Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ರಾವಣ ಮಾಸ 2023 : ನಿಮ್ಮ ರಾಶಿಯ ಪ್ರಕಾರ ಶಿವನಿಗೆ ಈ ರೀತಿ ಅಭಿಷೇಕ ಮಾಡಬೇಕು!
ಶ್ರಾವಣದಲ್ಲಿ ಶಿವನನ್ನು ಕುರಿತು ಪೂಜೆ ಮಾಡುವಾಗ ಅಭಿಷೇಕ್ಕಕೂ ಕೂಡ ತುಂಬಾನೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಅದ್ರಲ್ಲೂ ಈ ವರ್ಷ ಅಧಿಕ ಮಾಸ ಆಗಿರೋದ್ರಿಂದ ಶ್ರಾವಣ ತಿಂಗಳಿನಲ್ಲಿ ಹೆಚ್ಚು ದಿನಗಳಿರುತ್ತದೆ. ಹೀಗಾಗಿ ನಿಮ್ಮೆಲ್ಲಾ ಇಷ್ಟಾರ್ಥ ಸಿದ್ಧಿಗಾಗಿ ಬೋಲೆನಾಥ ಹಾಗೂ ಮಾತೆ ಪಾರ್ವತಿಯ ಸ್ಮರಣೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ.
ಶ್ರಾವಣ ಮಾಸದಲ್ಲಿ ಮಾಡುವ ಪರಿಹಾರ ಬಹಳ ವಿಶೇಷವಾಗಿದೆ. ಅದ್ರಲ್ಲೂ ನಿಮ್ಮ ರಾಶಿಯ ಪ್ರಕಾರ ಶಿವನನ್ನು ಪೂಜಿಸಿದರೆ ತುಂಬಾನೇ ಒಳ್ಳೆಯದಾಗುತ್ತದೆ. ಅದ್ರಲ್ಲೂ ಶಿವನಿಗೆ ಅಭಿಷೇಕ ಮಾಡುವಾಗ ನಮ್ಮ ರಾಶಿಯ ಪ್ರಕಾರ ಕೆಲವೊಂದು ಸಾಮಾಗ್ರಿಗಳನ್ನು ಬಳಸಬೇಕಾಗುತ್ತದೆ. ಇದರಿಂದ ನಮ್ಮ ಬಾಳಿನಲ್ಲಿ ಸಂತೋಷ ಹಾಗೂ ಸಮೃದ್ಧಿ ತುಂಬಿರುತ್ತಂತೆ. ಅಷ್ಟಕ್ಕು ರಾಶಿಯ ಪ್ರಕಾರ ಶಿವನಿಗೆ ಯಾವ ರೀತಿ ಅಭಿಷೇಕ ಮಾಡಬೇಕು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಶ್ರಾವಣ ಮಾಸದಲ್ಲಿ ಶಿವನ ಅಭಿಷೇಕಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡಲಾಗುತ್ತದೆ. ಮೇಷ ರಾಶಿಯವರು ಈ ಸಂದರ್ಭದಲ್ಲಿ ಬಿಲ್ವಪತ್ರೆ ಎಲೆಯ ಮೇಲೆ ಬಿಳಿ ಚಂದನದಿಂದ ರಾಮನ ಹೆಸರನ್ನು ಬರೆದು ಶಿವಲಿಂಗದ ಮೇಲೆ ಅರ್ಪಿಸಬೇಕು. ಇದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರ ಮೇಲೆ ಶಿವನ ವಿಶೇಷ ಅನುಗ್ರಹವಿರುತ್ತಂತೆ. ಒಂದು ವೇಳೆ ನೀವು ಶಿವನ ಆಶೀರ್ವಾದವನ್ನು ಪಡೆಯಬೇಕೆಂದರೆ ಶ್ರಾವಣ ಮಾಸದಲ್ಲಿ ಈ ರೀತಿ ಶಿವನನ್ನು ಕುರಿತು ಅಭಿಷೇಕವನ್ನು ಮಾಡಿ. ವೃಷಭ ರಾಶಿಯವರು ಶ್ರಾವಣ ಮಾಸದಲ್ಲಿ ಅಭಿಷೇಕ ಮಾಡುವಾಗ ಹಾಲು ಮತ್ತು ಮೊಸರನ್ನು ಹಾಕಿ ಅಭಿಷೇಕ ಮಾಡೋದ್ರಿಂದ ಮಂಗಳಕರ ಅಂತ ಹೇಳಲಾಗುತ್ತದೆ.
