Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಗಣರಾಜ್ಯೋತ್ಸವ ದಿನದಂದು ಭಾರತೀಯನೆಂಬ ಹೆಮ್ಮೆಯಿಂದ ಹೇಳಿಕೊಳ್ಳಲು ಇಲ್ಲಿವೆ ಶುಭಾಶಯಗಳು
ಪ್ರತಿಯೊಬ್ಬ ಭಾರತೀಯ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ ಗಣರಾಜ್ಯೋತ್ಸವ. ಈ ಸಾಲಿನಲ್ಲಿ ನಾವು 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.
ಮೊದಲ ಗಣರಾಜ್ಯೋತ್ಸವ ದಿನದ ಮೆರವಣಿಗೆಯನ್ನು 1955ರಲ್ಲಿ ನಡೆದಲಾಯಿತು. ಗಣರಾಜ್ಯೋತ್ಸದ ದಿನ ಪರೇಡ್ ಆ ದಿನದ ಪ್ರಮುಖ ಆಕರ್ಷಕಣೆ. ನಮ್ಮ ಸೈನಿಕರು ಈ ದಿನ ಸಾಹಸಮಯ ಪರೇಡ್ ದೇಶದ ಮುಂದೆ ಪ್ರದರ್ಶಿಸುತ್ತಾರೆ.
ಕೆಂಪುಕೋಟೆಯಲ್ಲಿ ರಾಷ್ಟ್ರಪತಿಗಳು ತ್ರಿವರ್ಣ ಧ್ವಜ ಹಾರಿಸುವಾಗ ನೌಕಾದಳ, ಸೇನಾದಳ 21 ಗುಂಡುಗಳನ್ನು ಹಾರಿಸಿ ಅಭಿನಂದನೆ ಸಲ್ಲಿಸುತ್ತಾರೆ. ಇದನ್ನು ನೋಡುವಾಗಲೇ ಮೈ ರೋಮಾಂಚನವಾಗುತ್ತದೆ. ಈ ಹಬ್ಬವನ್ನು ಶುಭಾಶಯಗಳ ಮೂಲಕ ಸಂಭ್ರಮಿಸಲು ಇಲ್ಲಿದೆ ಮೆಸೇಜ್‌ಗಳು:

1. 75ನೇ ಗಣರಾಜ್ಯೋತ್ಸವ ದಿನದ ಶುಭಾಶಯಗಳು
2. ಗಣರಾಜ್ಯೋತ್ಸವ ದಿನದ ಶುಭಾಶಯಗಳು, ಪ್ರಜಾಪ್ರಭುತ್ವ ದೇಶ ಮತ್ತಷ್ಟು ಸಮೃದ್ಧಿಯಾಗಲು ನಾವೆಲ್ಲಾ ಶ್ರಮಿಸೋಣ, ಜೈ ಭಾರತಮಾತೆ.
3. ವಿವಿಧತೆಯಲ್ಲಿ ಏಕತೆಯಿಂದ ಬಾಳಲು ನಮ್ಮ ಪ್ರಜಾಪ್ರಭುತ್ವವೇ ಕಾರಣ, ಎಲ್ಲರಿಗೂ ಗಣ ರಾಜ್ಯೋತ್ಸವ ದಿನದ ಶುಭಾಶಯಗಳು4. ನಮ್ಮ ಸಂವಿಧಾನ ನಿಯಮಗಳಿಗೆ ಬದ್ಧರಾಗಿರೋಣ, ಗಣರಾಜ್ಯೋತ್ಸವ ದಿನದ ಶುಭಾಶಯಗಳು
6. ನಮ್ಮ ದೇಶ ನಮ್ಮ ಹೆಮ್ಮೆ, ದೇಶದ ರಕ್ಷಣೆಗೆ ಸದಾ ಬದ್ಧರಾಗಿರೋಣ, ಗಣರಾಜ್ಯೋತ್ಸವ ದಿನದ ಶುಭಾಶಯಗಳು
7. ನಮ್ಮ ದೇಶದ ಕೀರ್ತಿ ಪತಾಕೆ ಮತ್ತಷ್ಟು ಎತ್ತರಕ್ಕೆ ಹಾರಲಿ, ಭಾರತಾಂಬೆಯ ಸಮೃದ್ಧಿಗೆ ನಾವೆಲ್ಲಾ ದುಡಿಯೋಣ.
8. ರಕ್ತದ ಕಣ ಕಣವೂ ನಾನು ಭಾರತಾಂಬೆಯ ಮಗ ಎಂದು ಹೇಳುತ್ತಿದೆ, ಈ ತಾಯಿಗೆ ಸದಾ ಚಿರಋಣಿಯಾಗಿರುತ್ತೇನೆ.
