Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಉತ್ತರಾಖಂಡ್‌ನಲ್ಲಿ ಯುಸಿಸಿ ಜಾರಿ..! ವಿವಾಹ, ವಿಚ್ಛೇದನ, ಆಸ್ತಿಹಕ್ಕಿನಲ್ಲಿ ಏನೆಲ್ಲಾ ಬದಲಾವಣೆ ಗೊತ್ತಾ?
ದೇಶದಾದ್ಯಂತ ಸದ್ಯ ಹೆಚ್ಚು ಸುದ್ದಿಯಾಗುತ್ತಿರುವ ಏಕರೂಪ ನಾಗರಿಕ ಸಂಹಿತೆಯು ಮೊದಲ ಬಾರಿಗೆ ಅನುಷ್ಠಾನಕ್ಕೆ ಬರುತ್ತಿದೆ. ಉತ್ತರಾಖಂಡ್ ರಾಜ್ಯವು ಈ ನಾಗರಿಕ ಸಂಹಿತೆಯನ್ನು ಜಾರಿ ಮಾಡಿದೆ. ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಏಕರೂಪ ನಾಗರಿಕ ಸಂಹಿತೆಯ ಪೋರ್ಟಲ್ ಅನ್ನು ಕೂಡ ಉದ್ಘಾಟಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈ ನಿಯವನ್ನು ಅಧಿಕೃತವಾಗಿ ಆರಂಭಿಸುವ ಸೂಚನೆ ನೀಡಿದ್ದಾರೆ.
ಆದ್ರೆ ಈ ನಿಯಮ ಜಾರಿಗೆ ಪ್ರಸ್ತಾವನೆಯಾಗಿದ್ದ ಕಾಲದಿಂದಲೂ ವಿರೋಧವಂತು ಕೇಳಿಬಂದಿದೆ. ದೇಶದಲ್ಲಿ ಹಲವು ವಿರೋಧ ಪಕ್ಷಗಳು ಇದು ಅಸಂವಿಧಾನಿಕ ನಡೆ ಎಂದು ಆರೋಪಿಸುತ್ತಾ ಬಂದಿವೆ. ಹಾಗಾದ್ರೆ ನಾವಿಂದು ಈ ನಿಯಮ ಜಾರಿಯಿಂದ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಅದರಲ್ಲೂ ಮದುವೆ, ವಿಚ್ಚೇದನ, ಆಸ್ತಿ ಹಂಚಿಕೆ ವಿಚಾರದಲ್ಲಿ ಯಾವ ರೀತಿಯ ಬದಲಾವಣೆ ನೋಡಬಹುದು ಎಂಬುದನ್ನು ಇಂದು ತಿಳಿಯೋಣ. ಇದಕ್ಕೂ ಮೊದಲು ಯುಸಿಸಿ ಅಥವಾ ಏಕರೂಪ ನಾಗರಿಕ ಸಂಹಿತೆ ಅಂದರೆ ಏನು ಎಂಬುದನ್ನು ತಿಳಿಯೋಣ.
ಏಕರೂಪ ನಾಗರಿಕ ಸಂಹಿತೆ ಅಥವಾ ಯುನಿಫಾರ್ಮ್ ಸಿವಿಲ್ ಕೋಡ್ ಅಂದರೆ ಏನು?
ಯಾವುದೇ ವ್ಯಕ್ತಿ ತನ್ನ ಧರ್ಮ, ವಾಸ ಸ್ಥಳದ ಆಧಾರದ ಮೇಲೆ ವೈಯಕ್ತಿಕ ಕಾನೂನು ಹೊಂದಿರದೆ ಕೇವಲ ಏಕ ಕಾನೂನು ಅನುಸರಿಸುವ ವಿಧಾನ. ಅದರಲ್ಲೂ ವಿವಾಹ ಕಾಯ್ದೆ, ಉತ್ತರಾಧಿಕಾರ ಕಾಯ್ದೆಗಳು ಪ್ರತ್ಯೇಕವಾಗಿ ಅನುಸರಿಸಲಾಗುತ್ತಿದೆ. ಈ ಕ್ರಮದ ಬದಲಾಗಿ ಒಂದೇ ಕಾನೂನು ಜಾರಿ ಮಾಡುವ ಪ್ರಕ್ರಿಯೆಯಾಗಿದೆ. ಪ್ರತಿಯೊಂದು ಧರ್ಮಕ್ಕೂ ಒಂದೇ ಕಾನೂನು ಜಾರಿ ಮಾಡುವ ಸಂಹಿತೆ ಇದಾಗಿದೆ. ಈ ಕಾನೂನಿನ ಪ್ರಕಾರ ಮದುವೆ, ಉತ್ತರಾಧಿಕಾರ, ವಿಚ್ಛೇದನಕ್ಕೆ ಒಂದೇ ಕಾನೂನು ಅನ್ವಯವಾಗಲಿದೆ.
