Latest Updates
-
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ
ವಾರ ಭವಿಷ್ಯ- ಜನವರಿ 26ರಿಂದ ಫೆಬ್ರವರಿ 1ರ ತನಕ
ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ ರಾಶಿ
ಈ ವಾರ ನಿಮಗೆ ಶುಭಕರವಾಗಿದೆ. ಈ ವಾರ ನಿಮ್ಮ ಹಣಕಾಸಿನ ತೊಂದರೆ ಇಲ್ಲವಾಗುವುದು, ಉತ್ತಮ ಅವಕಾಶಗಳು ಸಿಗಲಿವೆ. ಕೆಲಸದಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿದೆ. ನಿರುದ್ಯೋಗಿಗಳಾಗಿದ್ದರೆ ಈ ವಾರ ಕೆಲಸ ದೊರೆಯುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಪಡೆಯುವ ಪ್ರಯತ್ನಕ್ಕೆ ಫಲ ಸಿಗಲಿದೆ. ತಂದೆಯವರೊಂದಿಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ, ಅವರಿಗೆ ನೋವುಂಟು ಮಾಡುವ ಮಾತುಗಳನ್ನಾಡಬೇಡಿ. ಪ್ರೇಮಿಗಳಿಗೆ ಈ ವಾರ ಉತ್ತಮವಾಗಿದೆ, ಆರೋಗ್ಯದ ದೃಷ್ಟಿಯಿಂದ ಚೆನ್ನಾಗಿದೆ. ಆದ್ದರಿಂದ ಈ ವಾರ ಯಾವುದೇ ಚಿಂತೆಯಿಲ್ಲದೆ ಖುಷಿಯಿಂದ ಕಳೆಯಬಹುದು.
ಅದೃಷ್ಟದ ಬಣ್ಣ: ಮೆರೂನ್
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿನ: ಭಾನುವಾರ

ವೃಷಭ
ಕೆಲಸದ ದೃಷ್ಟಿಯಿಂದ ನೋಡುವುದಾದರೆ ಈ ವಾರ ಅನುಕೂಲಕರವಾಗಿದೆ. ಈ ಕೆಲಸದಲ್ಲಿ ವಾರ ಕಠಿಣ ಪರಿಶ್ರಮ ಹಾಕಬೇಕಾಗುತ್ತದೆ, ನಿಮ್ಮ ಕೆಲಸ ನೋಡಿ ನಿಮ್ಮ ಮೇಲಾಧಿಕಾರಿ ನಿಮ್ಮೊಂದಿಗೆ ಅವರ ಅನುಭವಗಳನ್ನು ಹೇಳಿಕೊಳ್ಳಬಹುದು ಹಾಗೂ ನಿಮ್ಮನ್ನು ಮತ್ತಷ್ಟು ಚೆನ್ನಾಗಿ ಕೆಲಸ ಮಾಡುವಂತೆ ಹುರಿದುಂಬಿಸಬಹುದು. ಅವರ ನಿರೀಕ್ಷೆಯನ್ನು ಹುಸಿ ಮಾಡಬೇಡಿ. ಉದ್ಯಮಿಯಾಗಿದ್ದರೆ ನಿಮ್ಮ ಉದ್ಯಮ ಅಭಿವೃದ್ಧಿಯಾಗುವ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತೀರಿ. ಆದರೆ ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ವೈಯಕ್ತಿಕ ಬದುಕಿನಲ್ಲಿ ಖುಷಿ ಇರುತ್ತದೆ. ನೀವು ಸಿಂಗಲ್ ಆಗಿದ್ದರೆ ಈ ವಾರ ಒಬ್ಬ ವ್ಯಕ್ತಿಯೆಡೆಗೆ ಆಕರ್ಷಿತರಾಗುವಿರ. ಆರೋಗ್ಯ ಸ್ಥಿತಿ ಚೆನ್ನಾಗಿರುತ್ತದೆ.
ಅದೃಷ್ಟದ ಬಣ್ಣ: ಕಂದು ಬಣ್ಣ
ಅದೃಷ್ಟದ ಸಂಖ್ಯೆ: 34
ಅದೃಷ್ಟದವಾರ: ಬುಧವಾರ

