Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಜಾತಕದಲ್ಲಿ ರಾಹು ದೋಷವಿದ್ದರೆ ಎಂತಹ ಸಂಕಷ್ಟ ಎದುರಾಗಲಿದೆ? ಇದಕ್ಕೆ ಪರಿಹಾರವೇನು?
ನವಗ್ರಹಗಳಲ್ಲಿ ರಾಹು ಕೂಡ ಒಂದು ಗ್ರಹವಾಗಿದೆ. ರಾಹು ಅಂದ್ರೆ ಹೆಚ್ಚಿನವರಿಗೆ ಒಂದು ರೀತಿ ಭಯ ಇದ್ದೇ ಇದೆ. ಯಾಕಂದ್ರೆ ರಾಹು ನಮ್ಮ ಜನ್ಮ ಕುಂಡಲಿಯಲ್ಲಿ ಸರಿಯಾದ ಸ್ಥಾನದಲ್ಲಿ ಇರದೇ ಹೋದರೆ ಇದರಿಂದ ಋಣಾತ್ಮಕ ಪರಿಣಾಮಗಳನ್ನು ನಾವು ಎದುರಿಸಬೇಕಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುವಿನ ಋಣಾತ್ಮಕ ಪರಿಣಾಮದಿಂದ ಒರ್ವ ವ್ಯಕ್ತಿಯ ಬಾಳಿನಲ್ಲಿ ಭಯ, ಗೊಂದಲ, ಗೀಳು ಮತ್ತು ಅತೃಪ್ತಿ, ಸಂಕಷ್ಟಗಳು ಹೆಚ್ಚಾಗುತ್ತೆ ಅಂತ ನಂಬಲಾಗಿದೆ. ಅಷ್ಟಕ್ಕು ರಾಹುವಿನ ಪರಿಣಾಮ ನಮ್ಮ ಜಾತಕದ ಮೇಲೆ ಕೆಟ್ಟದಾಗಿದೆ ಎಂದು ತಿಳಿದುಕೊಳ್ಳೋದು ಹೇಗೆ? ಇದಕ್ಕೆ ಪರಿಹಾರವೇನು ಅನ್ನೋದನ್ನು ತಿಳಿಯೋಣ.

ಜಾತಕದಲ್ಲಿ ರಾಹುವಿನ ಕೆಟ್ಟ ಪರಿಣಾಮದ ಲಕ್ಷಣಗಳು
ಸಾಮಾನ್ಯವಾಗಿ ರಾಹುವು ಒರ್ವ ವ್ಯಕ್ತಿಯ ಬಾಳಿನಲ್ಲಿ ಕೆಟ್ಟ ಪರಿಣಾಮವನ್ನೇ ಬೀರುತ್ತಾನೆ. ಕೆಲವೊಂದು ಸಲ ಮಾತ್ರ ರಾಹುವಿನಿಂದ ಉತ್ತಮ ಫಲಿತಾಂಶ ಪಡೆಯಬಹುದು. ಆದರೆ ನಿಮಗೆ ಈ ಬಗ್ಗೆ ಮಾಹಿತಿ ಇರೋದಿಲ್ಲ. ಹೀಗಾಗಿ ಆಗಾಗ್ಗೆ ಜ್ಯೋತಿಷಿಗಳ ಬಳಿ ಹೋಗಿ ನಿಮ್ಮ ಜಾತಕವನ್ನು ಓದಿಸಬೇಕು. ಆಗ ನಿಮಗೆ ರಾಹು ನಿಮ್ಮ ಜನ್ಮ ಕುಂಡಲಿಯಲ್ಲಿ ಯಾವ ಸ್ಥಾನದಲ್ಲಿ ಇದ್ದಾನೆ ಅನ್ನೋದು ಗೊತ್ತಾಗುತ್ತದೆ. ಒಂದು ವೇಳೆ ಕೆಟ್ಟ ಸ್ಥಾನದಲ್ಲಿ ಸ್ಥಿತನಾಗಿದ್ರೆ ಅದಕ್ಕೆ ಖಂಡಿತ ಪರಿಹಾರ ಮಾಡಿಸಬೇಕು.
