Latest Updates
-
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ!
ಸಲಿಂಗ ಮದುವೆ ಕಾನೂನು ಕಾನೂನು ತರುವ ಹಕ್ಕಿರುವುದು ಶಾಸಕಾಂಗಕ್ಕೆ ಮಾತ್ರ, ಸುಪ್ರೀಂಕೋರ್ಟ್‌ಗಲ್ಲ ಎಂದ ಕೇಂದ್ರ
ಭಾರತದಲ್ಲಿ ಸಲಿಂಗ ಮದುವೆಯಾದ ಅನೇಕ ಉದಾಹರಣೆಗಳಿವೆ, ಆದರೆ ಈ ಸಲಿಂಗ ಮದುವೆಗೆ ಕಾನೂನಿನಲ್ಲಿ ಇನ್ನು ಮಾನ್ಯತೆ ಸಿಕ್ಕಿಲ್ಲ. ಸಲಿಂಗ ಮದುವೆಗೆ ಸಂಬಂಧಿಸಿದ ಕಾನೂನು ರೂಪಿಸುವುದು ಶಾಸಕಾಂಗದ ಕಾರ್ಯವಾಗಿದೆ, ಬದಲಿಗೆ ಸುಪ್ರೀಂಕೋರ್ಟ್‌ನ ಕಾರ್ಯವಲ್ಲ ಎಂದು ಕೇಂದ್ರವು ಹೇಳಿದೆ.

ಸೋಮವಾರ (ಏಪ್ರಿಲ್ 17ಕ್ಕೆ) ಕೇಂದ್ರವು ಸುಪ್ರೀಂಕೋರ್ಟ್‌ಗೆ ಹೊಸ ಅರ್ಜಿಯನ್ನು ಸಲ್ಲಿಸಿದ್ದು ಇದರಲ್ಲಿ ಸಲಿಂಗ ಮದುವೆಗೆ ಸಂಬಂಧಿಸಿದ ಕಾನೂನು ರೂಪಿಸುವುದು ಶಾಸಕಾಂಗದ ಕಾರ್ಯವಾಗಿದೆ ಎಂದು ಹೇಳಿದೆ. ಸುಪ್ರೀಂಕೋರ್ಟ್‌ನಲ್ಲಿ ಸಲಿಂಗ ಮದುವೆ ಕುರಿತ ವಿಚಾರಣೆಯನ್ನು ಏಪ್ರಿಲ್ 18ರಂದು ನಡೆಸುವ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಇದಕ್ಕೆ ಸಂಬಂಧಿಸಿದ ಕಾನೂನು ಶಾಸಕಾಂಗ ಸಭೆಯಲ್ಲಿ ನಿರ್ಣಯವಾಗಬೇಕು, ಸುಪ್ರೀಂಕೋರ್ಟ್‌ನಲ್ಲಿ ಮಾಡಲು ಹೇಗೆ ಸಾಧ್ಯ ಎಂಬುವುದಾಗಿ ಅರ್ಜಿಯಲ್ಲಿ ಕೇಳಲಾಗಿದೆ.
ಸಲಿಂಗ ಮದುವೆಗೆ ಮಾನ್ಯತೆ ನೀಡಬೇಕು ಎಂಬ ಕೂಗು ತುಂಬಾ ವರ್ಷಗಳಿಂದಲೇ ಕೇಳಿ ಬರುತ್ತಿದೆ. ಈ ಕುರಿತು ಹಲವಾರು ಜನರು ಅರ್ಜಿಯನ್ನು ಸಲ್ಲಿಸಿ ಸಲಿಂಗ ಮದುವೆಗೆ ಮಾನ್ಯತೆ ನೀಡುವಂತೆ ಕೋರಿದ್ದರು. ಈ ಅರ್ಜಿಯನ್ನು ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠಕ್ಕೆ ಸುಪ್ರೀಂ ಕೋರ್ಟ್ ಮಾರ್ಚ್‌ನಲ್ಲಿ ವಹಿಸಿಕೊಟ್ಟಿತ್ತು.
ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ. ಎಸ್ ನರಸಿಂಹ ಮತ್ತು ಜೆ.ಬಿ ಪಾರ್ದೀವಾಲಾ ಅವರನ್ನು ಒಳಗೊಂಡ ಪೀಠವು ಏಪ್ರಿಲ್ 18ಕ್ಕೆ ವಿಚಾರಣೆ ನಡೆಸಲಿದೆ. ಈ ಪ್ರಕರಣದ ವಿಚಾರಣೆ ಕೂಡ ನೇರ ಪ್ರಸಾರವಾಗಲಿದೆ.
