For Quick Alerts
ALLOW NOTIFICATIONS  
For Daily Alerts

ವಿಶ್ವ ಬ್ರೈಲ್ ದಿನಾಚರಣೆ: ಅಂಧರ ಲಿಪಿಯ ಹರಿಕಾರ, ಇತಿಹಾಸದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ

|

ನಾ ಕಾಣೋ ಲೋಕವನ್ನು ಕಾಣೋರು ಯಾರೋ ಎಂಬ ಮಾತು ಎಷ್ಟು ಅರ್ಥ ಪೂರ್ಣ ಅಲ್ಲವೇ? ದೃಷ್ಟಿಯಿಲ್ಲದ ವ್ಯಕ್ತಿಯೊಬ್ಬನ ಆಂತರ್ಯವನ್ನು ಬಿಚ್ಚಿಡುವಂತಹ ಸುಮಧುರ ಸಾಲುಗಳು. ಎಲ್ಲ ಸರಿ ಇದ್ದು ನಾವೇ ಈ ಜಗತ್ತಿನಲ್ಲಿ ಸಾಕಷ್ಟು ಸವಾಲುಗಳನ್ನು ಪ್ರತಿದಿನ ಎದುರಿಸುರುತ್ತೇವೆ. ಇಂಥಹ ಸಂದರ್ಭದಲ್ಲಿ ಕಣ್ಣಿಲ್ಲದ, ದೃಷ್ಟಿ ದೋಷವನ್ನು ಹೊಂದಿರುವ ಜನರ ಜೀವನ ಹೇಗಿರಬಹುದು ಎಂಬುದನ್ನು ಒಮ್ಮೆ ಯೋಚಿಸಿ.

ಸರಿಯಾಗಿ ದೃಷ್ಟಿ ಹೊಂದಿರುವ ಜನರು ತಮ್ಮ ಕಣ್ಣುಗಳಿಂದ ಜಗತ್ತನ್ನು ನೋಡುವುದು ಸುಲಭವಾದರೂ, ದೃಷ್ಟಿಹೀನರು ದಿನನಿತ್ಯದ ಚಟುವಟಿಕೆಗಳನ್ನು ಮಾಡುವುದು ಸ್ವಲ್ಪ ಕಷ್ಟಕರವಾಗುತ್ತದೆ. ಈ ಜನರಿಗೆ ಓದಲು ಮತ್ತು ಕಲಿಯಲು ಸಹ ಕಷ್ಟವಾಗುತದೆ. ಇಂತಹವರಿಗೆ ಸಹಾಯ ಮಾಡಲು, ಲೂಯಿಸ್ ಎಂಬಾತ ಬ್ರೈಲ್ ಭಾಷೆಯನ್ನು ಕಂಡುಹಿಡಿದನು. ದೃಷ್ಟಿಹೀನ ಜನರಿಗೆ ಜಾಗತಿಕವಾಗಿ ಸಾರ್ವತ್ರಿಕ ಭಾಷೆಯನ್ನು ರೂಪಿಸಿದನು. ಈ ಮಹಾತ್ಮನ ಹುಟ್ಟಿದ ದಿನವನ್ನು ವಿಶ್ವ ಬ್ರೈಲ್ ದಿನವನ್ನಾಗಿ ಆಚರಿಸಲಾಗುತ್ತದೆ.

ಹಾಗಾದ್ರೆ ಬನ್ನಿ ಏನಿದು ಬ್ರೈಲ್ ಭಾಷೆ?, ಯಾರಿತ ಯೂಯಿಸ್? ಯಾತಕ್ಕಾಗಿ ಈ ವಿಶ್ವ ಬ್ರೈಲ್ ದಿನವನ್ನಾಗಿ ಆಚರಿಸುತ್ತಾರೆ ಎಂಬುದನ್ನು ನೋಡೋಣ.

ವಿಶ್ವ ಬ್ರೈಲ್ ದಿನ 2021:

ವಿಶ್ವ ಬ್ರೈಲ್ ದಿನ 2021:

ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ಇದನ್ನು ನವೆಂಬರ್ 2018 ರಲ್ಲಿ ಅಧಿಕೃತವಾಗಿ ಅಂಗೀಕರಿಸಿದ ನಂತರ ವಿಶ್ವ ಕುರುಡು ಒಕ್ಕೂಟವು ಈ ದಿನವನ್ನು ಆಚರಿಸುವ ಮೂರನೇ ವರ್ಷವಾಗಿದೆ. ಮೊದಲ ವಿಶ್ವ ಬ್ರೈಲ್ ದಿನವನ್ನು 2019 ರಲ್ಲಿ ಆಚರಿಸಲಾಯಿತು. ಅಂಧರು ಮತ್ತು ಭಾಗಶಃ ದೃಷ್ಟಿ ಹೊಂದಿರುವ ಜನರಿಗೆ ಸಂವಹನ ಸಾಧನವಾಗಿ ಬ್ರೈಲ್‌ನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಬ್ರೈಲ್ ದಿನವನ್ನು ಅಧಿಕೃತವಾಗಿ ಗೊತ್ತುಪಡಿಸಲಾಗಿದೆ.