ಮಿಥುನ ರಾಶಿ
ಶ್ರಾವಣ ಮಾಸದಲ್ಲಿ ಶಿವನ ವಿಶೇಷ ಅನುಗ್ರಹವನ್ನು ಪಡೆಯಲು ಅಭಿಷೇಕ ಮಾಡುವಾಗ ಈ ವಿಧಾನವನ್ನು ಅನುಸರಿಸಿ. ಶ್ರಾವಣ ಮಾಸದಲ್ಲಿ ಶಿವನಿಗೆ ಅಭಿಷೇಕ ಮಾಡುವಾಗ ಕಬ್ಬಿನ ರಸ ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡಿದರೆ ವಿಶೇಷ ಲಾಭವನ್ನು ಪಡೆಯುತ್ತಾರಂತೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಕೂಡ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ಶಿವನಿಗೆ ಮೊಸರು, ತುಪ್ಪ, ಗಂಗಾಜಲ ಮತ್ತು ಕಲ್ಲು ಸಕ್ಕರೆಯಿಂದ ಶಿವನಿಗೆ ಅಭಿಷೇಕ ಮಾಡಿದರೆ ಶುಭವಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರ ಬಾಳಿನಲ್ಲಿ ಇಷ್ಟು ದಿನ ಅಡ್ಡಿಯಾಗಿದ್ದ ಕೆಲಸಗಳೆಲ್ಲಾ ಯಾವುದೇ ಅಡ್ಡಿ-ಆತಂಕಗಳಿಲ್ಲದೇ ನೆರವೇರಬೇಕೆಂದರೆ ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಅಭಿಷೇಕ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಿಂಹ ರಾಶಿಯವರು ನೀರಿನಲ್ಲಿ ಬೆಲ್ಲವನ್ನು ಬೆರೆಸಿ ಅಭಿಷೇಕ ಮಾಡಬಹುದು ಮತ್ತು ದೇಸಿ ತುಪ್ಪದಿಂದ ಅಭಿಷೇಕ ಮಾಡಿದರೆ ಉತ್ತಮವಾಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಏನಾದರೂ ಹೊಸ ಯೋಜನೆಯನ್ನು ಮಾಡೋದಕ್ಕೆ ಇಚ್ಚಿಸಿದ್ದರೆ ಅದು ಯಾವುದೇ ಸಮಸ್ಯೆ ಇಲ್ಲದೆ ನೆರವೇರಬೇಕೆಂದರೆ ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷ ಪೂಜೆ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕು ಶಿವನಿಗೆ ಅಭಿಷೇಕ ಮಾಡುವಾಗ ಹಾಲು, ಜೇನು, ಬೇಲ್ಪಪತ್ರೆ, ಗೊರಟಿ ಹೂವನ್ನು ಅರ್ಪಣೆ ಮಾಡಿದರೆ ಶುಭವಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ಇಷ್ಟು ದಿನಗಳ ಕಾಲ ಯಾವುದೇ ಒಂದು ವಿಚಾರಕ್ಕಾಗಿ ಮನಸ್ಸಿನಲ್ಲೇ ಒಂದು ವಿಚಾರವನ್ನು ಇಟ್ಟುಕೊಂಡು ಕೊರಗುತ್ತಿರಬಹುದು. ನಿಮ್ಮೆಲ್ಲಾ ನೋವುಗಳು ನಿವಾರಣೆ ಆಗಬೇಕೆಂದರೆ ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಮೊಸರು, ಸುಗಂಧ ದ್ರವ್ಯ ಮತ್ತು ಕಬ್ಬಿನ ರಸದಿಂದ ಅಭಿಷೇಕ ಮಾಡಿದರೆ. ನಿಮ್ಮ ಮಾನಸ್ಸಿನ ನೋವು ಪರಿಹಾರವಾಗುತ್ತಂತೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಶಿವನಿಗೆ ಅಭಿಷೇಕ ಮಾಡುವಾಗ ಕಲ್ಲುಸಕ್ಕರೆ, ಜೇನುತುಪ್ಪ, ಕೆಂಪುಚಂದನದಿಂದ ಅಭಿಷೇಕ ಮಾಡಿದರೆ ಒಳ್ಳೆಯದಾಗುತ್ತಂತೆ. ನಿಮ್ಮ ಮನಸ್ಸಿನಲ್ಲಿ ತುಂಬಾ ದಿನಗಳಿಂದ ಕಾಡುತ್ತಿದ್ದ ನೋವುಗಳು ಪರಿಹಾರವಾಗಬೇಕೆಂದರೆ ಈ ರೀತಿ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತಂತೆ.
