Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೊದಲು ಪಾನಿಪುರಿ ತಯಾರಿಸಿದ್ದೇ ದ್ರೌಪತಿ! ಏನಿದು ಸ್ವಾರಸ್ಯಕರ ಕಥೆ?
ಪಾನಿಪುರಿ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮದುಕರಿಗೂ ಕೂಡ ಪಾನಿಪುರಿ ಅಂದ್ರೆ ತುಂಬಾನೇ ಇಷ್ಟ. ದಕ್ಷಿಣ ಭಾರತಕ್ಕಿಂತಲೂ ಉತ್ತರ ಭಾರತದಲ್ಲಿ ಪಾನಿಪುರಿ ಕ್ರೇಜ್ ಹೆಚ್ಚಾಗಿದೆ. ಭಾರತೀಯರ ಅಚ್ಚುಮೆಚ್ಚಿನ ಸ್ಟ್ರೀಟ್ ಫುಡ್ ಇದಾಗಿದ್ದು ಎಲ್ಲಾ ಸಮಯದಲ್ಲೂ ಜನ ಪಾನಿಪುರಿಯನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ.

ಅಷ್ಟಕ್ಕೂ ಯಾವುದಾದರೂ ಒಂದು ತಿಂಡಿ ಫೇಮಸ್ ಆದ್ರೆ ಆ ತಿಂಡಿಯನ್ನು ಮೊದಲಿಗೆ ತಯಾರಿಸಿದ್ದು ಯಾರು ಅನ್ನೋ ಪ್ರಶ್ನೆ ಎದುರಾಗುತ್ತೆ. ಹೌದು, ಪಾನಿಪುರಿ ವಿಚಾರದಲ್ಲೂ ಕೂಡ ಇದೇ ಆಗಿರೋದು. ಜನ ಚಪ್ಪರಿಸಿ ತಿನ್ನೋ ಪಾನಿಪುರಿಯನ್ನು ಮೊದಲಿಗೆ ತಯಾರಿಸಿದ್ದು ಯಾರು ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಅಷ್ಟಕ್ಕು ಮೊಟ್ಟ ಮೊದಲ ಬಾರಿಗೆ ಪಾನೀಪುರಿ ತಯಾರು ಮಾಡಿದ್ದು ಯಾರು? ದ್ರೌಪತಿಗೂ ಹಾಗೂ ಪಾನೀಪುರಿಗೂ ಏನಾದ್ರು ಸಂಬಂಧ ಇದ್ಯಾ? ಎಲ್ಲವನ್ನೂ ಹೇಳ್ತೀವಿ.
ಪಾಟಲೀಪುತ್ರಕ್ಕೂ ಪಾನಿಪುರಿಗೂ ಏನು ಸಂಬಂಧ?
ನೀವೆಲ್ಲಾ ಹದಿನಾರು ಜನಪದಗಳ ಬಗ್ಗೆ ಕೇಳಿರ್ತಿರಾ. ಆ ಹದಿನಾರು ಜನಪದಗಳಲ್ಲಿ ಮಗಧ ಸಾಮ್ರಾಜ್ಯವು ಕೂಡ ಒಂದು. ಆಗಿನ ಕಾಲದಲ್ಲಿ ಮಗಧದ ರಾಜಧಾನಿ ಪಾಟಲೀಪುತ್ರವಾಗಿತ್ತು. ಕೆಲವು ಇತಿಹಾಸಕಾರರ ಪ್ರಕಾರ ಮಗಧ ಸಾಮ್ರಾಜ್ಯದಲ್ಲಿ ಮೊದಲಿಗೆ ಪಾನಿಪುರಿಯನ್ನು ತಯಾರಿಸಲಾಯ್ತು ಅಂತ ಹೇಳಲಾಗುತ್ತದೆ. ಆದ್ರೆ ಇನ್ನೂ ಕೆಲವು ಇತಿಹಾಸಕಾರರು ಪಾನಿಪುರಿಯನ್ನು ಮೊದಲು ಪಾಂಡವರ ಪತ್ನಿ ದ್ರೌಪತಿ ತಯಾರಿಸಿದ್ದು ಅಂತ ಉಲ್ಲೇಖಿಸಿದ್ದಾರೆ.
