ಅರಿಶಿಣ ಹೀಗೆ ಬಳಸಿದರೆ ಆರ್ಥಿಕ ಸಂಕಷ್ಟ ದೂರಾಗುವುದಂತೆ!

ಹಿಂದೂ ಧರ್ಮದಲ್ಲಿ ಅರಶಿಣಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ಯಾವುದೇ ಶುಭ ಕಾರ್ಯಗಳು ನಡೆಯಬೇಕಾದರೂ ಅಲ್ಲಿ ಅರಶಿಣ ಇರಲೇಬೇಕು. ಅಷ್ಟೇ ಯಾಕೆ, ಅರಶಿಣವನ್ನು ಶುಭಕರ ಅಂತಾನೂ ಪರಿಗಣಿಸಲಾಗುತ್ತದೆ. ಅರಶಿಣವನ್ನು ಬಳಕೆ ಮಾಡೋದ್ರಿಂದ ಆರ್ಥಿಕ ಸಮಸ್ಯೆಯಿಂದ ಹಿಡಿದು ಎಲ್ಲಾ ರೀತಿ ಕಷ್ಟಗಳು ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ. ಅಷ್ಟಕ್ಕು ಅರಶಿಣದ ಬಳಕೆ ನಮ್ಮ ಜೀವನದಲ್ಲಿ ಯಾವ ರೀತಿಯ ಶುಭ ಫಲಿತಾಂಶಗಳನ್ನು ಹೊತ್ತು ತರಲಿದೆ ಅನ್ನೋದನ್ನು ತಿಳಿದುಕೊಳ್ಳೋಣ.

ಮನೆಯ ಹೊರಗಡೆ ಅರಶಿಣದಿಂದ ಗೆರೆ ಎಳೆಯಿರಿ
ಮನುಷ್ಯ ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತದೆ. ಹೆಚ್ಚಾಗಿ ಆತ ಮನೆಯಲ್ಲಿ ಒಂದಲ್ಲ ಒಂದು ರೀತಿಯ ತಾಪತ್ರಯಗಳನ್ನು ಎದುರಿಸುತ್ತಾನೆ. ಆರ್ಥಿಕ ಸಮಸ್ಯೆ ಇರಬಹುದು, ಕೌಟಿಂಬಿಕ ಕಲಹಗಳು ಆಗಾಗ್ಗೆ ಎದುರಾಗುತ್ತಾ ಇರುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕಾದರೆ ಮನೆಯ ಹೊರಗಿನ ಗೋಡೆಯ ಮೇಲೆ ಅರಶಿಣದಿಂದ ಗೆರೆಯನ್ನು ಎಳೆಯಬೇಕಂತೆ. ಇದರಿಂದ ಸಂಕಷ್ಟವು ಕೊನೆಗೊಳ್ಳುತ್ತದೆ. ಮತ್ತು ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುವುದಿಲ್ಲ ಎಂದು ನಂಬಲಾಗಿದೆ.

Turmeric Benefits: Turmeric Remedies for Financial Crisis and Business Growth in Kannada

ಆರ್ಥಿಕ ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕಾದರೆ ಒಂದು ರೂಪಾಯಿಯ ನಾಣ್ಯವನ್ನು ಐದು ಅರಿಶಿನದೊಂದಿಗೆ ಹಳದಿ ಬಟ್ಟೆಯಲ್ಲಿ ಕಟ್ಟಿ ಪೂಜೆ ಮಾಡುವ ಸ್ಥಳದಲ್ಲಿ ಇಡಬೇಕು. ಇದರಿಂದ ಹಣಕಾಸಿನ ಸಮಸ್ಯೆಗಳನ್ನು ನಿವಾರಣೆಯಾಗುತ್ತಂತೆ. ಮತ್ತು ಲಕ್ಷ್ಮಿ ದೇವಿಯು ಕೂಡ ಸಂತೋಷವಾಗಿರುತ್ತಾಳಂತೆ. ಜಾತಕದಿಂದ ಗುರುದೋಷವನ್ನು ತೊಡೆದುಹಾಕಲು ವಿಷ್ಣುವಿಗೆ ಅರಿಶಿನದ ಉಂಡೆಗಳನ್ನು ಅರ್ಪಿಸುವುದು ಪ್ರಯೋಜನಕಾರಿ ಎಂದು ನಂಬಲಾಗಿದೆ.

ಅರಶಿಣದ ತಿಲಕವನ್ನು ಹಚ್ಚಿರಿ
ಮತ್ತೈದೆಯರಿಗೆ ಅರಣಶಿನ-ಕುಂಕುಮವನ್ನು ನೀಡೋದು ಶುಭಕರ. ಅದೇ ರೀತಿ ಅರಶಿಣದ ತಿಲಕವನ್ನು ಹಚ್ಚುವುದು ಕೂಡ ಶುಭಕರ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಒಂದು ನಂಬಿಕೆಯ ಪ್ರಕಾರ ಬುಧವಾರ ಅರಶಿಣದ ತಿಲಕವನ್ನು ಹಚ್ಚಿದರೆ ಒಳ್ಳೆಯದಾಗುತ್ತಂತೆ.

