Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ವೈಕುಂಠ ಏಕಾದಶಿ: ವೃತ್ತಿ- ಆರ್ಥಿಕ ಸಮಸ್ಯೆ, ಮನೆಯಲ್ಲಿ ನೆಮ್ಮದಿಯಿಲ್ಲ ಈ ಸಮಸ್ಯೆಗಳಿಗೆ ಈ ದಿನ ಯಾವ ಪರಿಹಾರ ಒಳ್ಳೆಯದು?
ವೈಕುಂಠ ಏಕಾದಶಿ ಆಚರಣೆ ಮಾಡುವುದರಿಂದ ವೈಕುಂಠದ ಬಾಗಿಲು ನಮಗೆ ತೆರೆಯುತ್ತದೆ, ನಾವು ಮೋಕ್ಷವನ್ನು ಪಡೆಯುತ್ತೇವೆ ಎಂಬುವುದು ಧಾರ್ಮಿಕ ನಂಬಿಕೆ. ಈ ದಿನ ಉಪವಾಸವಿದ್ದು ವೈಕುಂಠ ಏಕಾದಶಿ ಆಚರಣೆ ಮಾಡಿದರೆ ಅವರ ಇಷ್ಟರ್ಥಗಳು ನೆರವೇರುವುದು.
ನಾವು ಈ ಏಕಾದಶಿಯಂದು ಏಕಾದಶಿ ನಿಯಮಗಳನ್ನು ಪಾಲಿಸಿ ಶ್ರೀವಿಷ್ಣುವಿನ ಬಳಿ ಏನು ಬೇಡಿಕೊಳ್ಳುತ್ತೇವೋ ಅದೆಲ್ಲಾ ನೆರವೇರಲಿದೆ.
ಇನ್ನು ನಮ್ಮ ವೃತ್ತಿ ಬದುಕಿನಲ್ಲಿ ಏನಾದರು ಸಮಸ್ಯೆವಿದ್ದರೆ, ಸಂಬಂಧದಲ್ಲಿ ಸಮಸ್ಯೆವಿದ್ದರೆ ಅಥವಾ ಆರ್ಥಿಕ ಸ್ಥಿತಿಯಲ್ಲಿ ಇಳಿಕೆ ಕಂಡು ಬರುತ್ತಿದ್ದರೆ ಈ ಕಷ್ಟಗಳ ನಿವಾರಣೆಗೆ ವೈಕುಂಠ ಏಕಾದಶಿಯಂದು ಕೆಲವೊಂದು ನಿರ್ದಿಷ್ಟ ಪರಿಹಾರ ಮಾಡಬೇಕು, ಅದನ್ನು ಮಾಡಿದರೆ ಸಮಸ್ಯೆ ಬಗೆಹರಿಯಲಿದೆ :

ವೈಕುಂಠ ಏಕಾದಶಿ
2025ರ ಮೊದಲ ಏಕಾದಶಿಯನ್ನು ಜನವರಿ 10ರಂದು ಆಚರಿಸಲಾಗುವುದು, ಈ ದಿನ ಉಪವಾಸವಿದ್ದು ಶ್ರೀವಿಷ್ಣುವಿ ಸ್ಮರಣೆ ಮಾಡುತ್ತಾ ವೈಕುಂಠ ಏಕಾದಶಿ ಆಚರಣೆ ಮಾಡುತ್ತಾರೆ:
ಆರ್ಥಿಕ ಸಮಸ್ಯೆ ನಿವಾರಣೆಗೆ ಏಕಾದಶಿಯ ಪರಿಹಾರ
ವೈಕುಂಠ ಏಕಾದಶಿಯಂದು ದಾನವನ್ನು ಮಾಡಿ, ಅಗ್ಯತವಿರುವವರಿಗೆ ವಸ್ತ್ರ, ಆಹಾರಗಳನ್ನು ದಾನವನ್ನಾಗಿ ನೀಡಿ. ಇನ್ನು ಶ್ರೀ ವಿಷ್ಣುವಿನ ಜೊತೆಗೆ ಲಕ್ಷ್ಮಿಯನ್ನು ಆರಾಧಿಸಿ. ಶುಕ್ರವಾರದ ದಿನವೇ ಏಕಾದಶಿ ಕೂಡ ಬಂದಿರುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇದು ಶ್ರೇಷ್ಠ ದಿನವಾಗಿದೆ. ಲಕ್ಷ್ಮಿಯನ್ನು ಸಂಜೆ ಹೊತ್ತಿನಲ್ಲಿ ತುಪ್ಪದ ದೀಪ ಹಚ್ಚಿ ಆರಾಧನೆ ಮಾಡಿ. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿನ ಸವಾಲು ದೂರಾಗುವುದು, ಶ್ರೀ ವಿಷ್ಣುವಿನ ಕೃಪೆಯಿಂದ ಆರ್ಥಿಕ ಸಂಕಷ್ಟಗಳಿಂದ ಹೊರಬರಲು ಸಾಧ್ಯವಾಗುವುದು.
