Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಏಲಿಯನ್ ವೀಡಿಯೋ ವೈರಲ್: ಜನರು ಏಲಿಯನ್ ಅಂದುಕೊಂಡಿದ್ದ ಈ ಜೀವಿಗಳು ಏಲಿಯನ್ ಅಲ್ಲ!
ಎರಡು ವಿಚಿತ್ರವಾದ ಜೀವಿಗಳು ಪಿಳಿ-ಪಿಳಿ ಕಣ್ಣು ಬಿಟ್ಟು ನೋಡುತ್ತಿರುವಾದ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಆಗಿದ್ದೇ ಕ್ಷಣಾರ್ಧದಲ್ಲಿ ವೈರಲ್ ಆಯ್ತು. ಆ ಎರಡು ಜೀವಿಗಳನ್ನು ನೋಡಿದಾಗ ಯಾರಿಗಾದರೂ ಅದು ಏಲಿಯನ್ ಇರಬಹುದು ಎಂದು ಅನಿಸಿರುವುದರಿಂದ ಭೂಮಿ ಮೇಲೆ ಏಲಿಯನ್ ಕಂಡು ಬಂತೆಂದು ಜನರು ಶೇರ್ ಮಾಡಿದ್ದೇ ಮಾಡಿದ್ದು, ಆದರೆ ನಿಜವಾಗಿ ನಡೆದಿದ್ದೇ ಬೇರೆ.
ಇದೀಗ ಟ್ವಿಟರ್‌ನಲ್ಲಿ ಆ ವಿಚಿತ್ರಗಳ ಜೀವಿಗಳು ಯಾವುದು? ಎಂಬ ಸತ್ಯ ತಿಳಿಯುತ್ತಿದ್ದಂತೆ ಟ್ವಿಟರ್ ಬಳಕೆದಾರರು ಹೌದಾ? ಎಂದು ಅಚ್ಚರಿ ವ್ಯಕ್ತಪಡಿಸಿ, ಛೇ! ನಾವು ಸುಮ್ಮನೆ ಏಲಿಯನ್ ಅಂದುಕೊಂಡಿದ್ದೆವು ಎಂದು ಸುಮ್ಮನಾಗುತ್ತಿದ್ದಾರೆ.

ಅಷ್ಟಕ್ಕೂ ನಡೆದಿದ್ದು ಏನಪ್ಪಾ ಅಂದರೆ ಡೇನಿಯಲ್ ಹೋಲಂಡ್ ಎಂಬ ಟ್ವಿಟರ್ ಬಳಕೆದಾರರು ಹೃದಯ ರೀತಿಯ ಆಕಾರವಿರುವ, ದೊಡ್ಡ-ದೊಡ್ಡ ಕಪ್ಪು ಕಣ್ಣುಗಳಿರುವ ಫೋಟೊವನ್ನು ಶೇರ್ ಮಾಡಿದ್ದರು, ಆ ಜೀವಿಗಳು ನೋಡಲು ವಿಚಿತ್ರವಾಗಿದ್ದು ಎಲ್ಲರು ಏಲಿಯನ್ ಎಂದೇ ಭಾವಿಸಿದ್ದರು.
ಆದರೆ ಅವುಗಳು ಹೊರಲೋಕದ ಜೀವಿಗಳಾದ ಏಲಿಯನ್ ಅಲ್ಲ, ಅವು ನಾವು ನೋಡಿರದ ಜೀವಿಯಂತೂ ಅಲ್ಲವೇ ಅಲ್ಲ, ಆ ವಿಚಿತ್ರ ಜೀವಿಗಳು ಏನಪ್ಪಾ ಅಂದರೆ ಪುಟಾಣಿ ಗೂಬೆ ಮರಿಗಳು. ಪಿಳಿ-ಪಿಳಿ ಕಣ್ಣು ಬಿಡುತ್ತಿರುವ ಗೂಬೆ ಮರಿಗಳು ನೋಡಲು ಫೋಟೊದಲ್ಲಿ ವಿಚಿತ್ರವಾದ ಜೀವಿಗಳಂತೆ ಕಂಡು ಬಂದಿದ್ದೆವು.
ಇದೀಗ ಡೇನಿಯಲ್ ಹೋಲಂಡ್ ಆ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ತಿಳಿಸಲು ಗೂಬೆ ಮರಿಗಳ ವೀಡಿಯೋ ಶೇರ್ ಮಾಡಿದ್ದಾರೆ. ಆದರೆ ಈ ವೀಡಿಯೋ ಶೇರ್ ಆಗುತ್ತಿದ್ದಂತೆ ಮಿಲಿಯನ್‌ಗಟ್ಟಲೆ ವೀಕ್ಷಣೆಯಾಗಿದೆ ಹಾಗೂ ನೂರಾರು ಸಾವಿರಕ್ಕೂ ಅಧಿಕ ಮರುಟ್ವೀಟ್ ಆಗಿದ್ದು, ಆ ಗೂಬೆ ಮರಿಗಳು ಸಾಮಾಜಿಕ ತಾಣದಲ್ಲಿ ಸಕತ್ ಸದ್ದು ಮಾಡುತ್ತಿವೆ. ಅಂತೂ ವೈರಲ್ ಆಗುವ ಭಾಗ್ಯ ಗೂಬೆಗಳಿಗೂ ಬಂತು.



Click it and Unblock the Notifications
