Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಅಣು ಬಾಂಬ್ ಹಾಕಿದರು ಬದುಕುಳಿಯುವ ಏಕೈಕ ಕೀಟ ಇದು..! ವಿಜ್ಞಾನಿಗಳಿಗೂ ಅಚ್ಚರಿ!!
ಪಾಕಿಸ್ತಾನ ಹಾಗೂ ಭಾರತದ ನಡುವಿನ ಆತಂಕ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಡ್ರೋನ್ ದಾಳಿ, ಕ್ಷಿಪಣಿ ದಾಳಿಯ ಆತಂಕ ಇದ್ದೇ ಇದೆ. ಹಾಗೆ ಎರಡು ರಾಷ್ಟ್ರಗಳು ಕೂಡ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಅಣ್ವಸ್ತ್ರ ದಾಳಿಗೆ ಮುಂದಾಗುವುದು ವಿನಾಶಕಾರಿಯಾದರೆ ಅಣ್ವಸ್ತ್ರ ಅಡಗಿಸಿಟ್ಟಿರುವ ಸ್ಥಳದ ಮೇಲೆ ಶತ್ರು ರಾಷ್ಟ್ರ ದಾಳಿ ಮಾಡಿದರೆ ಅದೊಂದು ದೊಡ್ಡ ವಿನಾಶಕ್ಕೆ ಕಾರಣವಾಗಲಿದೆ.
ನೀವು ಜಪಾನ್‌ನ ನಾಗಸಾಕಿ ಹಾಗೂ ಹಿರೋಶಿಮಾ ನಗರದ ಮೇಲಿನ ದಾಳಿ ನೆನಪಿರಬಹುದು. ಇಂದಿಗೂ ಅಲ್ಲಿ ಜೀವಿಗಳು ವಾಸಿಸಲು ಕಷ್ಟವಾಗಿದೆ. ಹಾಗೆ ವಿಕಿರಣ ಹೊರಸೂಸುವಿಕೆಯು ಜೀವ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿದೆ. ಆದ್ರೆ ಈಗ ಭಾರತ ಹಾಗೂ ಪಾಕ್ ನಡುವಿನ ಅಣ್ವಸ್ತ್ರ ದಾಳಿ ಕುರಿತಾದ ಆತಂಕ ಹೆಚ್ಚಾಗಲು ಕದನ ವಿರಾಮ ಉಲ್ಲಂಘನೆಯಂತಹ ಘಟನೆ ನಡೆಯುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.

ಈ ಅಣ್ವಸ್ತ್ರ ದಾಳಿಯಾದಾಗ ಯಾವುದೇ ಜೀವಿ ಬದುಕುಳಿಯುವುದಿಲ್ಲ ಎಂದು ನೀವು ತಿಳಿದಿದ್ದೀರಿ. ಒಂದು ಅಣ್ವಸ್ತ್ರವು ಇಡೀ ನಗರವನ್ನು ಬದುಕಲು ಯೋಗ್ಯವಲ್ಲದ ರೀತಿ ವಿನಾಶ ಮಾಡಲಿದೆ. ಆದ್ರೆ ಅಚ್ಚರಿ ವಿಚಾರ ಏನೆಂದರೆ ಅಣು ಬಾಂಬ್ ದಾಳಿಯಾದರು ಕೂಡ ಜಿರಳೆಗಳು ಬದುಕುಳಿಯುತ್ತವೆ. ಹೌದು ನಿಮ್ಮ ಮನೆಯಲ್ಲಿ ಕಾಣಸಿಗುವ ಜಿರಳೆ ಅಣು ಬಾಂಬ್ ದಾಳಿಯಾದರು ಬದುಕುಳಿಯಲಿದೆ. ಇದೊಂದೇ ಜೀವಿ ಈ ಅಣು ಬಾಂಬ್ ದಾಳಿಯನ್ನೂ ಕೂಡ ಹಿಮ್ಮೆಟ್ಟಿಸುವ ಶಕ್ತಿ ಪಡೆದುಕೊಂಡಿದೆ.
ನಾಗಸಾಕಿ ಮತ್ತು ಹಿರೋಶಿಮಾ ನಗರದ ಮೇಲೆ ಈ ಅಣು ಬಾಂಬ್ ದಾಳಿಯಾದಾಗ ಎಲ್ಲಾ ಜೀವಿಗಳು ವಿನಾಶವಾಗಿದ್ದವು. ಆದರೆ ಅಲ್ಲಿ ವಿಜ್ಞಾನಿಗಳಿಗೂ ಶಾಕ್ ಆಗುವಂತೆ ಈ ಜೀರಳೆಗಳು ವಿಕಿರಣ ದಾಳಿಯಿಂದ ಬದುಕುಳಿದಿದ್ದವು. ಪರಮಾಣು ಬಾಂಬ್‌ನಿಂದ ಇಡೀ ನಗರಗಳು ಮತ್ತು ನಾಗರಿಕತೆಗಳು ನಾಶವಾದರೂ, ಜಿರಳೆಗಳು ಹೇಗೆ ಬದುಕುಳಿದವು? ವಿಜ್ಞಾನಿಗಳು ಈ ಗೊಂದಲಮಯ ವಿದ್ಯಮಾನದಿಂದ ಅಚ್ಚರಿಗೆ ಒಳಗಾದರು. ಹಾಗೆ ಅದರ ತನಿಖೆಗೆ ಇಳಿದರು. ಈ ವೇಳೆ ಅವರಗೆ ಬಹಳಷ್ಟು ರಹಸ್ಯಗಳು, ಅಚ್ಚರಿಯ ವಿದ್ಯಮಾನಗಳು ಎದುರಾದವು.
