Latest Updates
-
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು!
Mirabai Chanu : ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಗೆದ್ದ ಮೀರಾಬಾಯಿ ಚಾನು ಕುರಿತ ಆಸಕ್ತಿಕರ ಸಂಗತಿಗಳು
ಭಾರತೀಯರು ಹರ್ಷೋದ್ಗಾರದಿಂದ ಕೂಗುತ್ತಿರುವ ಹೆಸರು ಮೀರಾಬಾಯಿ ಚಾನು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಸಾಧಕಿ.
ವೇಯ್ಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಇದೀಗ ಸಾಮಾಜಿಕ ತಾಣದಲ್ಲಿ ಭಾರತೀಯರು ಮೀರಾಭಾಯಿ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಯಾರು ಮೀರಾಬಾಯಿ ಚಾನು, ಬಿಲ್ಲುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ ಮೀರಾಬಾಯಿ ವೇಯ್ಟ್‌ಲಿಫ್ಟಿಂಗ್ ಆಯ್ಕೆ ಮಾಡಿರುವ ಕಾರಣವಾದರೂ ಎಂಬೆಲ್ಲಾ ಆಸಕ್ತಿಕರ ಮಾಹಿತಿಗಳು ಇಲ್ಲಿವೆ ನೋಡಿ:

ಭಾರ ಎತ್ತುವ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದ 2ನೇ ಮಹಿಳಾ ಕ್ರೀಡಾಪಟು
26 ವರ್ಷದ ಮಣಿಪುರದ ಮೀರಾಬಾಯಿ ಚಾನು 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಸೋತಾಗ ತುಂಬಾ ನೋವು ಅನುಭವಿಸಿದ್ದರು. ಅವರಿಗೆ ಆ ನೋವು ತುಂಬಾ ಕಾಡಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕರ್ಣ ಮಲೇಶ್ವರಿ ಬಳಿಕ ಭಾರತಕ್ಕೆ ಭಾರ ಎತ್ತುವ ವಿಭಾಗದಲ್ಲಿ ಪದಕ ತಂದ ಎರಡನೇ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆ ಇವರದ್ದು.

ಮೈ ಕೆಸರಾಗದ ಆಟ ಆಡಬೇಕೆಂದು ಬಯಸಿ ಬಿಲ್ಲುಗಾರಿಕೆಯಲ್ಲಿ ಆಸಕ್ತಿ ತೋರಿದ್ದ ಮೀರಾಬಾರಿ
ಅವರೇ ಹೇಳುವಂತೆ ' ನನ್ನ ಸಹೋದರರು. ಕಸಿನ್ಸ್ ಫುಟ್ಬಾಲ್ ಆಟ ಆಡಿ ಕೆಸರು ಮೆತ್ತಿದ ಬಟ್ಟೆಯಲ್ಲಿ ಹಿಂತಿರುಗುತ್ತಿದ್ದರು. ಅವರನ್ನು ನೋಡುವಾಗ ಮೈ ಕೆಸರಾಗದ, ಸ್ಟೈಲಿಷ್ ಆಗಿರುವ ಆಟ ಆಡಬೇಕೆಂದು ಬಯಸಿದ್ದೆ, ಹಾಗಾಗಿ ಬಿಲ್ಲುಗಾರಿಕೆ ಮಾಡಬೇಕೆಂದಿದ್ದೆ, ಏಕೆಂದರೆ ಅದು ಮೈ-ಕೈ ಕೆಸರಾಗದ ತುಂಬಾ ಸ್ಟೈಲಿಷ್ ಆದ ಕ್ರೀಡೆಯಾಗಿದೆ' .

