Latest Updates
-
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್! -
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ!
ಈ 4 ರಾಶಿಯವರು ಒತ್ತಡಕ್ಕೆ ಸಂಬಂಧವನ್ನು ಬಲಿ ಕೊಡುತ್ತಾರೆ!
ಪ್ರೀತಿಯಲ್ಲಿ ಬೀಳುವುದು ಸುಲಭ. ಆದರೆ ಅದನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟ. ಪ್ರೀತಿ ಮೊದ ಮೊದಲು ಚೆನ್ನಾಗಿರುವಂತೆ ಕಂಡರೂ ಕೂಡ ಆನಂತರ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಇಬ್ಬರ ಮಧ್ಯೆ ಮನಸ್ಥಾಪ, ಜಗಳ ಹೆಚ್ಚಾಗುತ್ತದೆ. ಕೆಲವೊಂದು ಸಲ ಯಾರಾದರೂ ಒಬ್ಬರು ಸಂಬಂಧವನ್ನು ನಿಭಾಯಿಸಿ ಸರಿದೂಗಿಸಿಕೊಂಡು ಹೋಗುತ್ತಾರೆ.
ಇನ್ನೂ ಕೆಲವು ಸಂಬಂಧದಲ್ಲಿ ಇಬ್ಬರಲ್ಲೂ ಮುಂಗೋಪ ಹೆಚ್ಚಾದಾಗ ಖಂಡಿತ ಆ ಸಂಬಂಧ ಅರ್ಧದಲ್ಲೇ ಕಡಿದು ಬೀಳುತ್ತದೆ. ಹೆಚ್ಚಿನ ಜನರಿಗೆ ಕೆಲಸದ ಒತ್ತಡ ಅಥವಾ ಇನ್ಯಾವುದೋ ವಿಚಾರಕ್ಕೆ ಒತ್ತಡ ಹೆಚ್ಚಾದಾಗ ಕೆಲಸವನ್ನು ನಿಭಾಯಿಸೋದಕ್ಕೆ ಆಗೋದಿಲ್ಲ. ಹೀಗಾಗಿ ಸಂಬಂಧವನ್ನು ಮುರಿದುಕೊಳ್ಳುತ್ತಾರೆ. ಅಷ್ಟಕ್ಕು ಒತ್ತಡದಿಂದಾಗಿ ಸಂಬಂಧವನ್ನು ಅರ್ಧಕ್ಕೆ ಕಡಿದುಕೊಳ್ಳುವ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರ ಮನಸ್ಥಿತಿ ಸ್ಥಿರವಾಗಿ ಇರೋದಿಲ್ಲ. ಇವರು ತುಂಬಾನೇ ಚಂಚಲ ಸ್ವಭಾವದವರು. ಇವರು ನೋವಿನಲ್ಲಿದ್ದಾಗ ಸಂಬಂಧ ಇವರಿಗೆ ಕಿರಿ ಕಿರಿ ಅಂತ ಅನ್ನಿಸೋದಕ್ಕೆ ಶುರುವಾಗುತ್ತದೆ. ಯಾರದೋ ಮೇಲಿದ್ದ ನೋವನ್ನು ಸಂಗಾತಿಯ ಮೇಲೆ ತೋರ್ಪಡಿಸುತ್ತಾರೆ. ತಮ್ಮ ಭಾವನೆಯನ್ನು ನಿಯಂತ್ರಿಸೋದಕ್ಕೆ ಇವರಿಂದ ಸಾಧ್ಯವಾಗೋದಿಲ್ಲ.
ಅತಿಯಾದ ಒತ್ತಡದಲ್ಲಿದ್ದಾಗ ಇವರಿಂದ ಸಂಬಂಧವನ್ನು ನಿಭಾಯಿಸೋದಕ್ಕೆ ಸಾಧ್ಯವಾಗೋದಿಲ್ಲ. ಹೀಗಾಗಿ ಏನಾದರೂ ಕಾರಣ ಕೊಟ್ಟು ಸಂಬಂಧದಿಂದ ದೂರ ಹೋಗೋದಕ್ಕೆ ಪ್ರಯತ್ನಿಸುತ್ತಾರೆ. ತಮ್ಮ ಸಂಗಾತಿಯ ಭಾವನೆಗಳಿಗೆ ನೋವಾಗುತ್ತೆ ಅಂತ ಒಂದು ಕ್ಷಣವು ಆಲೋಚಿಸದೇ ಸಂಬಂಧ ಮುರಿದುಕೊಳ್ಳುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಸಂಬಂಧದಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ಪ್ರಯತ್ನದಲ್ಲಿ ಸೋಲುತ್ತಾರೆ. ಚಿಕ್ಕ ಚಿಕ್ಕ ವಿಚಾರಕ್ಕೂ ಒತ್ತಡಕ್ಕೆ ಒಳಗಾಗುತ್ತಾರೆ.ಇದು ಸಾಮಾನ್ಯವಾಗಿ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇವರು ಮಾಡುವ ಪ್ರತಿಯೊಂದರಲ್ಲೂ ಕೆಲಸದಲ್ಲೂ ಶ್ರೇಷ್ಠರಾಗಲು ಇಷ್ಟಪಡುತ್ತಾರೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ಖಿನ್ನತೆಗೆ ಒಳಗಾಗುತ್ತಾರೆ. ಇದರ ಪರಿಣಾಮವನ್ನು ಅವರು ಸಂಬಂಧದ ಮೇಲೆ ತೋರುತ್ತಾರೆ.
