Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
Rama Ekadashi: ರಮಾ ಏಕಾದಶಿ ಯಾವಾಗ? ವಿಷ್ಣುವನ್ನು ಪೂಜಿಸುವುದು ಏಕೆ?
ಹಿಂದೂಗಳ ಪಾಲಿಗೆ ಏಕಾದಶಿ ಬಹಳ ಪ್ರಮುಖ ಹಬ್ಬ. ಪ್ರತಿ ತಿಂಗಳು ಆಗಮಿಸುವ ಏಕಾದಶಿಯಲ್ಲಿ ಹಲವರು ಉಪವಾಸವಿದ್ದ ವಿವಿಧ ದೇವರುಗಳ ಹೆಸರಿನಲ್ಲಿ ಪೂಜೆ ಮಾಡುವುದು ನೋಡಬಹುದು. ದೀಪಾವಳಿಗೂ ಮುನ್ನ ನಾವು ರಮಾ ಏಕಾದಶಿ, ಅಥವಾ ರಾಮ ಏಕಾದಶಿಯನ್ನು ಆಚರಿಸುವುದು ನೋಡಬಹುದು. ಹಾಗೆ ಏಕಾದಶಿಯ ಸಮಯದಲ್ಲಿ ವಿಶೇಷ ಆಶೀರ್ವಾದ ಪಡೆಯುವುದು ನೋಡಬಹುದು.
ಅದ್ರಲ್ಲೂ ಈ ರಮಾ ಏಕಾದಶಿ ವ್ರತವನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಆದ್ರೆ ಹಲವು ಕಡೆ ಇದನ್ನು ರಾಮ ಏಕಾದಶಿ ಅಂತಲೂ ಕರೆಯಲಾಗುತ್ತದೆ. ಆದ್ರೆ ಈ ಏಕಾದಶಿಯು ವಿಷ್ಣು ದೇವರ ನೆನೆಯುವ ಜಾಗೆ ವಿಷ್ಣುವನ್ನು ನೆನೆಯುವ ಹಬ್ಬವಾಗಿದೆ. ಈ ವರ್ಷ ಈ ಹಬ್ಬವನ್ನು ಅಕ್ಟೋವರ್ 17ರಂದು ಆಚರಿಸಲಾಗುತ್ತಿದೆ.

ಈ ಏಕಾದಶಿಯನ್ನು ರಂಭಾ ಏಕಾದಶಿ ಎಂದೂ ಕೂಡ ಕರೆಯುತ್ತಾರೆ. ಈ ಏಕಾದಶಿಯು ದೀಪಾವಳಿಯ ನಾಲ್ಕು ದಿನಗಳ ಮೊದಲು ಆಚರಿಸಲಾಗುತ್ತದೆ. ರಮಾ ಏಕಾದಶಿಯಂದು ಉಪವಾಸ ಮಾಡುವುದರಿಂದ ಬ್ರಹ್ಮಹತ್ಯೆ ದೋಷ ನಿವಾರಣೆಯಾಗಲಿದೆ ಎಂದು ಹೇಳಲಾಗುತ್ತದೆ. ರಮಾ ಏಕಾದಶಿ ದೀಪಾವಳಿ ಸಮಯದಲ್ಲಿ ಬರುವುದಿರಿಂದ ಇಲ್ಲಿಂದಲೇ ದೀಪಾವಳಿ ಆರಂಭವಾಗಲಿದೆ.
