Latest Updates
-
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಕಾಳ್ಬೆರಳು ಹೇಳುತ್ತೆ ನೋಡಿ ನಿಮ್ಮ ಭವಿಷ್ಯ!
ಶಾಸ್ತ್ರ ನೋಡುವವರ ಬಳಿ ಸಾಮಾನ್ಯವಾಗಿ ಹೆಚ್ಚಿನವರು ಹೋಗುತ್ತಾರೆ. ಅವರು ವ್ಯಕ್ತಿಯ ಮುಖ, ಕೈ ನೋಡಿ ಮುಂದೆ ನಮ್ಮ ಭವಿಷ್ಯದಲ್ಲಿ ಏನಾಗಬಹುದು ಅನ್ನೋದ್ರ ಬಗ್ಗೆ ಹೇಳುತ್ತಾರೆ. ಅದೇ ರೀತಿ ಸಾಮುದ್ರಿಕ ಶಾಸ್ತ್ರವು ಕೂಡ ಒಂದು. ಇದ್ರಲ್ಲಿ ವ್ಯಕ್ತಿಯ ಮುಖ, ಮೆದುಳಿನ ರಚನೆ ಮತ್ತು ಕೈಯ ರೇಖೆಯನ್ನ ನೋಡಿ ಅವನ ಜೀವನದ ಅನೇಕ ರಹಸ್ಯಗಳನ್ನು ಬಿಚ್ಚಿಡಲಾಗುತ್ತದೆ.
ಸಾಮುದ್ರಿಕ ಜ್ಯೋತಿಷ್ಯದಲ್ಲಿ ಕಾಲಿನ ಪಾದ ಮತ್ತು ಕಾಳ್ಬೆರಳಿನ ವಿನ್ಯಾಸವನ್ನು ಗಮನಿಸುವುದರ ಮೂಲಕ ಒರ್ವ ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ಹೇಳಲಾಗುತ್ತಂತೆ. ಇಷ್ಟು ಮಾತ್ರವಲ್ಲದೆ ವ್ಯಕ್ತಿಯ ವೃತ್ತಿಜೀವನ ಹೇಗಿರುತ್ತದೆ, ಯಾವ ವಯಸ್ಸಿನಲ್ಲಿ ಯಶಸ್ವಿಯಾಗುತ್ತಾರೆ, ಆರ್ಥಿಕ ಪರಿಸ್ಥಿತಿ ಹೇಗಿರುತ್ತೆ ಎಂಬಿತ್ಯಾದಿ ಪ್ರಮುಖ ಅಂಶಗಳನ್ನು ಕಾಲ್ಬೆರಳುಗಳ ವಿನ್ಯಾಸವನ್ನು ನೋಡಿ ತಿಳಿಬಹುದಂತೆ. ಕಾಳ್ಬೆರಳಿನ ವಿನ್ಯಾಸದ ಕುರಿತು ಸಾಮುದ್ರಿಕ ಶಾಸ್ತ್ರ ಏನು ಹೇಳುತ್ತೆ ಅನ್ನೋದನ್ನು ತಿಳಿಯೋಣ.

* ಹೆಬ್ಬೆರಳು ಉದ್ದವಿರುವುದು
ಎಲ್ಲಾ ಬೆರಳುಗಳಿಗೆ ಹೋಲಿಕೆ ಮಾಡಿದಾಗ ಯಾರ ಹೆಬ್ಬೆರಳು ತುಂಬಾ ಉದ್ದ ಇರುತ್ತದೆಯೋ ಅವರ ಸ್ವಭಾವ ಎಲ್ಲರಿಗೂ ಇಷ್ಟವಾಗುವಂತೆ ಇರುತ್ತದೆ. ಇವರು ಆಡುವ ಮಾತೇ ತುಂಬಾನೇ ಮಧುರವಾಗಿರುತ್ತದೆ. ಇವರ ಮಾತನ್ನು ಕೇಳಿ ತುಂಬಾ ಜನ ಪ್ರಭಾವಿತರಾಗುತ್ತಾರಂತೆ. ಅಂತಹವರು ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರಂತೆ.
* ತೆಳ್ಳಗಿರುವ ಕಾಳ್ಬೆರಳು
ಕಾಲ್ಬೆರಳುಗಳು ತೆಳ್ಳಗಿರುವವರು ತುಂಬಾನೇ ಜಿಪುಣರಂತೆ. ಇವರು ಹಣವನ್ನು ಖರ್ಚು ಮಾಡುವ ಮೊದಲು ಅನೇಕ ಬಾರಿ ಯೋಚಿಸುತ್ತಾರೆ. ಅಲ್ಲದೆ, ಇವರು ತಮ್ಮ ಪ್ರತಿಯೊಂದು ಕೆಲಸವನ್ನು ತಾವು ಖುದ್ದಾಗಿ ಮಾಡೋದಿಲ್ಲ. ಬದಲಾಗಿ ಅದನ್ನು ಇತರರ ಮೇಲೆ ಹೇರೋದಕ್ಕೆ ಪ್ರಯತ್ನಿಸುತ್ತಾರಂತೆ.
