Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಕರಿಯ 2, ಗಣಪ ಖ್ಯಾತಿಯ ಸಂತೋಷ್ ಬಾಲ್‌ರಾಜ್ ನಿಧನ: ಜೀವಕ್ಕೆ ಕುತ್ತು ತಂದಿತ್ತು ಜಾಂಡೀಸ್!
ಸ್ಯಾಂಡಲ್‌ವುಡ್ ನಟ ಸಂತೋಷ್ ಬಾಲರಾಜ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗಣಪ, ಕರಿಯ 2 ಸಿನಿಮಾಗಳಿಂದ ಹೆಚ್ಚು ಫೇಮಸ್ ಆಗಿದ್ದ ಅವರು ತಮ್ಮ 38ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿಸ್ದಾರೆ.
ಹಿರಿಯ ನಿರ್ಮಾಪಕ ಆನೆಕಲ್ ಬಾಲ್ ರಾಜ್ ಅವರ ಪುತ್ರ ಸಂತೋಷ ಬಾಲರಾಜ್ ಆಗಿದ್ದು, ಬೆಳಗ್ಗೆ 9.45ರ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದಷ್ಟೆ ಬನಶಂಕರಿಯ ಸಾಗರ್ ಅಪೋಲೊ ಆಸ್ಪತ್ರೆಗೆ ಅವರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಸತತ ಚಿಕಿತ್ಸೆಯ ಬಳಿಕವೂ ಅವರು ಬದುಕುಳಿಯಲಿಲ್ಲ. ಅವರಿಗೆ ಜಾಂಡೀಸ್ ತೀವ್ರ ರೂಪಕ್ಕೆ ತಿರುಗಿತ್ತು ಎಂದು ತಿಳಿದುಬಂದಿದೆ. ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದರು. ಹಾಗೆ ಜಾಂಡೀಸ್ ಇಡೀ ದೇಹ ಆವರಿಸಿತ್ತು. ಇದರಿಂದ ಯಕೃತ್ತು ಹಾಗೂ ಕಿಡ್ನಿಯ ವೈಫಲ್ಯ ಸಹ ಕಾಡಿತ್ತು, ಹೀಗಾಗಿ ಜಾಂಡೀಸ್ ಚಿಕಿತ್ಸೆ ಯಶಸ್ವಿಯಾಗಲಿಲ್ಲ.
ಕೆಂಪ ಎಂಬ ಸಿನಿಮಾ ಮೂಲಕ ಸಂತೋಷ್ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡರು. ಜನ್ಮ, ಕರಿಯ 2, ಗಣಪ ಚಿತ್ರಗಳು ಗಮನ ಸೆಳೆದಿದ್ದವು. ದರ್ಶನ್ ಅಭಿನಯದ ಕರಿಯ ಚಿತ್ರವನ್ನು ಸಂತೋಷ್ ಅವರ ತಂದೆಯೇ ನಿರ್ಮಾಣ ಮಾಡಿದ್ದರು. ಹಾಗೆ ಸಂತೋಷ್ ನಟನೆಯ ಬರ್ಕ್ಲಿ ಮತ್ತು ಸತ್ಯಂ ಸಿನಿಮಾಗಳು ಇನ್ನು ಬಿಡುಗಡೆಯಾಗಬೇಕಿದೆ.
ಜಾಂಡೀಸ್‌ನಿಂದ ನಟ ಕೊನೆಯುಸಿರು
ನಟ ಸಂತೋಷ್ ಈ ಮೊದಲು ಕೂಡ ಜಾಂಡೀಸ್‌ಗೆ ತುತ್ತಾಗಿದ್ದರಂತೆ. ಆದ್ರೆ ಈ ಬಾರಿ ಅವರು ಆಸ್ಪತ್ರೆಗೆ ದಾಖಲಾದಾಗ ಅನಾರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ತೀವ್ರ ನಿಗಾ ಘಟಕದಲ್ಲಿ ಎರಡು ದಿನಗಳಿಂದ ಚಿಕಿತ್ಸೆ ಪಡೆದರೂ ಯಾವುದೇ ಚೇತರಿಕೆ ಕಾಣಿಸಿರಲಿಲ್ಲ. ಸಂತೋಷ್ ಬಾಲರಾಜ್ ಯಕೃತ್ತು ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಹಾಗೆ ಕೋಮಾಗೂ ಜಾರಿದ್ದರು ಎಂದು ಹೇಳಲಾಗುತ್ತಿದೆ. ತಾಯಿಯೊಂದಿಗೆ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಆದ್ರೆ ಪುತ್ರನ ಕಳೆದುಕೊಂಡ ಕುಟುಂಬ ಈಗ ಕಣ್ಣೀರಲ್ಲಿ ಮುಳುಗಿದೆ.
