Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಈ ಸಾಧು 40ಕ್ಕೂ ಅಧಿಕ ವರ್ಷದಿಂದ ಮೇಲಕ್ಕೆ ಎತ್ತಿತ ಕೈ ಕೆಳಗೆ ಇಳಿಸಲೇ ಇಲ್ಲ, ಈ ಕಠಿಣ ವ್ರತ ಮಾಡುತ್ತಿರುವುದೇಕೆ?
ಹಿಂದೆಯೆಲ್ಲಾ ಸಾಧುಗಳು ಕಠಿಣ ವ್ರತವನ್ನು ಮಾಡಿ ದೇವರನ್ನು ಒಲಿಸಿಕೊಳ್ಳುತ್ತಿದ್ದರು ಎಂಬುವುದನ್ನು ಪೌರಾಣಿಕ ಕತೆಗಳಲ್ಲಿ ಕೇಳುತ್ತೇವೆ, ಆದರೆ ಈ ಆಧುನಿಕ ಯುಗದಲ್ಲಿ ಯಾರನ್ನು ನಂಬುವುದು, ಯಾರನ್ನು ಬಿಡುವುದು ಎಂಬ ಗೊಂದಲದಲ್ಲಿರುತ್ತೇವೆ, ಏಕೆಂದರೆ ಸಾಧು, ಸ್ವಾಮಿ ವೇಷ ಹಾಕಿ ಜನರನ್ನು ಮೋಸ ಮಾಡಿರುವ ಎಷ್ಟೋ ನೈಜ ಘಟನೆಗಳು ನಮ್ಮ ಕಣ್ಮುಂದೆ ಇದೆ, ಆದರೆ ಸಾಧು-ಸಂತರು ಪಾಲಿಸಬೇಕಾದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವವರೂ ಇದ್ದಾರೆ, ಇನ್ನು ಆ ಕಾಲದಲ್ಲಿಯೇ ಮಾಡದಂತೆ ಕಠಿಣ ನಿಯಮ ಪಾಲಿಸುವವರೂ ಇದ್ದಾರೆ, ಅಂಥ ಸ್ವಾಮಿಗಳಲ್ಲೊಬ್ಬರು ಅಮರ್ ಭಾರತಿ.

ಅಮರ್ ಭಾರತಿ
ಇವರ ಬಗ್ಗೆ ನಿಮ್ಮಲ್ಲಿ ಬಹುತೇಕರು ಕೇಳಿರಬಹುದು, ಸುಮಾರು 40 ವರ್ಷಗಳಿಗಿಂತಲೂ ಅಧಿಕ ಸಮಯದಿಂದ ತಮ್ಮ ಒಂದು ಕೈಯನ್ನು ಮೇಲಕ್ಕೆ ಎತ್ತಿದವರು ಕೆಳಗೆ ಇಳಿಸಲೇ ಇಲ್ಲ. ಈ ರೀತಿಯ ಕಠಿಣ ವ್ರತ ಮಾಡುತ್ತಿರುವ ಇವರ ಮನೋಬಲ ಎಂಥವರನ್ನೂ ಆಶ್ಚರ್ಯಪಡಿಸುವಂತಿದೆ, ಅವರು ಈ ರೀತಿಯ ವ್ರತವನ್ನು ಮಾಡಲೂ ಒಂದು ಕಾರಣವಿದೆ, ಏಕೆ ಈ ರೀತಿಯ ಕಠಿಣ ವ್ರತ ಮಾಡುತ್ತಿದ್ದಾರೆ, ಇವರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ:
1973ರವರೆಗೆ ಅಮರ್‌ಭಾರತಿ ಕುಟುಂಬ ಜೀವನದಲ್ಲಿದ್ದರು, ಅವರಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ, ಅದಾದ ಬಳಿಕ ಆಧ್ಯಾತ್ಮದ ಕಡೆಗೆ ಒಲವು ಹೆಚ್ಚುತ್ತದೆ. ಶಿವನ ಆರಾಧನೆ ಮಾಡಲಾರಂಭಿಸುತ್ತಾರೆ, ಶಿವನ ಪ್ರತಿದಿನ ಆರಾಧನೆ ಮಾಡುತ್ತಾ ವಿಶ್ವದ ಶಾಂತಿಗಾಗಿ ತಮ್ಮ ಒಂದು ಕೈಯನ್ನು ಮೇಲಕ್ಕೆ ಎತ್ತುತ್ತಾರೆ, ಈ ರೀತಿಯ ವ್ರತ ಮಾಡುವ ಮೂಲಕ ಶಿವನ ಕೃಪೆಗೆ ಪಾತ್ರರಾಗಲು ಕಠಿಣ ವ್ರತ ನಿಯಮವನ್ನು ಪಾಲಿಸುತ್ತಿದ್ದಾರೆ.
