ಈ 6 ಅಡುಗೆ ತ್ಯಾಜ್ಯಗಳನ್ನು ಸಸ್ಯಗಳಿಗೆ ಹಾಕಿದ್ರೆ ಸೊಂಪಾಗಿ ಬೆಳೆಯುತ್ತೆ!

ಉದ್ಯಾನದಲ್ಲಿ ಹಚ್ಚ ಹಸಿರಿನ ಗಿಡಗಳಿದ್ದರೆ ಅದು ಮನೆಯ ಅಂದವನ್ನು ಇಮ್ಮಡಿಗೊಳಿಸುತ್ತದೆ. ಆದರೆ ಗಿಡಗಳನ್ನು ನೆಟ್ಟು ಆರೈಕೆ ಮಾಡುವುದು ಕೊಂಚ ಕಷ್ಟ. ಆ ಕಲೆ ಎಲ್ಲರಲ್ಲೂ ಇರೋದಿಲ್ಲ. ಹೀಗಾಗಿ ಹೆಚ್ಚಿನ ಮನೆಗಳಲ್ಲಿ ನಾವು ಒಣಗಿದ ಹೂ ಕುಂಡಗಳನ್ನು ನೋಡುತ್ತೇವೆ.

These 6 Kitchen Waste Can Be Used For Plants As Fertilizer in Kannada.

ತೋಟಗಾರಿಕೆ ಎಂದರೆ ಗಿಡಗಳಿಗೆ ದಿನಕ್ಕೆರಡು ಬಾರಿ ನೀರುಣಿಸುವುದು ಮಾತ್ರವಲ್ಲ. ಯಾವ ಸಸ್ಯಕ್ಕೆ ಯಾವಾಗ ಮತ್ತು ಯಾವ ಪ್ರಮಾಣದಲ್ಲಿ ನೀರು ಮತ್ತು ಗೊಬ್ಬರ ಹಾಕಬೇಕು ಎಂಬುದರ ಬಗ್ಗೆ ನಿಖರವಾದ ಮಾಹಿತಿಯನ್ನು ತಿಳಿದಿರುವುದು ಮುಖ್ಯವಾಗುತ್ತದೆ. ತೋಟಗಾರಿಕೆಗೆ ಸಂಬಂಧಿಸಿದ ಅಂತಹ ಒಂದು ಮಾಹಿತಿಯನ್ನು ನಾವು ಮಿಗಾಗಿ ನೀಡುತ್ತೇವೆ. ಈ ರೀತಿ ಮಾಡಿದ್ರೆ ನೀವು ಯಾವುದೇ ವೆಚ್ಚವಿಲ್ಲದೆ ನಿಮ್ಮ ಸಸ್ಯವನ್ನು ಹಸಿರಾಗಿಡಬಹುದು.

ಕೇವಲ ಅಡುಗೆ ಮನೆಯ ತ್ಯಾಜ್ಯಗಳನ್ನು ಬಳಸುವುದರ ಮೂಲಕ ಹೂವು ಗಿಡಗಳನ್ನು ಹಚ್ಚ ಹಸಿರಾಗಿ ಇಟ್ಟುಕೊಳ್ಳಬಹುದು. ಅಷ್ಟಕ್ಕೂ ಯಾವ ರೀತಿ ಅಡುಗೆ ತ್ಯಾಜ್ಯಗಳನ್ನು ಸಸ್ಯಗಳಿಗೆ ಬಳಸಬಹುದು ಅನ್ನೋದನ್ನು ತಿಳಿದುಕೊಳ್ಳೋಣ.

ತರಕಾರಿ ಸಿಪ್ಪೆಗಳು!

ನೀವು ತಿನ್ನಲು ಯೋಗ್ಯವಲ್ಲದ ತರಕಾರಿ ಸಿಪ್ಪೆಗಳು ವಾಸ್ತವವಾಗಿ ಸಸ್ಯಗಳು ಮತ್ತು ಮರಗಳಿಗೆ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಹೀಗಾಗಿ ಅವುಗಳನ್ನು ಕಸಕ್ಕೆ ಎಸೆಯುವ ಬದಲು ನೀವು ಅವುಗಳನ್ನು ನಿಮ್ಮ ಕೈ ತೋಟಕ್ಕೆ ಹಾಕಬಹುದು. ಇದರಿಂದ ಸಸ್ಯಗಳು ಸೊಂಪಾಗಿ ಬೆಳೆಯುತ್ತದೆ.

ಚಹಾ ಎಲೆಗಳನ್ನು ಬಳಸಿ!

