Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುತ್ರದಾ ಏಕಾದಶಿ : ಈ 6 ರಾಶಿಯವರಿಗೆ ಅದೃಷ್ಟವೋ ಅದೃಷ್ಟ!
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಅದ್ರಲ್ಲೂ ಜನರು ಶ್ರಾವನದಲ್ಲಿ ಬರುವ ಪುತ್ರದಾ ಏಕಾದಶಿಯನ್ನು ಬಹಳ ಪ್ರಮುಖವಾದ ಏಕಾದಶಿ ಎಂದು ಹೇಳಲಾಗುತ್ತದೆ. ಈ ದಿನ ಭಕ್ತಿಯಿಂದ ಉಪವಾಸ ಮಾಡಿದ್ರೆ ಶಿವ ಮತ್ತು ವಿಷ್ಣು ಇಬ್ಬರ ಆಶೀರ್ವಾದವನ್ನೂ ಪಡೆಯಬಹುದು ಎಂದು ನಂಬಲಾಗಿದೆ.

ಈ ಬಾರಿ ಆಗಸ್ಟ್ 27 ರಂದು ಪುತ್ರದಾ ಏಕಾದಶಿ ಉಪವಾಸವನ್ನು ಆಚರಣೆ ಮಾಡಲಾಗುತ್ತಿದೆ. ಪುತ್ರದಾ ಏಕಾದಶಿಯ ಪರಿಣಾಮವಾಗಿ ಈ 6 ರಾಶಿಯವರಿಗೆ ಜೀವನದಲ್ಲಿ ತುಂಬಾನೇ ಒಳ್ಳೆಯದಾಗಲಿದ್ಯಂತೆ. ಅಷ್ಟಕ್ಕೂ ಆ 6 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಪುತ್ರದಾ ಏಕಾದಶಿಯು ಅತ್ಯಂತ ಶುಭಕರವಾಗಿರಲಿದೆ. ಧಾರ್ಮಿಕ ಪ್ರವಾಸ ಕೈಗೊಳ್ಳಬಹುದು. ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಇದರೊಂದಿಗೆ ಅದೃಷ್ಟವೂ ಹೆಚ್ಚುತ್ತದೆ. ತಾಯಿಯ ತೀರ್ಥಯಾತ್ರೆಯ ಸಾಧ್ಯತೆಯಿದೆ. ಸಹೋದರನ ಸಂತೋಷ ಹೆಚ್ಚಾಗುತ್ತದೆ. ಹೊಸ ಕ್ಷೇತ್ರದಲ್ಲಿ ಯಶಸ್ಸು ಕಾಣುವಿರಿ. ಉಪವಾಸದ ದಿನದಂದು ಒಳ್ಳೆಯ ಸುದ್ದಿಯನ್ನು ಕೇಳಬಹುದು. ಮೇಷ ರಾಶಿಯವರು ಪುತ್ರಾದ ಏಕಾದಶಿಯ ದಿನದಂದು ವಿಷ್ಣುವಿಗೆ ಬಾಳೆಹಣ್ಣನ್ನು ಅರ್ಪಿಸಿ. ಬಾಳೆಹಣ್ಣು ವಿಷ್ಣುವಿಗೆ ತುಂಬಾನೇ ಇಷ್ಟವಾದ ವಸ್ತು.
ವೃಷಭ ರಾಶಿ
ಈ ರಾಶಿಯವರಿಗೆ ಈ ಏಕಾದಶಿಯು ಹಿತಕರವಾಗಿರಲಿದೆ. ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ವ್ಯಾಪಾರದಲ್ಲಿ ಏರುಪೇರಾಗಬಹುದು. ದಿನವು ನಿಮಗೆ ಅನುಕೂಲಕರವಾಗಿರುತ್ತದೆ. ಸಹೋದರನ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ನ್ಯಾಯಾಲಯದ ವಿವಾದಗಳು ಬಗೆಹರಿಯಲಿವೆ. ಪುತ್ರದಾ ಏಕಾದಶಿಯ ದಿನದಂದು ಉಪವಾಸ ಮಾಡುವುದು ಲಾಭದಾಯಕ. ವೃಷಭ ರಾಶಿಯ ಜನರು ಪುತ್ರದಾ ಏಕಾದಶಿಯಂದು ಭಗವಾನ್ ವಿಷ್ಣುವಿಗೆ ತುಳಸಿಯನ್ನು ಅರ್ಪಿಸಬೇಕು.
