Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಅದೃಷ್ಟ ಅಂದ್ರೆ ಇದು...! ಮನೆ ಕ್ಲೀನ್ ಮಾಡುತ್ತಲೇ ಕೋಟಿ ಕೋಟಿ ಗಳಿಸಿದ ಮಹಿಳೆ..!
ಜೀವನದಲ್ಲಿ ದುಡ್ಡು ಸಂಪಾದನೆ ಮಾಡ್ಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತೆ. ಇದಕ್ಕೆ ಒಬ್ಬೊಬ್ಬರು ಒಂದೊಂದು ದಾರಿ ಕಂಡುಕೊಳ್ತಾರೆ. ಕೆಲವರಿಗೆ ಅನಿರೀಕ್ಷಿತ ಜಯ ಸಿಕ್ಕಿದ್ರೆ ಮತ್ತೆ ಕೆಲವರು ಎಷ್ಟೇ ಕಷ್ಟಪಟ್ಟರು ಹಣ ಸಂಪಾದನೆ ಸುಲಭದ ದಾರಿಯಾಗುವುದಿಲ್ಲ.
ಆದ್ರೆ ಇಲ್ಲೊಬ್ಬ ಮಹಿಳೆ ವಿಭಿನ್ನ ಕೆಲಸದ ಮೂಲಕ ಕೋಟ್ಯಧಿಪತಿಯಾಗಿ ಎಲ್ಲರ ಗಮನ ಸೆಳೆದಿದ್ದಾಳೆ. ಆಕೆ ಕ್ಲೀನಿಂಗ್ ಕೆಲಸ ಮಾಡಿಕೊಂಡೇ ಈಗ ಕೋಟಿ ಕೋಟಿ ಸಂಪಾದನೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಹಾಗಾದ್ರೆ ಆಕೆ ಯಾರು ಗೊತ್ತಾ? ಅವಳ ಕಥೆ ಏನು ನೋಡಿ..

ಔರಿ ಕಾನನೆನ್ ಯಶಸ್ಸಿನ ಕಥೆ
ಕೇವಲ 30 ವರ್ಷ ವಯಸ್ಸಿನಲ್ಲಿ, ಫಿನ್‌ಲ್ಯಾಂಡ್‌ನ ಟಂಪೆರ್‌ನ ಔರಿ ಕಾನನೆನ್ ಅನಿರೀಕ್ಷಿತವಾಗಿ ಕನಸಲ್ಲೂ ಕಾಣದ ರೀತಿಯಲ್ಲಿ ಕೋಟಿ ಕೋಟಿ ಗಳಿಸಿದ್ದಾಳೆ. ಆಕೆ ಮನೆಗಳನ್ನು ಉಚಿತವಾಗಿ ಸ್ವಚ್ಛವಾಗಿಸುವ ಕೆಲಸ ಮಾಡುತ್ತಾಳೆ. ಉಚಿತವಾಗಿ ಮನೆಗಳನ್ನು ಕ್ಲೀನ್ ಮಾಡಿದರೂ ಆಕೆ ಕೋಟಿ ಕೋಟಿ ಗಳಿಸಿದ್ದೇ ವಿಚಿತ್ರ. ಆಕೆ ತಾನು ಮನೆ ಸ್ವಚ್ಛಗೊಳಿಸುವ ವಿಡಿಯೋಗಳನ್ನು ಶೂಟ್ ಮಾಡಿ ಯೂಟ್ಯೂಬ್, ಫೇಸ್‌ಬುಕ್, ಟಿಕ್‌ಟಾಕ್‌ಗಳಲ್ಲಿ ಹಂಚಿಕೊಳ್ಳುತ್ತಾಳೆ. ಈ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ವಿಡಿಯೋಗಳು ಲಕ್ಷ ಲಕ್ಷ ವೀಕ್ಷಣೆ ಕಂಡು ಆದಾಯ ಗಳಿಸುತ್ತಿದ್ದಾಳೆ.
ಆಕೆ ಮನೆಗಳನ್ನು ಉಚಿತವಾಗಿ ಸ್ವಚ್ಛಗೊಳಿಸುತ್ತಾಳೆ. ಕಳೆದ ವರ್ಷದ ಯುಕೆ, ಸ್ವಿಟ್ಜರ್ಲೆಂಡ್, ಸ್ವೀಡನ್ ಮತ್ತು ಯುಎಸ್‌ನಂತಹ ದೇಶಗಳಿಗೆ ಪ್ರಯಾಣಿಸಿ ಅಲ್ಲಿಯೂ ಮನೆಗಳ ಸ್ವಚ್ಛಗೊಳಿಸುವ ಕಾರ್ಯ ಮಾಡಿದ್ದಾಳೆ. 2020ರಲ್ಲಿ ಆಕೆ ಆದಾಯಗಳಿಸಲು ಆರಂಭಿಸಿದ್ದಳು. ಬಳಿಕ ತನ್ನದೇ ತಂಡವನ್ನೂ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾಳೆ.
ಮೊಟ್ಟ ಮೊದಲು ಆಕೆ ಕೋವಿಡ್ ಸಮಯದಲ್ಲಿ ವಿಡಿಯೋವನ್ನು ಹಂಚಿಕೊಂಡಾಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ಆಕೆ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಳು. ಆಕೆಯ ಯೂಟ್ಯೂಬ್ ಚಾನಲ್ ಹಾಗೂ ಪ್ರಾಯೋಜಕರಿಂದ ಆಕೆ ಕಳೆದ ವರ್ಷ €500kಯಷ್ಟು ಗಳಿಸಿದ್ದಾಳೆ. ಭಾರತದ ರೂಪಾಯಿಯಲ್ಲಿ ಇದು ಸುಮಾರು ನಾಲ್ಕುವರೆ ಕೋಟಿಯಾಗುತ್ತದೆ.
