Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
ಸಿನಿಮಾ ನಟರನ್ನ ದೇವರಂತೆ ಕಾಣುವ ದೇಶವಿದು. ಪ್ರತಿಯೊಬ್ಬ ನಟನಿಗೂ ಅವರದ್ದೇ ಆದ ಅಭಿಮಾನಿಗಳಿರುತ್ತಾರೆ. ಅವರ ಸಿನಿಮಾಗಳು ಮಾತ್ರವಲ್ಲ ಅವರ ಸಮಾಜಸೇವೆಯನ್ನೂ ಮೆಚ್ಚಿಕೊಂಡು ಅವರ ಅಭಿಮಾನಿಗಳಾಗಿರುತ್ತಾರೆ. ಇನ್ನು ಹಲವು ನಟರು ಸಿನಿಮಾ ರಂಗದಿಂದ ದುಡಿದ ಹಣದಿಂದ ಸಮಾಜಸೇವೆ ಮಾಡುವುದನ್ನು ನಾವು ನೋಡಿರುತ್ತೇವೆ.
ಕೆಲವರು ಯಾರಿಗೂ ತಿಳಿಯದಂತೆ ಇಂತಹ ಸಮಾಜ ಸೇವೆಯ ಕಾರ್ಯದಲ್ಲಿ ತೊಡಗಿರುತ್ತಾರೆ. ಸಣ್ಣ ಪುಟ್ಟ ಕಾರ್ಯಗಳಿಂದ ಹಿಡಿದು ದೊಡ್ಡ ಮಟ್ಟದ ಇಡೀ ಸಮಾಜವೇ ಗುರುತಸುವಂತಹ ಕಾರ್ಯಗಳನ್ನು ಸಹ ಮಾಡುತ್ತಾರೆ. ಅವರು ಪರದೆ ಮೇಲೆ ಅಷ್ಟೇ ಅಲ್ಲ ನಿಜ ಜೀವನದಲ್ಲೂ ಹೀರೋಗಳು ಎನಿಸಿಕೊಳ್ಳುತ್ತಾರೆ.

ಅದೇ ರೀತಿ ಇದೀಗ ದಕ್ಷಿಣ ಭಾರತದ ಜನಪ್ರಿಯ ನಟ ರಾಘವ ಲಾರೆನ್ಸ್ ಸಹ ಇಂತಹ ಮಾನವೀಯ ಕಾರ್ಯದಿಂದ ಸುದ್ದಿಯಾಗಿದ್ದಾರೆ. ಕಾಂಚನದಂತಹ ಹಾರರ್ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸಿದ್ದ ಅವರು ಪರದೆ ಮೇಲೆ ಅಷ್ಟೆ ಅಲ್ಲ ಪರದೆ ಹಿಂದೆಯೂ ಹೀರೋ ಆಗಿದ್ದಾರೆ.
ಕೊರಿಯೋಗ್ರಾಫರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಲಾರೆನ್ಸ್ ಟಾಲಿವುಡ್‌ನಲ್ಲಿ ಹಿಟ್ ಸಿನಿಮಾಗಳ ನೀಡಿದ್ದಾರೆ. ಇದೀಗ ಅವರು ವಿಶೇಷ ಚೇತನರಿಗೆ ಸ್ಕೂಟಿ ವಿತರಿಸಿ ಸಮಾಜಕ್ಕೆ ಹಾಗೂ ಇತರ ನಟ, ನಟಿಯರಿಗೂ ಮಾದರಿಯಾಗಿದ್ದಾರೆ. ಸುಮಾರು 13 ಮಂದಿ ವಿಕಲಚೇತನರಿಗೆ ಅವರು ಸ್ಕೂಟಿ ನೀಡಿ ಅವರ ಬದುಕಲ್ಲಿ ಮತ್ತೆ ಸಂತಸ ಹಂಚಿದ್ದಾರೆ.
ಅವರು 13 ಮಂದಿಗೆ ಸ್ಕೂಟಿ ಉಡುಗೊರೆಯಾಗಿ ನೀಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ಕೇಳಿಬಂದಿದೆ. ''ನಮಸ್ಕಾರ ಸ್ನೇಹಿತರೇ ಅಭಿಮಾನಿಗಳೇ.. ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ವಿಶೇಷ ಚೇತನ ಯುವಕರು 'ಮಲ್ಲಕಂಬ'ವನ್ನು ಅತ್ಯಂತ ಧೈರ್ಯದಿಂದ ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದೆ. ಅವರ ದೃಢಸಂಕಲ್ಪ ಮತ್ತು ಕಠಿಣ ಪರಿಶ್ರಮವನ್ನು ಕಂಡು ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಾಗುತ್ತಿದೆ' ಎಂದು ಪೋಸ್ಟ್ ಮಾಡಿದ್ದಾರೆ.