ರಾಹುವಿನ ಪರಿಣಾಮದಿಂದ ಏನೆಲ್ಲಾ ಸಮಸ್ಯೆ ಉಂಟಾಗಲಿದೆ?
- ಆಲಸ್ಯ
- ಅಂದುಕೊಂಡ ಕೆಲಸಗಳು ಸರಿಯಾದ ಸಮಯಕ್ಕೆ ಆಗೋದಿಲ್ಲ
- ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತದೆ
- ಏಕಾ ಏಕಿ ನಷ್ಟ ಉಂಟಾಗುತ್ತದೆ
- ಮನೆ ಬಿಟ್ಟು ಬೇರೆ ಜಾಗಕ್ಕೆ ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ
- ಆರೋಗ್ಯ ಸಮಸ್ಯೆಗಳು
- ಹೆಚ್ಚು ಅಲೋಚನೆಗೆ ಒಳಗಾಗೋದು
- ಮನಸ್ಸಿನಲ್ಲಿ ಗೊಂದಲ ಹೆಚ್ಚಾಗುತ್ತದೆ
- ಋಣಾತ್ಮಕತೆ ಹೆಚ್ಚಾಗುತ್ತದೆ
- ಆಸೆಗಳಿಗೆ ಕೊನೆ ಇರೋದಿಲ್ಲ
- ಕೌಂಟುಬಿಕ ಸಮಸ್ಯೆಗಳು
- ಅನಗತ್ಯ ಖರ್ಚುಗಳು
- ಹಣ ಕಳೆದುಕೊಳ್ಳುವುದು
ರಾಹುವಿನ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದಕ್ಕೆ ಪರಿಹಾರಗಳೇನು?
- ನಿಮ್ಮ ಮನೆಯಲ್ಲಿ ನೀವು ಬಳಸದ ಅಥವಾ ಕಾರ್ಯನಿರ್ವಹಿಸದ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿದ್ದರೆ ಅದನ್ನು ಮೊದಲು ಎಸೆಯಿರಿ.
- ಬೀದಿ ನಾಯಿಗಳಿಗೆ ಸಾಧ್ಯವಾದಷ್ಟು ಆಹಾರ ನೀಡಿ. ಇನ್ನೂ ನಿಮ್ಮಿಂದ ಸಾಧ್ಯವಾದರೆ ನೀವು ನಾಯಿ ಆಸ್ಪತ್ರೆಗಳಿಗೆ ಹೋಗಿ ಸೇವೆ ಸಲ್ಲಿಸಬಹುದು. ಇದು ಕೂಡ ರಾಹು ದೋಷ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.
- ನಿಮ್ಮ ಮನೆಯ ಮುಖ್ಯ ಬಾಗಿಲು ಸದಾ ಸ್ವಚ್ಛವಾಗಿರಬೇಕು. ಮನೆಯ ಮುಖ್ಯ ಬಾಗಿಲಿನ ಮುಂದೆ ಏನನ್ನೂ ಇಡಬೇಡಿ.
- ಪ್ರತಿದಿನ ಬೆಳಗ್ಗೆ ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ನೀರು ಹಾಕಿ ಶುದ್ಧೀಕರಿಸಿ.
- ನೀವು ಆದಷ್ಟು ಶುದ್ಧವಾಗಿರಬೇಕು. ನಿಮ್ಮ ಕೈ ಮತ್ತು ಪಾದಗಳು ಸ್ವಚ್ಛವಾಗಿರಬೇಕು. ನಿಮ್ಮ ಉಗುರುಗಳನ್ನು ಸಮಯಕ್ಕೆ ಸರಿಯಾಗಿ ಕತ್ತರಿಸಿ. ಯಾವುದೇ ಕಾರಣಕ್ಕೂ ಬೆಳೆಯಲು ಬಿಡಬೇಡಿ.