ಈ ಏಕಾದಶಿಯಲ್ಲಿ ಲಕ್ಷ್ಮಿ ದೇವಿ ಹಾಗೆ ವಿಷ್ಣುವನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಸಂತೋಷ ತು ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ. ಈ ಉಪವಾಸದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಪೂಜಾ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಮಾ ಏಕಾದಶಿಯ ಮುಹೂರ್ತಗಳು
ದಿನ ಅಕ್ಟೋಬರ್ 17
ಪರಣ ಸಮಯ ಅಕ್ಟೋಬರ್ 18-ಬೆಳಗ್ಗ 6:24ರಿಂದ ರಾತ್ರಿ 08:41
ಏಕಾದಶಿ ತಿಥಿ ಪ್ರಾರಂಭವಾಗುತ್ತದೆ - ಅಕ್ಟೋಬರ್ 16, 2025 ರಂದು ಬೆಳಗ್ಗೆ 10:35
ಏಕಾದಶಿ ತಿಥಿ ಕೊನೆಗೊಳ್ಳುವುದು ಅ. 17, 2025ರ ಬೆಳಗ್ಗೆ 11:12
ಉಪವಾಸದ ನಿಯಮಗಳೇನು?
ಈ ದಿನ ಉಪವಾಸ ಮಾಡಲು ನೀವು ಹಣ್ಣುಗಳು, ಜ್ಯೂಸ್ ಸೇವಿಸಬಹುದು. ಹಾಗೆ ಆಲೂಗಡ್ಡೆ, ಸಿಹಿ ಗೆಣಸು, ಕಚ್ಚಾ ಆಹಾರ ಸೇವಿಸಬಹುದು. ನೀರು, ಮಜ್ಜಿಗೆ, ಹಾಲು ಸೇರಿ ಕರಿದ ತಿಂಡಿಗಳ ಸೇವಿಸಬಹುದು.
ಏನು ಸೇವಿಸಬಾರದು?
ರಮಾ ಏಕಾದಶಿ ಉಪವಾಸದ ಸಮಯದಲ್ಲಿ ಧಾನ್ಯಗಳು, ಅಕ್ಕಿ, ಗೋಧಿ, ಬಾರ್ಲಿ, ರಾಗಿ, ಜೋಳ ಮತ್ತು ಎಲ್ಲಾ ರೀತಿಯ ದ್ವಿದಳ ಧಾನ್ಯಗಳಿಂದ ಮಾಡಿದ ಆಹಾರ ಸೇವಿಸಬಾರದು. ಉಪ್ಪು ಬಳಸದೆ ಸಾತ್ವಿಕ ಆಹಾರವಾದ ಅವಲಕ್ಕಿ ಸೇವಿಸಬಹುದು. ಉಪವಾಸದ ಸಮಯದಲ್ಲಿ ನಕಾರಾತ್ಮಕ ಆಲೋಚನೆಗಳಿಂದ ದೂರ ಇರಬೇಕು. ಹಾಗೆ ಈ ದಿನ ತುಳಸಿ ಎಲೆಗಳನ್ನು ಕೀಳಬಾರದು. ಏಕೆಂದರೆ ಈ ಸಮಯದಲ್ಲಿ ತುಳಸಿ ಕೂಡ ಉಪವಾಸದಲ್ಲಿರುತ್ತಾಳೆ ಇದರಿಂದ ತುಳಸಿ ಎಲೆಯನ್ನು ಕೀಳಬಾರದು, ತುಳಸಿಗೆ ಪೂಜೆ ಮಾಡಬೇಕು.
ಉಪವಾಸ ಮಾಡುವವರು ಜಾಗರಣೆ ಮಾಡುತ್ತಾರೆ. ರಾತ್ರಿ ವಿಷ್ಣು ಸಹಸ್ರನಾಮ ಓದುವುದು ಮಾಡುತ್ತಾರೆ. ಹಾಗೆ ವಿಷ್ಣುವಿಗೆ ಪ್ರಿಯವಾದ ನೈವೇದ್ಯ ಅರ್ಪಿಸುವುದು ಹಾಗೆ ಲಕ್ಷ್ಮಿ ದೇವಿಗೆ ಹಸಿರು ಬಳೆ, ಸೀರೆ ನೀಡಿ ಪೂಜಿಸುವುದು ಸಾಮಾನ್ಯ ಆಚರಣೆಯಲ್ಲಿ ಒಂದಾಗಿದೆ.
(ಹಕ್ಕು ನಿರಾಕರಣೆ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications