ಬಾಲ್ಯದಲ್ಲಿ ಪೋಷಕರ ತಪ್ಪಿನಿಂದ ಸರಣಿ ಹಂತಕನಾದ ವ್ಯಕ್ತಿ..! ಆತ ಮಾಡಿದ ಕೃತ್ಯವೇನು ಗೊತ್ತಾ?

ನೀವು ಹತ್ತಾರು ಸಿನಿಮಾಗಳಲ್ಲಿ ಇಲ್ಲವೆ ಯಾವುದಾದರು ನ್ಯೂಸ್ ಚಾನೆಲ್‌ನಲ್ಲಿ ಸೀರಿಯಲ್ ಕಿಲ್ಲರ್ ಕುರಿತು ಕೇಳಿರುತ್ತೀರಿ. ಅಥವಾ ಯಾವುದಾದರು ಪೇಪರ್‌ನಲ್ಲಿ ಹತ್ತಾರು ವರ್ಷದ ಹಿಂದೆ ನಡೆದಿದ್ದ ಪ್ರಕರಣವನ್ನ ಪೊಲೀಸರು ಕೊನೆಗೂ ಪತ್ತೆ ಮಾಡಿ ಆರೋಪಿಗೆ ಶಿಕ್ಷೆ ವಿಧಿಸುವ ಘಟನೆಗಳು ನಡೆದಿರುವುದು ವರದಿಯಾಗಿರುತ್ತದೆ. ಸೀರಿಯಲ್ ಕಿಲ್ಲರ್‌ಗಳೆಂದರೇ ಒಂದೇ ರೀತಿ ಕೊಲೆ ಮಾಡುವ ಮಾನಸಿಕ ಕಾಯಿಲೆ ಹೊಂದಿರುವವರು.

ಈಗ ಇಂತಹದ್ದ ಘಟನೆಯೊಂದು ಬೆಳಕಿಗೆ ಬಂದಿದ್ದು, ಆತನ ಕಥೆ ಕೇಳಿ ಜನರೇ ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ಯಾರು ಈ ಕೊಲೆಗಾರ ಆತನ ಕಥೆ ಏನು? ಯಾಕಾಗಿ ಆತ ಕೊಲೆಗಾರನಾಗಿ ಬದಲಾದ ಎಂಬ ಕುರಿತ ಮಾಹಿತಿ ಇಲ್ಲಿದೆ. ಇದು ಉತ್ತರ ಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ ನಡೆದಿದ್ದ ಘಟನೆ. ಅಲ್ಲಿ ಸಾಲು ಸಾಲು ಮಹಿಳೆಯರು ಶವವಾಗಿ ಸಿಕ್ಕ ಬಳಿಕ ಈಗ ಕೊಲೆಗಾರ ಸಿಕ್ಕಿಬಿದ್ದಿದ್ದಾನೆ.

The Dark Legacy Of Childhood Trauma How A Troubled Past Shaped A Serial Killer

ಬರೋಬ್ಬರಿ 13 ತಿಂಗಳಲ್ಲಿ ಒಂದೇ ಪ್ರದೇಶದ 9 ಮಂದಿ ಮಹಿಳೆಯರು ಶವವಾಗಿ ಪತ್ತೆಯಾಗಿದ್ದರು, ಈ ಕೊಲೆಗಳೆಲ್ಲಾ ಒಬ್ಬನೇ ಮಾಡಿದ್ದ. ಬರೇಲಿಯ ಸರಣಿ ಹಂತಕ ಆತನಿಂದ ಮಹಿಳೆಯರು ಹೊಲಗಳಿಗೆ ತೆರಳುವುದು ಇರಲಿ ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿತ್ತು. ಆದರೆ ಅಂತಿಮವಾಗಿ ಆತ ತಾನು ಐವರು ಮಹಿಳೆಯರ ಕೊಲೆಗೆ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಉಳಿದ 4 ಮಹಿಳೆಯರ ಕೊಲೆ ಹಿಂದೆ ಆತನ ಕೈವಾಡದ ಶಂಕೆ ಇದ್ದರೂ ಆತ ಇದಕ್ಕೂ ನನಗೂ ಸಂಬಂಧವಿಲ್ಲ ಎನ್ನುತ್ತಿದ್ದಾನೆ.

ಹಾಗಾದ್ರೆ ಯಾರಾತ? ಈ ಕೊಲೆ ಮಾಡಿದ್ದೇಕೆ?

35 ವರ್ಷದ ಕುಲ್ದೀಪ್ ಕುಮಾರ್ ಎಂಬಾತ ಮಾನಸಿಕ ಸಮಸ್ಯೆ ಹೊಂದಿರುವ ವ್ಯಕ್ಯಿ. ಆದ್ರೆ 40 ರಿಂದ 55 ವರ್ಷದ ಮಹಿಳೆಯರೇ ಆತನ ಟಾರ್ಗೆಟ್. ಹೊಲದಲ್ಲಿ ಕೆಲಸ ಮಾಡುವವರು, ಮನೆಯಲ್ಲಿ ಒಬ್ಬರೇ ಇರುವವರು ಆತನ ಕಣ್ಣಿಗೆ ಬಿದ್ದರೆ ಅವರ ಕಥೆ ಮುಗಿದಂತೆ. ಆತ ಮೊದಲ ಬಾರಿಗೆ 45 ವರ್ಷದ ಮಹಿಳೆಯನ್ನ ಕಬ್ಬಿನ ಗದ್ದೆಯಲ್ಲಿ ಉಸಿರುಗಟ್ಟಿಸಿ ಕೊಂದಿದ್ದ. ಆತ ಕೊಲೆ ಮಾಡಿದ್ದ ಬಹುತೇಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಸಹ ಎಸಗಿದ್ದ ಎಂದು ತಿಳಿದುಬಂದಿದೆ.

ಈ ಕಬ್ಬಿನ ಗದ್ದೆಯಲ್ಲಿ ಸಿಕ್ಕ ಶವವನ್ನ ಆಕೆಯ ಗಂಡ ಗುರುತು ಹಿಡಿದಿದ್ದ ಇದು ಆತನ ಮೊದಲ ಕೊಲೆಯಾಗಿತ್ತು. ಆದರೆ ಅಷ್ಟರವರೆಗೆ ಯಾರಿಗೂ ಈತನ ಮೇಲೆ ಕಿಂಚಿತ್ತು ಅನುಮಾನ ಬಂದಿರಲಿಲ್ಲ. ಹೀಗೆ ಒಂದೇ ವರ್ಷದ ಅವಧಿಯಲ್ಲಿ 9 ಮಂದಿ ಮಹಿಳೆಯರು ಶವವಾದರು. ಆದರೆ ಆತ ಮಾತ್ರ ಯಾರಿಗೂ ಸಿಹಲಿಲ್ಲ.

ಕೊಲೆ ಮಾಡಿ ಶವದಿಂದ ವಸ್ತು ತೆಗೆದುಕೊಂಡು ಹೋಗುತ್ತಿದ್ದ

ಆತನ ಮಾನಸಿಕ ಸ್ಥಿತಿ ಎಷ್ಟು ಹದಗೆಟ್ಟಿತ್ತು ಅಂದರೆ ಆತ ಕೊಲೆ ಮಾಡಿದ ಬಳಿಕ ಶವದಿಂದ ಏನದರು ತೆಗೆದುಕೊಂಡು ಹೋಗುತ್ತಿದ್ದ. ಕೆಲವೊಮ್ಮೆ ಚಿನ್ನಾಭರಣ, ಬಟ್ಟೆಯ ಪೀಸ್, ಚಪ್ಪಲಿ, ಕೂದಲು ಹೀಗೆ ಏನಾದರೊಂದು ತೆಗೆದುಕೊಂಡು ಹೋಗಿ ಮನೆಯಲ್ಲಿ ಇಟ್ಟುಕೊಳ್ಳುತ್ತಿದ್ದ. ಆತ ಮಾಡಿದ್ದ ಎಲ್ಲಾ ಕೊಲೆಗಳು ಒಂದೇ ರೀತಿ ಇದ್ದವು. ಎಲ್ಲ ಕೊಲೆಯಲ್ಲು ಉಸಿರುಗಟ್ಟಿಸಿ ಕೊಲೆ ಮಾಡಿ ಬಟ್ಟೆಗಳನ್ನೆ ಕಿತ್ತು ಎಸೆಯುತ್ತಿದ್ದ.

