Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸೆಪ್ಟೆಂಬರ್ ಮಾಸದಲ್ಲಿ ಬರುವ ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ
12 ತಿಂಗಳಿನಲ್ಲಿ 9ನೆ ತಿಂಗಳು ಸೆಪ್ಟೆಂಬರ್ ಮಾಸ, ಈ ತಿಂಗಳಿನಲ್ಲಿ ಗೌರಿ ಗಣೇಶ ಹಬ್ಬ ಸೇರಿ ಹಲವು ವಿಶೇಷ ದಿನಗಳಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬರುವ ಹಬ್ಬಗಳು, ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:

ಸೆಪ್ಟೆಂಬರ್ ಮಾಸದಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು
ಸೆಪ್ಟೆಂಬರ್ 1 ಮಾಸಿಕ ಶಿವರಾತ್ರಿ
ಸೆಪ್ಟೆಂಬರ್ 2 ಸೋಮಾವತಿ ಅಮವಾಸ್ಯೆ
ಸೆಪ್ಟೆಂಬರ್ 5 ವರಹಾ ಜಯಂತಿ, ಶಿಕ್ಷಕರ ದಿನ
ಸೆಪ್ಟೆಂಬರ್ 7 ಗಣೇಶ ಚತುರ್ಥಿ
ಸೆಪ್ಟೆಂಬರ್ 8 ರಿಷಿ ಪಂಚಮಿ
ಸೆಪ್ಟೆಂಬರ್ 9 ರಾಧಾಷ್ಟಮಿ
ಸೆಪ್ಟೆಂಬರ್ 15 ಪ್ರದೋಷ ವ್ರತ, ಓಣಂ
ಸೆಪ್ಟೆಂಬರ್ 16 ವಿಶ್ವಕರ್ಮ ಜಯಂತಿ
ಸೆಪ್ಟೆಂಬರ್ 18 ಪಿತೃಪಕ್ಷ ಶ್ರಾದ್ಧ , ಹುಣ್ಣಿಮೆ
ಸೆಪ್ಟೆಂಬರ್ 20 ಸಂಕಷ್ಠಿ ಚತುರ್ಥಿ
ಸೆಪ್ಟೆಂಬರ್ 23 ರೋಹಿಣಿ ವ್ರತ
ಸೆಪ್ಟೆಂಬರ್ 27 ವಿಶ್ವ ಟೂರಿಸಂ ದಿನ
ಸೆಪ್ಟೆಂಬರ್ 29 ಪ್ರದೋಷ ವ್ರತ
ಸೆಪ್ಟೆಂಬರ್ 30 ಮಾಸಿಕ ಶಿವರಾತ್ರಿ
ಮಾಸಿಕ ಶಿವರಾತ್ರಿ
ಶಿವನ ಆರಾಧನೆಗೆ ವಿಶೇಷವಾದ ದಿನ , ಮಾಸಿಕ ಶಿವರಾತ್ರಿಯ ಮಾರನೇಯ ದಿನ ಪ್ರದೋಷ ವ್ರತ ಆಚರಿಸಲಾಗುವುದು.
ಶ್ರಾವಣ ಅಮವಾಸ್ಯೆ, ಸೋಮಾವತಿ ಅಮವಾಸ್ಯೆ
ಶ್ರಾವಣ ಅಮವಾಸ್ಯೆಯಂದು ಈ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು ಎಂದು ಹೇಳಲಾಗುವುದು
ಈ ದಿನ ಪಿತೃತರ್ಪಣ ನೀಡುತ್ತಾರೆ
ಈ ದಿನ ದಾನ ಮಾಡಿದರೆ ತುಂಬಾ ಒಳ್ಳೆಯದೆಂದು ಹೇಳಲಾಗುವುದು
ಚಂದ್ರದೋಷವಿರುವವರು ಈ ದಿನ ಹಸುವಿಗೆ ಹಿಟ್ಟು ತಿನಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಈ ದಿನ ತುಳಸಿ ಪೂಜೆ ಮಾಡಿದರೆ ಒಳ್ಳೆಯದು
ಅರಳಿ ಕಟ್ಟೆಗೆ ಪೂಜೆ ಸಲ್ಲಿಸಿದರೆ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಶಿಕ್ಷಕರ ದಿನಾಚರಣೆ
ನಮ್ಮೆಲ್ಲರ ಬದುಕಿನಲ್ಲಿ ಗುರು ಇದ್ದೇ ಇರುತ್ತಾರೆ, ಬದುಕಿಗೆ ದಾರಿ ದೀಪವಾಗಿರುತ್ತಾರೆ ಅಂಥ ಗುರುವನ್ನು ಸ್ಮರಿಸುವ ದಿನ, ನಮ್ಮ ದೇಶದ ಮೊದಲ ಉಪ ರಾಷ್ಟ್ರಪತಿ, ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಅಚರಿಸಲಾಗುವುದು.
ಗಣೇಶ ಚತುರ್ಥಿ
ಸಡಗರ-ಸಂಭ್ರಮದ ಹಬ್ಬವನ್ನು ಸೆಪ್ಟೆಂಬರ್ 7ರಂದು ಆಚರಿಸಲಾಗುವುದು. ದೇಶದೆಲ್ಲಡೆ ಸಂಭ್ರಮ-ಸಡಗರದಿಂದ ಆಚರಿಸಲಾಗುವುದು.
ಪಿತೃಪಕ್ಷ:ಸೆಪ್ಟೆಂಬರ್ 18ರಿಂದ ಅಕ್ಟೋಬರ್ 2ರವರೆಗೆ ಪಿತೃಪಕ್ಷವಿದೆ, ಈ ಅವಧಿಯಲ್ಲಿ ಪಿತೃ ತರ್ಪಣ ನೀಡಲಾಗುವುದು. ಪಿತೃದೋಷದಿಂದ ಮುಕ್ತರಾಗಲು ಈ ಅವಧಿ ತುಂಬಾ ಶ್ರೇಷ್ಠಕರ ಎಂದು ಹೇಳಲಾಗುವುದು.



Click it and Unblock the Notifications
