Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಜ್ಯೋತಿಷ್ಯ: ಪತ್ನಿಯ ಮೇಲೆ ಸಂಶಯದಿಂದ ಪತ್ತೆದಾರಿಕೆ ಮಾಡುವ ರಾಶಿಚಕ್ರಗಳಿವು
ಮಾದರಿ ದಾಂಪತ್ಯ ಎಂದರೆ ಅತ್ಯುತ್ತಮ ಹೊಂದಾಣಿಕೆ, ಪರಸ್ಪರ ಮೇಲಿನ ಪ್ರೀತಿ, ನಂಬಿಕೆ, ನಿಷ್ಠೆಯ ಮೇಲೆ ನಿಂತಿರುತ್ತದೆ. ಈ ಪ್ರಮುಖ ಅಡಿಪಾಯ ಸ್ತಂಭಗಳಿಲ್ಲದೆ ಯಾವುದೇ ಬಂಧದಲ್ಲಿ ಅರ್ಥವಿಲ್ಲ ಹಾಗೂ ನಂಬಿಕೆ ಇಲ್ಲದ ಸಂಬಂಧ ಯಾವಾಗ ಬೇಕಾದರೂ ಕುಸಿಯಬಹುದು.
ಆದರೆ ಕೆಲವು ಜನರು ತನ್ನ ಸಂಗಾತಿ ಎಷ್ಟೇ ನಿಷ್ಠರಾಗಿದ್ದರೂ ತಮ್ಮ ಕೆಟ್ಟ ಬುದ್ದಿಯಿಂದ ಅವರನ್ನು ಅನುಮಾನಿಸುವುದು, ಅವರ ಮೇಲೆ ಒಂದು ಕಣ್ಣಿಟ್ಟಿರುವ ದುರ್ಬುದ್ಧಿಯನ್ನು ಹೊಂದಿರುತ್ತಾರೆ. ಇವರಿಗೆ ತಮ್ಮ ಸಂಗಾತಿಯ ಮೇಲೆ ಸದಾ ಅಸುರಕ್ಷಿತ ಭಾವನೆ ಕಾಡುತ್ತಿರುತ್ತದೆ, ಇದಕ್ಕಾಗಿಯೇ ಅವರ ಮೇಲೆ ಬೇಹುಗಾರಿಕೆ ನಡೆಸುತ್ತಾರೆ. ಆದರೆ ಇದು ದಾಂಪತ್ಯದ ಬದುಕಿಗೆ ಬಹಳ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ...!
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹನ್ನೆರಡು ರಾಶಿಚಕ್ರಗಳಲ್ಲಿ ಕೆಲವು ರಾಶಿಚಕ್ರಗಳು ತಮ್ಮ ಸಂಗಾತಿಯ ಮೇಲೆ ಬೇಹುಗಾರಿಗೆ ಮಾಡುವುದರಲ್ಲಿ ಎತ್ತಿದ ಕೈ. ತಮ್ಮ ಸಂಗಾತಿಯ ಮೇಲೆ ಕಣ್ಣಿಡುವ ಸಾಧ್ಯತೆಯಿರುವ ಕೆಲವು ರಾಶಿಚಕ್ರ ಚಿಹ್ನೆಗಳು ಇಲ್ಲಿವೆ ನೋಡಿ:

ಮೇಷ ರಾಶಿ
ಮೇಷ ರಾಶಿಯವರು ಬಹಳ ಭಾವನಾತ್ಮಕರು, ಭಾವನೆಗಳ ಬಗ್ಗೆ ಬಹಳ ಮುಂಚೂಣಿಯಲ್ಲಿರುತ್ತಾರೆ. ಮೂಗುದಾರ ಹಾಕುವ ಮತ್ತು ಹಠಾತ್ ಪ್ರವೃತ್ತಿವುಳ್ಳವರು. ಆದ್ದರಿಂದ, ಇವರಿಗೇನಾದರೂ ತಮ್ಮ ಸಂಗಾತಿಯ ಬಗ್ಗೆ ಸಣ್ಣ ಅಪನಂಬಿಕೆ ಬಂದರೆ ಅಥವಾ ಅವರು ಮೋಸ ಮಾಡುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದ್ದರೆ ಸತ್ಯವನ್ನು ಕಂಡುಕೊಳ್ಳುವವರೆಗೂ ಮೇಷ ರಾಶಿಯವರು ಸುಮ್ಮನಿರುವುದಿಲ್ಲ. ಅವರು ತಮ್ಮ ಸಂಗಾತಿಯ ಫೋನ್ ಅನ್ನು ಪರಿಶೀಲಿಸುತ್ತಾರೆ, ಅವರ ಪ್ರತಿಯೊಂದು ಹೆಜ್ಜೆಯನ್ನು ಹಿಂಬಾಲಿಸುತ್ತಾರೆ.

