Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶ್ರಾವಣ ಮಾಸ 2023 : ಶ್ರಾವಣ ಮಾಸದಲ್ಲಿ ಈ 5 ಸಸ್ಯಗಳನ್ನು ಮನೆಗೆ ತಂದರೆ ಶುಭಫಲ!
ಶ್ರಾವಣ ಮಾಸವು ಹಿಂದೂಗಳಿಗೆ ಪವಿತ್ರವಾದ ಮಾಸವಾಗಿದೆ. ಈ ತಿಂಗಳಿನಲ್ಲಿ ಶಿವನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಶಿವನನ್ನು ಭಕ್ತಿಯಿಂದ ಪೂಜಿಸಿದ್ರೆ ಈ ತಿಂಗಳಿನಲ್ಲಿ ನಮ್ಮೆಲ್ಲಾ ಸಂಕಷ್ಟಗಳು ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ.
ಈ ತಿಂಗಳಿನಲ್ಲಿ ಶಿವನನ್ನು ಕುರಿತು ವಿಶೇಷ ಪೂಜೆಯನ್ನು ಮಾಡುವ ಜೊತೆಗೆ ಕೆಲವೊಂದು ಸಸ್ಯಗಳನ್ನು ಮನೆಗೆ ತಂದರೆ ಶುಭವಾಗುತ್ತಂತೆ. ಅಷ್ಟಕ್ಕು ಆ ಗಿಡಗಳನ್ನು ಯಾವುದು ಅನ್ನೋದನ್ನು ತಿಳಿಯೋಣ.

1. ತುಳಸಿ ಗಿಡ
ಸಾಮಾನ್ಯವಾಗಿ ಹಿಂದೂ ಧರ್ಮಕ್ಕೆ ಸೇರಿದ ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡವನ್ನು ನೆಡುವ ಸಂಪ್ರದಾಯವಿದೆ. ಹಾಗೂ ಅದಕ್ಕೆ ಪ್ರತಿನಿತ್ಯ ಪೂಜೆಯನ್ನು ಸಲ್ಲಿಕೆ ಮಾಡಲಾಗುತ್ತದೆ. ಅದ್ರಲ್ಲೂ ತುಳಸಿ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಟ್ಟ ತುಂಬಾನೇ ಒಳ್ಳೆಯದು. ತುಳಸಿ ಗಿಡ ಮನೆಯಲ್ಲಿದ್ದರೆ ಆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತಂತೆ.
ಅದ್ರಲ್ಲೂ ಶ್ರಾವಣ ತಿಂಗಳಿನಲ್ಲಿ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮನೆಗೆ ಶುಭ ಶಕುನವಂತೆ. ನಿಮಗೆ ಆರ್ಥಿಕ ಸಂಕಷ್ಟ ಸೇರಿದಂತೆ ಯಾವುದೇ ರೀತಿ ಸಮಸ್ಯೆ ಕೂಡ ಇರೋದಿಲ್ಲ. ಇಷ್ಟು ದಿನ ಅಡ್ಡಿಯಾಗಿದ್ದ ಎಲ್ಲಾ ಕಾರ್ಯಗಳು ಸರಾಗವಾಗಿ ನೆರವೇರುತ್ತದೆ.
2. ಬಾಳೆ ಗಿಡ
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಯ ಹೊರಗಡೆ ಅಂದರೆ ತೋಟದಲ್ಲಿ ಬಾಳೆಗಿಡವನ್ನು ಬೆಳೆಯಲಾಗುತ್ತದೆ. ಅದ್ರಲ್ಲೂ ವ್ಯಾಪಾರದ ಉದ್ದೇಶದಿಂದ ನಾವು ಬಾಳೆ ಕೃಷಿಯನ್ನು ಮಾಡುತ್ತೇವೆ. ಆದರೆ ಮನೆಯಲ್ಲಿ ಬಾಳೆ ಗಿಡವನ್ನು ನೆಡುವುದು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಮನೆಯ ಕೆಟ್ಟ ಶಕ್ತಿಯನ್ನು ಶುದ್ಧೀಕರಿಸುತ್ತದೆ. ನಂಬಿಕೆಗಳ ಪ್ರಕಾರ ತುಳಸಿ ಮತ್ತು ಬಾಳೆ ಗಿಡಗಳನ್ನು ಒಟ್ಟಿಗೆ ನೆಡಬಾರದಂತೆ. ಹೀಗಾಗಿ ಮನೆಯ ಮುಖ್ಯ ದ್ವಾರದಲ್ಲಿ ತುಳಸಿ ಮತ್ತು ಬಾಳೆ ಗಿಡಗಳನ್ನು ಕ್ರಮವಾಗಿ ಎಡ ಮತ್ತು ಬಲಭಾಗದಲ್ಲಿ ನೆಟ್ಟರೆ ಒಳ್ಳೆಯದು.