ಮಿಥುನ
ಈ ವಾರದ ಮೊದಲ ದಿನಗಳು ಸ್ವಲ್ಪ ಕಷ್ಟಕರ ಅನಿಸಬಹುದು. ಕೌಟಂಬಿಕ ಕಲಹ ಉಂಟಾಗಬಹುದು, ಇದರಿಂದ ನಿಮ್ಮ ನೆಮ್ಮದಿ ಹಾಳಾಗಬಹುದು, ಆದರೆ ನಂತರ ದಿನಗಳಲ್ಲಿ ಎಲ್ಲವೂ ಸರಿಯಾಗುವುದು, ಸಂಗಾತಿಯೊಂದಿಗೆ ಚೆನ್ನಾಗಿರುವಿರಿ. ನಿಮ್ಮ ತಪ್ಪುಗಳಿಂದ ಪಾಠ ಕಲಿಯುವಿರಿ. ನಿಮ್ಮ ಸಂಗಾತಿಯ ಜೊತೆ ಗೌರವ ಹಾಗೂ ತಾಳ್ಮೆಯಿಂದ ನಡೆದುಕೊಂಡರೆ ನಿಮ್ಮ ಮೇಲಿರುವ ಅವರ ಪ್ರೀತಿ ಹೆಚ್ಚಾಗುವುದು. ಕೆಲಸದ ಕಾರಣದಿಂದ ಮನೆಯಿಂದ ಕೆಲ ದಿನಗಳು ಮನೆಯಿಂದ ದೂರವಿರುವಿರಿ, ಈ ದಿನಗಳಲ್ಲಿ ಖರ್ಚು ಸ್ವಲ್ಪ ಅಧಿಕವಾಗಬಹುದು. ಆರೋಗ್ಯದ ಕಡೆ ಸ್ವಲ್ಪ ಗಮನ ನೀಡಿ.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ:36
ಅದೃಷ್ಟದ ವಾರ: ಭಾನುವಾರ

ಕರ್ಕ
ಈ ವಾರ ನಿಮಗೆ ಅನುಕೂಲಕರವಾಗಿದೆ, ಆದರೂ ಕೆಲವೊಂದು ವಿಷಯಗಳಲ್ಲಿ ಎಚ್ಚರವಹಿಸುವುದು ಒಳ್ಳೆಯದು. ಅಧಿಕ ಕೆಲಸದ ಒತ್ತಡವಿರುತ್ತದೆ. ಉದ್ಯಮಿಗಳು ಈ ವಾರ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು, ನಿಮ್ಮ ಸ್ಪರ್ಧಿಗಳು ಕಠಿಣ ಸ್ಪರ್ಧೆ ನೀಡಬಹುದು, ಇದರ ಹೊರತು ಪಡಿಸಿ ಸ್ವಲ್ಪ ಮಟ್ಟಿಗೆ ಲಾಭ ದೊರೆಯಲಿದೆ. ಹಣಕಾಸಿನ ದೃಷ್ಟಿಯಿಂದ ಹೇಳುವುದಾದರೆ ಈ ವಾರ ಏರಳಿತ ಉಂಟಾಗಲಿದೆ. ಕೌಟಂಬಿಕ ಬದುಕಿನಲ್ಲಿ ಖುಷಿಯಾಗಿರಲು ನೀವು ಹೆಚ್ಚು ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ, ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಅದೃಷ್ಟದ ಬಣ್ಣ: ತೆಳು ಹಸಿರು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ವಾರ: ಶನಿವಾರ

ಸಿಂಹ
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಈ ವಾರ ಆರೋಗ್ಯ ಸಮಬಂಧಿತ ಸಮಸ್ಯೆ ಹೆಚ್ಚಾಗಲಿದೆ, ಆ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಈ ವಾರ ಹೊಸ ಕೆಲಸ ಕಲಿಯುವ ಸಾಧ್ಯತೆ ಇದೆ, ಆದರೆ ಏನೇ ಮಾಡುವ ಮುನ್ನ ಆಲೋಚಿಸಿ ಮಾಡಿ. ಹಣಕಾಸಿನ ದೃಷ್ಟಿಯಿಂದ ಈ ವಾರ ಉತ್ತಮವಾಗಿದೆ. ಆಸ್ತಿ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರೆ ಈ ವಾರ ಉತ್ತಮ ಲಾಭ ದೊರೆಯಲಿದೆ. ವೈಯಕ್ತಿಕ ಜೀವನದಲ್ಲಿ ಖುಷಿ ಇರಲಿದೆ. ನಿಮಗೆ ಆಗದವರನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದು. ಯಾರ ಜೊತೆಯೂ ತರ್ಕ ಮಾಡಲು ಹೋಗಬೇಡಿ.
ಅದೃಷ್ಟದ ಬಣ್ಣ: ಪಿಂಕ್
ಅದೃಷ್ಟದ ಸಂಖ್ಯೆ: 8
ಅದೃಷ್ಟದವಾರ: ಸೋಮವಾರ

