Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ
ವಾರ ಭವಿಷ್ಯ (ಮಾ. 12-18): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
ಈ ವಾರದಲ್ಲಿ ನಿಮಗೆ ಅತ್ಯುತ್ತಮವಾಗಿರಲಿ ಎಂದು ಹೇಳುತ್ತಾ ಜ್ಯೋತಿಷ್ಯದ ಪ್ರಕಾರ ಮಾರ್ಚ್ 12ರಿಂದ 18ರವರೆಗೆ ಪ್ರತಿಯೊಂದು ರಾಶಿಗಳ ರಾಶಿ ಭವಿಷ್ಯ ಹೇಗಿದೆ ಎಂದು ನೋಡೋಣ ಬನ್ನಿ:


ಮೇಷ ರಾಶಿ
ಈ ವಾರ ನೀವು ತುಂಬಾ ಜಾಗರೂಕರಾಗಿರಬೇಕು. ಕೆಲಸದ ಬಗ್ಗೆ ಹೇಳುವುದಾದರೆ ಈ ವಾರ ತುಂಬಾ ಕಾರ್ಯನಿರತವಾಗಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳಿಗೆ ಮುಂಚಿತವಾಗಿ ಯೋಜನೆಗಳನ್ನು ಮಾಡಿದರೆ ಅದು ಉತ್ತಮವಾಗಿರುತ್ತದೆ. ಯಾವುದೇ ಹಳೆಯ ನ್ಯಾಯಾಲಯದ ಪ್ರಕರಣವು ತುಂಬಾ ಕಾಲದಿಂದ ಬಾಕಿ ಉಳಿದಿದ್ದರೆ, ಅದನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಪ್ರಯತ್ನಿಸಿ, ಇಲ್ಲದಿದ್ದರೆ ನಷ್ಟವಾಗಬಹುದು. ಹಣದ ವಿಷಯದಲ್ಲಿ, ಈ ಸಮಯವು ನಿಮಗೆ ಮಿಶ್ರಫಲ. ವಾರದ ಆರಂಭದ ದಿನಗಳು ನಿಮಗೆ ತುಂಬಾ ದುಬಾರಿಯಾಗಿರುತ್ತವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೋಪ, ಒತ್ತಡವನ್ನು ನಿಯಂತ್ರಿಸಿ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆ ಇದ್ದರೆ ತುಂಬಾನೇ ಜಾಗ್ರತೆವಹಿಸಿ.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ: 8
ಅದೃಷ್ಟದ ದಿನ: ಗುರುವಾರ

ವೃಷಭ ರಾಶಿ
ಈ ವಾರ ಉದ್ಯಮಿಗಳಿಗೆ ತುಂಬಾ ಒಳ್ಳೆಯಿದೆ. ನೀವು ಸರ್ಕಾರಿ ಕೆಲಸ ಮಾಡುತ್ತಿದ್ದರೆ, ವರ್ಗಾವಣೆ ಬಯಸಿದ್ದರೆ ಈ ವಾರ ನಿಮಗೆ ಖುಷಿಯ ಸುದ್ದಿ ಸಿಗಬಹುದು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಶ್ರಮಕ್ಕೆ ತಕ್ಕಂತೆ ಫಲಿತಾಂಶವನ್ನು ಪಡೆಯುತ್ತೀರಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ಕುಟುಂಬ ಜೀವನದಲ್ಲಿ ಸಂತೋಷವಿರಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿನ: ಶನಿವಾರ

ಮಿಥುನ ರಾಶಿ
ವೈವಾಹಿಕ ಜೀವನದಲ್ಲಿ ಪರಿಸ್ಥಿತಿಗಳು ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಈ ಸಮಯದಲ್ಲಿ ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಕೆಲಸ ಸಂಬಂಧಿತ ಪ್ರಯತ್ನಗಳಲ್ಲಿ ಯಶಸ್ಸು ಕಾಣುವಿರಿ.
ನೀವು ಉದ್ಯಮಿಯಾಗಿದ್ದರೆ ಮತ್ತು ಪಾಲುದಾರಿಕೆಯಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ಈ ಸಮಯದಲ್ಲಿ ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ಈ ವಾರ ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿನ: ಭಾನುವಾರ

ಕರ್ಕ ರಾಶಿ
ವಾರದ ಆರಂಭವು ನಿಮಗೆ ತುಂಬಾ ಒಳ್ಳೆಯದು. ಈ ಸಮಯದಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಪ್ರತಿಕೂಲ ಸಂದರ್ಭಗಳಲ್ಲಿ ನೀವು ಪೋಷಕರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಚಾರದಲ್ಲಿ ಈ ಬಾರಿ ಏರಿಳಿತದಿಂದ ಕೂಡಿರಲಿದೆ. ಉಳಿತಾಯದ ಕಡೆ ಹೆಚ್ಚು ಗಮನ ಹರಿಸಬೇಕು. ಈ ವಾರ ಸಾಲ ಮಾಡದಿದ್ದರೆ ಒಳ್ಳೆಯದು. ಅದೇ ಸಮಯದಲ್ಲಿ, ಉದ್ಯಮಿಗಳು ಲಾಭ ಗಳಿಸಲು ಅವಕಾಶಗಳನ್ನು ಪಡೆಯಬಹುದು. ಸಂಗಾತಿಯ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನಿಮಗೆ ಯಕೃತ್ತಿಗೆ ಸಂಬಂಧಿತ ಕಾಯಿಲೆ ಇದ್ದರೆ ಆಹಾರಕ್ರಮದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 15
ಅದೃಷ್ಟದ ದಿನ: ಬುಧವಾರ