ಒಂದು ಕೈಯನ್ನು ಮೇಲಕ್ಕೆ ಎತ್ತಿ ಇಡುವುದು ಸುಲಭವಲ್ಲ
ನಾವು ನಮ್ಮ ಕೈಯನ್ನು ಒಂದು 10 ನಿಮಿಷ ಮೇಲಕ್ಕೆತ್ತಿ ಹಿಡಿದರೆ ಭುಜದಲ್ಲಿ, ಕೈಗಳಲ್ಲಿ ನೋವು ಕಂಡು ಬರುತ್ತದೆ, ಆದರೆ ಇವು ಎತ್ತಿದ ಕೈ ಇಳಿಸಲೇ ಇಲ್ಲ, ಹೇಗಾಗಿರಬೇಡ, ಎರಡು ವರ್ಷ ಈ ಕಾರಣಕ್ಕೆ ತುಂಬಾ ನೋವು ಅನುಭವಿಸಿದ್ದಾರೆ, ಆದರೂ ಅವರು ತಮ್ಮ ನಿರ್ಧಾರ ಬದಲಾಯಿಸಲಿಲ್ಲ, ವ್ರತ ಭಂಗಗೊಳಿಸಲಿಲ್ಲ, ಎರಡು ವರ್ಷ್ಗಳ ಕೈಗಳು ಮುರಿದೇ ಹೋಗುವ ನೋವುಂಟಾಗುತ್ತಿತ್ತು, ನಂತರ ಆ ಕೈಗೆ ಏನಾದರೂ ಏನೂ ಗೊತ್ತಾಗ್ತಾ ಇರಲಿಲ್ಲ, ಏಕೆಂದರೆ ಆ ಕೈಗಳಿಗೆ ರಕ್ತ ಸಂಚಾರ ಸಂಪೂರ್ಣ ನಿಂತು ಹೋಯ್ತು.
ಅಲ್ಲಿಂದ ಆ ಕೈಗಳು ಕೆಳಗೆ ಇಳಿಯಲೇ ಇಲ್ಲ
ಒಂದಲ್ಲಾ ಎರಡಲ್ಲಾ ಬರೋಬರಿ ನಲ್ವತ್ತು ವರ್ಷಗಳು ಕಳೆದಿದೆ, ಅವರ ಕೈಗಳು ಹಾಗೇ ಇದೆ, ಅವರು ತಮ್ಮ ಕೈಗಳನ್ನು ಮೇಲಕ್ಕೆ ಎತ್ತಿರುವುದು ಏಕೆ ಎಂಬುವುದಾಗಿ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ನಾನು ದೇವರಲ್ಲಿ ಹೆಚ್ಚೇನೂ ಕೇಳುವುದಿಲ್ಲ, ಏಕೆ ನಮ್ಮ ನಮ್ಮೊಳಗೆ ಬಡಿದಾಡಬೇಕು? ನಮ್ಮ ನಡುವೆ ಇಷ್ಟೊಂದು ಶತ್ರುತ್ವ ಏಕೆ? ನಾನು ಭಾರತೀಯರು ಹಾಗೂ ಇಡೀ ವಿಶ್ವದ ಜನರು ಶಾಂತಿಯಿಂದ ಬದುಕಬೇಕು ಎಂಬುವುದಾಗಿ ಬಯಸುತ್ತೇನೆ' ಎಂದು ಹೇಳಿದ್ದಾರೆ.
ಬ್ರಹ್ಮ ಈ ವಿಶ್ವವನ್ನು ಸೃಷ್ಟಿಸಿದ್ದಾನೆ, ವಿಷ್ಣು ಸಂರಕ್ಷಿಸುತ್ತಿದ್ದಾನೆ, ಶಿವ ಈ ವಿಶ್ವದ ಮರುಸೃಷ್ಟಿಯಾಗಿ ನಾಶ ಮಾಡುವ ಪಾತ್ರವಹಿಸುತ್ತಾನೆ ಎಂಬುವುದಾಗಿ ಹೇಳುತ್ತಾರೆ.
ಶಿವ
ಹಿಂದೂ ಧರ್ಮದಲ್ಲಿ ಶಿವ ಸಂರಕ್ಷಣೆಯನ್ನು ಮಾಡುತ್ತಾನೆ, ಕೋಪಗೊಂಡರೆ ರುದ್ರತಾಂಡವನಾಗಿ ಎಲ್ಲವೂ ನಾಶಪಡಿಸುತ್ತಾನೆ ಎಂದು ಹೇಳಲಾಗುವುದು, ಸೃಷ್ಟಿಯೂ ಶಿವನಿಂದಲೇ, ನಾಶವೂ ಶಿವನಿಂದಲೇ, ಶಿವನ ಕೃಪೆಯಿದ್ದರೆ ಈ ಜಗತ್ತು ಶಾಂತಿಯಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.



Click it and Unblock the Notifications