ಧನು ರಾಶಿ
ಶ್ರಾವಣ ಮಾಸದಲ್ಲಿ ಧನುರಾಶಿಯವರು ಶಿವಲಿಂಗಕ್ಕೆ ಅಭಿಷೇಕ ಮಾಡುವಾಗ ಕುಂಕುಮ ಹಾಗೂ ಚಂದನವನ್ನು ಅರ್ಪಿಸಿದರೆ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಹಳದಿ ಹೂವುಗಳನ್ನು ಅರ್ಪಿಸಿ. ಇದರಿಂದ ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತದೆ.
ಮಕರ ರಾಶಿ
ಮಕರ ರಾಶಿಯವರು ಶ್ರಾವಣ ಮಾಸದಲ್ಲಿ ಶಿವನಿಗೆ ಅಭಿಷೇಕ ಮಾಡುವಾಗ ತೆಂಗಿನಕಾಯಿ ನೀರಿನಿಂದ ಅಭಿಷೇಕ ಮಾಡಿ. ಇದರ ಜೊತೆಗೆ ಕೆಂಪು, ಗುಲಾಬಿ ಹಾಗೂ ನೀಲಿ ಹೂವುಗಳನ್ನು ಅರ್ಪಣೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರು ಶ್ರಾವಣ ಮಾಸದಲ್ಲಿ ಎಳ್ಳಿನ ಎಣ್ಣೆಯಿಂದ ಶಿವನ ಅಭಿಷೇಕ ಮಾಡಿದರೆ ಮಂಗಳಕರ ಮತ್ತು ಫಲದಾಯಕವೆಂದು ಪರಿಗಣಿಸಲಾಗುತ್ತದೆ. ಇದಾದ ಬಳಿಕ ತೆಂಗಿನಕಾಯಿ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿ. ಇದರಿಂದ ನಿಮ್ಮ ಮನಸ್ಸಿನ ಆಸೆಗಳೆಲ್ಲಾ ಈಡೇರುತ್ತದೆ.
ಮೀನ ರಾಶಿ
ಈ ಶ್ರಾವಣ ಮಾಸದಲ್ಲಿ ಶಿವನ ಅನುಗ್ರಹ ಪಡೆಯಲು ಮೀನ ರಾಶಿಯವರು ವಿಶೇಷ ಪೂಜೆಯನ್ನು ಸಲ್ಲಿಸಬೇಕಾಗುತ್ತದೆ. ಮೊದಲಿಗೆ ಹಾಲಿನಲ್ಲಿ ಕುಂಕುಮವನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ, ನಂತರ ಹಳದಿ ಶ್ರೀಗಂಧದ ತಿಲಕವನ್ನು ಹಚ್ಚಿ ಮತ್ತು ಹಳದಿ ಹೂವುಗಳು ಮತ್ತು ಹಣ್ಣುಗಳನ್ನು ಅರ್ಪಿಸಿ.



Click it and Unblock the Notifications