pestworld.org ವರದಿಯ ಪ್ರಕಾರ ಹಲವಾರು ವಿಧದ ಜಿರಳೆಗಳ ವಿಧಗಳಿವೆ. ವಿಜ್ಞಾನಿಗಳ ಪ್ರಕಾರ ಜಗತ್ತಿನಲ್ಲಿ 4,000 ಕ್ಕೂ ಹೆಚ್ಚು ವಿವಿಧ ಜಾತಿಯ ಜಿರಳೆಗಳಿವೆ. ಈ ಸಾವಿರಾರು ಜಾತಿಗಳಲ್ಲಿ 4 ಜಾರಿಯನ್ನು ಮಾತ್ರ ಕೀಟಗಳೆಂದು ಪರಿಗಣಿಸಲಾಗಿದೆ. ಹಾಗೆ 30 ಜಾತಿಯ ಜಿರಳೆಗಳು ಮಾತ್ರ ಮಾನವನ ಸಂಪರ್ಕದಲ್ಲಿವೆ. ನಿಮ್ಮ ಮನೆಯಲ್ಲಿ ಕಂಡುಬರುವ ಜಾತಿ ಜಿರಳೆ ಕೂಡ ಇದರಲ್ಲಿ ಒಂದಾಗಿದೆ. ಆದ್ರೆ ಕಾಡುಗಳಲ್ಲಿ, ಹುಲ್ಲುಗಾವಲು, ಮರಳುಗಾಡಿನಲ್ಲೂ ಕೂಡ ಜಿರಳೆಗಳಿವೆ. ಇದು ಮಾನವರ ಸಂಪರ್ಕಕ್ಕೆ ಬರುವುದಿಲ್ಲ.
ಇನ್ನು ಜಿರಳೆಗಳು ಮಾನವರ ಆರೋಗ್ಯಕ್ಕೆ ಬಹಳ ಅನಾರೋಗ್ಯ ಉಂಟು ಮಾಡುವ ಕೀಟಗಳಾಗಿವೆ. ಜಿರಳೆಗಳೂ ಮಾನವರಿಗಿಂತ 100 ಪಟ್ಟು ಹೆಚ್ಚು ಕಾಲ ಭೂಮಿ ಮೇಲೆ ವಾಸಿಸಿವೆ ಎಂದು ಹೇಳಲಾಗಿದೆ. ಈ ಕೀಟಗಳು ಅವುಗಳ ಗಡಸುತನ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಹೆಸರುವಾಸಿಯಾಗಿದ್ದು, ಇದು ಕಠಿಣ ಪರಿಸರವನ್ನು ಸಹಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಾಗೆ ಜಿರಳೆಗಳು ಸುಲಭವಾಗಿ ಅಡಗಿ ಕುಳಿತುಕೊಳ್ಳುವ ಜಾಗವನ್ನು ಹುಡುಕುತ್ತವೆ. ಈ ಜಾಗದಲ್ಲಿ ಬೆಳಕು ಕಡಿಮೆ ಪ್ರಮಾಣದಲ್ಲಿ ಹರಿಯುತ್ತದೆ. ಹೀಗಾಗಿ ಈ ಜಿರಳೆಗಳು ಅಣು ಬಾಂಬ್ ದಾಳಿಯಿಂದಲೂ ಬದುಕುಳಿದಿರಬಹುದು ಎನ್ನಲಾಗಿದೆ. ಹಾಗೆ ಜಿರಳೆಗಳು ತಲೆ ಇಲ್ಲದೆಯೂ 1 ವಾರಗಳ ಕಾಲ ಬದುಕುಳಿಯುತ್ತವೆ.
ವರದಿಗಳ ಪ್ರಕಾರ ಕೆಲವು ಜಿರಳೆ ಪ್ರಭೇದಗಳು ತಲೆ ಇಲ್ಲದೆ ವಾರಗಳವರೆಗೆ ಬದುಕಬಲ್ಲವು. ಜಿರಳೆಗಳು ತಮ್ಮ ದೇಹದ ಭಾಗಗಳಲ್ಲಿನ ಸೂಕ್ಷ್ಮ ರಂಧ್ರಗಳ ಮೂಲಕ ಉಸಿರಾಡಬಲ್ಲವು ಮತ್ತು ಮಾನವರಂತೆ ರಕ್ತಸ್ರಾವವಾಗಿ ಸಾಯುವುದಿಲ್ಲ. ಇನ್ನು ಇವು ಅಡಗಿ ಕುಳಿತ ಜಾಗಕ್ಕೆ ಅಣು ವಿಕಿರಣ ತಲುಪದೆ ಇರುವುದು ಇವು ಎಂತಹ ಬಾಂಬ್ ದಾಳಿಯಲ್ಲೂ ಬದುಕುಳಿದವು ಎಂದು ತಿಳಿದುಬಂದಿದೆ.



Click it and Unblock the Notifications