Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
'ನಟಿ ಸಮಂತಾಳ ಜೈಲು ಕಂಬಿ ಹಿಂದೆ ಹಾಕಿ' ವೈದ್ಯರಿಂದ ಆಕ್ರೋಶ..! ಏಕೆ ಗೊತ್ತಾ?
ಪಾನ್ ಇಂಡಿಯಾದಲ್ಲಿ ಸುದ್ದಿಯಾಗಿರುವ ನಟಿ ಸಮಂತಾ ತಮ್ಮ ವೈಯಕ್ತಿಕ ವಿಚಾರಗಳಿಗಾಗಿಯೇ ಯಾವಾಗಲು ಸುದ್ದಿಯಾಗುತ್ತಿರುತ್ತಾರೆ. ಈಗಲೂ ಸಹ ಗಂಭೀರ ವಿಚಾರವೊಂದಕ್ಕೆ ಈಗ ಸುದ್ದಿಯಾಗುತ್ತಿದ್ದು, ಜೈಲಿಗೆ ಹಾಕುವಂತೆ ವೈದ್ಯರೊಬ್ಬರು ಆಗ್ರಹಿಸಿದ್ದಾರೆ.
ಅಚ್ಚರಿಯಾದರು ಇಂತಹದೊಂದು ಇಲ್ಲದ ವಿವಾದಕ್ಕೆ ಸಮಂತ ಒಳಗಾಗಿದ್ದಾರೆ. ಅವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಒಂದೇ ಒಂದು ಫೋಟೋ ಈಗ ವಿವಾದ ಹುಟ್ಟುಹಾಕಿದೆ. ಹೌದು ಸಮಂತ ಪ್ರಭು ಆರೋಗ್ಯ ಸಂಬಂಧವಾಗಿ ಸಲಹೆ ನೀಡಿದ್ದ ಪೋಸ್ಟ್‌ಗೆ ವೈದ್ಯರು ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಹಾಗಾದ್ರೆ ಆ ಪೋಸ್ಟ್‌ನಲ್ಲಿ ಇರೋದೇನು? ಆಕೆ ಮೇಲೆ ವೈದ್ಯರು ಉರಿದು ಬೀಳುತ್ತಿರೋದ್ಯಾಕೆ ಅನ್ನೋದನ್ನ ಹೇಳುತ್ತೇವೆ ಕೇಳಿ. ನಟಿ ಸಮಂತಾ ರುತ್ ಪ್ರಭು ಅವರು ವೈರಲ್ ಸೋಂಕಿಗೆ ಚಿಕಿತ್ಸೆ ನೀಡಲು ಹೈಡ್ರೋಜನ್ ಪೆರಾಕ್ಸೈಡ್ ನೆಬ್ಯುಲೈಸೇಶನ್ ಅನ್ನು ಶಿಫಾರಸು ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ ಈ ಪೋಸ್ಟ್ ವೈದ್ಯರ ಕಣ್ಣು ಕೆಂಪಗಾಗಿಸಿದೆ.
ಡಾ ಸಿರಿಯಾಕ್ ಅಬ್ಬಿ ಫಿಲಿಪ್ಸ್, ಈ ಕುರಿತು ಕೋಪಗೊಂಡಿದ್ದು, ಜನರ ದಾರಿ ತಪ್ಪಿಸಲು ಹಾಗೂ ಆರೋಗ್ಯ ಮತ್ತು ಔಷಧಿ ಕುರಿತು ಜವಾಬ್ದಾರಿಯುತ ಸ್ಥಾನದಲ್ಲಿರುವ ನಟಿ ಸಮಂತಾ ತಪ್ಪು ಸಂದೇಶ ಹರಡಿದ್ದಾರೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಏಕೆಂದರೆ ಯಾವುದೇ ಕಾರಣಕ್ಕೂ ಹೈಡ್ರೋಜನ್ ಪೆರಾಕ್ಸೈಡ್ ನೆಬ್ಯುಲೈಸೇಶನ್ ಜನರು ಬಳಸಬಾರದಂತೆ. ಇದು ಆರೋಗ್ಯ ಪ್ರಯೋಜನಗಳ ನೀಡುವ ಬದಲು ನಿಮ್ಮ ಆರೋಗ್ಯಕ್ಕೆ ಮತ್ತಷ್ಟು ಹಾನಿ ಮಾಡಲಿದೆಯಂತೆ. ಅದರಲ್ಲಿ ವೈರಲ್ ಕಾಯಿಲೆ ಅಥವಾ ಕೋವಿಡ್‌ಗೆ ಇದು ಔಷಧಿ ಅಲ್ಲವೇ ಅಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಈ ನೆಬ್ಯುಲೈಸೇಶನ್ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಈ ನಟಿ "ಆರೋಗ್ಯ ಮತ್ತು ಸೈನ್ಸ್‌ನ ಅನಕ್ಷರಸ್ಥೆ" ಎಂದು ಡಾ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಕರೆದಿದ್ದಾರೆ.
