Latest Updates
-
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ!
ಬಾವುಟ ಹಿಡಿದು ಹಾಡುವಾಗ ಮಾಜಿ ಯೋಧ ಹೃದಯಾಘಾತದಿಂದ ನಿಧನ..! ಅಲ್ಲಿದ್ದವರಿಗೆ ತಿಳಿಯಲೇ ಇಲ್ಲ!
ಇತ್ತೀಚಿಗೆ ಈ ಹೃದಯಾಘಾತದಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಆರೋಗ್ಯವಂತರು ಸಹ ಏಕಾಏಕಿ ಕುಸಿದು ಬಿದ್ದು ಪ್ರಾಣ ಬಿಡುತ್ತಿರುವ ಘಟನೆಗಳು ಎಲ್ಲರಲ್ಲೂ ಆತಂಕ ಹುಟ್ಟಿಸುತ್ತಿವೆ. ಕೆಲವೇ ನಿಮಿಷದಲ್ಲಿ ಪ್ರಾಣ ತೆಗೆಯುವ ಈ ಹೃದಯಾಘಾತ ಪ್ರಕರಣ ಯಾವಾಗ ಯಾರಿಗೆ ಕಾಡುತ್ತಿದೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ.
ಇಲ್ಲೂ ಸಹ ಒಂದು ಘಟನೆಯಲ್ಲಿ ಭಾರತದ ತಿರಂಗ ಹಿಡಿದು ಕುಣಿಯುತ್ತಿದ್ದ ನಿವೃತ್ತ ಯೋಧ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಈ ದುರಂತ ಸಂಭವಿಸಿದೆ. ಯೋಗ ಶಿಬಿರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಯೋಧ, ಬಲ್ವಿಂದರ್ ಸಿಂಗ್ ಛಾಬ್ರಾ ಹೃದಯಾಘಾತಕ್ಕೆ ಒಳಗಾಗಿ ವೇದಿಕೆ ಮೇಲೆಯೇ ಕುಸಿದು ಬಿದ್ದು ಅಸು ನೀಗಿದ್ದಾರೆ.

ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮಾ ತುಜೆ ಸಲಾಂ ಹಾಡಿಗೆ ನೃತ್ಯ ಮಾಡುತ್ತಿದ್ದ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಆದರೆ ಅಲ್ಲಿ ಕುಳಿತಿದ್ದವರು ಇದು ಅವರ ನೃತ್ಯದ ಭಾಗವಾಗಿದೆ, ಮತ್ತೆ ಮೇಲೆ ಏಳುತ್ತಾರೆ ಎಂದು ಚಪ್ಪಾಳೆ ತಟ್ಟುವುದನ್ನು ಮುಂದುವರೆಸಿದ್ದು. ಆದರೆ ಕುಸಿದು ಬಿದ್ದ ಮಾಜಿ ಯೋಧ ತನ್ನ ಕೊನೆಯ ಉಸಿರನ್ನು ಎಳೆಯುತ್ತಿದ್ದ.
ಕುಸಿದು ಬಿದ್ದ ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು. ಆದರೆ ಎಲ್ಲರು ಅವರ ನೃತ್ಯದ ಭಾಗವಾಗಿ ಕುಸಿದು ಬಿದ್ದಿದ್ದಾರೆ ಎಂದು ಭಾವಿಸಿ ಚಪ್ಪಾಳೆ ಹೊಡೆಯುತ್ತಿದ್ದರು. ಆದರೆ ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಅವರು ಮೇಲೆ ಏಳದಿರುವುದ ಕಂಡು ಹತ್ತಿರ ಬಂದು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರಿಗೆ ಹೃದಯಾಘಾತವಾಗಿರುವುದು ಬೆಳಕಿಗೆ ಬಂದಿದೆ.
ನಗರದ ಫುಟಿ ಕೋಠಿ ಪ್ರದೇಶದ ಅಗ್ರಸೇನ್ ಧಾಮ್‌ನಲ್ಲಿ ಆಸ್ತಾ ಯೋಗ ಕ್ರಾಂತಿ ಅಭಿಯಾನ ಎಂಬ ತಂಡ ಆಯೋಜಿಸಿದ್ದ ಉಚಿತ ಯೋಗ ಶಿಬಿರದಲ್ಲಿ 'ಮಾ ತುಜೆ ಸಲಾಮ್' ಹಾಡಿಗೆ ಛಾಬ್ರಾ ನೃತ್ಯ ಮಾಡಿದ್ದರು. ಆದರೆ ಬಳಲಿದ್ದ ಅವು ಅಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಕಳಕಳಿಗೂ ಕಾಣವಾಗಿದೆ.
