Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಗ ತೀರಿ ಹೋಗಿ 3 ವರ್ಷದ ಬಳಿಕ ಮಗನ ವೀರ್ಯಾಣುವಿನಿಂದ ಮೊಮ್ಮಗು ಪಡೆಯಲಿದ್ದಾರೆ ದೆಹಲಿಯ ವೃದ್ಧ ದಂಪತಿ
ಹೆತ್ತ ಮಗ ಜೀವಂತವಾಗಿಲ್ಲ, ಆದರೆ ಅವನ ವಾರಸು ನಮ್ಮ ಕುಟುಂಬಕ್ಕೆ ಬೇಕು, ನಮ್ಮ ಮಗನ ವೀರ್ಯಾಣುವಿನಿಂದ ಮೊಮ್ಮಗು ಪಡೆಯಲು ಅವಕಾಶ ನೀಡಬೇಕು ಎಂಬ ಬೇಡಿಕೆಯಿಟ್ಟು ಕೋರ್ಟ್ ಮೆಟ್ಟಿಲೇರಿದ ದಂಪತಿ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ, ಬಾಡಿಗೆ ತಾಯಿ ಮೂಲಕ ಮೊಮ್ಮಗು ಪಡೆಯಬಹುದಾಗಿದೆ.
ಇವರು ಮೊಮ್ಮಗು ಪಡೆಯಲು ಮೂರು ವರ್ಷ ಹೋರಾಟ ಮಾಡಿದ್ದಾರೆ, ಕೊನೆಗೂ ದೆಹಲಿಯ ಹೈಕೋರ್ಟ್ ತೀರ್ಪು ಈ ವೃದ್ಧ ದಂಪತಿ ಪರವಾಗಿ ನೀಡಿದೆ. ಏನಿದು ಇಂಟೆರೆಸ್ಟಿಂಗ್ ಸ್ಟೋರಿ ನೋಡಿ, ಏಕೆ ಅವರಿಗೆ ಕಾನೂನು ಹೋರಾಟ ಮಾಡಬೇಕಾಯಿತು ಎಂದು ನೋಡೋಣ ಬನ್ನಿ:

ಮಗನನ್ನು ಕಳೆದುಕೊಂಡ ದಂಪತಿ ಕೋರ್ಟ್ ಅಮೂಲ್ಯವಾದ ಕೊಡುಗೆ ನೀಡಿದೆ
ಪೋಷಕರು ಜೀವಂತವಾಗಿರುವಾಗ ಹೆತ್ತ ಮಗ/ಮಗಳನ್ನು ಕಳೆದುಕೊಂಡರೆ ಆ ತಂದೆ-ತಾಯಿಗೆ ಆ ನೋವಿನಿಂದ ಹೊರಬರುವುದು ಅಸಾಧ್ಯ, ಪ್ರತಿಕ್ಷಣವೂ ಇದರ ಬಗ್ಗೆ ಯೋಚಿಸಿ ಕೊರಗುತ್ತಾರೆ, ಮಿಸ್ ಕೌರ್ ಹಾಗೂ ಗುರುವಿಂದರ್ ಸಿಂಗ್ ದಂಪತಿ ಕೂಡ ಅಂಥ ಕಠಿಣ ಪರಿಸ್ಥಿತಿ ಎದುರಿಸಬೇಕಾಯ್ತು. ಇರುವ ಮಗನನ್ನು ಕಳೆದುಕೊಳ್ಳಬೇಕಾಯ್ತು. ಆದರೆ ಆತನ ವೀರ್ಯಾಣು ಲ್ಯಾಬ್‌ನಲ್ಲಿ ಸ್ಟೋರ್ ಮಾಡಿ ಅದರ ಮೂಲಕ ಮಗುವನ್ನು ಪಡೆಯುವ ಆಲೋಚನೆ ಮಾಡಿದರು ದಂಪತಿ.
