Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
FORBES 30 UNDER : ವಯಸ್ಸು 30ರೊಳಗೆ ಫೋರ್ಬ್ಸ್‌ನಲ್ಲಿ ಸಾಧಕಿಯಾಗಿ ಗುರುತಿಸಿಕೊಂಡ ರಶ್ಮಿಕಾ ಮಂದಣ್ಣ
ಫೋರ್ಬ್ಸ್ ಮ್ಯಾಗ್‌ಜಿನ್‌ನಲ್ಲಿ ಬರುವುದು ಎಂದರೆ ಅದು ಸಾಮಾನ್ಯ ವಿಷಯವಲ್ಲ, ಎಲ್ಲಾ ಸ್ಥರಗಳಲ್ಲಿ ಸಾಧಕರನ್ನು ಗುರುತಿಸಿ ಈ ಮ್ಯಾಗ್‌ಜಿನ್‌ನಲ್ಲಿ ಪ್ರಕಟಿಸಲಾಗುವುದು, ವಿಶ್ವದ ಟಾಪ್ ಶ್ರೀಮಂತರು, ಅತ್ಯಧಿಕ ಫಾಲೋವರ್ಸ್ ಹೊಂದಿರುವವರು ಹೀಗೆ ಬೇರೆ-ಬೇರೆ ಕೆಟಗರಿಯಲ್ಲಿ ಸಾಧಕರನ್ನು ಗುರುತಿಸಲಾಗುವುದು.
ಇದೀಗ ಫೋರ್ಬ್ಸ್ FORBES 30 UNDER 30ಯಲ್ಲಿ ರಶ್ಮಿಕಾ ಮಂದಣ್ಣ ಗುರುತಿಸಿಕೊಂಡಿದ್ದಾರೆ, ಇವರ ಜೊತೆಗೆ ಭಾರತದ ರಾಧಿಕಾ ಮದನ್, ಅದಿತಿ ಸೈಗಲ್ ಅಕಾ ಡಾಟ್ ಮನರಂಜನಾ ಕ್ಷೇತ್ರದಿಂದ ಗುರುತಿಸಿಕೊಂಡಿದ್ದಾರೆ.

ಫೋರ್ಬ್ಸ್ ಮ್ಯಾಗ್‌ಜಿನ್‌ನಲ್ಲಿ ಕಾಣಿಸಿಕೊಳ್ಳುವುದು ಎಂದರೆ ಪ್ರತಿಷ್ಠಿತ ಅವಾರ್ಡ್‌ಗೆ ಸಮ
ಫೋರ್ಬ್ಸ್‌ನಲ್ಲಿ ಸ್ಥಾನಗಳಿಸುವುದು ಅಷ್ಟು ಸುಲಭವಲ್ಲ, ವಿಶ್ವದ ಇತರ ದೇಶಗಳಿಂದಲೂ ಸ್ಪರ್ಧೆ ಇರುತ್ತದೆ. ಕೃಷಿ, ತಂತ್ರಜ್ಞಾ, ಕಲೆ, ಉದ್ಯಮ, ಮನರಂಜನೆ, ಶಿಕ್ಷಣ, ಯದ್ಯಮ, ಮಾರುಕಟ್ಟೆ, ಮಹಿಳಾ ಉದ್ಯಮಿಗಳು, ಆರೋಗ್ಯ ಸೇವೆ, ಸಮಾಜ ಸೇವೆ ಹೀಗೆ ಹಲವಾರು ಕ್ಷೇತ್ರದಲ್ಲಿ ದುಡಿಯುತ್ತಿರುವ ಸಾಧಕರನ್ನು ಗುರುತಿಸಿ ಫೋರ್ಬ್ಸ್ ಮ್ಯಾಗ್‌ಜಿನ್‌ನಲ್ಲಿ ಪ್ರಕಟಿಸಲಾಗುವುದು.
2023ರಲ್ಲಿ ಪವರ್‌ಫುಲ್ ವುಮನ್ ಕೆಟಗರಿಯಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಾರತೀಯ ಬಿಲಿಯನೇರ್ ಮತ್ತು ಲೋಕೋಪಕಾರಿ ರೋಶ್ನಿ ನಾದರ್ ಮಲ್ಹೋತ್ರಾ, ಸೋಮಾ ಮೊಂಡಲ್, ಕಿರಣ್ ಮಜುಂದಾರ್ ಗುರುತಿಸಿಕೊಂಡಿದ್ದರು.