ವಾಸ್ತುವಿನಲ್ಲಿ ಅರಶಿಣದ ಪ್ರಾಮುಖ್ಯತೆ ಏನು?
ವಾಸ್ತು ಶಾಸ್ತ್ರದ ಪ್ರಕಾರ ಅರಶಿಣದ ಗಿಡವನ್ನು ಮನೆಯಲ್ಲಿ ನೆಟ್ಟರೆ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತಂತೆ. ಹೀಗಾಗಿ ಅರಶಿಣ ಗಿಡವನ್ನು ಮನೆಯಲ್ಲಿ ನಡೆಸುವುದು ತುಂಬಾನೇ ಒಳ್ಳೆಯದು. ಇದರಿಂದ ಸಂತೋಷ, ಸಮೃದ್ಧಿ ಹೆಚ್ಚಾಗುವುದು ಮಾತ್ರವಲ್ಲದೇ ಮನೆಯವರ ನಡುವಿನ ಬಾಂಧವ್ಯವೂ ಹೆಚ್ಚಾಗುತ್ತಂತೆ.

ಆರ್ಥಿಕ ಸಮಸ್ಯೆ ದೂರವಾಗುತ್ತದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರಶಿಣ ವಿಷ್ಣುವಿಗೆ ಪ್ರಿಯವಾದ ವಸ್ತುವಂತೆ. ಗುರುವಾರದ ದಿನವನ್ನು ವಿಶೇಷವಾಗಿ ವಿಷ್ಣುವಿಗೆ ಅರ್ಪಣೆ ಮಾಡಲಾಗುತ್ತದೆ. ಹೀಗಾಗಿ ಗುರುವಾರದ ದಿನ ಅರಶಿಣವನ್ನು ವಿಷ್ಣುವಿಗೆ ಅರ್ಪಣೆ ಮಾಡೋದ್ರಿಂದ ಲಕ್ಷ್ಮೀಯ ಕೃಪಾಕಟಾಕ್ಷಕ್ಕೆ ಪಾತ್ರವಾಗಬಹುದಂತೆ. ನಿಮಗೊತ್ತಾ ವಿಷ್ಣುವಿಗೆ ಅರಶಿಣವನ್ನು ಅರ್ಪಣೆ ಮಾಡೋದ್ರಿಂದ ನಮ್ಮ ಆರ್ಥಿಕ ಸಮಸ್ಯೆಗಳೆಲ್ಲವೂ ದೂರವಾಗುತ್ತೆ ಅನ್ನೋ ನಂಬಿಕೆಯಿದೆ.

ಯಶಸ್ಸು ಒಲಿಯುತ್ತದೆ
ಅನೇಕರಿಗೆ ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟರೂ ಕೂಡ ಯಶಸ್ಸು ಒಲಿಯುತ್ತಿಲ್ಲ ಅನ್ನೋ ಕೊರಗು ಕಾಡುತ್ತಿರುತ್ತದೆ. ಅಂತವರು ಗುರುವಾರದಂದು ಶ್ರೀ ಗಣೇಶನಿಗೆ ಅರಿಶಿನದ ತಿಲಕವನ್ನು ಇಡಬೇಕು. ಅದೇ ತಿಲಕವನ್ನು ನೀವು ಮನೆಯಿಂದ ಹೊರಗಡೆ ಹೋಗುವಾಗ ಹಚ್ಚಿಕೊಳ್ಳಿ. ಇದರ ಫಲವಾಗಿ ನೀವು ಮಾಡುವ ಪ್ರತಿ ಶುಭ ಕಾರ್ಯದಲ್ಲೂ ಯಶಸ್ಸು ಪಡೆಯಲು ಸಾಧ್ಯವಾಗುತ್ತಂತೆ.

ಅರ್ಧದಲ್ಲಿ ಉಳಿದ ಕೆಲಸ ಪೂರ್ಣಗೊಳ್ಳುತ್ತದೆ
ಅರಶಿಣವು ದೇವಗುರು ಬೃಹಸ್ಪತಿಗೆ ಸಂಬಂಧಿಸಿದ್ದಾಗಿದೆ. ಗುರುವಿನ ಅನುಗ್ರಹವನ್ನು ಪಡೆಯಬೇಕಾದರೆ ಹಳದಿ ಬಣ್ಣದ ವಸ್ತುಗಳನ್ನು ಗುರುವಾರದ ದಿನ ಬ್ರಾಹ್ಮಣರಿಗೆ ಅರ್ಪಣೆ ಮಾಡಬೇಕು. ಬೇಳೆ, ಹಳದಿ ಬಣ್ಣದ ಬಟ್ಟೆ, ಬೇಸನ್ ಲಡ್ಡು ಇತ್ಯಾದಿ. ಈ ರೀತಿ ಮಾಡೋದ್ರಿಂದ ಅರ್ಧದಲ್ಲಿ ನಮ್ಮ ಕೆಲಸವು ಪೂರ್ಣಗೊಳ್ಳುತ್ತೆ ಎಂದು ನಂಬಲಾಗಿದೆ.

ಅರಶಿಣದ ಬಳಕೆಯಿಂದ ನಮ್ಮೆಲ್ಲಾ ಕಷ್ಟಗಳು ದೂರ ಆಗುತ್ತೆ ಅನ್ನೋ ನಂಬಿಕೆ ಕೂಡ ಇದೆ. ಇದೇ ಕಾರಣಕ್ಕೆ ಅರಶಿಣವನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ.

English summary

Turmeric Benefits: Turmeric Remedies for Financial Crisis and Business Growth in Kannada

Turmeric Benefits: These are the Remedies for Financial Crisis and Business Growth.
Story first published: Wednesday, May 31, 2023, 16:30 [IST]
X
Desktop Bottom Promotion