ಕನ್ಯಾ
ಕಳೆದ ವಾರ ಸ್ವಲ್ಪ ಹಣಕಾಸಿನ ತೊಂದರೆ ಕಾಣಿಸಿಕೊಂಡಿರುತ್ತದೆ, ಆದರೆ ಈ ವಾರ ಅವೆಲ್ಲವು ಸರಿಯಾಗುವುದು, ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಪರಿಸ್ಥಿತಿಗೆ ತಕ್ಕಂತೆ ಹಣದ ಖರ್ಚು ನಿಭಾಯಿಸಲು ಯೋಜನೆ ಪ್ರಕಾರ ಹೋಗಿ, ಇಲ್ಲದಿದ್ದರೆ ಸಾಲ ಕೇಳಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಕಾರ್ಯ ಕ್ಷಮತೆ ಹೆಚ್ಚಲಿದೆ. ನಿಮ್ಮ ಕುಟುಂಬದವರೊಂದಿಗೆ ಚೆನ್ನಾಗಿ ಕಾಲ ಕಳೆಯುವುರಿ, ಸಣ್ಣ ಪುಟ್ಟ ಸಂಸಾರ ತಾಪತ್ರೆ ಮಾತಿನ ಮೂಲಕ ಪರಿಹರಿಸಿಕೊಳ್ಳಿ. ಈ ವಾರ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 21
ಅದೃಷ್ಟದ ವಾರ: ಗುರುವಾರ

ತುಲಾ
ಈ ವಾರ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದಲ್ಲಿ ಚೇತರಿಕೆ ಉಂಟಾಗುವುದರಿಂದ ನಿಮ್ಮ ಚಿಂತೆ ದೂರವಾಗಲಿದೆ. ನೀವು ನಿಮ್ಮ ಜವಾಬ್ದಾರಿ ಉತ್ತಮ ರೀತಿಯಲ್ಲಿ ನಿರ್ವಹಿಸುವುದರಿಂದ ಎಲ್ಲರ ಮೆಚ್ಚುಗೆ ಗಳಿಸುತ್ತೀರಿ. ವೈವಾಹಿಕ ಬದುಕು ಉತ್ತಮವಾಗಿರಲಿದೆ. ವಾರದ ಮಧ್ಯದಲ್ಲಿ ಕೆಲವೊಂದು ಸವಾಲುಗಳು ಎದುರಾದರೂ ಆ ಸಮಸ್ಯೆಯಿಂದ ಹೊರಬರುವಿರಿ. ಉದ್ಯಮಿಗಳು ತುಂಬಾ ಎಚ್ಚರಿಕೆವಹಿಸಬೇಕು, ಏಕೆಂದರೆ ನಂಬಿಕಸ್ಥರಿಂದಲೇ ಮೋಸ ಉಂಟಾಗಬಹುದು. ಉದ್ಯೋಗಿಗಳಿಗೆ ಈ ವಾರ ಕೆಲಸದ ಒತ್ತಡ ಅಧಿಕವಿರಬಹುದು, ಇದು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ವಾರ: ಗುರುವಾರ

ವೃಶ್ಚಿಕ ರಾಶಿ
ಈ ವಾರ ಮೊದಲಿಗೇ ದೊಡ್ಡ ಸಮಸ್ಯೆ ಬರುವ ಸಾಧ್ಯತೆ ಇದೆ. ಅಧಿಕ ಖರ್ಚು ಬರುವುದರಿಂದ ಬಜೆಟ್‌ನಲ್ಲಿ ಅಸಮತೋಲನ ಉಂಟಾಗಬಹುದು. ಸಾಲ ಪಡೆಯುವ ಪರಿಸ್ಥಿತಿಯೂ ಬರಬಹುದು. ಕುಟುಂಬದ ಜೊತೆಗೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಈ ವಾರ ನೀವು ನಿಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತೀರಿ, ಇದರಿಂದ ಗೌರವಕ್ಕೆ ಪಾತ್ರರಾಗುವಿರಿ. ಕಷ್ಟದ ಪರಿಸ್ಥಿತಿಯಲ್ಲಿ ಸಂಗಾತಿಯ ಬೆಂಬಲ ದೊರೆಯಲಿದೆ. ಉದ್ಯಮಿಗಳಿಗೆ ಈ ವಾರ ಏರಳಿತ ಉಂಟಾಗುವುದು. ನೀವು ನಿಮ್ಮ ಯೋಜನೆ ಪ್ರಕಾರ ಕಾರ್ಯ ನಿವರ್ಹಿಸಿದರೆ ಒಳ್ಳೆಯದು. ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 30
ಅದೃಷ್ಟದ ವಾರ: ಶನಿವಾರ

