Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 6 ರಾಶಿಯವರು ಬೇರೆಯವರ ನೋವಿಗೆ ಸ್ಫಂದಿಸುತ್ತಾರೆ!
ಕಷ್ಟಗಳು ಯಾರಿಗೆ ಇರೋದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಕಷ್ಟ ಇದ್ದೇ ಇರುತ್ತೆ. ನಾವು ಸಂತೋಷವಾಗಿದ್ದಾಗ ನಮ್ಮ ಸುತ್ತ ಇರುವ ಜನರು ನಮಗೆ ಕಷ್ಟ ಬಂದಾಗ ಓಡಿ ಹೋಗುತ್ತಾರೆ. ಆ ನೋವನ್ನೇ ನಾವೇ ಅನುಭವಿಸಬೇಕು. ಆದರೆ ಕೆಲವೇ ಕೆಲವು ಜನರಲ್ಲಿ ಮಾತ್ರ ಬೇರೆಯವರ ನೋವಿಗೆ ಸ್ಫಂದಿಸುವ ಗುಣ ಇರುತ್ತಂತೆ. ಈ 6 ರಾಶಿಯವರು ಇತರರು ಕಷ್ಟದಲ್ಲಿದ್ದಾಗ ಸಹಾಯ ಮಾಡುತ್ತಾರಂತೆ. ಅಷ್ಟಕ್ಕು ಆ 6 ರಾಶಿಯವರು ಯಾರು ಅನ್ನೋದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಇತರರು ಕಷ್ಟದಲ್ಲಿದ್ದಾಗ ಸಹಾಯ ಮಾಡುವ ದೊಡ್ಡ ಮನಸ್ಸಿದೆ. ಮೇಷ ರಾಶಿಯ ವ್ಯಕ್ತಿಗಳು ತಮ್ಮ ದೃಢತೆ ಮತ್ತು ಆತ್ಮ ವಿಶ್ವಾಸಕ್ಕೆ ಹೆಸರುವಾಸಿಯಾಗಿದ್ದಾರೆ. ಇವರಿಗೆ ತಮ್ಮ ಸ್ವಂತ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಬಲವಾದ ಗಮನ ಇರುತ್ತದೆ. ಈ ರಾಶಿಯವರಿಗೆ ಇತರರು ನೋವು ಹಾಗೂ ಕಷ್ಟದಲ್ಲಿದ್ದಾಗ ಅದನ್ನು ಸಹಿಸಿಕೊಳ್ಳೋದಕ್ಕೆ ಆಗೋದಿಲ್ಲ. ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ.

ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಕುತೂಹಲ ಹೆಚ್ಚಾಗಿರುತ್ತದೆ. ಹೀಗಾಗಿ ಪ್ರತಿಯೊಂದು ವಿಚಾರವನ್ನು ಅರ್ಥ ಮಾಡಿಕೊಳ್ಳೋದಕ್ಕೆ ಇವರು ಯತ್ನಿಸುತ್ತಾರೆ. ಬೇರೆಯವರು ನೋವಿನಲ್ಲಿದ್ದಾಗ ಕೂಡ ಇವರಿಗೆ ತಕ್ಷಣಕ್ಕೆ ಗೊತ್ತಾಗುತ್ತದೆ. ಬೇರೆಯವರ ಮೇಲೆ ಈ ರಾಶಿಯವರಿಗೆ ಸಹಾನುಭೂತಿ ಹೆಚ್ಚು. ಬೇರೆಯವರ ನೋವನ್ನು ಇವರು ತಮ್ಮ ನೋವೆಂದು ಭಾವಿಸಿ ಅದಕ್ಕೆ ಪರಿಹಾರ ಕಲ್ಪಿಸಿ ಕೊಡುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ಉತ್ತಮ ವರ್ಚಸ್ಸನ್ನು ಹೊಂದಿರುತ್ತಾರೆ. ಇವರು ಬೇರೆಯವರ ಮೇಲೆ ಸಾಹಾನುಭೂತಿ ಹಾಗೂ ಕಾಳಜಿ ತೋರುವ ಗುಣ ಹೊಂದಿದ್ದಾರೆ. ಇವರು ತಮ್ಮ ಸ್ವಂತ ಅಗತ್ಯತೆಗಳಿಗಿಂತ ಇತರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಗುಣ ಹೊಂದಿದ್ದಾರೆ. ಇವರಿಗೆ ಕಷ್ಟ ಆದರೂ ಕೂಡ ಇತರರನ್ನು ಹೇಗಾದರೂ ಮಾಡಿ ನೋವಿನಿಂದ ಹೊರ ತರೋದಕ್ಕೆ ಪ್ರಯತ್ನ ಪಡುತ್ತಾರೆ.