ವೃಷಭ ರಾಶಿ
ಗಂಭೀರತೆ ವಿಷಯಕ್ಕೆ ಬಂದಾಗ ವೃಷಭ ರಾಶಿಯವರನ್ನು ಮೀರಿಸುವವರಿಲ್ಲ ಎನ್ನಬಹುದು. ಯಾರೊಂದಿಗಾದರೂ ಗಂಭೀರವಾಗಿರುವುದರ ಬಗ್ಗೆ ಅವರು ತುಂಬಾ ನಿರ್ದಿಷ್ಟ ಹಾಗೂ ಸ್ಪಷ್ಟವಾಗಿರುತ್ತಾರೆ. ಅವರೊಂದಿಗೆ ಪ್ರಾಮಾಣಿಕವಾಗಿಲ್ಲದ ವ್ಯಕ್ತಿಯೊಂದಿಗೆ ಅವರು ಬದುಕಲು ಇಷ್ಟಪಡುವುದಿಲ್ಲ. ವೃಷಭ ರಾಶಿಯವರು ಪ್ರಾಮಾಣಿಕತೆಯನ್ನು ಬಹಳ ದೊಡ್ಡದಾಗಿ ಗೌರವಿಸುವುದರಿಂದ, ಅದಕ್ಕಾಗಿ ಅವರು ಎಲ್ಲಾ ನಿಯಮಗಳನ್ನು ಮುರಿಯಲು ಮತ್ತು ತಮ್ಮ ಸಂಗಾತಿಯ ಮೇಲೆ ಕಣ್ಣಿಡಲು ಸಿದ್ಧರಾಗಿದ್ದಾರೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಪರಿಪೂರ್ಣತೆಯ ಬಗ್ಗೆ ಬಹಳ ನಿರಂತರವಾಗಿರುತ್ತಾರೆ, ಅದು ಅವರ ಜೀವನ, ವೃತ್ತಿ ಅಥವಾ ಸಂಬಂಧಗಳು. ಆದ್ದರಿಂದ ಅವರು ತಮ್ಮ ಸಂಗಾತಿಯ ಮೇಲೆ ಸಂಶಯ ಉಂಟಾದರೆ ಯಾವುದೇ ಎರಡನೇ ಯೋಚನೆ ಮಾಡದೇ, ತಮ್ಮ ಸಂಗಾತಿಯ ಮೇಲೆ ಪಟ್ಟುಬಿಡದೆ ಕಣ್ಣಿಡುತ್ತಾರೆ. ಇವರ ಈ ಪತ್ತೆದಾರಿಕೆಯ ವಿಚಾರ ಎಲ್ಲೂ ಸಿಕ್ಕಿಬೀಳದಂತೆ ಬಹಳ ಜಾಗರೂಕರಾಗಿರುತ್ತಾರೆ, ಇಲ್ಲದಿದ್ದರೆ ಅವರು ಸತ್ಯವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಎಂಬುದು ಇವರಿಗೆ ಚೆನ್ನಾಗಿ ತಿಳಿದಿದೆ.

ಧನು ರಾಶಿ
ಧನು ರಾಶಿಯವರು ಈ ವಿಚಾರದಲ್ಲಿ ಬಹಳ ಮುಕ್ತವಾಗಿರುತ್ತಾರೆ. ಅವರಿಗೆ ತಮ್ಮ ಸಂಗಾತಿಯ ಮೇಲೆ ಸಂಶಯ ಉಂಟಾದರೆ ಮೊದಲು ಸಾಕ್ಷ್ಯವನ್ನು ಸಂಗ್ರಹಿಸಲು ಆರಂಭಿಸುತ್ತಾರೆ, ಇದರ ಬಗ್ಗೆ ಅವರಿಗೆ ಯಾವುದೇ ಅಂಜಿಕೆ ಇಲ್ಲ, ಸಿಕ್ಕಿಹಾಕಿಕೊಂಡರೆ ತಮ್ಮ ಪಾಲುದಾರರ ಫೋನ್‌ಗಳನ್ನು ಪರಿಶೀಲಿಸಿದ್ದಾರೆ ಎಂಬ ಅಂಶವನ್ನು ಅವರು ಒಪ್ಪಿಕೊಳ್ಳುತ್ತಾರೆ. ಅವರು ಗೊಂದಲ ಮತ್ತು ಅನುಮಾನದ ಅಂತ್ಯವಿಲ್ಲದ ಕುಣಿಕೆಯಲ್ಲಿ ಸಿಲುಕಿಕೊಳ್ಳಲು ಬಯಸುವುದಿಲ್ಲ ಮತ್ತು ಆದ್ದರಿಂದ ಅವರ ಮನಸ್ಸನ್ನು ಮುಕ್ತಗೊಳಿಸಲು, ಅವರು ತಮ್ಮ ಸಂಗಾತಿಯ ಮೇಲೆ ಬೇಹುಗಾರಿಕೆಯನ್ನು ಆಶ್ರಯಿಸುತ್ತಾರೆ.

ಮಕರ ರಾಶಿ
ಮಕರ ರಾಶಿಯವರು ಜೀವನದಲ್ಲಿ ಸದಾ ಉತ್ತಮವಾದದ್ದನ್ನು ಬಯಸುವವರು. ಅವರು ತುಂಬಾ ಶ್ರಮಜೀವಿಗಳು ಮತ್ತು ಅವರ ಸಂಬಂಧಗಳ ವಿಚಾರದಲ್ಲೂ ಸಹ ಇವರು ಇದನ್ನೇ ಬಯಸುತ್ತಾರೆ. ಆದ್ದರಿಂದ, ಮಕರ ರಾಶಿಯವರು ತಮ್ಮ ಸಂಗಾತಿಯ ಮೇಲೆ ಸಾಕಷ್ಟು ಚುರುಕಾಗಿ ಕಣ್ಣಿಡುತ್ತಾರೆ ಮತ್ತು ಅದರ ಬಗ್ಗೆ ತಪ್ಪಿತಸ್ಥರೆಂದು ಅವರು ಭಾವಿಸುವುದಿಲ್ಲ, ಬದಲಾಗಿ ಇದು ತಮ್ಮ ಹಕ್ಕೆಂದು ತಿಳಿಯುತ್ತಾರೆ.



Click it and Unblock the Notifications