ಧನು
ನಿಮ್ಮ ರೊಮ್ಯಾಂಟಿಕ್ ಬದುಕಿನಲ್ಲಿ ಸ್ವಲ್ಪ ಒತ್ತಡ ಉಂಟಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವುದು, ಅದನ್ನು ಸರಿಯಾಗಿ ನಿಭಾಯಿಸದಿದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗುವುದು. ನಿಮಗೆ ಯಾರ ಮೇಲಾದರೂ ಪ್ರೀತಿ ಮೂಡಿದ್ದರೆ ಅದನ್ನು ಹೇಳಲು ಕೆಲವು ದಿನಗಳವರೆಗೆ ಕಾಯುವುದು ಒಳ್ಳೆಯುವುದು. ಈ ವಾರ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ನೌಕರಿ ಜಾಗದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಉದ್ಯಮಿಗಳಾಗಿದ್ದರೆ ಈ ವಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಿ, ಆದರೆ ಅಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದಲ್ಲಿ ಏರಳಿತ ಉಂಟಾಗುವುದರಿಂದ ಆರೋಗ್ಯದ ಕಡೆ ಗಮನ ಕೊಡಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 10
ಅದೃಷ್ಟದ ವಾರ: ಬುಧವಾರ

ಮಕರ
ಈ ವಾರ ಅಧಿಕ ಕೆಲಸದ ಒತ್ತಡ ಇರಲಿದೆ, ನಿಮ್ಮ ಕಠಿಣ ಶ್ರಮಕ್ಕೆ ಫಲ ಸಿಗಲಿದೆ. ಉದ್ಯಮಿಗಳಿಗೆ ಈ ವಾರ ಒಳಿತಾಗಲಿದೆ. ಕೆಲಸದ ಜಾಗದಲ್ಲಿ ಸ್ವಲ್ಪ ಸವಾಲುಗಳು ಎಉದುರಾಗಬಹುದು, ವಾರದ ಮೊದಲ ದಿನಗಳಲ್ಲಿ ತುಂಬಾ ತೊಂದರೆ ಅನಿಸಿದರೂ ನಂತರ ಸರಿಯಾಗುವುದು. ಆದರೆ ನಿಮ್ಮ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ಆಸ್ತಿ ವಿಚಾರಕ್ಕೆ ಒಡಹುಟ್ಟಿದವರ ಜೊತೆ ಮಾತುಕತೆ ಬರಬಹುದು. ಆದರೆ ನಿಮ್ಮ ಮಾತುಗಳ ಮೇಲೆ ನಿಗವಿರಲಿ. ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಈ ವಾರ ನಿಮಗೆ ಮಿಶ್ರ ಫಲ. ಅಧಿಕ ಖರ್ಚು ಬರಲಿದೆ, ಜೊತೆಗೆ ಲಾಭವು ಬರಲಿದೆ. ಆರೋಗ್ಯದ ಕಡೆ ಸ್ವಲ್ಪ ಗಮನ ನೀಡಿ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 20
ಅದೃಷ್ಟದ ವಾರ: ಭಾನುವಾರ