ಸಲಿಂಗ ಮದುವೆ ಹಕ್ಕಿನ ವಿಚಾರವು ಸಂಪೂರ್ಣವಾಗಿ ಶಾಸಕಾಂಗ ವ್ಯಾಪ್ತಿಯದ್ದು
ಪ್ರೀತಿ, ಅಭಿವ್ಯಕ್ತಿ, ಆಯ್ಕೆ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬರಿಗೂ ಎಂದಿರುವ ಸುಪ್ರೀಂಕೋರ್ಟ್ ಈ ಹಕ್ಕುಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ಸಲಿಂಗ ಮದುವೆ ಹಕ್ಕಿನ ವಿಚಾರವು ಸಂಪೂರ್ಣವಾಗಿ ಶಾಸಕಾಂಗ ವ್ಯಾಪ್ತಿಯದ್ದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಂದ್ರದ ಸರ್ಕಾರದ ಪರವಾಗಿ ವಾದಿಸಿದ್ದರು.
ಸಲಿಂಗಿಗಳ ಮಗುವನ್ನು ದತ್ತು ಪಡೆಯುವುದ ಬಗ್ಗೆಯೂ ಯೋಚಿಸಬೇಕು
ಸಲಿಂಗ ಮದುವೆಯಲ್ಲಿ ಸಲಿಂಗಿಗಳು ಮಗುವನ್ನು ದತ್ತು ಪಡೆಯುವುದರ ವಿಚಾರವೂ ಒಳಗೊಂಡಿದೆ. ಸಲಿಂಗಿಗಳು ದತ್ತು ಪಡೆದ ಮಗುವಿನ ಮನಸ್ಥಿತಿ ಕುರಿತು ಕೂಡ ಪರಿಶೀಲನೆ ಮಾಡಬೇಕು, ಅಲ್ಲದೆ ಸಲಿಂಗಿಗಳು ಮಗುವನ್ನು ಬೆಳೆಸಬಹುದೇ ಎಂಬುವುದರ ಕುರಿತು ಕೂಡ ಚರ್ಚೆ ಆಗಬೇಕಾಗಿದೆ ಎಂದು ಮೆಹ್ತಾ ತಮ್ಮ ವಾದವನ್ನು ಮಂಡಿಸಿದ್ದರು.
ಸಲಿಂಗ ವ್ಯಕ್ತಿ ದತ್ತು ಪಡೆದ ಮಗು ಸಲಿಂಗಿ ಆಗುತ್ತದೆ ಎಂದೇನಿಲ್ಲ, ಅದು ಸಲಿಂಗಿ ಅಲ್ಲದೆಯೂ ಇರಬಹುದು ಎಂದು ನ್ಯಾಯಪೀಠವು ಹೇಳಿತ್ತು. ಸಲಿಂಗಿ ಎಂದು ಒಂದಯ ವರ್ಗದ ಮದುವೆಯನ್ನು ಮೊಟಕು ಮಾಡಬಾರದು. ಸಲಿಂಗ ವ್ಯಕ್ತಿಗೆ ವೈಯಕ್ತಿಕ ಕಾನೂನಿನ ಮೂಲಕ ಅವಕಾಶ ಮಾಡಿಕೊಡಬಹುದು ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ಮಾಡಿದ್ದರು.
ಇದೀಗ ನ್ಯಾಯಪೀಠವು ಈ ಕುರಿತು ಏಪ್ರಿಲ್ 18ಕ್ಕೆ ವಿಚಾರಣೆ ನಡೆಸಲಿದ್ದು ಇದೀಗ ಕೇಂದ್ರವು ಸಲಿಂಗಿ ಮದುವೆ ಬಗ್ಗೆ ಕಾನೂನು ರೂಪಿಸುವ ಹಕ್ಕು ಇರುವುದು ಶಾಸಕಾಂಗಕ್ಕೆ ಮಾತ್ರ ಎಂದು ಹೊಸ ಅರ್ಜಿಯನ್ನು ಸಲ್ಲಿಸುವ ಮೂಲಕ ಗಮನ ಸೆಳೆದಿದ್ದು ಈ ಹಿನ್ನೆಲೆಯಲ್ಲಿ ನಾಳೆ ಐವರು ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆಯು ತೀವ್ರ ಕುತೂಹಲ ಕೆರಳಿಸಿದೆ.



Click it and Unblock the Notifications