ಸಿಂಹ ರಾಶಿ
ಪುತ್ರದಾ ಏಕಾದಶಿಯು ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಠಾತ್ ಹಣದ ಲಾಭವಾಗಬಹುದು. ವ್ಯಾಪಾರ ಚೆನ್ನಾಗಿ ನಡೆಯಲಿದೆ. ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಒಳ್ಳೆಯ ಸುದ್ದಿ ಸಿಗಲಿದೆ. ತಾಯಿಯ ಚಿಕ್ಕಪ್ಪನಿಂದ ಬೆಂಬಲ ಸಿಗುತ್ತದೆ. ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ. ಪುತ್ರದಾ ಏಕಾದಶಿಯ ದಿನದಂದು ಸಿಂಹ ರಾಶಿಯವರು ವಿಷ್ಣುವಿಗೆ ಬೇಳೆ ಮತ್ತು ಬೆಲ್ಲವನ್ನು ಅರ್ಪಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಪುತ್ರದಾ ಏಕಾದಶಿಯ ದಿನ ತುಂಬಾ ಧನಾತ್ಮಕವಾಗಿರುತ್ತಾನೆ. ನೀವು ಭೂಮಿ, ಕಟ್ಟಡ ಅಥವಾ ವಾಹನವನ್ನು ಖರೀದಿಸಲು ಬಯಸಿದರೆ ಪುತ್ರಾದ ಏಕಾದಶಿಯು ನಿಮಗೆ ಅತ್ಯಂತ ಮಂಗಳಕರ ದಿನವಾಗಿರುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ನೂತನ ಅಧಿಕಾರಿಯಿಂದ ಸಹಕಾರ ದೊರೆಯಲಿದೆ. ಕನ್ಯಾ ರಾಶಿಯವರು ಭಗವಾನ್ ವಿಷ್ಣುವಿಗೆ ಏಕಾದಶಿಯ ದಿನದಂದು ಶ್ರೀಫಲವನ್ನು ವಿಷ್ಣುವಿಗೆ ಅರ್ಪಿಸಿ.
ಧನು ರಾಶಿ
ಈ ರಾಶಿಯವರಿಗೆ ಪುತ್ರದಾ ಏಕಾದಶಿಯು ಅತ್ಯಂತ ಶುಭಕರವಾಗಿರಲಿದೆ. ಈ ಸಂದರ್ಭದಲ್ಲಿ ಭಗವಾನ್ ವಿಷ್ಣುವಿನ ಆಶೀರ್ವಾದವು ಧನು ರಾಶಿಯವರ ಮೇಲೆ ಬೀಳಲಿದೆ. ಅದೃಷ್ಟ ಕೂಡ ಬೆಂಬಲ ನೀಡಲಿದೆ. ವ್ಯಾಪಾರದಲ್ಲಿ ಹಣ ಬರುವ ಸಾಧ್ಯತೆ ಇದೆ. ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದವು ಸಿಗಲಿದೆ. ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳೂ ಸೃಷ್ಟಿಯಾಗುತ್ತಿವೆ. ಪುತ್ರಾದ ಏಕಾದಶಿಯ ದಿನದಂದು ಧನು ರಾಶಿಯವರು ಭಗವಾನ್ ವಿಷ್ಣುವಿಗೆ ಹಲ್ವವನ್ನು ಅರ್ಪಿಸಿ.
ಮೀನ ರಾಶಿ
ಮೀನಾ ರಾಶಿಯವರಿಗೆ ಪುತ್ರದಾ ಏಕಾದಶಿಯು ಅತ್ಯಂತ ಶುಭಕರವಾಗಿದೆ. ಮಹಾವಿಷ್ಣುವಿನ ಕೃಪೆಯಿಂದ ಒಳ್ಳೆಯ ಸುದ್ದಿ ಸಿಗಬಹುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ತಂದೆ-ತಾಯಿಯರ ಸಹಕಾರದಿಂದ ಮಗು ಸಂತಸವನ್ನು ಪಡೆಯುತ್ತದೆ. ವಿಷ್ಣುವಿನ ಕೃಪೆಯಿಂದ ಹೊಸ ಜಮೀನು ಖರೀದಿಸಬಹುದು. ಈ ದಿನ ನಿಮಗೆ ಸಂಪೂರ್ಣವಾಗಿ ಅನುಕೂಲಕರವಾಗಿರುತ್ತದೆ. ಪುತ್ರಾದ ಏಕಾದಶಿಯ ದಿನದಂದು ಮೀನ ರಾಶಿಯವರು ವಿಷ್ಣುವಿಗೆ ಪಾಯಸ ಅರ್ಪಿಸಿ.



Click it and Unblock the Notifications