ಲಿಂಪೋಮಾ ಎಂಬ ರಕ್ತದ ಕ್ಯಾನ್ಸರ್ ಅವರ ಮಗನಿಗೆ ಬಾಧಿಸಿತ್ತು
30 ವರ್ಷದ ಮಗನಿಗೆ ಲಿಂಪೋಮಾ ಬ್ಲಡ್ ಕ್ಯಾನ್ಸರ್ ಇದೆ ಎಂದು ತಿಳಿದಾಗ ಆ ಪೋಷಕರು ಕುಸಿದು ಹೋದರು. ಆತನಿಗೆ ಜೂನ್ 2020ರಲ್ಲಿ ಕ್ಯಾನ್ಸರ್ ಇರುವುದು ಗೊತ್ತಾಯ್ತು, ಆದರೆ ಕೀಮೋ ಪ್ರಾರಂಭಿಸುವ ಮುನ್ನ ಆಸ್ಪತ್ರೆಯವರು ಪ್ರೀತ್ ಇಂದ್ರ ಸಿಂಗ್ ವೀರ್ಯಾಣು ಸಂಗ್ರಹಿಸಿಡುವುದಾದರೆ ಇಡಿ, ಮುಂದೆ ಅವರಿಗೆ ಮಗ ಪಡೆಯಲು ಅನುಕೂಲಕವಾಗುತ್ತೆ ಎಂಬುವುದಾಗಿ ಹೇಳಿದರು(ಸಾಮಾನ್ಯವಾಗಿ ಕ್ಯಾನ್ಸರ್ ಬಾಧಿತ ಯುವಕರಿಗೆ ವೀರ್ಯಾಣು, ಕ್ಯಾನ್ಸರ್ ಬಾಧಿತ ಯುವತಿಯರಿಗೆ ಅಂಡಾಣು ಸಂಗ್ರಹಿಸಡಲ ಸಲಹೆ ನೀಡುತ್ತಾರೆ. ಕೀಮೋ ಮೊದಲು ಈ ರೀತಿ ಮಾಡಿದರೆ, ಕೀಮೋ ಚಿಕಿತ್ಸೆ ಬಳಿಕ ಕ್ಯಾನ್ಸರ್ ಮುಕ್ತರಾದರೆ ಮುಂದೆ ಅವರಿಗೆ ಮಗು ಬೇಕೆಂದು ಬಯಸಿದಾಗ ಈ ತಂತ್ರಜ್ಞಾನ ಸಹಾಯಕ್ಕೆ ಬರುತ್ತದೆ, ಹಾಗಾಗಿ ಅಂಥದ್ದೊಂದು ಸಲಹೆ ನೀಡಲಾಗುವುದು. ಅದರಂತೆ ಪ್ರೀತ್ ಇಂದ್ರ ಸಿಂಗ್ ವೀರ್ಯಾಣು ಕೂಡ ಫ್ರೀಝ್ ಮಾಡಲಾಗುವುದು. ಜೂನ್ 27ಕ್ಕೆ ಇವರ ವೀರ್ಯಾಣು ಫ್ರೀಝ್ ಮಾಡಲಾಗುವುದು.
ಆದರೆ ಪ್ರೀತ್ ಸಿಂಗ್ ಬದುಕಿಳಿಯಲಿಲ್ಲ
ಪ್ರೀತ್ ಸಿಂಗ್‌ಗೆ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್‌ನಲ್ಲಿ ಸಾವನ್ನಪ್ಪುತ್ತಾರೆ. ಮಗನ ಸಾವು ಅವರ ಪೋಷಕರಿಗೆ ದೊಡ್ಡ ಆಘಾತ ನೀಡುತ್ತದೆ. ಮಗನ ಸಾವಿನಿಂದ ದಿನಾ ಕಣ್ಣೀರು ಹಾಕುತ್ತಾರೆ, ಆವಾಗ ಅವರಿಗೆ ನಮ್ಮ ಮಗನ ವೀರ್ಯಾಣು ಫ್ರೀಝ್ ಮಾಡಲಾಗಿದೆ ಅಲ್ವಾ, ಬಾಡಿಗೆ ತಾಯಿ ಮೂಲಕ ಮಗನ ಸಂತಾನ ಪಡೆಯಬಹುದಲ್ವಾ? ಆ ಮಗುವಿನಲ್ಲಿ ನಮ್ಮ ವಂಶ ಬೆಳಗವುದನ್ನು ಕಾಣಬಹುದು ಅಲ್ವಾ ಎಂಬ ಆಶಾಕಿರಣ ಮೂಡುತ್ತದೆ.
