ನನಗೆ ಆಕ್ಸಿಡೆಂಟ್ ಆಗಿದೆ, ಚೇತರಿಸಿಕೊಳ್ಳುತ್ತಿರುವೆ ಎಂದು ರಶ್ಮಿಕಾ ಮಂದಣ್ಣ

ಸ್ವಲ್ಪ ದಿನದಿಂದ ರಶ್ಮಿಕಾ ಮಂದಣ್ಣ ಸಾಮಾಜಿಕ ತಾಣದಲ್ಲಿ ಅಷ್ಟೊಂದು ಪೋಸ್ಟ್‌ಗಳನ್ನು ಹಾಕುತ್ತಿರಲಿಲ್ಲ, ಆದರೆ ಅದಕ್ಕೆ ಕಾರಣವೇನು ಎಂಬುವುದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಕಳೆದ ತಿಂಗಳಿನಿಂದ ನಾನು ಪಬ್ಲಿಕ್‌ ಲೈಫ್‌ನಿಂದ ಸ್ವಲ್ಪ ದೂರವಿದ್ದೆ ಕಾರಣ ನನಗೆ ಅಪಘಾತವಾಗಿತ್ತು, ತುಂಬಾ ಚಿಕ್ಕ ಅಪಘಾತ (a minor one) ಇದೀಗ ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ವೈದ್ಯರು ರೆಸ್ಟ್ ಮಾಡಲು ಹೇಳಿದ್ದಕ್ಕೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ, ನಾನೀಗ ಸೂಪರ್ ಆಕ್ಟಿವ್ ಆಗುವ ಹಂತದಲ್ಲಿದ್ದೇನೆ.

Rashmika Mandanna

ಯಾವಾಗಲೂ ನಿಮ್ಮನ್ನು ನೋಡಿಕೊಳ್ಳುವುದರ ಬಗ್ಗೆ ನೀವು ಹೆಚ್ಚು ಗಮನನೀಡಿ, ಜೀವನ ಎಂಬುವುದು ಯಾವಾಗ ಏನು ಬೇಕಾದರು ಆಗಬಹುದು, ಹಾಗಾಗಿ ಸದಾ ಖುಷಿಯಾಗಿರಿ ಎಂದು ಸಲಹೆ ಕೂಡ ನೀಡಿದ್ದಾರೆ. (Hey guys🥰
How've you been?💛

I know it's been a whileeeee since I came on here or was even seen in the public.. 🏃🏻‍♀️‍➡️

The reason I haven't been very active in last month is because I had a little accident, (a minor one) and I was recovering and was staying at home as I was told to by the doctors. 🐒
I am better now and just for heads up - I am in the phase of being super active so all the best dealing with my activities 🤣😄💜
🩷
Make it a priority to take care of yourself -always!! Cz life is super fragile and short and we don't know if we will have a tomorrow so choose happiness everyday!!.. ✨️)

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ನತ್ತ ಪಯಣ
ಸ್ಯಾಂಡಲ್‌ವುಡ್‌ನಲ್ಲಿ ತನ್ನ ಅಭಿನಯದಿಂದ ಗಮನ ಸೆಳೆದ ರಶ್ಮಿಕಾ ಮಂದಣ್ಣಗೆ ತೆಲುಗಿನ ಬಾಗಿಲುಗಳು ಓಪನ್ ಆಯ್ತು, ಅಲ್ಲಿಂದ ಬಾಲಿವುಡ್‌ನಲ್ಲಿ ಅವಕಾಶ ಸಿಕ್ತು, ಈಗ ಬಾಲಿವುಡ್‌ನಲ್ಲಿ ಬ್ಯುಸಿ ನಟಿಯಾಗಿರುವ ರಶ್ಮಿಕಾ ಮಂದಣ್ಣ ಬೆಳವಣಿಗೆ ನೋಡಿ ಕನ್ನಡಿಗರು ಮನಸಾರೆ ಹಾರೈಸಿದರು, ಆದರೆ ರಶ್ಮಿಕಾ ಮಂದಣ್ಣ ಕನ್ನಡದ ಬಗ್ಗೆ ಅಸ್ಡಡೆ ವರ್ತನೆ ತೋರುವ ಮೂಲಕ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿದ್ದರು. ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕನ್ನಡ ಬರಲ್ಲ ಎಂದು ತುಂಬಾನೇ ಟೀಕೆಗೆ ಒಳಗಾಗಿದ್ದ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಹೋದ ಬಳಿಕ ಸ್ಯಾಂಡಲ್‌ವುಡ್‌ ಕಡೆ ಗಮನವೂ ನೀಡಿಲ್ಲ.

ಬಾಲಿವುಡ್‌ ತಿರುಗಿ ನೋಡುವಂತೆ ಮಾಡಿದ ಕನ್ನಡ ಚಿತ್ರಗಳು
ಬಾಲಿವುಡ್‌ ಟಾಪ್ ಎಂಬ ಭ್ರಮೆ ಕಳಚಿದೆ, ನಮ್ಮ ಕನ್ನಡದ ಚಿತ್ರಗಳು ಬಾಲಿವುಡ್‌ ಚಿತ್ರಗಳನ್ನು ಮೀರಿಸಿ ಬೆಳೆದಿದೆ, ಹೀಗಾಗಿ ಕನ್ನಡದಲ್ಲಿ ನಟಿಸಲು ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ಗೆ ಸೆಲೆಬ್ರಿಟಿಗಳು ಬರ್ತಾ ಇದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಕನ್ನಡಕ್ಕೆ ಕಂಬ್ಯಾಕ್‌ ಮಾಡುತ್ತಾರಾ? ಗೊತ್ತಿಲ್ಲ, ಇದೀಗ ಬಾಲಿವುಡ್‌ನಲ್ಲಿ ಟಾಪ್‌ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಶ್ಮಿಕಾ ನಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿರುವುದು ಅವರ ಅಭಿಮಾನಿಗಳಿಗೆ ಸಮಧಾನ ತಂದಿದೆ. ಅವರು ಬೇಗನೆ ಚೇತರಿಸಿಕೊಳ್ಳಲಿ, ಬಾಲಿವುಡ್‌ ಮಾತ್ರವಲ್ಲ ಕನ್ನಡದಲ್ಲಿಯೂ ಹಲವು ಚಿತ್ರಗಳಲ್ಲಿ ನಟಸುವಂತಾಗಲಿ ಎಂಬುವುದೇ ಕನ್ನಡದಲ್ಲಿರುವ ಅವರ ಅಭಿಮಾನಿಗಳ ಆಶಯ.

English summary

Rashmika Mandanna Says She Met An Accident

Rashmika Mandanna Met An Accident, how is she now?
Story first published: Monday, September 9, 2024, 20:24 [IST]
X
Desktop Bottom Promotion