Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಖಿನ್ನತೆ, ಕೌಟುಂಬಿಕ ಸಮಸ್ಯೆ ಗುರುಪ್ರಸಾದ್ ಜೀವ ಕಸಿದಿತ್ತಾ? 10 ದಿನವಾದ್ರು ಯಾರಿಗೂ ತಿಳಿಯಲಿಲ್ಲ ಏಕೆ?
ಕನ್ನಡ ಚಿತ್ರರಂಗದಲ್ಲಿ ಮಠ, ಎದ್ದೇಳು ಮಂಜುನಾಥದಂತ ವಿಭಿನ್ನ ಸಿನಿಮಾಗಳಿಂದ ಹೆಸರು ಮಾಡಿದ್ದ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ನಿರ್ಧಾರ ತೆಗದುಕೊಂಡಿರುವುದು ಸ್ಯಾಂಡಲ್‌ವುಡ್‌ನಲ್ಲಿ ಆಘಾತ ಉಂಟು ಮಾಡಿದೆ. ಸೋಲುಗಳ ಮೆಟ್ಟಿನಿಂತು ಹೊಸ ರೀತಿ ಸಿನಿಮಾ ನೀಡುತ್ತೇನೆ ಎಂಬ ದೃಢ ನಿರ್ಧಾರದಲ್ಲಿದ್ದ ಅವರು ಏಕಾಏಕಿ ಸಾವಿನ ನಿರ್ಧಾರ ಮಾಡಿರುವುದು ಎಮತವರಲ್ಲೂ ಅಚ್ಚರಿಗೆ ತಳ್ಳಿದೆ.
ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ಗುರುಪ್ರಸಾದ್ ಅವರು ಇತ್ತಿಚಿಗೆ ರಂಗನಾಯಕ ಸಿನಿಮಾದ ಸೋಲಿನಿಂದ ಕುಗ್ಗಿದ್ದರು. ಹಾಗೆ ಸಾಲ, ಕೌಟುಂಬಿಕ ಹಿನ್ನಲೆಗಳು, ಸಿನಿಮಾ ಸೋಲು ಹೀಗೆ ಎಲ್ಲವು ಒಮ್ಮೆ ಅವರನ್ನು ಕಾಡಿರುವ ಕಾರಣ ಅವರು ಸಾವಿನ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗುರುಪ್ರಸಾದ್ ಬೆಂಗಳೂರಿನ ಮಾದನಾಯಕಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ 1 ವರ್ಷದಿಂದ ನೆಲೆಸಿದ್ದರಂತೆ. ಅದೇ ಅಪಾರ್ಟ್‌ಮೆಂಟ್‌ನಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ. ಅಚ್ಚರಿ ಎಂದರೆ ಅವರ ಶವ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಸುಮಾರು 10 ದಿನಗಳ ಕಾಲ ಶವ ಅದೇ ಮನೆಯಲ್ಲಿತ್ತು ಎಂದು ಅಂದಾಜಿಸಲಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
10 ದಿನವಾದರು ಯಾರು ನೊಡಿಲ್ಲವೇಕೆ.?
ಒಬ್ಬ ವ್ಯಕ್ತಿ 10 ದಿನದಿಂದ ಯಾರ ಸಂಪರ್ಕಕ್ಕೂ ಸಿಗಲಿಲ್ಲವೇ? ಗುರುಪ್ರಸಾದ್ ಅವರ ಶವ 10 ದಿನದಿಂದ ಮನೆಯಲ್ಲೇ ಇದ್ದರೂ ಯಾರು ಕೂಡ ಅವರ ಸಂಪರ್ಕ ಮಾಡುವ ಪ್ರಯತ್ನವನ್ನೇಕೆ ಮಾಡಲಿಲ್ಲ ಎಂಬ ಅನುಮಾನ ಮೂಡಿದೆ. ಒಬ್ಬ ವ್ಯಕ್ತಿ ತನ್ನ ಸ್ನೇಹಿತರು, ಕುಟುಂಬಸ್ಥರಿಂದ 10 ದಿನ ಸಂಪರ್ಕಕ್ಕೆ ಸಿಗದೆ ಇರಬಹುದೇ? ಈ ಎಲ್ಲಾ ಪ್ರಶ್ನೆ ಮೂಡುತ್ತದೆ.
2ನೇ ಪತ್ನಿಯಿಂದಲೂ ದೂರಾಗಿದ್ದರಾ ಗುರು ಪ್ರಸಾದ್?
ಗುರು ಪ್ರಸಾದ್ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಬಳಿಕ 1 ಮಗುವಿನ ತಾಯಿಯನ್ನು ಎರಡನೇ ಮದುವೆಯಾಗಿದ್ದರು. ಆದರೆ ಕಳೆದೊಂದು ವರ್ಷದಿಂದ ಒಬ್ಬರೇ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಹೀಗಾಗಿ 2ನೇ ಪತ್ನಿಯಿಂದಲೂ ಅವರು ದೂರಾಗಿದ್ದರು ಎಂಬ ಅನುಮಾನ ಮೂಡಿದೆ.
ಖಿನ್ನತೆ, ಒಂಟಿತನ ಕಾಡಿತ್ತಾ?
ರಂಗನಾಯಕ ಸಿನಿಮಾ ಸೋಲಿನ ಬಳಿಕ ಗುರು ಪ್ರಸಾದ್ ಬಹಳ ನೊಂದಿದ್ದರು ಎನ್ನಲಾಗಿದೆ. ಯಾರ ಸಂಪರ್ಕಕ್ಕೂ ಬಾರದೆ ಒಬ್ಬರೇ ಇರುತ್ತಿದ್ದರು. ಸಿನಿಮಾ ಸೋಲಿನಿಂದ ಕಂಗೆಟ್ಟಿದ್ದ ಅವರು ಖಿನ್ನತೆಗೆ ಒಳಗಾಗಿದ್ದರಂತೆ. ಅಲ್ಲದೆ ಕುಟುಂಬಸ್ಥರು ಜೊತೆಗಿರದೆ ಒಂಟಿತನ ಕಾಡಿತ್ತು. ಹಾಗೆ 8 ತಿಂಗಳಿನಿಂದ ಅವರು ಮನೆಯಿಂದ ಹೊರಬರುವುದು ಅಪರೂಪವಾಗಿತ್ತು ಎನ್ನಲಾಗಿದೆ.
ಸಿನಿಮಾ ಸೋಲಿನ ನಂತರ ಬಹಳ ನೊಂದಿದ್ದರಂತೆ. ಅಲ್ಲದೆ ಹೆಚ್ಚು ಸಾಲ ಮಾಡಿಕೊಂಡಿದ್ದ ಅವರು ಸಾಲ ತೀರಿಸಲು ಪರದಾಡಿದ್ದಾರೆ. ಹಲವರ ಬಳಿ ಹಣ ಪಡೆದಿದ್ದ ಅವರು ವಾಪಾಸು ನೀಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಅವರು ಸಾಲಗಾರರ ಕಾಟ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ತನಿಖೆಯ ಬಳಿಕವಷ್ಟೇ ಅವರ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ. ಮೊದಲು ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಕೂಡ ತನಿಖೆಯಲ್ಲಿ ಬಯಲಾಗಬೇಕಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಅಪಾರ್ಟ್‌ಮೆಂಟ್‌ನಲ್ಲಿ ಕೊಳೆತ ವಾಸನೆ ಬಂದಾಗ ಅಲ್ಲಿದ್ದವರು ಸೆಕ್ಯೂರಿಟಿಗೆ ವಿಷಯ ತಿಳಿಸಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.



Click it and Unblock the Notifications