ಚಹಾ ಮಾಡಿದ ನಂತರ ಚಹಾ ಎಲೆಗಳನ್ನು ಕಸದ ಬುಟ್ಟಿಯಲ್ಲಿ ಎಸೆಯುವುದರ ಬದಲಾಗಿ ಮತ್ತು ನೀವು ಬೆಳೆಸಿರುವ ಸಸ್ಯಗಳಿಗೆ ಹಾಕುವುದು ಉತ್ತಮ. ಇದು ಮಣ್ಣಿನ ಉತ್ಪಾದಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ಸಸ್ಯಗಳು ದೊಡ್ಡದಾಗಿ ಮತ್ತು ದಟ್ಟವಾಗಿ ವೇಗವಾಗಿ ಬೆಳೆಯುತ್ತವೆ. ಇದಲ್ಲದೇ ಕಾಫಿ ಪೌಡರ್ ಅನ್ನು ಕೂಡ ಈ ರೀತಿ ಬಳಸಬಹುದು.

ಬಾಳೆಹಣ್ಣಿನ ಸಿಪ್ಪೆ!

ಬಾಳೆಹಣ್ಣಿನಂತೆಯೇ ಅದರ ಸಿಪ್ಪೆಯು ಪೊಟ್ಯಾಸಿಯಮ್, ರಂಜಕ ಮತ್ತು ಇತರ ಅನೇಕ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ. ಇವುಗಳು ಬೆಳೆಯುತ್ತಿರುವ ಸಸ್ಯಗಳಿಗೆ ತುಂಬಾನೇ ಆರೋಗ್ಯಕರವಾಗಿದೆ. ಇದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅಥವಾ ಪೇಸ್ಟ್ ಮಾಡುವ ಮೂಲಕ ನಿಮ್ಮ ಕೈ ತೋಟಕ್ಕೆ ಹಾಕಬಹುದು.

ಮೊಟ್ಟೆಯ ಚಿಪ್ಪು!

ಸಸ್ಯಗಳು ಚೆನ್ನಾಗಿ ಬೆಳೆಯಲು ಸಾಕಷ್ಟು ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಹೀಗಾಗಿ ನೀವು ಬೆಳೆಸಿರುವ ಸಸ್ಯಗಳಿಗೆ ಮೊಟ್ಟೆಯ ಚಿಪ್ಪುಗಳನ್ನು ಹಾಕಬಹುದು. ಅವುಗಳು ಒಣಗಿದ ನಂತರ ಅದನ್ನು ಪುಡಿಮಾಡಿ ಮತ್ತು ಕುಂಡಗಳಲ್ಲಿ ಸಣ್ಣ ಪ್ರಮಾಣದಲ್ಲಿ ಗೊಬ್ಬರವಾಗಿ ಬಳಸಬಹುದು.

ಒಣ ಹಣ್ಣಿನ ಸಿಪ್ಪೆಗಳು(ಡ್ರೈ ಫ್ರೂಟ್ಸ್)

ನೀವು ಒಣಗಿದ ಹಣ್ಣುಗಳ ಸಿಪ್ಪೆಗಳನ್ನು ತೆಗೆದಾಗ ಅದನ್ನು ನೇರವಾಗಿ ಸಸ್ಯದ ಬುಡಕ್ಕೆ ಸುರಿಯಿರಿ. ಇದು ಸಸ್ಯಗಳು ಆರೋಗ್ಯವಾಗಿರಲು ಮತ್ತು ಉತ್ತಮವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಅನೇಕ ಪೋಷಕಾಂಶಗಳು ಇರುತ್ತವೆ.

ಕಾಗದದ ಕರವಸ್ತ್ರ (ಟಿಶ್ಯೂ ಪೇಪರ್)

ಕಾಗದದ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಸಾವಯವ ಗೊಬ್ಬರಗಳಾಗಿ ಕಾರ್ಯನಿರ್ವಹಿಸುತ್ತವೆ. ನೀವು ಇದನ್ನು ಬಳಸಿದ ನಂತರ ನೀವು ಅದನ್ನು ತೇವಗೊಳಿಸಬಹುದು. ಮತ್ತು ಅದನ್ನು ನಿಮ್ಮ ಕೈ ತೋಟಕ್ಕೆ ಹಾಕಬಹುದು. ಆದರೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಾಕೋದಕ್ಕೆ ಹೋಗಬೇಡಿ.

English summary

These 6 Kitchen Waste Can Be Used For Plants As Fertilizer in Kannada.

These 6 Kitchen Waste Can Be Used For Plants As Fertilizer. Read more.
Story first published: Friday, September 8, 2023, 17:12 [IST]
X
Desktop Bottom Promotion