Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಮನೆ ಕಳ್ಳತನಕ್ಕೆಂದು ಬಂದು ಎಸಿ ಆನ್ ಮಾಡಿ ಮಲಗಿದ ಕಳ್ಳ..! ಎಬ್ಬಿಸಿದ್ದು ಪೊಲೀಸರು..!
ಬಿಸಿಗಾಳಿ ಜನರನ್ನು ಯಾವ ರೀತಿ ಸಂಕಷ್ಟಕ್ಕೆ ತಳ್ಳಿದೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಉತ್ತರ ಭಾರತದಲ್ಲಂತೂ ಬಿಸಿ ಗಾಳಿ ಆರ್ಭಟಕ್ಕೆ ಜನರು ಹೈರಾಣಾಗಿದ್ದಾರೆ. ಜನರ ಕಷ್ಟ ಒಂದು ಕಡೆಯಾದರೆ ಪ್ರಾಣಿಗಳ ಪಾಡು ಹೇಳತೀರದ್ದಾಗಿದೆ. ವಿಪರೀತ ಬಿಸಿಗಾಳಿಗೆ ಜನರ ಜೀವನ ತತ್ತರಿಸಿದೆ.
ಈ ಬಿಸಿಗಾಳಿಗೆ ಹೊರಬಂದ ಜನರು ತಲೆ ತಿರುಗಿ ಬೀಳುವುದು ಅಸ್ವಸ್ಥರಾಗವುವ ಘಟನೆ ನಡೆದಿದೆ. ಅಲ್ಲದೆ ಹಲವು ಪ್ರಾಣ ಸಹ ಕಳೆದುಕೊಂಡಿದ್ದಾರೆ. ಅದರಲ್ಲೂ ಪ್ರಾಣಿಗಳು ನೀರಿಲ್ಲದೆ, ಶಾಖ ತಾಳಲಾಗದೆ ಜೀವ ಬಿಟ್ಟಿವೆ. ಕಾಗೆಗಳು, ಬಾವಲಿಗಳು, ಕೋತಿಗಳು ನೆಲದ ಮೇಲೆ ಬೀಳುತ್ತಿರುವ ಘಟನೆಗಳು ವರದಿಯಾಗಿವೆ.

ಆದರೆ ಇಂತಹ ಘಟನೆಗಳ ನಡುವೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮನೆ ಕಳ್ಳತನಕ್ಕೆ ಎಂದು ಗೋಡೆ ಹಾರಿ ಬಂದಿದ್ದ ಕಳ್ಳನೊಬ್ಬ ಎಸಿಯ ತಂಪಾದ ಗಾಳಿಗೆ ಮೈಮರೆತು ಅದೇ ಮನೆಯಲ್ಲಿ ನಿದ್ರೆಗೆ ಜಾರಿದ ವಿಚಿತ್ರ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಕಳ್ಳನೊಬ್ಬ ಲಕ್ನೋದ ಮನೆಗೆ ನುಗ್ಗಿದ ಕಳ್ಳ ತಾನು ಬಂದ ಕೆಲಸ ಮಾಡದೆ ನಿದ್ದೆಗೆ ಜಾರಿದ್ದ.
ವಿಪರೀತವಾಗಿ ಮದ್ಯಪಾನ ಮಾಡಿದ್ದ ವ್ಯಕ್ತಿ ಮನೆಯಲ್ಲಿ ಎಸಿಯನ್ನು ಕಂಡು ಅದನ್ನು ಆನ್ ಮಾಡಲು ನಿರ್ಧರಿಸಿದ್ದಾನೆ. ಬಳಿಕ ಅಲ್ಲಿಯೇ ಕೆಳಗೆ ಶರ್ಟ್ ತೆಗೆದು ಮಲಗಿದ್ದಾನೆ. ಲಕ್ನೋದ ಇಂದಿರಾನಗರ ಪ್ರದೇಶದ ಸೆಕ್ಟರ್ 20 ರಲ್ಲಿ ಈ ಘಟನೆ ನಡೆದಿದೆ.