ಜಾಂಡೀಸ್ ಎಷ್ಟು ಅಪಾಯಕಾರಿ?
ಸಾಮಾನ್ಯವಾಗಿ ಜನರು ಜಾಂಡೀಸ್ ಅನ್ನು ಗುಣ ಪಡಿಸಬಹುದಾದ ಸಾಮಾನ್ಯ ಕಾಯಿಲೆ ಎಂದು ಭಾವಿಸುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆಗೊಳಗಾದೆ ಇದ್ದರೆ ಇದು ಪ್ರಾಣಕ್ಕೆ ಅಪಾಯ ತರುವುದು ಖಚಿತ. ಹೀಗಾಗಿ ಮಕ್ಕಳಲ್ಲಿ ಜಾಂಡೀಸ್ ಕಾಣಿಸಕೊಂಡಾಗ ತಕ್ಷಣ ವೈದ್ಯರ ಭೇಟಿ ಮಾಡುವುದು ಉತ್ತಮ.
ಈ ಜಾಂಡೀಸ್ ಯಕೃತ್ ಪಿತ್ತಕೋಶ ಅಥವಾ ಮೇದೋಜೀರಕ ಅಂಗ ಸೇರಿದಂತೆ ಹಲವು ಅಂಗಗಳ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಪಿತ್ತಕೋಶವು ಪಿತ್ತರಸವನ್ನು ಸ್ರವಿಸಲು ಅಡ್ಡಿಯಾಗುವ ಒಂದು ಪ್ರಕ್ರಿಯೆ ಇದಾಗಿದೆ. ಈ ಪ್ರಕ್ರಿಯೆಯಲ್ಲಿ ಯಕೃತ್ ಬಿಲಿರುಬಿನ್ ಎಂಬ ರಾಸಾಯನಿಕವನ್ನು ಅಗತ್ಯವಿಲ್ಲದಿದ್ರೂ ಉತ್ಪಾದಿಸುವ ಸ್ಥಿತಿಯಾಗಿದೆ. ಇದರಿಂದ ಅಂಗಾಂಗಗಳು ತಮ್ಮ ಕ್ರಿಯೆಯಲ್ಲಿ ಅಡ್ಡಿಯಾಗುತ್ತದೆ. ಈ ರಾಸಾಯನಿಕ ರಕ್ತದೊಂದಿಗೆ ಬೆರೆತು ದೇಹದ ಎಲ್ಲಾ ಅಂಗವನ್ನು ತಲುಪುತ್ತವೆ. ಹೀಗಾಗಿ ಜಾಂಡೀಸ್ ಬಂದಾಗ ಚರ್ಮದಿಂದ ಹಿಡಿದು ಕಣ್ಣುಗಳು ಕೂಡ ಹಳದಿ ಬಣ್ಣಕ್ಕೆ ತಿರುಗಿರುತ್ತವೆ.
ಯಕೃತ್‍ಗೆ ಎದುರಾಗುವ ವೈರಸ್‌ಗಳಿಂದಲೂ ಈ ಜಾಂಡೀಸ್ ಉಂಟಾಗಬಹುದು. ಮುಖ್ಯವಾಗಿ ಹೆಪಟೈಟಿಸ್ ಬಿ, ಸಿ, ಡಿ ಈ ಸಮಸ್ಯೆಗೆ ಮುಖ್ಯ ಕಾರಣ ಆಗಬಹುದು. ಇತ್ತೀಚಿನ ಅಧ್ಯಯನದ ಪ್ರಕಾರ ಹೆಪಟೈಟಿಸ್ ಡಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಲಿದೆ ಎಂದು ತಿಳಿದುಬಂದಿದೆ. ಜಾಂಡೀಸ್‌ನಲ್ಲೂ ಕೂಡ ಹಂತಗಳಿರುವುದು ನೋಡಬಹುದು. ಹೀಗಾಗಿ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ.



Click it and Unblock the Notifications