ಸಿಂಹ ರಾಶಿ
ಕೆಲಸಕ್ಕೆ ಸಂಬಂಧಿಸಿದ ಹುಡುಕಾಟ ಮುಂದುವರಿಯುತ್ತದೆ. ಈ ವಾರ ನಿಮಗೆ ತುಂಬಾ ಕಾರ್ಯನಿರತವಾಗಿರುತ್ತದೆ. ಆದರೆ, ನಿಮ್ಮ ಶ್ರಮಕ್ಕೆ ತಕ್ಕಂತೆ ಫಲಿತಾಂಶ ಬಂದರೆ ನಿಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಯು ಈ ಅವಧಿಯಲ್ಲಿ ಕೊನೆಗೊಳ್ಳಬಹುದು. ನಿಮ್ಮ ಆದಾಯ ಹೆಚ್ಚಾಗುವ ಬಲವಾದ ಸಾಧ್ಯತೆಯಿದೆ. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿಗಳು ಅಷ್ಟುಸರಿಯಿರಲ್ಲ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ನೀವು ಕೋಪ ಹಾಗೂ ಅಹಂನಿಂದ ಅವರ ಬಳಿ ವರ್ತಿಸದಿದ್ದರೆ ಒಳ್ಳೆಯದು. ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ಈ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ದಿನ: ಸೋಮವಾರ

ಕನ್ಯಾ ರಾಶಿ
ಹಣದ ವಿಷಯದಲ್ಲಿ, ಈ ವಾರ ಮಿಶ್ರ ಫಲಿತಾಂಶಗಳಿರಲಿದೆ. ಈ ವಾರ ಹಣದ ಖರ್ಚು ಹೆಚ್ಚಿರಲಿದೆ. ಕಚೇರಿಯ ವಾತಾವರಣವು ಸಕಾರಾತ್ಮಕವಾಗಿರುತ್ತದೆ. ಈ ಅವಧಿಯಲ್ಲಿ ನೀವು ಉನ್ನತ ಅಧಿಕಾರಿಗಳ ಸಂಪೂರ್ಣ ಸಹಕಾರವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ಉದ್ಯಮಿಗಳು ಹಣಕಾಸಿನ ಮುಗ್ಗಟ್ಟು ಎದುರಿಸಬಹುದು, ಆದರೆ ವಾರದ ಕೊನೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 14
ಅದೃಷ್ಟದ ದಿನ: ಗುರುವಾರ

ತುಲಾ ರಾಶಿ
ನೀವು ಅವಿವಾಹಿತರಾಗಿದ್ದರೆ ಈ ಸಮಯದಲ್ಲಿ ನಿಮಗೆ ಒಳ್ಳೆಯ ಮದುವೆಯ ಪ್ರಸ್ತಾಪ ಬರಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಯು ಬಗೆಹರಿಯುತ್ತದೆ. ಈ ಅವಧಿಯಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ಪಡೆಯುತ್ತೀರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ಈ ಏಳು ದಿನಗಳು ಬಹಳ ಮುಖ್ಯವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಪ್ರಗತಿ ಕಂಡು ಬರಲಿದೆ. ಆರೋಗ್ಯದ ವಿಷಯದಲ್ಲಿ, ಈ ಸಮಯವು ನಿಮಗೆ ಏರಿಳಿತಗಳಿಂದ ತುಂಬಿರುತ್ತದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿನ: ಭಾನುವಾರ

ವೃಶ್ಚಿಕ ರಾಶಿ
ಈ ವಾರ ನಿಮ್ಮ ಜೀವನ ಸಂತೋಷದಿಂದ ಕೂಡಿರುತ್ತದೆ. ಈ ಸಮಯದಲ್ಲಿ ನೀವು ಮಾನಸಿಕವಾಗಿ ತುಂಬಾ ಸದೃಢರಾಗಿರುತ್ತೀರಿ . ಉದ್ಯಮಿಗಳು ಈ ಅವಧಿಯಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಿಗಳ ಬಡ್ತಿ ಕೆಲವು ಕಾರಣಗಳಿಂದ ಸ್ಥಗಿತಗೊಂಡಿದ್ದರೆ, ಈ ವಾರ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಹವ್ಯಾಸಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ಹಲ್ಲಿನ ಸಮಸ್ಯೆಗಳು ಕಾಡಬಹುದು.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿನ: ಮಂಗಳವಾರ