ಮಗನ ವೀರ್ಯಾಣುವಿನಿಂದ ಮಗು ಪಡೆಯಲು ಬಯಸಿದ ದಂಪತಿಗೆ ಆರಂಭದಲ್ಲಿಯೇ ಕಾನೂನು ತೊಡಕು ಉಂಟಾಗುವುದು
ಇವರು ಮಗನ ವೀರ್ಯಾಣು ಬಳಸಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆಯಲು ಆಸ್ಪತ್ರೆಯವರನ್ನು ಸಂಪರ್ಕಿಸಿದಾಗ ಅವರು ನಿಮ್ಮ ಯಾರು ವೀರ್ಯಾಣು ಅಥವಾ ಅಂಡಾಣು ಸ್ಟೋರ್ ಮಾಡಿದ್ದಾರೋ ಅವರು ಮಾತ್ರ ಭವಿಷ್ಯದಲ್ಲಿ ಸಂತಾನ ಪಡೆಯಲು ಈ ತಂತ್ರಜ್ಞಾನ ಬಳಸಬಹುದು, ಆದರೆ ನಿಮ್ಮ ಮಗ ಬದುಕಿಲ್ಲ, ಹಾಗಾಗಿ ವೀರ್ಯಾಣು ನೀಡಲು ಕಾನೂನು ಸಾಧ್ಯವಿಲ್ಲ ಅಂತಾರೆ.
ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ದಂಪತಿ
ಆ ದಂಪತಿಗೆ ವಯಸ್ಸಾಗಿದೆ, ಬಾಡಿಗೆ ತಾಯಿ ಮೂಲಕ ಮಗು ಪಡೆದರೂ ಇವರ ಬಳಿಕ ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಕೂಡ ಮೂಡುತ್ತದೆ ಅಲ್ವಾ? ಇದರ ಬಗ್ಗೆ ವಿಚಾರಣೆ ನಡೆಯುತ್ತದೆ. ಅಲ್ಲದೆ ಭಾರತದ ಕಾನೂನುನಲ್ಲಿ ವ್ಯಕ್ತಿ ಸತ್ತ ನಂತರ ಅವರ ಸಂತಾನ ಈ ರೀತಿ ಪಡೆಯುವುದರ ಬಗ್ಗೆ ಉಲ್ಲೇಖವಿಲ್ಲ, ಆತ ಇನ್ನೂ ಮದುವೆ ಕೂಡ ಆಗಿರಲಿಲ್ಲ, ಹೀಗಾಗಿ ಮಗುವಿನ ಸುರಕ್ಷತೆ ಯಾರು ತೆಗೆದುಕೊಳ್ಳುತ್ತಾರೆ ಎಂದು ಕೋರ್ಟ್ ಪ್ರಶ್ನೆ ಮಾಡುತ್ತಾರೆ.
ಈ ದಂಪತಿಗೆ ಮಗನಲ್ಲದೆ ಇನ್ನಿಬ್ಬರು ಹೆಣ್ಮಕ್ಕಳು ಕೂಡ ಇದೆ, ಅವರು ಆ ಮಗುವಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ಒಪ್ಪುತ್ತಾರೆ. ಅದಾದ ಬಳಿಕ ಕೋರ್ಟ್ ಆ ವೀರ್ಯಾಣು ಬಳಸಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಅನುಮತಿ ನೀಡಿದೆ, ಇದರಿಂದಾಗಿ ದಂಪತಿ ನೆಮ್ಮದಿ ಉಸಿರು ಬಿಟ್ಟಿದ್ದಾರೆ, ಮಗನ ಸಂತಾನ ಪಡೆಯಬಹುದು ಎಂದು ಬದುಕಿನಲ್ಲಿ ಹೊಸ ನಿರೀಕ್ಷೆ, ಉತ್ಸಾಹ ಮೂಡಿದೆ.



Click it and Unblock the Notifications