ವೈದ್ಯ ಸುನೀಲ್ ಪಾಂಡೆ ಎಂಬವರ ಮನೆ ಇದಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡಿದ್ದ ಕಳ್ಳ ಐಡಿಯಾ ಮಾಡಿ ಮನೆಯೊಳಗೆ ನುಗ್ಗಿದ್ದ. ಆದರೆ ಮನೆಯೊಳಗೆ ಬಂದಿದ್ದ ಕಳ್ಳನಿಗೆ ಎಸಿ ಕಣ್ಣಿಗೆ ಬಿದ್ದಿದೆ. ತಕ್ಷಣ ಆತ ರಿಮೋಟ್ ತೆಗೆದು ಎಸಿ ಆನ್ ಮಾಡಿ ವಿಶ್ರಾಂತಿ ಪಡೆಯಲು ಮುಂದಾಗಿದ್ದಾನೆ.
ಆತ ಮದ್ಯಪಾನ ಮಾಡಿದ್ದರಿಂದ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಮುಂದಾಗಿದ್ದ. ಜೊತೆಗೆ ಮನೆಯಲ್ಲೂ ಯಾರು ಇರಲಿಲ್ಲ. ಇದನ್ನೇ ಬಳಸಿಕೊಂಡ ಆತ, ಶರ್ಟ್ ತೆಗೆದು ಅಲ್ಲಿಯೇ ಮಲಗಿದ್ದಾನೆ. ಎಸಿ ಆನ್ ಆಗಿದ್ದರಿಂದ ತಂಪಾದ ಗಾಳಿ ಆತನಿಗೆ ಸ್ವರ್ಗದ ಅನುಭವ ನೀಡಿದೆ.
ಆದರೆ ವೈದ್ಯರ ಮನೆ ಬಾಗಿಲು ತೆರೆದಿರುವುದನ್ನು ಕಂಡ ನೆರೆ ಹೊರೆಯವರು ವೈದ್ಯರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ತಕ್ಷಣ ಪಾಂಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ವೈದ್ಯರ ಮನೆಗೆ ಧಾವಿಸಿದ್ದಾರೆ. ಮನೆ ಬಾಗಿಲು ತೆರೆದು ಅಲ್ಲಿಯೇ ಮಲಗಿದ್ದ ಕಳ್ಳನ ಕಂಡು ಪೊಲೀಸರು ಶಾಕ್ ಆಗಿದ್ದಾರೆ. ಜೊತೆಗೆ ಆತನ ಎಬ್ಬಿಸಿ ವಿಚಾರಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, 'ಅವನು ಬಹಳ ಕುಡಿದಿದ್ದನು, ಇದರಿಂದಾಗಿ ನಿದ್ರೆಗೆ ಜಾರಿದ್ದಾನೆ ಮತ್ತು ಎಚ್ಚರವಾಗಲಿಲ್ಲ. ಇದನ್ನು ನೆರೆಹೊರೆಯವರು ಕಂಡು ಕರೆ ಮಾಡಿದ್ದಾರೆ. ನಾವು ಆತನನ್ನು ಬಂಧಿಸಿದ್ದೇವೆ' ಎಂದು ಉತ್ತರ ವಲಯ ಡಿಸಿಪಿ ಆರ್ ವಿಜಯ್ ಶಂಕರ್ ತಿಳಿಸಿದ್ದಾರೆ.
ಈ ಮನೆಗೆ ನುಗ್ಗಿದ ವ್ಯಕ್ತಿಯನ್ನು ಕಪಿಲ್ ಎಂದು ಗುರುತಿಸಲಾಗಿದೆ ಮತ್ತು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕಳ್ಳನೋರ್ವನ ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆತ ಬಿಸಿಗಾಳಿಯ ಪರಿಣಾಮ ಕಳ್ಳತನ ಬಿಟ್ಟು ಎಸಿ ಆನ್ ಮಾಡಿ ಮಲಗಿದ್ದ, ಒಂದು ವೇಳೆ ಬಿಸಿಗಾಳಿಯ ತಾಪಮಾನ ಇಲ್ಲದಿದ್ದರೆ ವೈದ್ಯರ ಮನೆಯನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡುತ್ತಿದ್ದ. ಸದ್ಯ ಬಿಸಿ ಗಾಳಿಯ ಪರಿಣಾಮ ಒಂದು ಮನೆ ಕಳ್ಳತನ ತಪ್ಪಿದಂತಾಗಿದೆ.



Click it and Unblock the Notifications