Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ 4 ರಾಶಿಯವರು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಸದಾ ಸಿದ್ಧವಾಗಿರ್ತಾರೆ!
ಜೀವನದಲ್ಲಿ ಏನಾದ್ರು ಸಾಧಿಸಬೇಕಂದ್ರೆ ರಿಸ್ಕ್ ತೆಗೆದುಕೊಳ್ಬೇಕಂತೆ. ರಿಸ್ಕ್ ತೆಗೆದುಕೊಳ್ಳೋದಕ್ಕೆ ಮುಂದೆ ಹೋಗದಿದ್ರೆ ಖಂಡಿತ ನಮ್ಮಿಂದ ಏನನ್ನೂ ಸಾಧಿಸೋದಕ್ಕೆ ಸಾಧ್ಯವಿಲ್ಲ. ನಾವು ಅಂದುಕೊಂಡ ಗುರಿಯನ್ನು ತಲುಪೋದಕ್ಕೂ ನಮ್ಮಿಂದ ಆಗೋದಿಲ್ಲ. ಅಯ್ಯೋ ರಿಸ್ಕ್ ತೆಗೆದುಕೊಂಡ್ರೆ ಮುಂದೆ ಏನೆಲ್ಲಾ ಅಪಾಯ ಎದುರಾಗುತ್ತೋ ಅಂತ ಯೋಚಿಸುತ್ತಿದ್ದರೆ ನಾವು ಎಲ್ಲಿದ್ದೀವೋ ಅಲ್ಲೇ ಉಳಿದು ಬಿಟ್ತೀವಿ.

ಆದ್ರೆ ಕೆಲವೇ ಕೆಲವು ಜನ ಮಾತ್ರ ಗಟ್ಟಿ ದೈರ್ಯ ಮಾಡಿ ರಿಸ್ಕ್ ತೆಗೆದುಕೊಂಡು ಮುನ್ನುಗ್ಗುತ್ತಾರೆ. ಅಷ್ಟಕ್ಕೂ ಯಾವೆಲ್ಲಾ ರಾಶಿಯವರು ರಿಸ್ಕ್ ತೆಗೆದುಕೊಳ್ಳೋದಕ್ಕೆ ಸದಾ ಸಿದ್ಧವಾಗಿ ಇರ್ತಾರೆ ಅನ್ನೋದನ್ನು ಒಂದೊಂದಾಗಿ ತಿಳಿಯೋಣ.
ಮೇಷ ರಾಶಿ
ಮಂಗಳನು ಮೇಷ ರಾಶಿಯನ್ನು ಆಳುತ್ತಿದ್ದಾನೆ. ಮಂಗಳನು ಕ್ರಿಯೆ ಮತ್ತು ದೈರ್ಯದ ಗ್ರಹವಾಗಿದೆ. ಈ ರಾಶಿಯಲ್ಲಿ ಜನಿಸಿದವರು ಸವಾಲುಗಳನ್ನು ತೆಗೆದುಕೊಳ್ಳೋದಕ್ಕೆ ಸದಾ ಮುಂದಿರ್ತಾರೆ. ಜೀವನದಲ್ಲಿ ಎಂತಹ ಕಷ್ಟಗಳು, ಅಡೆ-ತಡೆಗಳು ಎದುರಾದ್ರೂ ಕೂಡ ಅದನ್ನೆಲ್ಲಾ ಎದುರಿಸಿ ಜೀವನದಲ್ಲಿ ಉಲ್ಲಾಸದಿಂದ ಮುನ್ನುಗ್ಗುತ್ತಾರೆ.
ಧನು ರಾಶಿ
ಧನು ರಾಶಿಯನ್ನು ಗುರುವು ಆಳುತ್ತಿದ್ದಾನೆ. ಏನಾದರೂ ಸಾಧಿಸಬೇಕೆಂಬ ಹಸಿವು ಇವರಲ್ಲಿ ಇರುತ್ತದೆ. ಸೋತ ಜಾಗದಲ್ಲೇ ಗೆಲ್ಲಬೇಕೆಂಬ ಹಠ ಇವರಲ್ಲಿ ಇರುತ್ತದೆ. ಹೀಗಾಗಿ ಎಷ್ಟು ಬಾರಿ ಸೋತರೂ ಕೂಡ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಎಷ್ಟೇ ದೊಡ್ಡ ರಿಸ್ಕ್ ಆದರೂ ಕೂಡ ಇವರು ಹಿಂದೆ ಮುಂದೆ ನೋಡದೇ ಪ್ರಯತ್ನ ಪಡುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ಪ್ರತಿಯೊಂದು ವಿಚಾರವನ್ನು ಮುಕ್ತವಾಗಿ ಮಾತನಾಡುತ್ತಾರೆ. ಇವರು ಹುಟ್ಟು ಬಂಡಾಯಕಾರರು ಅಂತ ಹೇಳಿದ್ರೂ ತಪ್ಪಾಗೋದಿಲ್ಲ. ಹೋರಾಟಗಳು ಮತ್ತು ಸವಾಲುಗಳನ್ನು ತೆಗೆದುಕೊಳ್ಳೋದಕ್ಕೆ ಸದಾ ಮುಂದಿರುತ್ತಾರೆ. ಯಾವ ಕೆಲಸ ಮಾಡಬೇಕಾದರೂ ದೂರದೃಷ್ಟಿಯ ಉದ್ದೇಶವನ್ನೇ ಇಟ್ಟುಕೊಂಡಿರುತ್ತಾರೆ. ಧನಾತ್ಮಕ ಬದಲಾವಣೆ ಆಗುತ್ತೆ ಎಂದರೆ ಯಾವುದೇ ರಿಸ್ಕ್ ತೆಗೆದುಕೊಳ್ಳೋದಕ್ಕೂ ಹಿಂಜರಿಯೋದಿಲ್ಲ.
ಮಿಥುನ ರಾಶಿ
ಮಿಥುನ ರಾಶಿಯನ್ನು ಬುಧನು ಆಳುತ್ತಿದ್ದಾನೆ. ಈ ರಾಶಿಯವರು ಸಾಮಾನ್ಯವಾಗಿ ಬುದ್ಧಿವಂತರಾಗಿ ಇರುತ್ತಾರೆ. ಇವರು ಮುಕ್ತ ಮನಸ್ಸು ಮತ್ತು ಮಿತಿಯಿಲ್ಲದ ಕುತೂಹಲವನ್ನು ಹೊಂದಿರುತ್ತಾರೆ. ರಿಸ್ಕ್ ತೆಗೆದುಕೊಳ್ಳೋದಕ್ಕೆ ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಈ ರಾಶಿಯವರು ಬಹುಮುಖ ಪ್ರತಿಭೆಯನ್ನು ಹೊಂದಿರುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಲೆಕ್ಕಾಚಾರ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ.



Click it and Unblock the Notifications