"ದುರದೃಷ್ಟವಶಾತ್, ಆರೋಗ್ಯ ಮತ್ತು ವಿಜ್ಞಾನ ಅನಕ್ಷರಸ್ಥರಾಗಿರುವ ಪ್ರಭಾವಿ ಭಾರತೀಯ ನಟಿ ಶ್ರೀಮತಿ ಸಮಂತಾ ರುತ್ ಪ್ರಭು ಅವರು ತಮ್ಮ ಲಕ್ಷಾಂತರ ಅನುಯಾಯಿಗಳಿಗೆ ಉಸಿರಾಟದ ವೈರಲ್ ಸೋಂಕನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸಿ ಉಸಿರಾಡುವಂತೆ ಸಲಹೆ ನೀಡುತ್ತಾರೆ" ಎಂದು ಸಿರಿಯಾಕ್ ಅಬ್ಬಿ ಫಿಲಿಪ್ಸ್ ಆಕ್ರೋಶ ಹೊರಹಾಕಿದ್ದಾರೆ.
ಹೈಡ್ರೋಜನ್ ಪೆರಾಕ್ಸೈಡ್ ನೆಬ್ಯುಲೈಸೇಶನ್ "ಆರೋಗ್ಯಕ್ಕೆ ಅಪಾಯಕಾರಿ" ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನಿಮ್ಮ ನೆಬ್ಯುಲೈಜರ್‌ಗೆ ಹಾಕಬೇಡಿ ಮತ್ತು ಅದನ್ನು ಉಸಿರಾಡಬೇಡಿ. ಇದು ಅಪಾಯಕಾರಿ. ಇದು ಕೋವಿಡ್ ಅನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಬಳಸುವ ಒಂದು ಔಷಧಿಯಲ್ಲ ಎಂದು ಹೇಳಿದ್ದಾರೆ.
ಇನ್ನೂ ಮುಂದುವರೆದ ವೈದ್ಯರು, ಸಾರ್ವಜನಿಕ ಆರೋಗ್ಯವನ್ನು ಅಪಾಯಕ್ಕೆ ತಳ್ಳಿದ್ದಕ್ಕಾಗಿ ನಟಿಗೆ "ದಂಡ ಅಥವಾ ಜೈಲು ಕಂಬಿ ಹಿಂದೆ ಹಾಕಬೇಕು" ಎಂದರು. 'ಭಾರತದ ಆರೋಗ್ಯ ಸಚಿವಾಲಯ ಅಥವಾ ಯಾವುದೇ ಆರೋಗ್ಯ ನಿಯಂತ್ರಕ ಸಂಸ್ಥೆಯು ಈ ಸಾಮಾಜಿಕ ಮಾಧ್ಯಮದ ಆರೋಗ್ಯ ಇನ್‌ಫ್ಲುಯೆಂಜಾಗಳು ಸಾರ್ವಜನಿಕ ಆರೋಗ್ಯವನ್ನು ಹಾನಿಗೊಳಿಸುವುದರ ಬಗ್ಗೆ ಏನಾದರೂ ಮಾಡುತ್ತವೆಯೇ ಅಥವಾ ಅವು ಬೆನ್ನುಮೂಳೆಯಿಲ್ಲದೆ ಉಳಿಯುತ್ತವೆಯೇ ಮತ್ತು ಜನರನ್ನು ಸಾಯಲು ಬಿಡುತ್ತವೆಯೇ?" ಎಂದು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ವೈದ್ಯರು ಬರೆದುಕೊಂಡಿದ್ದಾರೆ.
ನಟಿ ಸಮಂತಾ ಬರೆದುಕೊಂಡಿದ್ದೇನು?
ಸಮಂತಾ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ' ಸಾಮಾನ್ಯ ವೈರಲ್ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು, ಪರ್ಯಾಯ ವಿಧಾನವನ್ನು ಪ್ರಯತ್ನಿಸುವುದನ್ನು ಪರಿಗಣಿಸಿ. ಹೈಡ್ರೋಜನ್ ಪೆರಾಕ್ಸೈಡ್ ಮತ್ತು ನೆಬ್ಯುಲೈಸ್ ಮಾಡುವುದು ಒಂದು ಆಯ್ಕೆಯಾಗಿದೆ. ಇದು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ಅನಗತ್ಯ ಮಾತ್ರೆಗಳ ಬಳಕೆಯನ್ನು ತಪ್ಪಿಸಿ' ಎಂದು ಸಲಹೆ ನೀಡಿದ್ದರು.
ಆದ್ರೆ ಸಮಂತಾ ಹೇಳಿರುವಂತೆ ಈ ಹೈಡ್ರೋಜನ್ ಪೆರಾಕ್ಸೈಡ್ ಮೂಲಕ ಉಸಿರಾಟ ಪ್ರಕ್ರಿಯೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಹೀಗಾಗಿ ಅವರು ಸಾರ್ವಜನಿಕರಿಗೆ ಆರೋಗ್ಯದ ವಿಚಾರಚವಾಗಿ ತಪ್ಪು ಸಂದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.



Click it and Unblock the Notifications