ಧನು ರಾಶಿ
ನೀವು ಬಹಳ ಸಮಯದಿಂದ ನಿಮ್ಮ ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ಈ ಅವಧಿಯಲ್ಲಿ ನೀವು ಕೆಲವು ಒಳ್ಳೆಯ ಅವಕಾಸಗಳನ್ನು ಪಡೆಯಬಹುದು. ಆದರೆ ಆತುರದಿಂದ ತೀರ್ಮಾನಕ್ಕೆ ಬರಬೇಡಿ. ಈ ಬಾರಿ ಉದ್ಯಮಿಗಳಿಗೆ ಸವಾಲಿನಿಂದ ಕೂಡಿರಲಿದೆ. ನಿಮ್ಮ ಸಣ್ಣ ಕೆಲಸಗಳಲ್ಲಿಯೂ ಅಡೆತಡೆಗಳು ಉಂಟಾಗಬಹುದು. ಈ ಸಮಯದಲ್ಲಿಆತ್ಮವಿಶ್ವಾಸ ಕೂಡ ಸ್ವಲ್ಪ ಕಡಿಮೆಯಾಗಲಿದೆ. ಈ ವಾರ ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಲಿದೆ. ಅನಗತ್ಯ ಖರ್ಚುಗಳು ಉಂಟಾಗಬಹುದು. ಆರೋಗ್ಯವಾಗಿರಲು, ನಿಯಮಿತ ದಿನಚರಿಯನ್ನು ಅನುಸರಿಸಿ.
ಅದೃಷ್ಟದ ಬಣ್ಣ: ಗಾಢ ನೀಲಿ
ಅದೃಷ್ಟದ ಸಂಖ್ಯೆ: 27
ಅದೃಷ್ಟದ ದಿನ: ಶುಕ್ರವಾರ

ಮಕರ ರಾಶಿ
ವಾರದ ಆರಂಭವು ನಿಮಗೆ ಒಳ್ಳೆಯದಲ್ಲ. ಕೆಲಸದ ಒತ್ತಡ ಅಧಿಕವಿರುವುದರಿಂದ ನೀವು ತುಂಬಾ ಕಾರ್ಯನಿರತರಾಗಿರುತ್ತೀರಿ. ಅತ್ಯಧಿಕ ಮಾನಸಿಕ ಒತ್ತಡ ಸಹ ಅನುಭವಿಸುವಿರಿ. ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು. ಈ ಸಮಯದಲ್ಲಿ ಸಂಗಾತಿಯ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳಾಗಬಹುದು. ಚಿಕ್ಕ ವಿಷಯಕ್ಕೆ ಮನಸ್ತಾಪ ಬರಬಹುದು. ಹಣದ ವಿಷಯದಲ್ಲಿ ಮಿಶ್ರಫಲ, ಕೆಲವು ದೊಡ್ಡ ಖರ್ಚುಗಳಿರಬಹುದು. ಈ ಅವಧಿಯಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಒಳ್ಳೆಯದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ದಿನ: ಶನಿವಾರ

ಕುಂಭ ರಾಶಿ
ಈ ಸಮಯದಲ್ಲಿ, ನಿಮ್ಮ ಮಾತು ಮತ್ತು ನಡವಳಿಕೆಯನ್ನು ಸಹ ನೀವು ಕಾಳಜಿ ವಹಿಸಬೇಕು. ಎಂಥದ್ಧೇ ಸಂದರ್ಭವಾಗಿರಲಿ ಕೋಪ ನಿಯಂತ್ರಣದಲ್ಲಿಡುವುದು ಒಳ್ಳೆಯದು. ನಿಮ್ಮ ಪ್ರಯತ್ನಗಳಿಗೆ ಬಯಸಿದ ಫಲ ಸಿಗದ ಕಾರಣ ನಿರಾಶೆಯಾಗಬಹುದು. ನಿಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ, ಎಲ್ಲವೂ ಸರಿಯಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಇರಲಿದೆ. ಆರೋಗ್ಯದ ವಿಷಯದಲ್ಲಿ, ಈ ಸಮಯವು ಸರಾಸರಿಯಾಗಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿನ: ಸೋಮವಾರ

ಮೀನ ರಾಶಿ
ಉದ್ಯೋಗಸ್ಥರು ಈ ಅವಧಿಯಲ್ಲಿ ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಸಹೋದ್ಯೋಗಿಗಳೊಂದಿಗೆ ಸಮನ್ವಯ ಹದಗೆಡುವ ಸಾಧ್ಯತೆ ಇದೆ. ಈ ಅವಧಿಯಲ್ಲಿ, ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಯಾವುದೇ ವಿವಾದಕ್ಕೆ ಸಿಲುಕದಂತೆ ಎಚ್ಚರವಹಿಸಿ. ವಾರದ ಕೊನೆಯಲ್ಲಿ ನಿಮ್ಮ ಸಮಸ್ಯೆ ಬಗೆಹರಿಯಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದಲ್ಲಿ ಭಾರೀ ಕುಸಿತ ಉಂಟಾಗಬಹುದು, ಆರೋಗ್ಯದ ಕಡೆಗೆ ಗಮನ ಹರಿಸಿ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿನ: ಬುಧವಾರ



Click it and Unblock the Notifications