9. ರಕ್ತದ ಕಣ ಕಣವೂ ನಾನು ಭಾರತಾಂಬೆಯ ಮಗಳು ಎಂದು ಹೇಳುತ್ತಿದೆ, ಈ ತಾಯಿಗೆ ಸದಾ ಚಿರಋಣಿಯಾಗಿರುತ್ತೇನೆ.
ಜನವರಿ 26ರ ವಿಶೇಷತೆ ಬಗ್ಗೆ ಹೇಳುವುದಾದರೆ
* ನಮ್ಮ ಸಂವಿಧಾನ ಜಾರಿಗೆ ಬಂದ ದಿನ
ಇಂದು ನಾವೆಲ್ಲಾ ಇಷ್ಟೊಂದು ಸ್ವಾತಂತ್ರ್ಯದ ಬದುಕು ಸಾಧಿಸುತ್ತಿದ್ದೇವೆ, ಕಾನೂನು ಮುಂದೆ ಎಲ್ಲರೂ ಸಮನಾಗಿದ್ದೇವೆ ಅದಕ್ಕೆ ಕಾರಣ ನಮ್ಮ ಸಂವಿಧಾನ. ಇಲ್ಲಿ ತಪ್ಪು ಮಾಡಿದರೆ ಶ್ರೀಮಂಮತನಾದರೂ ಶಿಕ್ಷೆ ಸಿಕ್ಕೆ ಸಿಗುತ್ತದೆ, ಎಲ್ಲರಿಗೂ ಒಂದೇ ಕಾನೂನು ಇರುವುದು, ಆದ್ದರಿಂದ ಈ ದಿನ ನಮಗೆ ತುಂಬಾನೇ ಸಡಗರದ ಹಬ್ಬವಾಗಿದೆ. ನಮ್ಮ ಬದುಕಿನಲ್ಲಿ ನಾವು ಧೈರ್ಯವಾಗಿ ಹೆಜ್ಜೆ ಇಡಲು ನಮ್ಮ ಸಂವಿಧಾನ ನಮ್ಮ ಧೈರ್ಯ.. ಈ ದಿನವನ್ನು ಸಂಭ್ರಮದಿಂದ ಆಚರಿಸೋಣ.
ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಆಚರಿಸುವ ಹಬ್ಬ
ಗಣರಾಜ್ಯೋತ್ಸವ ಭಾರತೀಯರ ಹಬ್ಬ. ಇಲ್ಲಿ ಆ ಜಾತಿ- ಈ ಜಾತಿ, ಆ ಧರ್ಮ-ಈ ಧರ್ಮ ಎಂಬ ಬೇಧವಿಲ್ಲದೆ ಎಲ್ಲರೂ ನಾನು ಭಾರತೀಯ ಎಂಬ ಭಾವನೆಯಿಂದ ಆಚರಿಸುವ ಹಬ್ಬವಾಗಿದೆ.
ನಮ್ಮ ದೇಶದ ಸಂವಿಧಾನ ವಿಶ್ವದ ಅತಿ ದೊಡ್ಡ ಸಂವಿಧಾನ
ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನ ನಮ್ಮ ಭಾರತದ ಸಂವಿಧಾನ. ಇದನ್ನು ಡಾ. ಬಿ.ಆರ್. ಅಂಬೇಡ್ಕರ್ ರವರ ನೇತೃತ್ವದ ತಂಡ ರಚಿಸಿತ್ತು. ತಂಡದಲ್ಲಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಟಿ.ಟಿ.ಕೃಷ್ಣಮಚಾರಿ, ಡಿ.ಪಿ.ಖೇತಾನ್, ಸರ್ ಬೆನೆಗಲ್, ಕನ್ಹಯ್ಯಲಾಲ್ ಮುನ್ಷಿ ಮತ್ತು ಮೊಹಮ್ಮದ್ ಸಾಅದುಲ್ಲಾ ರಿದ್ದರು. 448 ವಿಧಿಗಳನ್ನು 22 ಭಾಗಗಳಲ್ಲಿಯೂ, 10 (ನಂತರ 12) ಅನುಚ್ಛೇದಗಳನ್ನೂ,, 118 ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು 1,17,369 ಶಬ್ಧಗಳನ್ನು ಹೊಂದಿದೆ. ಇದನ್ನು ರಚಿಸಲು 2 ವರ್ಷ 11 ತಿಂಗಳು 18 ದಿನಗಳು ತೆಗೆದುಕೊಂಡಿದೆ.



Click it and Unblock the Notifications






