Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಝೂನಲ್ಲಿ ವ್ಯಕ್ತಿಯ ಟೀ ಶರ್ಟ್ ಎಳೆದು, ಕಾಲು ಗಟ್ಟಿಯಾಗಿ ಹಿಡಿದ ಒರಾಂಗುಟನ್: ವೀಡಿಯೋ ವೈರಲ್
ಎರಡು ಮೂರು ದಿನಗಳಿಂದ ಒರಾಂಗುಟನ್ (ಗೊರಿಲ್ಲಾ ಜಾತಿಗೆ ಸೇರಿದ ಪ್ರಾಣಿ)ಯ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗ್ತಾ ಇದೆ. ಇದರ ಬಗ್ಗೆ ಅನೇಕ ಚರ್ಚೆಗಳು ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ. ಅದು ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿರುವ ಒರಾಂಗುಟನ್ ವೀಡಿಯೋ ಇದಾಗಿದೆ.

ಆ ವೀಡಿಯೋ ಒಬ್ಬ ವ್ಯಕ್ತಿ ಒರಾಂಗುಟನ್ ಬಳಿ ಹೋಗುವುದನ್ನು ಕಾಣಬಹುದು, ಆದರೆ ಆ ಪ್ರಾಣಿಗದು ಇಷ್ಟವಾಗಲ್ಲ, ಅವನ ಟೀ ಶರ್ಟ್ ಹಿಡಿದು ಎಳೆಯುತ್ತೆ, ಅವನು ಬಿಡಿಸಿಕೊಳ್ಳಲು ನೋಡುವಾಗ ಬಿಡುವುದೇ ಇಲ್ಲ, ಮತ್ತೊಬ್ಬ ವ್ಯಕ್ತಿ ಅವನ ರಕ್ಷಣೆಗೆ ಬರುತ್ತಾರೆ, ಆದರೆ ಒರಾಂಗುಟನ್ ಬಿಡಲು ಸಿದ್ಧವಿರುವುದಿಲ್ಲ, ಅವನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತೆ. ಈ ವೀಡಿಯೋ ಇದೀಗ ಸಕತ್ ವೈರಲ್ ಆಗಿದ್ದು ಇದರ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ಈ ಮೃಗಾಲಯ ವೀಕ್ಷಕರಿಗೆ ಎಷ್ಟು ಸುರಕ್ಷಿತ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಇವನು ಅಧಿಪ್ರಸಂಗ ಮಾಡಿರಬಹುದು ಅದಕ್ಕೆ ಹೀಗಾಗಿದ್ದು ಅಂತಿದ್ದಾರೆ.
ಇದೀಗ ಮೃಗಾಲಯದ ಅಧಿಕಾರಿಗಳು ಊ ಕುರಿತು ಪ್ರತಿಕ್ರಿಯೆ ನೀಡಿದ್ದು ' ನಡೆದಿರುವ ಪ್ರಕರಣಕ್ಕೆ ವಿಷಾದ ವ್ಯಕ್ತಿಪಡಿಸುತ್ತೇವೆ, ಆ ವ್ಯಕ್ತಿ ಒರಾಂಗುಟನ್ ಜೊತೆ ಕ್ಲೋಸ್‌ಅಪ್ ಫೋಟೋ ತೆಗೆಯಲು ನಿರ್ಬಂಧದ ಗೆರೆಯನ್ನು ದಾಟಿ ಒಳ ಹೋಗಿರುವುದರಿಂದ ಈ ರೀತಿಯ ಘಟನೆ ಸಂಭವಿಸಿದೆ ಎಂದು ಹೇಳಿದೆ'.
ಮೈಗಾಲಯಕ್ಕೆ ಹೋದಾಗ ಪ್ರಾಣಿಗಳ ಹತ್ತಿರ ಹೋಗಬಾರದು, ಜಮೈಕಾದ ಮೃಗಾಲಯದಲ್ಲಿ ಇತ್ತೀಚೆಗೆ ಅಲ್ಲಿಯ ಕೆಲಸಗಾರರ ಕೈ ಬೆರಳನ್ನು ಸಿಂಹ ಕಚ್ಚಿ ತುಂಡರಿಸಿದ್ದು ಸುದ್ದಿಯಾಗಿತ್ತು.
ಮೃಗಾಲಯಕ್ಕೆ ಹೋದಾಗ ಪ್ರಾಣಿಗಳ ಹತ್ತಿರ ಹೋಗುವುದು, ಕುಚೇಷ್ಠೆ ಮಾಡುವುದು ಮಾಡಿದರೆ ಈ ರೀತಿಯ ಅಪಾಯಗಳಾಗಬಹುದು ಹುಷಾರ್!



Click it and Unblock the Notifications