ಕಳೆದ ಜುಲೈನಲ್ಲಿ ಕೊನೆಯ ಕೊಲೆ

ಕಳೆದ ಜುಲೈನಲ್ಲಿ 45 ವರ್ಷದ ಅನಿತಾ ಎಂಬಾಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಕಬ್ಬಿನ ಗದ್ದೆಯಲ್ಲಿ ಆಕೆ ಶವ ಸಿಕ್ಕಿತ್ತು. ಬ್ಯಾಂಕ್‌ಗೆ ಹೋಗಿ ಬರುವಾಗ ಈತ ಅಡ್ಡಹಾಕಿ ಕೊಲೆ ಮಾಡಿದ್ದ. ಇದು ಸಹ ಸರಣಿ ಕೊಲೆಗಾರ ಕೈವಾಡ ಎಂದು ತಿಳಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಸುಮಾರು 300 ಮಂದಿ ಪೊಲೀಸರು ಆತನ ಹಿಂದೆ ಬಿದ್ದಿದ್ದರು. ಆತನ ರೇಖಾ ಚಿತ್ರ ಬಿಡುಗಡೆ ಮಾಡಲಾಗಿತ್ತು. ಇದಾಗಿ ಕೆಲವೇ ದಿನದಲ್ಲಿ ಆತನ ಪತ್ತೆಯೂ ಆಗಿತ್ತು.

ತನಿಖಾಧಿಕಾರಿಗಳಿಗೆ ಶಾಕ್

ಆರೋಪಿಯ ಹಿಡಿದು ತನಿಖೆ ಆರಂಭಿಸಿದಾಗ ಆತನ ವಿಕೃತಿ ಬಯಲಿಗೆ ಬಂದಿತ್ತು. ಆತ ಮಾನಸಿಕ ಸ್ಥಿಮಿತ ಕಳೆದಕೊಂಡಿರುವುದು ಸಹ ತಿಳಿದುಬಂದಿದೆ. ಆತ ಚಿಕ್ಕವನಾಗಿದ್ದಾಗಿನಿಂದ ಇಂತಹ ಕೃತ್ಯ ನೋಡುತ್ತಾ ಬಂದಿದ್ದ. ತಂದೆ ಯಾವಾಗಲು ತಾಯಿಗೆ ಹೊಡೆಯುತ್ತಿದ್ದರು. 2ನೇ ಮದುವೆಯಾಗಿದ್ದ ತಂದೆ ಮೊದಲ ಪತ್ನಿಯನ್ನ ಕೊಲೆ ಮಾಡಿದ್ದ. ಇದೆಲ್ಲವನ್ನು ಆತ ಕಣ್ಣಾರೆ ಕಂಡು ಮಾನಸಿಕಯಾತನೆ ಅನುಭವಿಸಿದ್ದ, ಇದಾಗಿ ಖಿನ್ನತೆಗೆ ಒಳಗಾದ ಆತ ಮುಂದೆ ಸರಣಿ ಹಂತಕನಾಗಿ ಬದಲಾಗಿಬಿಟ್ಟ.

ಮನೆ ಬಿಟ್ಟ-ಮಹಿಳೆಯರ ಕಂಡರೆ ಸಿಟ್ಟಿಗೇಳುತ್ತಿದ್ದ

ತಂದೆಯ ಕ್ರೌರ್ಯ ನೋಡಿದ್ದ ಆತ ಮನೆ ಬಿಟ್ಟು ಬಂದಿದ್ದ, ಬಳಿಕ ಮಹಿಳೆಯರ ಕಂಡರೆ ಉರಿದು ಬೀಳುತ್ತಿದ್ದ. ಆತನ ಸ್ಥಿತಿಗೆ ಮಹಿಳೆಯರೇ ಕಾರಣ ಎಂದು ಆತನಲ್ಲಿ ಮರೆಯಲಾಗದ ಗಾಯವಾಗಿತ್ತು. ಹೀಗಾಗಿ ಆತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡಲು ಮುಂದಾಗಿದ್ದ.

ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವ ಅಂಶವೇನು?

