Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ರಾಮೇಶ್ವರಂ ಕೆಫೆ: CA ಮಾಡಿದರೂ ಇಡ್ಲಿ-ದೋಸೆ ಮಾರಲು ಹೋಗಿ ಸಕ್ಸಸ್ ಆದ ದಿವ್ಯಾ ರಾಘವೇಂದ್ರ ರಾವ್
ರಾಮೇಶ್ವರ ಕೆಫೆ ಈ ದಿನದಲ್ಲಿ ಹೆಚ್ಚು ಸುದ್ದಿ ಮಾಡಿದ ಬೆಂಗಳೂರಿನ ಕೆಫೆ. ಈ ಕೆಫೆಯಲ್ಲಿ ಮಧ್ಯಾಹ್ನ 1 ಗಂಟೆಗೆ ನಿಗೂಢವಾಗಿ ಸ್ಪೋಟ ಸಂಭವಿಸಿದೆ. ಈ ಸ್ಪೋಟದಲ್ಲಿ 9 ಜನರು ಗಂಭೀರ ಗಾಯಗೊಂಡಿದ್ದು ಯಾವ ಕಾರಣಕ್ಕೆ ಸ್ಪೋಟ ಸಂಭವಿಸಿದೆ ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರಿನ ಪ್ರಸಿದ್ಧ ಕೆಫೆಗಳಲ್ಲಿ ಈ ರಾಮೇಶ್ವರ ಕೆಫೆ ತುಂಬಾ ಹೆಸರು ಪಡೆದ ಕೆಫೆಯಾಗಿದೆ. ಅಲ್ಲಿಯ ಸ್ವಾದಿಷ್ಟಕರ ಆಹಾರಕ್ಕೆ ಮನಸೋತು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಈ ಕೆಫೆಗೆ ಬರುತ್ತಾರೆ. ಇಲ್ಲಿಯ ಆಹಾರವನ್ನು ಸವಿಯಲು ಜನರು ಕ್ಯೂನಲ್ಲಿ ನಿಲ್ಲುತ್ತಾರೆ. ಅಲ್ಲದೆ ಈ ಕೆಫೆ ಹಲವಾರು ಮೀಮ್ಸ್‌ಗಳಿಗೆ ಕಂಟೆಂಟ್ ಕೂಡ ಆಗಿದೆ. ಅಲ್ಲದೆ ರಾಮೇಶ್ವರಂ ಕೆಫೆ ಬಗ್ಗೆ ಹಲವಾರು ಜೋಕ್‌ಗಳು ಕೂಡ ಇವೆ, ಹೀಗೆ ಇಷ್ಟೆಲ್ಲಾ ಪ್ರಸಿದ್ಧವಾಗಿರುವ ರಾಮೇಶ್ವರಂ ಕೆಫೆ ಹೆಚ್ಚು ಸುದ್ದಿ ಮಾಡಿದ್ದು ಅದರ ರೆವೆನ್ಯೂ ಬಗ್ಗೆ.

ರಾಮೇಶ್ವರಂ ಕೆಫೆಯ ಪ್ರತಿಯೊಂದು ಔಟ್‌ಲೆಟ್ ಪ್ರತಿ ತಿಂಗಳಿಗೆ 4.5 ಕೋಟಿಯಿದೆ ಎಂದು ರೂಮರ್ ಹಬ್ಬುತ್ತಿದ್ದಂತೆ ಈ ರಾಮೇಶ್ವರಂ ಕೆಫೆ ತುಂಬಾನೇ ಸದ್ದು ಮಾಡಿತು. ಟ್ವಿಟರ್‌ನಲ್ಲಿ ಭಾರೀ ಚರ್ಚೆಯಾಯಿತು.
ಈ ರಾಮೇಶ್ವರ ಕೆಫೆ ಹುಟ್ಟು ಹಾಕಿದವರು ಯಾರು?
ಇದು ದಿವ್ಯಾ ರಾಘವೇಂದ್ರ ರಾವ್ ಅವರ ಕನಸು. ನಾನು ಒಂದು ರೆಸ್ಟೋರೆಂಟ್ ಪ್ರಾರಂಭಿಸುತ್ತೇನೆ ಎಂಬುವುದನ್ನು ಕನಸಿನಲ್ಲಿಯೂ ಅಂದು ಕೊಂಡಿರಲಿಲ್ಲ ಎಂದು ರಾವ್ ಹೇಳುತ್ತಾರೆ. ಅವರು ಇದರ ಸಹ ಸಂಸ್ಥಾಪಕರಾಗಿದ್ದಾರೆ.