ಹಾಗಾದ್ರೆ ಯಾವೆಲ್ಲಾ ನಿಮಯ ಬದಲಾಗುತ್ತಿದೆ?
ಎಲ್ಲಾ ಧರ್ಮದವರಿಗೂ ಒಂದೇ ಸಂಹಿತೆ ಅನ್ವಯ. ವಿವಾಹ ನೋಂದಣಿ ಕಡ್ಡಾಯವಾಗಿ ಮಾಡಬೇಕಿದೆ. ಈ ಮೊದಲು ವಿವಾಹ ನೋಂದಣಿ ಕಡ್ಡಾಯವಾಗಿ ಹಲವರು ಮಾಡುತ್ತಿರಲಿಲ್ಲ. ಆಯಾ ಧರ್ಮದ ಅನುಸಾರವಾಗಿ ವಿವಾಹ ನೋಂದಣಿ ಮಾಡುವಂತಿಲ್ಲ. ಎಲ್ಲಾ ಧರ್ಮದವರಿಗೂ ವಿವಾಹ ವಿಚ್ಛೇದನಕ್ಕೆ ಒಂದೇ ಕಾನೂನು ಅನ್ವಯವಾಗಲಿದೆ. ಹಾಗೆಯೇ ಮದುವೆಯ ನೋಂದಣಿಯಂತೆ ಲಿವ್ -ಇನ್ ರಿಲೇಷನ್‌ಶಿಪ್‌ನಲ್ಲಿದ್ದರೂ ಕೂಡ ನೋಂದಣಿ ಕಡ್ಡಾಯ. ಹಾಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾಗ ಮಗು ಜನಿಸಿದರು ಕೂಡ 7 ದಿನಗಳ ಒಳಗೆ ನೋಂದಣಿ ಮಾಡಿಸುವುದು ಕಡ್ಡಾಯ ಆಗಿರಲಿದೆ.
ಹಾಗೆ ಆಸ್ತಿ ಸಂಬಂಧ ಉಯಿಲು ಬರೆಯುವವರು ತಮ್ಮ ಸಂಪೂರ್ಣ ಮಾಹಿತಿಯನ್ನು ದಾಖಲು ಮಾಡಬೇಕಾಗುತ್ತದೆ. ಆಧಾರ್ ನಂಬರ್ ನೀಡಿ ಉಹಿಲು ಬರೆಸುವುದು ಕಡ್ಡಾಯವಾಗಲಿದೆ.
ಈ ಕಾನೂನು ಉತ್ತರಾಖಂಡ್‌ನಲ್ಲಿ ನೆಲೆಸಿರುವ ನಾಗರಿಕರಿಗೆ ಅನ್ವಯವಾಗಲಿದೆ, ಹಾಗೆ ರಾಜ್ಯದ ಜನರು ಬೇರೆ ರಾಜ್ಯದಲ್ಲಿ ನೆಲೆಸಿದ್ದರೂ ಕೂಡ ಈ ಕಾನೂನು ಅನ್ವಯವಾಗಲಿದೆ.
ಈ ಕಾನೂನು ಜಾರಿಯಿಂದ ಯಾರೊಬ್ಬರಿಗೂ ಸಮಸ್ಯೆ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆಯೇ ಹೇಳಿದ್ದರು. ಇದು ಯಾರ ವೈಯಕ್ತಿಕ ಕಾನೂನನ್ನು ಹಾನಿಗೊಳಿಸುವುದಿಲ್ಲ, ಅವರ ಹಕ್ಕನ್ನು ಕೂಡ ಕಸಿಯುವುದಿಲ್ಲ ಎಂದಿದ್ದರು.



Click it and Unblock the Notifications