ಲೂಯಿಸ್ ಯಾರು?:

ಲೂಯಿಸ್ ಯಾರು?:

ಬ್ರೈಲ್ ಭಾಷೆಯ ಆವಿಷ್ಕಾರಕ ಲೂಯಿಸ್ ಬ್ರೈಲ್ 1809 ರ ಜನವರಿ 4 ರಂದು ಫ್ರಾನ್ಸ್‌ನಲ್ಲಿ ಜನಿಸಿದರು. ಅವನನ್ನು ಮತ್ತು ಅವರು ನೀಡಿದ ಕೊಡುಗೆಯನ್ನು ನೆನಪಿಟ್ಟುಕೊಳ್ಳಲು, ಲೂಯಿಸ್ ಅವರ ಜನ್ಮ ದಿನಾಚರಣೆಯನ್ನು ಪ್ರತಿವರ್ಷ ಜನವರಿ 4 ರಂದು ವಿಶ್ವ ಬ್ರೈಲ್ ದಿನವಾಗಿ ಆಚರಿಸಲಾಗುತ್ತದೆ.

ಬ್ರೈಲ್ ಲಿಪಿ ಹುಟ್ಟಿಕೊಂಡಿದ್ದು ಹೇಗೆ?:

ಬ್ರೈಲ್ ಲಿಪಿ ಹುಟ್ಟಿಕೊಂಡಿದ್ದು ಹೇಗೆ?:

ಲೂಯಿಸ್ ಒಬ್ಬ ಫ್ರೆಂಚ್ ವ್ಯಕ್ತಿಯಾಗಿದ್ದು, ಅಪಘಾತದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡ. ಆದಾಗ್ಯೂ, ಅವರು ಅಧ್ಯಯನದ ಮೇಲಿನ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ್. ಫ್ರಾನ್ಸ್‌ನ ರಾಯಲ್ ಇನ್‌ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಯೂತ್‌ಗೆ ವಿದ್ಯಾರ್ಥಿವೇತನವನ್ನು ಸಹ ಪಡೆದರು. ಈ ವರ್ಷಗಳಲ್ಲಿ ಅವರು ದೃಷ್ಟಿಹೀನ ಜನರಿಗೆ ಭಾಷೆಯೊಂದರಲ್ಲಿ ಕೆಲಸ ಮಾಡಿದರು. 1824 ರಲ್ಲಿ, 15 ನೇ ವಯಸ್ಸಿನಲ್ಲಿ, ಲೂಯಿಸ್ ಮೊದಲು ದೃಷ್ಟಿಹೀನರಿಗಾಗಿ ಬ್ರೈಲ್ ಅನ್ನು ಅಭಿವೃದ್ಧಿಪಡಿಸಿದ. ಆದರೆ ಇದನ್ನು ಮೊದಲು ಪ್ರಕಟಿಸಿದ್ದು 1829 ರಲ್ಲಿ. ಮುಂದಿನ ವರ್ಷಗಳಲ್ಲಿ ಹಲವಾರು ಸುಧಾರಿತ ವ್ಯವಸ್ಥೆಗಳಾಗಿವೆ.

ಬ್ರೈಲ್ ಎಂದರೇನು ಮತ್ತು ಅದು ಓದುವುದಕ್ಕೆ ಹೇಗೆ ಸಹಾಯ ಮಾಡುತ್ತದೆ?

ಬ್ರೈಲ್ ಎಂದರೇನು ಮತ್ತು ಅದು ಓದುವುದಕ್ಕೆ ಹೇಗೆ ಸಹಾಯ ಮಾಡುತ್ತದೆ?

ಬ್ರೈಲ್ ಎಂಬುದು ವಿವಿಧ ವರ್ಣಮಾಲೆಗಳು ಮತ್ತು ಸಂಖ್ಯಾತ್ಮಕ ಚಿಹ್ನೆಗಳನ್ನು ಪ್ರತಿನಿಧಿಸಲು ಆರು ಚುಕ್ಕೆಗಳೊಂದಿಗೆ ಬರೆಯಲ್ಪಟ್ಟ ಭಾಷೆಯಾಗಿದೆ. ಈ ಆರು ಚುಕ್ಕೆಗಳನ್ನು ಸಂಗೀತ ಟಿಪ್ಪಣಿಗಳು ಮತ್ತು ಗಣಿತ ಮತ್ತು ವೈಜ್ಞಾನಿಕ ಚಿಹ್ನೆಗಳನ್ನು ಪ್ರತಿನಿಧಿಸಲು ಬಳಸಲಾಗುತ್ತದೆ. ಅಂಧರು ಮತ್ತು ಭಾಗಶಃ ದೃಷ್ಟಿ ದೋಷ ಇರುವ ಜನರ ಜೀವನದ ಹಕ್ಕುಗಳು ಮತ್ತು ಮಾನವ ಸೇರ್ಪಡೆಗಾಗಿ ಬ್ರೈಲ್ ಅನ್ನು ವಿವರಿಸಲಾಗಿದೆ.

English summary

World Braille Day 2021: Who Was Louis Braille And Why Is January 4 Celebrated In His Memory?

Here we tod about World Braille Day 2021: Who Was Louis Braille and Why is January 4 Celebrated in His Memory?, have a look
X
Desktop Bottom Promotion