ಆಕೆಯ ಟಿಕ್‌ಟಾಕ್‌ನಲ್ಲಿ ಬರೋಬ್ಬರಿ 10 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ. ಜೊತೆಗೆ ಆಕೆಯ ಕೆಲಸದ ಬಗ್ಗೆ ತುಂಬಾ ಗೌರವದಿಂದ ವಿಡಿಯೋದಲ್ಲಿ ಹಂಚಿಕೊಳ್ಳುತ್ತಾಳೆ. ಆಕೆಯ ಕೆಲಸ ಬರಿ ಮನೆಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಕೊಳಕಾಗಿರುವ ಸ್ಥಳಗಳು, ಚರಂಡಿ, ನದಿ, ರಸ್ತೆ ಹೀಗೆ ಎಲ್ಲಿ ಕಸಗಳು, ಕೊಳಕು ಕಾಣಿಸುತ್ತೋ ಆ ಸ್ಥಳ ಸ್ವಚ್ಛವಾಗಿಸುತ್ತಾಳೆ. ಈ ಎಲ್ಲಾ ವಿಡಿಯೋಗಳನ್ನು ಆಕೆ ಯುಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಳ್ಳುತ್ತಾಳೆ.
ಏನೆಲ್ಲಾ ಸ್ವಚ್ಛಗೊಳಿಸುತ್ತಾಳೆ?
ಮನೆಯಲ್ಲಿ ಯಾರು ವಾಸವಿಲ್ಲದೆ ತುಂಬಾ ಸಮಯ ಹಾಗೆ ಬಿಟ್ಟಿದ್ದರೆ, ಮನೆ ಸ್ವಚ್ಛ ಮಾಡಲು ಸಮಯ ಸಿಗದೆ ಬಿಟ್ಟಿದ್ದರೆ ಎಲ್ಲಿಯೇ ಇದ್ದರೂ ಅವರ ಸಂಪರ್ಕಿಸಿ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಾಳೆ. ಕೋವಿಡ್‌ಗೂ ಮುನ್ನ ಸಣ್ಣ ಸಣ್ಣ ಕೆಲಸ ಮಾಡುತ್ತಿದ್ದ ಆಕೆ ಕೋವಿಡ್‌ನಲ್ಲಿ ಈ ರೀತಿ ಕ್ಲೀನಿಂಗ್ ಕೆಲಸ ಮಾಡಲು ಮುಂದಾಗುತ್ತಾಳೆ. ಇದು ಆಕೆಯ ಅದೃಷ್ಟವನ್ನೇ ಬದಲಿಸಿ ಬಿಡುತ್ತದೆ.
ಸಮಾಜ ಸೇವೆಯಲ್ಲೂ ಮೇಲುಗೈ
ಆಕೆ ಹಣ ಪಡೆದು ಕೆಲಸ ಮಾಡುವುದು ಅಷ್ಟೇ ಅಲ್ಲ ಸಮಾಜ ಸೇವೆಯನ್ನೂ ಯಾವುದೇ ಸ್ವಾರ್ಥವಿಲ್ಲದೆ ಕೈಗೊಳ್ಳುತ್ತಾಳೆ. ಮನೆಯಲ್ಲಿ ಹಿರಿಯರಿದ್ದು, ಅವರಿಂದ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಆಕೆ ಅಲ್ಲಿಗೆ ತೆರಳುತ್ತಾಳೆ. ಮಾನಸಿಕ ಅಸ್ವಸ್ಥರು, ಆಶ್ರಮಗಳು, ಸಾರ್ವಜನಿಕ ಸ್ಥಳಗಳು ಹೀಗೆ ಎಲ್ಲಾ ಕಡೆಯೂ ಸ್ವಚ್ಛ ಮಾಡುವ ಕೆಲಸ ಮಾಡುತ್ತಾಳೆ.
ಡಿಪ್ರೆಷನ್ ಗೆದ್ದು ಬಂದಿದ್ದ ಔರಿ
ಔರಿ ತನ್ನ ಹದಿಹರೆಯದ ವಯಸ್ಸಿನಲ್ಲಿ ಡಿಪ್ರೆಷನ್‌ಗೆ ಒಳಗಾಗಿದ್ದರಂತೆ. ಈ ವೇಳೆ ಕೆಲಸಕ್ಕಾಗಿ ಆಕೆ ಪರದಾಡಬೇಕಾದ ಸ್ಥಿತಿ ಎದುರಾಗಿತ್ತಂತೆ. ಆದ್ರೆ ಅದನ್ನೆಲ್ಲಾ ಮೆಟ್ಟಿನಿಂತಿದ್ದ ಆಕೆ ಬಳಿಕ ಕ್ಲೀನಿಂಗ್ ಸೂಪರ್ ವೈಸರ್ ಆಗಿ ಕೆಲಸ ಆರಂಭಿಸಿದ್ದಳು. ಈ ಕೆಲಸ ಆಕೆಯನ್ನು ಡಿಪ್ರೆಷನ್‌ನಿಂದ ಹೊರಬರುವಂತೆ ಮಾಡಿತ್ತಂತೆ.



Click it and Unblock the Notifications