ನಾವು ಈ ಪ್ರಕರಣದಲ್ಲಿ ಮಕ್ಕಳ ಮನಸ್ಸಿನ ಮೇಲೆ ಯಾವ ಅಂಶ ಪರಿಣಾಮ ಬೀರಿದರೆ ಅವರು ಈ ರೀತಿಯಾಗಿ ಬದಲಾಗುತ್ತಾರೆ ಎಂಬುದನ್ನು ನೋಡಬಹುದು. ಆತ ಬಾಲ್ಯದಲ್ಲಿ ಅನುಭವಿಸಿದ ನೋವು ಮುಂದೆ ಕೊಲೆಗಾರನನ್ನಾಗಿ ಬದಲಾಯಿಸಿದೆ. ಹಾಗಾದ್ರೆ ಇದಕ್ಕೆ ಕಾರಣ ಏನಿರಬಹುದು?

'ಒಬ್ಬ ವ್ಯಕ್ತಿ ಬಾಲ್ಯದಲ್ಲಿ ಕೆಟ್ಟ ದಿನಗಳನ್ನು ಕಳೆದಿದ್ದರೆ ಆತ ಸಮಾಜದ ವಿರುದ್ಧ ನಿಂತುಕೊಳ್ಳುತ್ತಾನೆ. ಅವರು ಭಾವನಾತ್ಮಕ ಸಮಸ್ಯೆಗಳ ಹೊಂದಿರುತ್ತಾರೆ. ಕೆಟ್ಟ ಬಾಲ್ಯವು, ಒಬ್ಬ ಪೋಷಕರು ಸಾಯುವುದು, ನಿಂದನೀಯ ಮತ್ತು ಮದ್ಯಪಾನಿ ತಂದೆ, ಪೋಷಕರ ಸಂಬಂಧ ಸರಿಯಾಗಿ ಇಲ್ಲದೆ ಇರುವುದು, ಇದೆಲ್ಲಾ ಅವರ ಸುಪ್ತ ಚೇತನದಲ್ಲಿ ಅಡಗಿ ಗಾಢವಾದ ಇಂಪ್ಯಾಕ್ಟ್ ಮಾಡಿರುತ್ತದೆ. ಮುಂದೆ ಯಾವೋದೋ ಒಂದು ಘಟ್ಟದಲ್ಲಿ ಅವರಿಗೆ ಟ್ರಿಗರ್ ಆದಾಗ ಸುಪ್ತ ಚೇತನದ ಈ ಅಂಶಗಳು ಹೊರಬರುತ್ತವೆ. ಆಗ ಆತನ ವರ್ತನೆ ಬದಲಾಗುತ್ತದೆ, ಆತ ಮೃಗೀಯ ವರ್ತನೆ ತಾಳುತ್ತಾನೆ' ಎಂದು ಕ್ಲಿನಿಕಲ್ ಸೈಕಾಲಜಿಸ್ಟ್ ಅರುಣ್ ಕುಮಾರ್ ಹೇಳುತ್ತಾರೆ.

'ಸಿಂಗಲ್ ಪೇರೆಂಟಿಂಗ್, ಮನೆಯ ವಾತಾವರಣ, ಪೋಷಕರಿಂದ ಗಲಾಟೆ, ಒತ್ತಡ, ತೀವ್ರ ಹಲ್ಲೆಗೆ ಒಳಗಾದಂತಹ ಮಕ್ಕಳು ಮುಂದೆ ಫೆರೋಶಿಯಸ್ ವರ್ತನೆಗೆ ಒಳಗಾಗುವುದು ನಾವು ನೋಡಬಹುದು. ಅಪರಾಧ ಕೃತ್ಯದಲ್ಲಿ ಭಾಗಿಯಾಗುವ ಬಹುತೇಕ ಮಂದಿ ಬಾಲ್ಯದಲ್ಲಿ ಇಂತಹ ಯಾವುದಾದರು ಸಮಸ್ಯೆಗೆ ಒಳಗಾಗಿರುತ್ತಾರೆ' ಎಂದು ಅವರು ಹೇಳಿದ್ದಾರೆ.

English summary

The Dark Legacy Of Childhood Trauma: How A Troubled Past Shaped A Serial Killer

In exactly 13 months, 9 women were found dead in the same area, all these murders were committed by one person. The serial killer of Bareilly made women reluctant to leave the house, let alone go to the fields.
X
Desktop Bottom Promotion