'ನಾನು ಅವರಿಗೆ ದ್ವಿಚಕ್ರ ವಾಹನ ಹಾಗೂ ಮನೆ ಕೊಡಿಸುವ ಭರವಸೆ ನೀಡಿದ್ದೆ. ಅದರ ಭಾಗವಾಗಿ ಮೊದಲು 13 ಸ್ಕೂಟರ್ ಕೊಡುವ ಭರವಸೆ ಈಡೇರಿಸಿದೆ. ಎಲ್ಲಾ ಸ್ಕೂಟರ್‌ಗಳನ್ನು ತ್ರಿಚಕ್ರ ವಾಹನಗಳಾಗಿ ಪರಿವರ್ತಿಸಲಾಗುವುದು. ಭರವಸೆ ನೀಡಿದಂತೆ ಶೀಘ್ರದಲ್ಲೇ ಮನೆ ನಿರ್ಮಿಸಿಕೊಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಬೆಂಬಲ ನನಗೆ ಬೇಕು' ಎಂದು ಲಾರೆನ್ಸ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ನಟ ವಿಕಲಚೇತರಿಗೆ ಸರ್ಪ್ರೈಸ್ ಆಗಿ ಸ್ಕೂಟಿಗಳ ಗಿಫ್ಟ್ ನೀಡಿದ್ದಾರೆ. ಮನೆಯ ಹೊರಗಡೆ 13 ಸ್ಕೂಟಿಗಳ ನಿಲ್ಲಿಸಿ ಅವರಿಗೆ ಸರ್ಪ್ರೈಸ್ ಆಗಿ ಉಡುಗೊರೆ ನೀಡಿದ್ದಾರೆ. ಈ ಸ್ಕೂಟಿಗಳ ಕಂಡ 13 ಮಂದಿ ಸಂತೋಷದಲ್ಲಿ ಕುಣಿದಾಡಿದ್ದಾರೆ. ಅವರ ಕನಸು ನನಸಾಗಿದ್ದ ಕಂಡು ಕಣ್ಣೀರಿಟ್ಟಿದ್ದಾರೆ. ಜೊತೆಗೆ ನಟ ರಾಘವ ಲಾರೆನ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
ನಟ ರಾಘವ ಲಾರೆನ್ಸ್ ಈ ರೀತಿ ಸಮಾಜ ಸೇವೆಯಿಂದ ಸುದ್ದಿಯಾಗಿದ್ದು ಇದೇನು ಮೊದಲಲ್ಲ. ಇದಕ್ಕೂ ಮೊದಲು ಸಹ ನೂರಾರು ವಿಕಲಚೇತನ ಮಂದಿಗೆ ಅವರು ಸಹಾಯ ಮಾಡಿದ್ದಾರೆ. ಈ ರೀತಿಯ ಸಮಾಜಸೇವೆಯ ಮೂಲಕ ಅವರು ಹೆಸರಾಗಿದ್ಧಾರೆ. ಅಲ್ಲದೆ ಅಗತ್ಯವಿರವವರಿಗೆ ಸಹಾಯ ಮಾಡಲೆಂದೇ ಅವರು ಲಾರೆನ್ಸ್ ಚಾರಿಟೆಬಲ್ ಟ್ರಸ್ಟ್ ಹೊಂದಿದ್ದಾರೆ. ಆದರೆ ಈ ಟ್ರಸ್ಟ್‌ಗೆ ದೇಣಿಗೆ ನೀಡದಂತೆ ಮನವಿ ಮಾಡಿದ್ದರು. ಏಕೆಂದರೆ ನೀವು ಯಾರಿಗಾದರು ಸಹಾಯ ಮಾಡಬೇಕೆಂದಿದ್ದರೆ ನೀವು ನೇರವಾಗಿ ಮಾಡಿ, ನನ್ನ ಟ್ರಸ್ಟ್‌ಗೆ ದೇಣಿಗೆ ನೀಡಬೇಡಿ ಎಂದು ಹೇಳಿ ಗಮನ ಸೆಳೆದಿದ್ದರು.
ನಾನು ಚೆನ್ನಾಗಿ ಹಣ ಸಂಪಾದನೆ ಮಾಡುತ್ತೇನೆ, ಅದರಲ್ಲಿ ಒಂದಿಷ್ಟು ಮಂದಿಗೆ ಸಹಾಯ ಮಾಡುತ್ತೇನೆ, ನೀವು ಸಹ ನಿಮ್ಮ ಹಣದಲ್ಲಿ ನೀವೇ ಸಹಾಯ ಮಾಡಿ ಎಂದಿದ್ದರು.



Click it and Unblock the Notifications
