Latest Updates
-
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ
ಶ್ರಾವಣ ಮಾಸ 2023 : ಈ ಆಹಾರಗಳನ್ನು ಶಿವನಿಗೆ ಅರ್ಪಿಸಿದ್ರೆ ನಿಮ್ಮೆಲ್ಲಾ ಕಷ್ಟಗಳು ಪರಿಹಾರವಾಗುತ್ತೆ!
ಶ್ರಾವಣ ಮಾಸ ಹಿಂದೂಗಳಿಗೆ ವಿಶೇಷವಾದ ಮಾಸ. ಈ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ. ಈ ಸಮಯದಲ್ಲಿ ಶಿವನನ್ನು ಭಕ್ತಿಯಿಂದ ಬೇಡಿಕೊಂಡರೆ ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರುತ್ತೆ ಅನ್ನೋ ನಂಬಿಕೆಯಿದೆ.
ಅದ್ರಲ್ಲೂ ಕರ್ನಾಟಕದಲ್ಲಿ ಜುಲೈ 18ರಿಂದ ಶ್ರಾವಣ ಮಾಸ ಆರಂಭವಾಗ್ತಿದ್ದು, ಈ ಸಮಯದಲ್ಲಿ ಶಿವನಿಗೆ ಪ್ರಿಯವಾದ ಕೆಲವೊಂದು ಆಹಾರಗಳನ್ನು ಅರ್ಪಣೆ ಮಾಡಿದ್ರೆ ನಿಮ್ಮೆಲ್ಲಾ ಇಷ್ಟಾರ್ಥಗಳು ನೆರವೇರಲಿದೆ. ಅಷ್ಟಕ್ಕೂ ಯಾವೆಲ್ಲಾ ವಿಧದ ಆಹಾರಗಳನ್ನು ಶಿವನಿಗೆ ಅರ್ಪಣೆ ಮಾಡಿದ್ರೆ ಒಳ್ಳೆಯದಾಗುತ್ತೆ ಅನ್ನೋದನ್ನು ತಿಳಿಯೋಣ.

1. ಬಿಲ್ವಪತ್ರೆ
ಮಾತೆ ಪಾರ್ವತಿಯು ಬಿಲ್ವಪತ್ರೆ ಮರದ ಪ್ರತಿಯೊಂದು ಭಾಗದಲ್ಲಿಯೂ ನೆಲೆಸಿದ್ದಾಳೆ ಎನ್ನುವ ನಂಬಿಕೆಯಿದೆ. ಹೀಗಾಗಿ ಬಿಲ್ವಪತ್ರೆಯ ಎಲೆಗಳನ್ನು ಶಿವನಿಗೆ ಅರ್ಪಣೆ ಮಾಡಿದ್ರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆಯಿದೆ. ಇದರಿಂದ ಶಿವನ ಆಶೀರ್ವಾದ ಸದಾ ಇರುತ್ತದೆ.
2. ಮೊಸರು
ಶ್ರಾವಣ ಮಾಸದಲ್ಲಿ ಶಿವನಿಗೆ ಮೊಸರು ಅರ್ಪಿಸೋದ್ರಿಂದ ಒಳ್ಳೆಯದಾಗುತ್ತಂತೆ. ಇದರಿಂದ ನಮ್ಮ ಜೀವನದಲ್ಲಿರುವ ಪ್ರತಿಯೊಂದು ಕಷ್ಟಗಳು ನಿವಾರಣೆಯಾಗುತ್ತದೆ. ಯಾವುದಾದರೂ ಕೆಲಸಕ್ಕೆ ಅಡೆ-ತಡೆಗಳು ಉಂಟಾಗಿದ್ದರೆ ಅದರಿಂದ ನೀವು ಪರಿಹಾರ ಕಂಡುಕೊಳ್ಳಬಹುದು.
3. ಜೇನುತುಪ್ಪ
ಶಿವನಿಗೆ ಪ್ರಿಯವಾದ ವಸ್ತುಗಳಲ್ಲಿ ಜೇನು ತುಪ್ಪ ಕೂಡ ಒಂದಾಗಿದೆ. ಆದರಿಂದ ಇದನ್ನು ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಅರ್ಪಿಸುವುದರಿಂದ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಹಿಂದೂ ನಂಬಿಕೆಗಳ ಪ್ರಕಾರ ಜೀವನದಲ್ಲಿರುವ ತೊಂದರೆಗಳು ಮತ್ತು ರೋಗಗಳನ್ನು ದೂರವಿಡಲು ಶಿವನಿಗೆ ಜೇನಿನ ಅಭಿಷೇಕ ಮಾಡಬೇಕಂತೆ.
4. ಹಾಲು
ಶಿವಲಿಂಗಕ್ಕೆ ಹಾಲನ್ನು ಅರ್ಪಣೆ ಮಾಡೋದ್ರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತಂತೆ. ಇದೇ ಕಾರಣಕ್ಕೆ ಶಿವಲಿಂಗಕ್ಕೆ ಶ್ರಾವಣ ಮಾಸದಲ್ಲಿ ಹಾಲನ್ನು ಅರ್ಪಣೆ ಮಾಡುವುದು.
5. ತುಪ್ಪು
ಶ್ರಾವಣ ಮಾಸದಲ್ಲಿ ತುಪ್ಪವನ್ನು ಶಿವಲಿಂಗಕ್ಕೆ ಅರ್ಪಣೆ ಮಾಡಿದ್ರೆ ನಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತಂತೆ.
6. ಅಕ್ಕಿ
ಶ್ರಾವಣ ತಿಂಗಳಿನಲ್ಲಿ ಶಿವನಿಗೆ ಅಕ್ಕಿಯನ್ನು ಅರ್ಪಣೆ ಮಾಡೋದ್ರಿಂದ ಕುಟುಂಬದಲ್ಲಿರುವ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ನಿಮ್ಮ ಜೀವನದಲ್ಲಿ ಸ್ಥಿರತೆ ಹೆಚ್ಚಾಗುತ್ತಂತೆ.
7. ಕೇಸರಿ
ಶಿವಲಿಂಗಕ್ಕೆ ನೀರನ್ನು ಸುರಿಯುವ ಮೊದಲು ಹಾಲಿಗೆ ಕೇಸರಿ ಸೇರಿಸುವುದು ಅಥವಾ ಶಿವಲಿಂಗಕ್ಕೆ ಕೇಸರಿ ಎಳೆಗಳನ್ನು ಅರ್ಪಿಸುವುದರಿಂದ ಒಳ್ಳೆಯದಾಗುತ್ತಂತೆ. ಇದರಿಂದ ನೀವು ಬಯಸಿದ ಜೀವನದ ಸಂಗಾತಿ ನಿಮಗೆ ಸಿಗುತ್ತಾರೆ. ಹಾಗೂ ನಿಮ್ಮ ವೈವಾಹಿಕ ಜೀವನ ಸುಧಾರಿಸುತ್ತದೆ.
8. ಗೋಧಿ
ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಗೋಧಿಯನ್ನು ಅರ್ಪಣೆ ಮಾಡೋದ್ರಿಂದ ಶಿವನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತಂತೆ.
ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ಶಿವನಿಗೆ ತಪ್ಪದೇ ಅರ್ಪಿಸಿ. ಇದರಿಂದ ನಿಮ್ಮೆಲ್ಲಾ ಕಷ್ಟಗಳು ದೂರವಾಗುತ್ತದೆ.



Click it and Unblock the Notifications