- ನಿಮ್ಮ ಹಾಸಿಗೆಯ ಕೆಳಗೆ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಇರಬಾರದು.
- ನಿಮ್ಮ ಹಾಸಿಗೆಯ ಕೆಳಗೆ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಇರಬಾರದು. ಕಪ್ಪು ಬಣ್ಣದ ಬಟ್ಟೆಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದರಿಂದ ಜಾತಕದಲ್ಲಿ ರಾಹುವಿನ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡುತ್ತಂತೆ.
- ನೀವು ಪ್ರತಿದಿನ ಸ್ನಾನ ಮಾಡುವ ನೀರಿಗೆ ಒಂದು ಲೋಟ ಹಾಲನ್ನು ಸೇರಿಸುವುದು ಸಹ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಜಾತಕದಲ್ಲಿ ರಾಹು ಉತ್ತಮ ಸ್ಥಾನದಲ್ಲಿದ್ದರೆ ಏನೆಲ್ಲಾ ಪ್ರಯೋಜನಗಳಾಗಲಿದೆ?
ರಾಹು ಎಂದಾಕ್ಷಣ ಭಯ ಪಡುವ ಅವಶ್ಯಕತೆ ಇಲ್ಲ. ಯಾಕಂದ್ರೆ ರಾಹು ಯಾವಾಗಲೂ ಕೆಟ್ಟ ಪರಿಣಾಮಗಳನ್ನೇ ಬೀರೋದಿಲ್ಲ. ನಿಮ್ಮ ಜಾತಕದಲ್ಲಿ ರಾಹು ಉತ್ತಮ ಸ್ಥಾನದಲ್ಲಿ ಇದ್ದರೆ ಆಗ ನಿಮ್ಮ ಬಾಳಿನಲ್ಲಿ ಶುಭ ಫಲಿತಾಂಶಗಳನ್ನು ಪಡೆಯಬಹುದು.
- ರಾಹು ನಿಮ್ಮ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಉತ್ತಮ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಮತ್ತು ಆರ್ಥಿಕ ಉಳಿತಾಯ ಕೂಡ ಮಾಡಬಹುದು.
- ವಿದೇಶದಲ್ಲಿ ಉದ್ಯೋಗವಕಾಶಗಳು ಸಿಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲ, ಪ್ರಪಂಚದಾದ್ಯಂತ ಪ್ರಯಾಣಿಸುವ ಸಾಧ್ಯತೆಯಿದೆ.
- ನಿಮ್ಮ ಜಾತಕದಲ್ಲಿ ರಾಹು ಉತ್ತಮ ಸ್ಥಾನದಲ್ಲಿದ್ದರೆ ಉತ್ತಮ ನಾಯಕರಾಗುತ್ತಾರೆ. ಮತ್ತು ಅವರು ರಾಜಕೀಯ ಪ್ರವೇಶಿಸಿ ಚುನಾವಣೆಗೆ ಸ್ಪರ್ಧಿಸಬಹುದು.
- ಗ್ರಹಗಳು ಅನುಕೂಲಕರ ಸ್ಥಿತಿಯಲ್ಲಿದ್ದರೆ ರಾಜಕೀಯ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು.
- ರಾಹು ಶುಭ ಸ್ಥಾನದಲ್ಲಿದ್ದರೆ ಒರ್ವ ವ್ಯಕ್ತಿ ಸಾಕಷ್ಟು ಖ್ಯಾತಿಯನ್ನು ಪಡೆಯಬಹುದು.
ರಾಹುವಿನಿಂದ ಕೇವಲ ಕೆಟ್ಟ ಪರಿಣಾಮ ಮಾತ್ರವಲ್ಲ. ರಾಹು ನಿಮ್ಮ ಜಾತಕದಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೆ ನಿಮ್ಮ ಬದುಕಿನಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.



Click it and Unblock the Notifications