ಪುಟ್ಟ ಹಳ್ಳಿಯಲ್ಲಿ, ಬಡ ಕುಟುಂಬದಲ್ಲಿ ಜನಿಸಿದ ಮೀರಾಬಾಯಿ
ಮಣಿಪುರದ ರಾಜಧಾನಿ ಇಂಪಾಲ್‌ನಿಂದ 20 ಕಿ. ಮೀ ದೂರದಲ್ಲಿರುವ ನೋಗ್‌ಪೋಕ್ ಕಾಕ್‌ಚಿಂಗ್ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸುತ್ತಾರೆ. 13 ವರ್ಷ ಇರುವಾಗಲೇ ತಾನೊಬ್ಬ ಪ್ರಸಿದ್ಧ ಕ್ರೀಡಾಪಟುವಾಗಬೇಕೆಂದು ಬಯಸುತ್ತಾರೆ. ಆ ಹಂಬಲದಿಂದಲೇ ತನ್ನ ಕಸಿನ್‌ಯೊಂದಿಗೆ 2008ರಲ್ಲಿ ಇಂಪಾಲ್‌ನ ಖುಮಾನ್ ಲಂಪಾಕ್‌ನಲ್ಲಿರುವ ಸಾಯಿ ಸೆಂಟರ್‌ಗೆ (Sports Authority of India)ಬರುತ್ತಾರೆ. ಆದರೆ ಆಗ ಅವರಿಗೆ ಬಿಲ್ಲುಗಾರಿಕೆ ಕಲಿಸಲು ಯಾವುದೇ ಮೆಂಟರ್ ಸಿಗುವುದಿಲ್ಲ. ಆಗ ಅವರು ಮಣಿಪುರದ ಪ್ರಸಿದ್ಧ ಕ್ರೀಡಾಪಟು ಕುಂಜರಾಣಿ ದೇವಿಯವರ ಭಾರ ಎತ್ತುವ ಸ್ಪರ್ಧೆಗಳ ಕ್ಲಿಪ್ಪಿಂಗ್‌ಗಳನ್ನು ನೋಡುತ್ತಾರೆ. ಆಗ ವೇಯ್ಟ್‌ಲಿಫ್ಟಿಂಗ್‌ನಲ್ಲಿ ಆಸಕ್ತಿ ಮೂಡುತ್ತದೆ. ಅಲ್ಲಿಂದ ವೇಯ್ಟ್‌ಲಿಫ್ಟಿಂಗ್ ಟ್ರೈನಿಂಗ್ ಸೆಂಟರ್‌ಗೆ ಹೋಗುತ್ತಾರೆ, ಅಲ್ಲದೆ ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ಕೋಚ್ ಅನಿತಾ ಚಾನು ಸಿಗುತ್ತಾರೆ, ಅವರು ಮೀರಾಬಾಯಿಗೆ ಮಾರ್ಗದರ್ಶನ ನೀಡುತ್ತಾರೆ.
ಟ್ರೈನಿಂಗ್ ಬರುವಾಗ ಸ್ಕೂಲ್ ಸಮಯ ಹಾಗೂ ಟ್ರೈನಿಂಗ್ ಸಮಯ ಹೊಂದಿಸಲು ತುಂಬಾ ಕಷ್ಟಪಡುತ್ತಿದ್ದರು. 6 ಗಂಟೆಗೆ ಟ್ರೈನಿಂಗ್ ಸೆಂಟರ್‌ಗೆ ಬರಬೇಕಾಗಿತ್ತು. ತನ್ನ ಹಳ್ಳಿಯಿಂದ 22 ಕಿ.ಮೀ ದೂರದಲ್ಲಿರುವ ಟ್ರೈನಿಂಗ್ ಸೆಂಟರ್‌ಗೆ ಬರಲು 2 ಬಸ್ ಬದಲಾಯಿಸಬೇಕಾಗಿತ್ತು. ಅವರು 12-13 ವರ್ಷವಿದ್ದಾಗ ತನ್ನ ಹೊರೊಯ ಸಹೋದರನಿಗಿಂತ ಅಧಿಕ ತೂಕ ಸೌದೆಯ ದಿಮ್ಮಿಗಳನ್ನು ಹೊರುತ್ತಿದ್ದರು.

ರೈಲ್ವೆಯಲ್ಲಿ ಉದ್ಯೋಗ
ಮೀರಾಬಾಯಿ ಭಾರತೀಯ ರೈಲ್ವೆಯಲ್ಲೊ ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಉದ್ಯೋಗದಲ್ಲಿದ್ದರು. 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದಿದ್ದ ವೇಯ್ಟ್ ಲಿಫ್ಟ್ 170ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು, ರಿಯೋದಲ್ಲಿ ಸೋತ ಬಳಿಕ ಸೀನಿಯರ್ ನ್ಯಾಷನಲ್‌ನಲ್ಲಿ ಭಾಗವಹಿಸಿ 2016ರಲ್ಲಿ ವೇಯ್ಟ್ ಲಿಫ್ಟಿಂಗ್ 189 ಕೆಜಿಯಲ್ಲಿ ಚಿನ್ನ ಗೆದ್ದಿದ್ದರು.
ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದಿದ್ದಾರೆ. ಮೊದಲಿಗೆ ಬೆಳ್ಳಿ ಸಿಕ್ಕರೆ ಶುಭ ಅಂತಾರೆ... ಇನ್ನು ಹೆಚ್ಚಿನ ಪದಕಗಳು ಭಾರತಕ್ಕೆ ಲಭಿಸುವಂತಾಗಲಿ....



Click it and Unblock the Notifications