ಕುಂತಿ ಇಟ್ಟಿದ್ದ ಪರೀಕ್ಷೇಯಲ್ಲಿ ಗೆದ್ದ ದ್ರೌಪತಿ
ಮಹಾಭಾರತದ ಕಾಲದಲ್ಲಿ ಮೊಟ್ಟ ಮೊದಲಿಗೆ ಪಾನಿಪುರಿಯನ್ನು ತಯಾರಿಸಲಾಗಿತ್ತು ಅಂತ ಹೇಳಲಾಗುತ್ತದೆ. ಹೊಸದಾಗಿ ಮನೆಗೆ ಬಂದ ಸೊಸೆ ದ್ರೌಪತಿಗೆ ಕುಂತಿಯೊಂದು ಪರೀಕ್ಷೇಯನ್ನು ಇಡುತ್ತಾಳೆ. ಅದೇನೆಂದರೆ ಅತ್ಯಂತ ಕಡಿಮೆ ವಸ್ತುಗಳಲ್ಲಿ ಆಕೆ ಮನೆಯನ್ನು ಹೇಗೆ ನಡೆಸುತ್ತಾಳೆ ಎಂಬ ಪರೀಕ್ಷೇಯನ್ನು ದ್ರೌಪತಿಗೆ ಕೊಡಲಾಗಿತ್ತು.
ಕುಂತಿಯು ತನ್ನ ಸೊಸೆಯಾದ ದ್ರೌಪತಿಗೆ ಸ್ವಲ್ಪ ಉಳಿದ ಅಲೂಗಡ್ಡೆ ಪಲ್ಯ ಹಾಗೂ ಹಿಟ್ಟನ್ನು ನೀಡುತ್ತಾಳೆ. ಇದರಿಂದ ನಿನ್ನ ಗಂಡಂದಿಗೆ ತೃಪ್ತಿಯಾಗೋ ಆಹಾರವನ್ನು ತಯಾರಿಸಬೇಕು ಎಂದು ದ್ರೌಪತಿಗೆ ಷರತ್ತು ಹಾಕುತ್ತಾಳೆ. ಅತ್ತೆ ಕೊಟ್ಟ ಎರಡು ವಸ್ತುಗಳಿಂದ ದ್ರೌಪತಿಯು ಪಾನೀಪುರಿಯನ್ನು ತಯಾರಿಸಿ ಪಾಂಡವರಿಗೆ ನೀಡುತ್ತಾಳೆ. ಪಾಂಡವರು ಸೇರಿದಂತೆ ಕಂತಿಯು ಕೂಡ ದ್ರೌಪತಿ ತಯಾರಿಸಿದ ಈ ಖಾದ್ಯವನ್ನು ತುಂಬಾನೇ ಇಷ್ಟ ಪಡುತ್ತಾಳೆ. ಹಾಗೂ ಈ ಆಹಾರ ಅಮೃತಕ್ಕೆ ಸಮಾಗಿದೆ ಎಂದು ಕುಂತಿ ಹೊಗಳುತ್ತಾಳೆ.
ಭಾರತೀಯರಿಗೂ ಪಾನಿಪುರಿ ಇದೆ ಬಿಡಸಲಾದ ಬಂಧ
ಪಾನೀಪುರಿಯು ಭಾರತದಲ್ಲೇ ತಯಾರಾದ ಖಾದ್ಯವಾದ್ದರಿಂದ ಭಾರತೀಯರಿಗೂ ಪಾನಿಪುರಿಗೂ ಅದೇನೋ ಒಂಥರಾ ಬಿಡಿಸಲಾರದ ಅನುಬಂಧ. ಉತ್ತರ ಭಾರತ, ದಕ್ಷಿಣ ಭಾರತ, ಈಶಾನ್ಯರಾಜ್ಯಗಳು ಹೀಗೆ ಎಲ್ಲಾ ಕಡೆ ಈ ಖಾದ್ಯ ಜನರ ಫೇವರೇಟ್ ಅನ್ನಿಸಿಕೊಂಡಿದೆ. ಪಾನಿಪುರಿಗೆ ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಗೋಲ್‌ಗಪ್ಪ, ಬಟಾಶೆ, ಗಪ್‌ಚುಪ್, ಫುಲ್ಕಿ ಹೀಗೆ ಅನೇಕ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ.
ಪಾನಿಪುರಿ ಮೊದಲು ಎಲ್ಲಿ ತಯಾರಾದರೇನು? ಹೇಗೆ ತಯಾರಾದರೇನು? ಭಾರತದಲ್ಲಿ ಪಾನಿಪುರಿಗೆ ಸರಿಸಾಟಿಯಾದ ಖಾದ್ಯ ಬೇರ್ಯಾವುದು ಇಲ್ಲ ಅಲ್ವಾ? ಅದೆಷ್ಟು ಶತಮಾನಗಳು ಕಳೆದರೂ ಕೂಡ ಪಾನೀಪುರಿಯ ಕ್ರೇಜ್ ಕಡಿಮೆ ಆಗೋದಿಲ್ಲ ಅನ್ನಿಸುತ್ತೆ.



Click it and Unblock the Notifications