3. ಗೊರಟಿ ಸಸ್ಯ
ಗೊರಟಿ ಹೂವನ್ನು ಪುರಾಣಗಳಲ್ಲಿ ಶಿವನ ದಾನ ಎಂದು ಉಲ್ಲೇಖಿಸಲಾಗಿದೆ. ನಂಬಿಕೆಗಳ ಪ್ರಕಾರ ಶಿವನು ಅದರೊಳಗೆ ವಾಸಿಸುತ್ತಾನಂತೆ. ಹೀಗಾಗಿ ಶಿವನ ಪೂಜೆಯ ಸಂದರ್ಭದಲ್ಲಿ ಗೊರಟಿ ಹೂವನ್ನು ಬಳಸೋದ್ರಿಂದ ಒಳ್ಳೆಯದಾಗುತ್ತದೆ. ಇನ್ನೂ ಶ್ರಾವಣ ತಿಂಗಳಿನಲ್ಲಿ ಗೊರಟಿ ಸಸ್ಯವನ್ನು ಮನೆಯಲ್ಲಿ ನೆಟ್ಟರೆ ಒಳ್ಳೆಯದು ಇದರಿಂದ ಮನೆಯಲ್ಲಿ ಸುಖ, ಸಮೃದ್ಧಿಯ ಜೊತೆಗೆ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗುತ್ತಂತೆ.
4. ಕಾಡು ಸಂಪಿಗೆ
ಕಾಡು ಸಂಪಿಗೆ ಹೂವಿನ ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಹಳ್ಳಿಗಳಲ್ಲಿ ಹೆಚ್ಚಾಗಿ ಇವುಗಳು ಕಂಡು ಬರುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಕಾಡು ಸಂಪಿಗೆ ಸಸ್ಯ ಮನೆಯಲ್ಲಿದ್ದರೆ ಒಳ್ಳೆಯದಾಗುತ್ತಂತೆ. ಯಾಕಂದ್ರೆ ಇದನ್ನು ಅದೃಷ್ಟದ ಸಂಕೇತ ಅಂತ ಹೇಳಲಾಗುತ್ತದೆ. ಇನ್ನೂ ಮನೆಯಲ್ಲಿ ಇದನ್ನು ವಾಯುವ್ಯ ದಿಕ್ಕಿಗೆ ನೆಟ್ಟರೆ ಒಳ್ಳೆಯದು.
5. ಶಮಿ ಗಿಡ
ವಾಸ್ತು ಶಾಸ್ತ್ರದ ಪ್ರಕಾರ ಶಮಿ ಸಸ್ಯ ಮನೆಯಲ್ಲಿ ಇದ್ದರೆ ತುಂಬಾನೇ ಒಳ್ಳೆಯದು. ಇದರಿಂದ ಮನೆ ಮಂದಿಗೆಲ್ಲಾ ಒಳ್ಳೆಯದಾಗುತ್ತಂತೆ. ಶಮಿ ಸಸ್ಯವನ್ನು ಪೂಜೆ ಮಾಡೋದ್ರಿಂದ ಶನಿ ದೇವನ ಆಶೀರ್ವಾದ ಪಡೆಯಲು ಸಾಧ್ಯವಾಗುತ್ತದೆ. ಇದ್ರ ಜೊತೆಗೆ ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತಂತೆ.
ಶ್ರಾವಣ ಮಾಸದಲ್ಲಿ ಈ ಐದು ಸಸ್ಯಗಳನ್ನು ಮನೆಗೆ ತಂದರೆ ತುಂಬಾನೇ ಒಳ್ಳೆಯದಾಗುತ್ತದೆ. ಇನ್ನೂ ಈ ಸಸ್ಯಗಳನ್ನು ನೆಡುವಾಗ ಜಾಗರೂಕತೆ ವಹಿಸಬೇಕು. ಯಾವ ದಿಕ್ಕಿನಲ್ಲಿ ನೆಟ್ಟರೆ ಒಳ್ಳೆಯದಾಗುತ್ತೆ ಎಂದು ವಾಸ್ತು ತಜ್ಞರ ಹತ್ತಿರ ಕೇಳಿ ಮಾಹಿತಿಯನ್ನು ಪಡೆದುಕೊಳ್ಳಿ.



Click it and Unblock the Notifications


