Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ವಿಶ್ವದ ಅತಿ ದುಬಾರಿ 10 ಕಾರುಗಳನ್ನು ತಂದು ಕಸ ಎತ್ತು ಗಾಡಿ ಮಾಡಿದ ರಾಜ ಇವರು
ಬ್ರಿಟಿಷರ ಅಹಂಕಾರಕ್ಕೆ ತಕ್ಕ ಪಾಠ ಕಲಿಸಿದ ಆಲ್ವಾರದ ರಾಜ ಜಯ್ ಸಿಂಗ್ ಪ್ರಭಾಕರ ಅವರ ಬಗ್ಗೆ ಗೊತ್ತೇ? ಅವರು ತಮಗಾದ ಅವಮಾನಕ್ಕೆ ತಕ್ಕ ಪಾಠ ಕಲಿಸಲು ಆಗೀನ ಕಾಲದ ದುಬಾರಿ ಕಾರಾದ ರೋಲ್ಸ್ ರಾಯ್ಸ್ ಕಾರನ್ನು ಒಂದಲ್ಲ ಎರಡಲ್ಲ 10 ಕಾರುಗಳನ್ನು ಖರೀದಿಸಿ, ಅವುಗಳನ್ನು ತನ್ನ ರಾಜ್ಯದಲ್ಲಿ ಕಸವನ್ನು ಹಾಕಲು ಬಳಸಿ ಬ್ರಿಟಿಷ್‌ರ ಅಹಂಗೆ ಸರಿಯಾದ ಪೆಟ್ಟು ನೀಡಿದ್ದರು.

ಈ ಘಟನೆ ನಡೆದಿದ್ದು 1910ರಲ್ಲಿ. ಆಲ್ವಾರದ ರಾಜ ಜಯ್ ಸಿಂಗ್ ಪ್ರಭಾಕರ ಅವರು ಸಾಮಾನ್ಯ ವ್ಯಕ್ತಿಯಂತೆ ವೇಷ ಧರಿಸಿ ರೋಲ್ಸ್ ರಾಯ್ಸ್ ಕಾರಿನ ಶೋ ರೂಂಗೆ ಹೋಗಿದ್ದರು, ಕಾರಿನವರು ಯಾರೋ ಬಡ ಭಾರತೀಯ ಎಂದು ಭಾವಿಸಿ ರಾಜನಿಗೆ ಅವಮಾನ ಮಾಡುತ್ತಾರೆ ಅಲ್ಲದೆ ಶೋರೂಂನಿಂದ ಹೊರನಡೆಯುವಂತೆ ಸೂಚಿಸುತ್ತಾರೆ. ಆದರೆ ಅವರಿಗೆ ನಮ್ಮ ಶೋ ರೂಂಗೆ ಬಂದಿರುವುದು ರಾಜ ಎಂಬ ಕಲ್ಪನೆಯೂ ಇರಲಿಲ್ಲ.
ಅವಮಾನ ಅನುಭವಿಸಿ ಆ ಶೋರೂಂನಿಂದ ಹೊರಬರುವ ರಾಜ ತನ್ನ ರಾಜನ ದುಬಾರಿ ಉಡುಪುಗಳನ್ನು ಧರಿಸಿ,ಆ ಶೋ ರೂಂಗೆ ಬರುತ್ತಾರೆ. ರಾಜನನ್ನು ನೋಡಿ ಆ ಶೋರೂಂನವರು ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತಾರೆ. ರಾಜ ಶೋರೂಂನವರಿಗೆ 10 ಕಾರು ಖರೀದಿಸುತ್ತಿರುವ ಬಗ್ಗೆ ಸೂಚನೆ ನೀಡುತ್ತಾರೆ, ಅದರಂತೆ ರಾಜನಿಗೆ 10 ದುಬಾರಿ ಕಾರುಗಳನ್ನು ಕಳುಹಿಸಲಾಗುವುದು, ಆದರೆ ರಾಜ ಆ ಕಾರುಗಳನ್ನು ಬಳಸುವುದಿಲ್ಲ ಬದಿಲಿಗೆ ಕಸವನ್ನು ಹಾಕಲು ಬಳಸಲು ಸೂಚಿಸುತ್ತಾರೆ.
ಆಲ್ವಾರ್‌ದ ಬೀದಿಯಲ್ಲಿ ರೋಲ್ಸ್ ಕಾರಿನಲ್ಲಿ ಕಸ ಹಾಕುವ ಸುದ್ದಿ ಬ್ರಿಟಿಷರಿಗೆ ತಿಳಿದು ಅವರಿಗೆ ಅಚ್ಚರಿಯಾಗುತ್ತದೆ, ಏಕೆಂದರೆ ಅಷ್ಟೊಂದು ದುಬಾರಿ ಕಾರನ್ನು ಕಸ ಹಾಕಲು ಬಳಸಿದ್ದು ಅವರ ಆಶ್ಚರ್ಯಕ್ಕೆ ಕಾರಣವಾಗಿತ್ತು, ಆದರೆ ರಾಜ ಈ ರೀತಿ ಮಾಡುವ ಮೂಲಕ ಶೋರೂಂನವರಿಗೆ ತಕ್ಕ ಪಾಠ ಕಲಿಸಿದ್ದರು.
ಕೊನೆಗೆ ರೋಲ್ಸ್ ರಾಯ್ಸ್ ಕಂಪನಿಯ ಆಫೀಸರ್‌ಗಳು ಭಾರತಕ್ಕೆ ಬಂದು ರಾಜನ ಬಳಿ ಕ್ಷಮೆ ಕೇಳುತ್ತಾರೆ, ಅಲ್ಲದೆ ಆ ಕಸ ಹಾಕಿದ ಕಾರುಗಳಿಗೆ ಬದಲಿಗೆ ಹೊಸ ಕಾರುಗಳನ್ನು ನೀಡುತ್ತೇವೆ ಎಂದು ಹೇಳಿದರೂ ರಾಜ ಹೊಸ ಕಾರುಗಳನ್ನು ಸ್ವೀಕರಿಸಲು ನಿರಾಕರಿಸಿದರು.



Click it and Unblock the Notifications