ಈ ವಿಡಿಯೋ ನೋಡಿದ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಮಾಜಿ ಯೋಧ ಕ್ಷಣದಲ್ಲಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ. ಕೆಲವರು ಅವರು ದೇಶ ಸೇವೆ ಮಾಡಿ, ದೇಶ ಭಕ್ತಿ ಗೀತೆ ಹಾಡುವಾಗಲೇ ಹುತಾತ್ಮರಾಗಿದ್ದಾರೆ ಎಂದು ಕಂಬನಿ ಮಿಡಿದಿದ್ದಾರೆ. ಒಂದು ನಿಮಿಷದಲ್ಲಿ ಅವರ ಪ್ರಾಣ ಹೋಗಿದ್ದ ಕಂಡು ಕೆಲವರು ಶಾಕ್‌ಗೆ ಒಳಗಾಗಿದ್ದಾರೆ. ಅದರಲ್ಲಿ ಒಬ್ಬರಾದರು ಅವರ ಸ್ಥಿತಿಯ ಕುರಿತು ಅರಿತುಕೊಂಡಿದ್ದರೆ ಅವರ ಜೀವ ಉಳಿಸಲು ಸಾಧ್ಯವಾಗುತ್ತಿತ್ತು ಎಂದಿದ್ದಾರೆ.
ಈ ರೀತಿ ದಿಢೀರ್ ಹೃದಯಾಘಾತದ ಲಕ್ಷಣ ಏನಾಗಿರಲಿದೆ?
ಹೃದಯಾಘಾತವು ಅನಿರೀಕ್ಷಿತ ಎದೆ ನೋವು ಮತ್ತು ಉಸಿರಾಟದ ತೊಂದರೆಗಳನ್ನು ಒಳಗೊಂಡಿರುತ್ತದೆ, ಆಗಾಗ್ಗೆ ಪರಿಶ್ರಮದಿಂದಲೂ ಉಂಟಾಗುತ್ತದೆ. ಆದಾಗ್ಯೂ, ಅನೇಕ ಹೃದಯಾಘಾತಗಳು ಆ ರೀತಿಯಲ್ಲಿ ಸಂಭವಿಸುವುದಿಲ್ಲ. ಹೃದಯಾಘಾತದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬಹಳವಾಗಿ ಬದಲಾಗುತ್ತವೆ. ಹೃದಯಾಘಾತವಾದರೆ ಎದೆಯಲ್ಲಿ ಒತ್ತಡ, ಬಿಗಿತ, ನೋವು, ಅಥವಾ ನಿಮ್ಮ ಎದೆ ಅಥವಾ ತೋಳುಗಳಲ್ಲಿ ಹಿಸುಕಿದಂತೆ ಅಥವಾ ನೋವಿನ ಸಂವೇದನೆಯು ನಿಮ್ಮ ಕುತ್ತಿಗೆ, ದವಡೆ ಅಥವಾ ಬೆನ್ನಿಗೆ ಹರಡಬಹುದು.
ಇದರ ಜೊತೆಗೆ ಸ್ನಾಯುಗಳ ಸೆಳೆತ ಉಂಟಾಗುವುದು. ಎಡಗೈ, ಬುಜ, ಬೆನ್ನಿನ ಭಾಗದಲ್ಲಿ ಸೆಳೆತ ಕಾಣಿಸಿಕೊಳ್ಳುವುದು. ಲಘು ತಲೆತಿರುಗುವಿಕೆ ಅಥವಾ ಹಠಾತ್ ತಲೆತಿರುಗುವಿಕೆ ಪುರುಷರು ಮತ್ತು ಮಹಿಳೆಯರಿಗೆ ಹೃದಯಾಘಾತದ ಸಾಮಾನ್ಯ ಲಕ್ಷಣವೆಂದರೆ ಎದೆ ನೋವು ಅಥವಾ ಅಸ್ವಸ್ಥತೆ.



Click it and Unblock the Notifications