ಕೆಲಸ ಎಂದರೆ ಸರ್ವಸ್ವ. ಕೆಲಸದಲ್ಲಿ ಕೊಂಚ ತಪ್ಪಾದರೂ ಇವರಿಂದ ಸಹಿಸೋದಕ್ಕೆ ಆಗೋದಿಲ್ಲ. ಒಟ್ಟಿನಲ್ಲಿ ಇವರ ವೈಯಕ್ತಿಕ ಜೀವನದಲ್ಲಿ ಏನೇ ಆದರೂ ಕೂಡ ಅದರ ಪರಿಣಾಮ ಸಂಬಂಧದ ಮೇಲೆ ಬೀರುವಂತೆ ಮಾಡಿಕೊಳ್ಳುತ್ತಾರೆ. ಇವರ ನಡತೆಯಿಂದಲೇ ಸಂಬಂಧ ಹಾಳಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಸಂಬಂಧದಲ್ಲಿ ಅಭದ್ರತೆ ಹೆಚ್ಚಾಗಿರುತ್ತದೆ. ಯಾಕಂದ್ರೆ ಇವರು ತಮ್ಮ ಸಂಗಾತಿಯ ಪ್ರಾಮಾಣಿಕತೆಯನ್ನು ಪರೀಕ್ಷಿಸೋದಕ್ಕೆ ಪ್ರಯತ್ನಿಸುತ್ತಾರೆ. ಇದೇ ಕಾರಣಕ್ಕೆ ತಮ್ಮ ಸಂಗಾತಿಯೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ಹೆಣಗಾಡುತ್ತಾರೆ. ಅನುಮಾನದ ಕಾರಣಕ್ಕೂ ಇವರ ಸಂಬಂಧ ಪದೇ ಪದೇ ಹಾಳಾಗುತ್ತದೆ. ಇವರು ಸಂಗಾತಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಆದರೆ ನಂಬಿಕೆ ಅನ್ನೋದು ಇಲ್ಲದ ಕಾರಣ ಆ ಪ್ರೀತಿ ಹೆಚ್ಚು ಕಾಲ ಉಳಿಯೋದಿಲ್ಲ.
ತುಲಾ ರಾಶಿ
ತುಲಾ ರಾಶಿಯವರು ಸಣ್ಣ-ಪುಟ್ಟ ವಿಚಾರಕ್ಕೂ ಕೂಡ ಒತ್ತಡ ಅನುಭವಿಸುತ್ತಾರೆ. ಭಾವನೆಗಳನ್ನು ನಿಯಂತ್ರಿಸೋದು ಹೇಗೆ ಅನ್ನೋದು ಇವರಿಗೆ ಗೊತ್ತಿರೋದಿಲ್ಲ. ಈ ರಾಶಿಯವರು ಒತ್ತಡದಲ್ಲಿದ್ದಾಗ ತಮ್ಮ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಕಷ್ಟಪಡುತ್ತಾರೆ. ಇನ್ನೂ ತಮ್ಮ ನೋವನ್ನು ಸಂಗಾತಿಯ ಬಳಿ ಕೂಡ ಹೇಳಿಕೊಳ್ಳೋದಿಲ್ಲ. ಒಳಗೊಳಗೆ ನೋವು ಪಟ್ಟುಕೊಂಡು ನೊಂದುಕೊಳ್ಳುತ್ತಾರೆ. ಸಂಗಾತಿಯ ಬಳಿ ಏನನ್ನೂ ಹೇಳಿಕೊಳ್ಳೋದಿಲ್ಲ. ಬದಲಾಗಿ ಅವರ ಮೇಲೆ ರೇಗಾಡುತ್ತಾರೆ. ಹೀಗಾಗಿ ಇವರ ಸಂಬಂಧ ದುರ್ಬಲವಾಗುತ್ತದೆ.



Click it and Unblock the Notifications