ದಿವ್ಯಾ ರಾಘವೇಂದ್ರ ರಾವ್ ಅವರು ಪ್ರಾರಂಭದಲ್ಲಿಯೇ ಈ ಆಹಾರ ಉದ್ಯಮದಲ್ಲಿ ಆಸಕ್ತಿ ಹೊಂದಿದ್ದರು. ಅವರು ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುತ್ತಿದ್ದಾಗ ಮೆಕ್ ಡೊನಾಲ್ಡ್, ಕೆಎಫ್‌ಸಿ, ಸ್ಟಾರ್‌ಬರ್ಕ್ಸ್ ಇವುಗಳ ಬಗ್ಗೆ ಅಧ್ಯಯನ ಮಾಡಿದ್ದರು, ಅವರ ಪ್ರೊಫೆಸರ್ ಒಬ್ಬರು ಭಾರತೀಯರು ಅಂಥ ಫುಡ್ ಬ್ಯುಸ್‌ನೆಸ್ ನಡೆಸುತ್ತಿಲ್ಲ ಎಂದಿದ್ದರು, ಹಾಗಾಗಿ ಅವರು ನಾನೇ ಏಕೆ ಈ ಆಹಾರ ಉದ್ಯಮದಲ್ಲಿ ಹೊಸತನ ಟ್ರೈ ಮಾಡಬಾರದು ಎಂದು ತೀರ್ಮಾನಿಸಿ ಪ್ರಾರಂಭಿಸಿ ಅವರೀಗ ದಕ್ಷಿಣ ಭಾರತದ ಸ್ವಾದಿಷ್ಟಕರ ಅಡುಗೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಜೀರೋದಿಂದ ಸ್ಟಾರ್ಟ್ ಮಾಡಿ ಸಕ್ಸಸ್ ಕಂಡವರು
ದಿವ್ಯಾ ರಾಘವೇಂದ್ರ ಅವರು ಮೊದಲು ರಾವ್ ಅವರನ್ನು ಭೇಟಿಯಾಗಿದ್ದು ಚಾರ್ಟಡ್ ಅಕೌಂಟ್ ಆಗಿ. ರಾವ್ ಅವರು ಶೇಷಾದ್ರಿಪುರಂನಲ್ಲಿ ಬೀದಿ ಬದಿಯ ಮಳಿಗೆ ಹಾಕಿ ವ್ಯಾಪಾರ ಮಾಡುತ್ತಿದ್ದರು, ತರಕಾರಿ ಕಟ್ ಮಾಡುವುದರಿಂದ ಬಹುತೇಕ ಕೆಲಸವನ್ನು ಅವರೊಬ್ಬರೇ ಮಾಡುತ್ತಿದ್ದರು, ಅವರ ಕೆಲಸಕ್ಕೆ ಮನೆಯವರ ಬೆಂಬಲವೂ ಇರಲಿಲ್ಲ. ಆವಾಗ ರಾವ್ ಅವರು ಬ್ಯುಸ್‌ನೆಸ್ ದಿವ್ಯಾರವರ ಸಲಹೆ ಪಡೆಯುತ್ತಿದ್ದರು, ಆದರೆ ಆ ಬ್ಯುಸ್‌ನೆಸ್ ಹಳ್ಳಹಿಡಿಯಿತು. ಆವಾಗ ರಾವ್ ಹಾಗೂ ದಿವ್ಯಾ ಅವರು ತಾವು ಉಳಿತಾಯ ಮಾಡಿದ ಹಣದಲ್ಲಿ ಒಂದು ಹೋಟೆಲ್ ಮಾಡಲು ತೀರ್ಮಾನ ಮಾಡುತ್ತಾರೆ, ಇದನ್ನು ಅವರ ತಾಯಿಯವರು ಒಪ್ಪಿಕೊಳ್ಳುವುದಿಲ್ಲ, ಮಗಳು ಸಿಎ ಆಗಿರುತ್ತಾಳೆ ಎಂದರೆ ಇಡ್ಲಿ, ದೋಸೆ ಮಾರುತ್ತೇನೆ ಎಂದಾಗ ಅವರ ತಾಯಿಗೆ ತುಂಬಾನೇ ಬೇಸರವಾಗಿತ್ತು, ಯಾವ ತಾಯಿಗಾದರು ಆಗುತ್ತೆ, ಮಧ್ಯಮ ವರ್ಗದ ಕುಟುಂಬದಲ್ಲಿ ಇದ್ದು ಮಗಳಿಗೆ ಅಷ್ಟು ವಿದ್ಯಾಭ್ಯಾಸ ಮಾಡಿಸುವುದು ಸುಲಭವಲ್ಲ. ಅವರು ಕಷ್ಟಪಟ್ಟು ಓದಿಸಿದಾಗ ಮಕ್ಕಳು ಹುದ್ದೆಗೆ ಹೋಗುತ್ತಾರೆ ಎಂದು ಕನಸು ಕಾಣುವುದು ಸಹಜ.
ಎಪಿಜೆ ಅಬ್ದುಲ್ ಕಲಾಂ ಜನಿಸಿದ್ದು ರಾಮೇಶ್ವರದಲ್ಲಿ, ಹಾಗಾಗಿ ಅವರು ಅವರು ಜನಿಸಿದ ಊರನ್ನು ತಮ್ಮ ರೆಸ್ಟೋರೆಂಟ್‌ಗೆ ಇಡಲು ಬಯಸಿ ರಾಮೇಶ್ವರಂ ಕೆಫೆ ಎಂದು ಹೆಸರಿಡುತ್ತಾರೆ, ಇದೀಗ ಈ ರಾಮೇಶ್ವರಂ ಕೆಫೆ ಹೆಮ್ಮರವಾಗಿದೆ.
ರಾಮೇಶ್ವರ ಕೆಫೆ ಇದೀಗ ಹೆಮ್ಮರವಾಗಿ ಬೆಳೆದಿದೆ, ದಿನನಿತ್ಯ ಲಕ್ಷಾಂತರ ವ್ಯವಹಾರ ಮಾಡುತ್ತಿದೆ, ಹಲವು ಕಡೆ ಇದರ ಔಟ್‌ಲೆಟ್‌ಗಳಿವೆ, 700ಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಇಂಥ ರೆಸ್ಟೋರೆಂಟ್ ಸ್ಪೋಟ ಸಂಭವಿಸಿದ್ದು ಇದರ ಬಗ್ಗೆ ನಿಖರ ತನಿಖೆ ನಡೆಯಬೇಕಾಗಿದೆ.



Click it and Unblock the Notifications