ಕುಂಭ
ಪ್ರೀತಿಯ ವಿಷಯದಲ್ಲಿ ಹೇಳುವುದಾರೆ ಈ ವಾರ ರೊಮ್ಯಾಂಟಿಕ್ ವಾರವಾಗಲಿದೆ. ಯಾರನ್ನಾದರೂ ಪ್ರೀತಿಸುತ್ತಿದ್ದರೆ ಈ ವಾರ ನಿಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಬಹುದು, ನೀವು ಬಯಸಿದ ಪ್ರತಿಕ್ರಿಯೆ ದೊರೆಯುವುದು. ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವುದು. ಬ್ಯುಸಿನೆಸ್ ಬಗ್ಗೆ ಇರುವ ನಿಮ್ಮ ಗೊಂದಲಕ್ಕೆ ತಂದೆಯವರ ಮೂಲಕ ಪರಿಹಾರ ದೊರೆಯುತ್ತದೆ. ಉದ್ಯೋಗಿಗಳಿಗೂ ಈ ವಾರ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ವಾರವಾಗಿದ್ದು ನಿಮ್ಮ ಗುರಿಗೆ ಪ್ರಯತ್ನಿಸಿದರೆ ಫಲ ಸಿಗುತ್ತದೆ. ಹಣಕಾಸಿನ ದೃಷ್ಟಿಯಿಂದಲೂ ಈ ವಾರ ಉತ್ತಮವಾಗಿದೆ. ಆರೋಗ್ಯವೂ ಚೆನ್ನಾಗಿರುವುದರಿಂದ ಹೆಚ್ಚಿನ ಚಿಂತೆಯಿಲ್ಲದೆ ಈ ವಾರ ಕಳೆಯಬಹುದು.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 25
ಅದೃಷ್ಟದ ವಾರ: ಮಂಗಳವಾರ

ಮೀನ
ಹಣ ದೃಷ್ಟಿಯಲ್ಲಿ ನೋಡುವುದಾದರೆ ಈ ವಾರ ಅದೃಷ್ಟವನ್ನು ತರುತ್ತದೆ, ನಿಮಗೆ ಹಣಕಾಸಿನ ನೆರವು ದೊರೆಯಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಫಲ ಸಿಗುವುದು. ಉದ್ಯಮಿಗಳಿಗೆ ಯಾವುದಾದರೂ ಉದ್ಯಮದಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಫಲ ಸಿಗುತ್ತದೆ. ಈ ವಾರ ವೈಯಕ್ತಿಕ ಬದುಕು ಕೂಡ ಖುಷಿ-ಖುಷಿಯಾಗಿರುತ್ತದೆ. ಅಪೂರ್ಣವಾಗಿದ್ದ ಕೆಲಸ ಪೂರ್ಣವಾಗಲಿದೆ. ಹಿರಿಯರು ಸರಿಯಾದ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಆಫೀಸ್‌ನಲ್ಲಿ ಎಚ್ಚರಿಕೆಯಿಂದ ವರ್ತಿಸಿ, ಅನಗ್ಯತ ಚರ್ಚೆಗೆ ಹೋಗಬೇಡ. ನಿಮ್ಮ ಆರೋಗ್ಯದ ಕಡೆ ಗಮನ ನೀಡಿ.
ಈ ವಾರ ಅಧಿಕ ಕೆಲಸದ ಒತ್ತಡ ಇರಲಿದೆ, ನಿಮ್ಮ ಕಠಿಣ ಶ್ರಮಕ್ಕೆ ಫಲ ಸಿಗಲಿದೆ. ಉದ್ಯಮಿಗಳಿಗೆ ಈ ವಾರ ಒಳಿತಾಗಲಿದೆ. ಕೆಲಸದ ಜಾಗದಲ್ಲಿ ಸ್ವಲ್ಪ ಸವಾಲುಗಳು ಎದುರಾಗಬಹುದು, ವಾರದ ಮೊದಲ ದಿನಗಳಲ್ಲಿ ತುಂಬಾ ತೊಂದರೆ ಅನಿಸಿದರೂ ನಂತರ ಸರಿಯಾಗುವುದು. ಆದರೆ ನಿಮ್ಮ ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ಆಸ್ತಿ ವಿಚಾರಕ್ಕೆ ಒಡಹುಟ್ಟಿದವರ ಜೊತೆ ಮಾತುಕತೆ ಬರಬಹುದು. ಆದರೆ ನಿಮ್ಮ ಮಾತುಗಳ ಮೇಲೆ ನಿಗವಿರಲಿ. ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಈ ವಾರ ನಿಮಗೆ ಮಿಶ್ರ ಫಲ. ಅಧಿಕ ಖರ್ಚು ಬರಲಿದೆ, ಜೊತೆಗೆ ಲಾಭವು ಬರಲಿದೆ. ಆರೋಗ್ಯದ ಕಡೆ ಸ್ವಲ್ಪ ಗಮನ ನೀಡಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ವಾರ: ಭಾನುವಾರ



Click it and Unblock the Notifications