* ಕಾಳ್ಬೆರಳು ಉದ್ದವಾಗಿ, ದುಂಡಾಗಿರುವುದು
ಯಾರ ಕಾಲ್ಬೆರಳು ಉದ್ದವಾಗಿದೆ ಮತ್ತು ಮೇಲಿನಿಂದ ದುಂಡಾಗಿರುತ್ತದೆಯೋ ಅಂತವರು ಹಣದ ವಿಚಾರದಲ್ಲಿ ತುಂಬಾನೇ ಅದೃಷ್ಟವಂತರು. ಇವರನ್ನು ಕುಬೇರರ ಮಕ್ಕಳು ಅಂತಾನೇ ಹೇಳಬಹುದು. ಲಕ್ಷ್ಮೀ ಇವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದರುತ್ತಾಳೆ. ಇಂತವರು 36 ರಿಂದ 42 ವರ್ಷ ವಯಸ್ಸಿನಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಎಂದು ನಂಬಲಾಗಿದೆ.
* ಕಾಳ್ಬೆರಳುಗಳ ನಡುವೆ ಹೆಚ್ಚಿನ ಅಂತರ ಇರುವುದು
ಕಾಲ್ಬೆರಳುಗಳ ನಡುವೆ ಹೆಚ್ಚು ಅಂತರವನ್ನು ಹೊಂದಿರುವವರು ಪ್ರತ್ಯೇಕತೆಯನ್ನು ತುಂಬಾನೇ ಇಷ್ಟ ಪಡುತ್ತಾರೆ. ಯಾರೊಂದಿಗೂ ಸೇರೋದಕ್ಕೆ ಇವರು ಇಷ್ಟ ಪಡೋದಿಲ್ಲ. ಯಾವಾಗಲೂ ಒಂಟಿಯಾಗಿರಲು ಇಷ್ಟಪಡುತ್ತಾರೆ. ಇಂತವರು ತಮ್ಮ ಕುಟುಂಬದೊಂದಿಗೆ ಹೆಚ್ಚು ಬೆರೆಯೋದಿಲ್ಲ.
* ದಪ್ಪವಾಗಿರುವ ಕಾಳ್ಬೆರಳು
ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಯಾರ ಕಾಲ್ಬೆರಳುಗಳು ಸಾಮಾನ್ಯಕ್ಕಿಂತ ಹೆಚ್ಚು ದಪ್ಪವಾಗಿರುತ್ತದೆಯೋ ಅವರು ತುಂಬಾನೇ ಸಂತೋಷವಾಗಿರುತ್ತಾರೆ. ಇಂತವರು ಸುಲಭವಾಗಿ ಯಾರನ್ನಾದರೂ ಮೆಚ್ಚಿಸುತ್ತಾರೆ. ಇಂತವರು ತಮ್ಮಿಂದಾಗಿ ಬೇರ್ಯಾರೂ ಯಾವುದೇ ಸಮಸ್ಯೆಯನ್ನು ಅನುಭವಿಸಬಾರದೆಂದು ಅವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.
ಹೆಬ್ಬೆರಳಿಗಿಂತ ಕಾಳ್ಬೆರಳು ಉದ್ದ ಇದ್ದಾಗ
ಯಾರ ಹೆಬ್ಬೆರಳು ಕಾಲ್ಬೆರಳುಗಳುಗಳಿಗಿಂತ ಉದ್ದ ಇರುತ್ತದೆಯೋ ಅವರು ತುಂಬಾನೇ ಪ್ರಭಾವಶಾಲಿ ವ್ಯಕ್ತಿತ್ವಗಳಾಗಿರುತ್ತಾರೆ. ಆದರೆ ಅವರಲ್ಲಿ ಒಂದು ಕೊರತೆ ಇರುತ್ತದೆ. ಅದೇನೆಂದರೆ ಅವರು ತಮ್ಮ ಮಾತಿನ ಮುಂದೆ ಇತರರ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಿಲ್ಲ.
ಸಾಮುದ್ರಿಕ ಶಾಸ್ತ್ರವು ಕಾಳ್ಬೆರಳನ್ನು ನೋಡಿ ಮನುಷ್ಯನ ಗುಣ ಇದೇ ರೀತಿ ಇರುತ್ತದೆ ಎಂದು ಹೇಳುತ್ತದೆ. ಆದರೆ ಹೆಚ್ಚಿನವರು ಇದನ್ನು ನಂಬೋದಿಲ್ಲ. ಅನೇಕರು ನಂಬುತ್ತಾರೆ. ಎಲ್ಲವೂ ಅವರವರ ಅಲೋಚನೆಗೆ ಬಿಟ್ಟಿದ್ದು.



Click it and Unblock the Notifications