Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್!
ನೆಲಗಡಲೆ ಕದ್ದವನಿಗೆ ಬುದ್ಧಿವಂತಿಕೆಯಿಂದ ಪಾಠ ಕಲಿಸಿದ ಬಡ ವ್ಯಾಪಾರಿ: ವೈರಲ್ ವೀಡಿಯೋ
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಲಗಡಲೆ ಮಾರುವ ವ್ಯಾಪಾರಿಯ ವೀಡಿಯೊಂದು ಸಕತ್ ವೈರಲ್ ಆಗಿತ್ತು. ಆತ ಬೀದಿಯಲ್ಲಿ ನೆಲಗಡಲೆ ಮಾರುತ್ತಿರುವ ಬಡಪಾಯಿ ವ್ಯಾಪಾರಿ, ವ್ಯಾಪಾರ ಮಾಡಿ ಬರುವ ಬಿಡಿಗಾಸು ಲಾಭದಿಂದ ಅಂಥವರ ಜೀವನ ಸಾಗುತ್ತಿರುತ್ತದೆ. ಅಂಥ ವ್ಯಕ್ತಿಯ ಅನ್ನವನ್ನು ಕಸಿಯುವ ಪ್ರಯತ್ನ ಮಾಡುವುದೆಂದರೆ ಆ ದೇವರು ಮೆಚ್ಚುತ್ತಾನೆಯೇ?

ಹೌದು ಈ ವೀಡಿಯೋದಲ್ಲಿ ವ್ಯಾಪಾರಿ ಬಳಿ ಒಬ್ಬ ಬಂದು ಕಡಲೆಕೊಳ್ಳುತ್ತಾನೆ. ನೋಡಲು ಜೀನ್ಸ್, ಟೀ ಶರ್ಟ್ ಧರಿಸಿ ದುಡ್ಡು ಇರುವವನಂತೆ ಇರುತ್ತಾನೆ, ಆದರೆ ಅವನು ತುಂಬಾ ಹೇಯ ಕೃತ್ಯ ಮಾಡುತ್ತಾನೆ. ಆ ಬಡ ವ್ಯಾಪಾರಿ ಕಡ್ಲೆಕಾಯಿ ತೂಗುತ್ತಿರುವಾಗ ಒಂದಿಷ್ಟು ನೆಲಗಡಲೆ ತೆಗೆದು ತನ್ನ ಟೀ ಶರ್ಟ್‌ನ ಜೇಬಿನಲ್ಲಿ ತುಂಬಿಕೊಳ್ಳುತ್ತಾನೆ, ಇಲ್ಲಿ ಹೈಲೈಟ್ಸ್ ಆಗಿರುವುದು ಅವನ ಕೆಟ್ಟ ಬುದ್ಧಿಯಲ್ಲ, ಬದಲಿಗೆ ವ್ಯಾಪಾರಿ ಅವನಿಗೆ ಬುದ್ದ ಕಲಿಸಿದ ರೀತಿ, ಅಲ್ಲಿಯೇ ಇರುವುದು ಟ್ವಿಸ್ಟ್...
ಅವನು ವ್ಯಾಪಾರಕ್ಕೆ ಅಂತ ಬಂದು ಸ್ವಲ್ಪ-ಸ್ವಲ್ಪ ನೆಲಗಡಲೆ ತೆಗೆದು ಜೇಬಿನಲ್ಲಿ ತುಂಬಿಕೊಳ್ಳುತ್ತಿರುವುದನ್ನು ವ್ಯಾಪಾರಿಯೂ ಗಮನಿಸಿರುತ್ತಾನೆ, ಹಾಗಂತ ಅದರ ಬಗ್ಗೆ ಅವನ ಬಳಿ ಕೇಳಿದರೆ ಜಗಳಕ್ಕೆ ಬರಬಹುದು, ನಿನ್ನ ನೆಲಗಡಲೆ ನೀನೇ ಇಟ್ಕೋ ಅಂತ ಹೋಗಬಹುದು, ಹೀಗೆ ಮಾಡಿದರೆ ವ್ಯಾಪಾರ ನಷ್ಟ, ಸುಮ್ಮನೆ ಜಗಳದ ರಾದ್ದಾಂತ. ಹಾಗೇನೂ ಆಗಬಾರದು ಎಂದು ಭಾವಿಸಿದ ವ್ಯಾಪಾರಿ ಸೈಲೆಂಟ್ ಆಗಿ ಬುದ್ಧಿ ಕಲಿಸಿದ್ದಾನೆ, ಅವನು ನೆಲಗಡಲೆ ತೂಗಿ ಇನ್ನೇನು ಕವರ್‌ನಲ್ಲಿ ಹಾಕಬೇಕು ಆಗ ಅವನ ಬಳಿ ಆ ಕಡೆ ತೋರಿಸಿ ಏನೋ ಹೇಳುತ್ತಾನೆ, ಅವನು ಅತ್ತ ತಿರುಗಿದಾಗ ಸ್ವಲ್ಪ ನೆಲಗಡಲೆ ಗುಡ್ಡೆಗೆ ಸರಿದು ಉಳಿದಿದ್ದನ್ನು ಕವರ್‌ಗೆ ಹಾಕುತ್ತಾನೆ. ಅವನು ಕದ್ದ ನೆಲಗಡಲೆ ಖುಷಿಯಲ್ಲಿದ್ದರೆ ವ್ಯಾಪಾರಿಗೆ ನನಗೆ ನಷ್ಟವಾಗಲಿಲ್ಲ ಎಂಬ ಸಮದಾನ.
ತಾಳ್ಮೆಯಿಂದಲೂ ಪಾಠ ಕಲಿಸಬಹುದು ಎಂಬ ನೀತಿ ಪಾಠವನ್ನು ಈ ನಿಜ ಕತೆಯನ್ನು ಮಕ್ಕಳಿಗೆ ಹೇಳುತ್ತಾ ಹೇಳಬಹುದು ಅಲ್ವಾ?



Click it and Unblock the Notifications