ಫೋರ್ಬ್ಸ್‌ನಲ್ಲಿ ಪೀಚರ್ ಆಗಿರುವ ಮೊದಲ ಕನ್ನಡ ನಟ ಯಶ್
2021ರಲ್ಲಿ ಫೋರ್ಬ್ಸ್ ಯಶ್ ಅವರ ಬಗ್ಗೆ ಫೀಚರ್ ಮಾಡಿತ್ತು, ದಕ್ಷಿಣ ಭಾರತದ ಮೂರು ತಾರೆಯರ ಪೀಚರ್‌ನಲ್ಲಿ ಯಶ್ ಅವರದ್ದು ಒಂದು ಫೀಚರ್ ಇತ್ತು. ಈ ಮೂಲಕ ಫೋರ್ಬ್ಸ್‌ನಲ್ಲಿ ಫೀಚರ್ ಆದ ಕರ್ನಾಟಕದ ಮೊದಲ ತಾರೆಯೆಂದರೆ ಅದು ಯಶ್.
ಸ್ಯಾಂಡಲ್‌ವುಡ್‌ನಿಂಡ ಬಾಲಿವುಡ್‌ನವರೆಗೆ ರಶ್ಮಿಕಾ ಮಂದಣ್ಣ
ಕಿರಿಕ್ ಪಾರ್ಟಿಯಲ್ಲಿ ಕರ್ನಾಟಕ ಕ್ರಷ್ ಆಗಿದ್ದ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಷ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ, ದಕ್ಷಿಣ ಭಾರತ ಮಾತ್ರವಲ್ಲ ಬಾಲಿವುಡ್‌ನಲ್ಲಿಯೂ ಪ್ರಮುಖ ನಟಿಯಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪ್ರತಿಭೆ ಜೊತೆ ಲಕ್ ಕೂಡ ಅವರನ್ನು ದೊಡ್ಡ ಸ್ಟಾರ್ ಆಗಿ ಮಾಡಿತ್ತು ಎಂದರೆ ತಪ್ಪಾಗಲಾರದು. ಕನ್ನಡದ ಹುಡುಗಿ ಆ ಮಟ್ಟಿಗೆ ಬೆಳೆದಿರುವುದು ಕನ್ನಡಿಗರಿಗೆ ಖುಷಿಯಿದೆ.
ಕೆಲ ತಪ್ಪುಗಳಿಂದ ಕನ್ನಡಿಗರ ಮನಸ್ಸಿಗೆ ನೋವು ಮಾಡಿದ್ದ ರಶ್ಮಿಕಾ
ರಶ್ಮಿಕಾ ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲಿ, ಆದರೆ ಯಾವಾಗ ಜನಪ್ರಿಯತೆ ಬಂತೋ ಅಲ್ಲಿಂದ ಕನ್ನಡ ಬಾರದವರಂತೆ ನಟನೆ ಮಾಡಲಾರಂಭಿಸಿದರು. ಇದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು, ಕನ್ನಡಿಗರು ಏನು ಬೇಕಾದರೂ ಸಹಿಸುತ್ತಾರೆ, ಆದರೆ ಉಂಡ ನೆಲಕ್ಕೆ ದ್ರೋಹ ಬಗೆದರೆ ಕ್ಷಮಿಸಲ್ಲ, ಹಾಗಾಗಿ ರಶ್ಮಿಕಾ ಮೇಲೆ ತುಂಬಾನೇ ಟೀಕೆಗಳು ಕೇಳಿಬಂದೆವು. ಅದಲ್ಲದೆ ತನಗೆ ಸಿನಿಮಾ ಕೆರಿಯರ್ ನೀಡಿದ ಪ್ರೊಡಕ್ಷನ್ ಹೆಸರನ್ನು ಹೇಳದೆ ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದೂ ರಶ್ಮಿಕಾ ಅವರಿಗೆ ಮೈನಸ್ ಆಯ್ತು. ಆದರೆ ಈ ರಶ್ಮಿಕಾ ಕನ್ನಡದ ಬಗ್ಗೆ ಮಾತನಾಡುವಾಗ ತುಂಬಾನೇ ಜಾಗ್ರತೆವಹಿಸುತ್ತಿದ್ದಾರೆ.
ಎಷ್ಟು ಎತ್ತರಕ್ಕೆ ಬೆಳೆದರೂ ಕನ್ನಡ ಗೌರವಿಸಿದರೆ ಕನ್ನಡಿಗರ ಮನದಲ್ಲಿಯೂ ಪ್ರೀತಿ ಹೆಚ್ಚುವುದು, ಕನ್ನಡ ಹುಡುಗಿ ಮತ್ತಷ್ಟು ಹೆಸರು ಮಾಡುವಂತಾಗಲಿ.



Click it and Unblock the Notifications











