಿಂದ ವೈದ್ಯೇಶ್ವರನ್ ಕೋಯಿಲ್‌ಗೆ ನೇರ ಬಸ್ ಸೇವೆಗಳು ಲಭ್ಯವಿವೆ.

English summary

Vaitheeswaran Koil: The Temple That Predicts Your Death Date & Time. Know What Else It Is Famous For?

Temple That Predicts Your Death Date & Time; Know Vaitheeswaran Koil Temple Is Famous For?
X
Desktop Bottom Promotion