ಧನು ರಾಶಿ
ಧನು ರಾಶಿಯವರು ಸ್ವತಂತ್ರವಾಗಿ ಇರೋದಕ್ಕೆ ಇಷ್ಟ ಪಡುತ್ತಾರೆ. ಹಾಗೂ ಇವರು ಸಾಹಸಮಯ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತಾರೆ. ಇವರು ತಮ್ಮ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ. ಇವರು ಕಷ್ಟದಲ್ಲಿ ಇರುವಾಗಲೂ ಇತರರು ನೋವಿನಲ್ಲಿದ್ದರೆ ಇವರ ಕರಳು ಚುರುಕ್ ಅನ್ನುತ್ತದೆ. ತಮ್ಮ ಕಷ್ಟವನ್ನು ಬದಿಗಿಟ್ಟು ಇತರರ ಕಷ್ಟ ಹೆಗಲಾಗುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ಸ್ವತಂತ್ರ ಚಿಂತಕರಾಗಿರುತ್ತಾರೆ. ಹೊಸತನ್ನು ಏನಾದರೂ ಮಾಡಬೇಕೆನ್ನುವ ತುಡಿತ ಇವರಲ್ಲಿ ಸದಾ ಇರುತ್ತದೆ. ಇವರು ಗುರಿಯನ್ನು ಬೆನ್ನತ್ತಿ ಹೋಗುವ ಸಮಯದಲ್ಲಿ ಬೇರೆಯವರು ನೋವಿನಲ್ಲಿದ್ದರೆ ಇವರು ಒಂದು ಕ್ಷಣಕ್ಕೆ ಕುಗ್ಗಿ ಹೋಗುತ್ತಾರೆ. ಇತರರ ಕಷ್ಟವನ್ನು ತಮ್ಮ ಕಷ್ಟವೆಂದು ಭಾವಿಸುವ ದೊಡ್ಡ ಮನಸ್ಸು ಈ ರಾಶಿಯವರಲ್ಲಿದೆ.
ಮಕರ ರಾಶಿ
ಮಕರ ರಾಶಿಯವರು ಕೂಡ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುತ್ತಾರೆ. ಇವರು ಉತ್ಪಾದಕತೆ ಹಾಗೂ ದಕ್ಷತೆಯ ಕಡೆಗೆ ಹೆಚ್ಚು ಗಮನ ಕೊಟ್ಟರೂ ಕೂಡ ಭಾವನಾತ್ಮಕವಾಗಿ ಒಬ್ಬರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ. ಬೇರೆಯವರ ಕಷ್ಟವನ್ನು ತಮ್ಮ ಕಷ್ಟವೆಂದು ಭಾವಿಸಿ, ತಮ್ಮ ಜೊತೆಗೆ ಅವರನ್ನು ಕೈ ಹಿಡಿದು ನಡೆಸುವ ಗುಣ ಇವರಲ್ಲಿದೆ.ಈ ರಾಶಿಯವರು ಆಪ್ತರು ಕಷ್ಟದಲ್ಲಿದ್ದಾಗ ನಡು ನೀರಲ್ಲಿ ಕೈ ಬಿಡುವವರಲ್ಲ.



Click it and Unblock the Notifications