ವೃತ್ತಿ ಬದುಕಿನಲ್ಲಿ ಪ್ರಗತಿ ಸಾಧಿಸಲು
ವೃತ್ತಿ ಬದುಕಿನಲ್ಲಿ ಪ್ರಗತಿ ತುಂಬಾನೇ ಮುಖ್ಯ, ವೃತ್ತಿ ಬದುಕಿನಲ್ಲಿ ಏರಳಿತವಿದ್ದರೆ ಮಾನಸಿಕ ಒತ್ತಡ ಹೆಚ್ಚಾಗುವುದು, ಆರ್ಥಿಕ ಅಭದ್ರತೆ ಕಾಡುವುದು. ಅದೇ ವೃತ್ತಿ ಬದುಕಿನ ಪ್ರಗತಿ ನಮ್ಮ ಬದುಕನ್ನು ಸುಧಾರಿಸುತ್ತದೆ. ವೃತ್ತಿ ಬದುಕಿನ ಸವಾಲುಗಳು ದೂರಾಗಲು ವೈಕುಂಠ ಏಕಾದಶಿಯಂದು ಹಳದಿ ಬಣ್ಣದ ವಸ್ತ್ರ ಧರಿಸಿ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಮಂತ್ರಗಳನ್ನು ಪಠಿಸುತ್ತಾ ಶ್ರೀ ವಿಷ್ಣುವಿನ ಆರಾಧನೆ ಮಾಡಿ.
ಮನೆಯ ನೆಮ್ಮದಿಗಾಗಿ
ವೈಕುಂಠ ಏಕಾದಶಿಯಂದು ಮನೆಮುಂದೆ ತುಳಸಿ ಗಿಡ ನೆಟ್ಟು ಅದನ್ನು ಆರೈಕೆ ಮಾಡಿ. ಇದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ಇರುತ್ತದೆ. ಮನೆಯಲ್ಲಿ ನೆಮ್ಮದಿ ಇರಲಿದೆ. ಸಂಬಂಧಗಳಲ್ಲಿನ ಭಿನ್ನಾಭಿಪ್ರಾಯ ಬಗೆಹರಿಯಲಿದೆ.
ಈ ಮಂತ್ರಗಳ ಪಠಣೆ ಮಾಡಿ
ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ ವ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಧಾರಂ ಗಗನಸದ್ರಿಶಂ,
ಮೇಘವರ್ಣಂ ಶುಭಾಂಗಂ ಲಕ್ಷ್ಮಿಂಕಾತಂ ಕಮಲಾನಯನಂ,
ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
ಶ್ರೀ ವಿಷ್ಣು ಮಂತ್ರ:
ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ
ಬಂಧುಶ್ ಚ ಸಖಾ ತ್ವಮೇವ ತ್ವಮೇವ
ವಿದ್ಯಾ ದ್ರವಿಣಂ ತ್ವಮೇವ ತ್ವಮೇವ
ಸರ್ವಂ ಮಮ ದೇವದೇವ



Click it and Unblock the Notifications